A Story for Everything

Since we launched Stories in October 2013, Stories have evolved from singular, personal perspectives to include collective narratives created by our entire community with Snaps submitted to Our Story and curated by our team.
2013 ರಲ್ಲಿ ನಾವು ಕಥೆಗಳು ಅನ್ನು ಆರಂಭಿಸಿದಾಗಿನಿಂದ, ಏಕ, ವೈಯಕ್ತಿಕ ದೃಷ್ಟಿಕೋನದಿಂದ ನಮ್ಮ ಕಥೆಗೆ ಸಲ್ಲಿಸಿದ ಮತ್ತು ನಮ್ಮ ತಂಡದಿಂದ ವ್ಯವಸ್ಥಿತಗೊಳಿಸಲ್ಪಟ್ಟ Snap ಗಳೊಂದಿಗೆ ನಮ್ಮ ಇಡೀ ಕಮ್ಯುನಿಟಿಯಿಂದ ಸೃಷ್ಟಿಸಲ್ಪಟ್ಟ ಸಮೂಹ ನಿರೂಪಣೆಗಳನ್ನು ಒಳಗೊಳ್ಳುವವರೆಗೆ ಕಥೆಗಳು ವಿಕಾಸಗೊಂಡಿವೆ.
ನಮ್ಮ ಕಥೆಗಳು ಜಗತ್ತಿನಾದ್ಯಂತದ ಆಸಕ್ತಿಕರ ಈವೆಂಟ್‌ಗಳಿಂದ ತೆರೆಮರೆಯ Snap ಗಳನ್ನು ಒದಗಿಸಿವೆ — ಸೂಪರ್‌ ಬೌಲ್ ಅಂಗಳದಿಂದ ಮೌಂಟ್‌ ಎವರೆಸ್ಟ್‌ ಶಿಖರದವರೆಗೆ! ಕಾಲಕ್ರಮೇಣ, ನಮ್ಮ ಕಮ್ಯುನಿಟಿಯಿಂದ ರಚಿಸಲ್ಪಟ್ಟ ಮತ್ತು ನಮ್ಮ ಕಥೆಗೆ ಸೇರಿಸಿದ Snap ಗಳ ಸಂಖ್ಯೆ ನಮ್ಮ ಕ್ಯುರೇಷನ್ ತಂಡಕ್ಕೆ ಅತ್ಯುತ್ಸಾಹ ನೀಡಿದೆ — ಮತ್ತು ಹೊಸದನ್ನು ರಚಿಸಲು ನಮಗೆ ಸ್ಫೂರ್ತಿ ತುಂಬಿದೆ.
ನಮ್ಮ ಕಥೆಗೆ ಸಲ್ಲಿಸಲ್ಪಟ್ಟ Snap ಗಳಿಗೆ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು, ಮತ್ತು ಸುಧಾರಿತ ಮೆಷಿನ್ ಲರ್ನಿಂಗ್ ಬಳಸಿ ಹೊಸ ಕಥೆಗಳನ್ನು ರಚಿಸಲು ನಾವು ಹೊಸ ವಿಧಾನವನ್ನು ನಿರ್ಮಿಸಿದ್ದೇವೆ. ಫಲಿತಾಂಶಗಳು ಅದ್ಭುತವಾಗಿವೆ: ನೀವು Snapchat ನಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ವಿಶಿಷ್ಟ ಕಥೆಗಳನ್ನು ಹುಡುಕಬಹುದು!
ನಮ್ಮ ವೃತ್ತಿಪರವಾಗಿ ವ್ಯವಸ್ಥಿತಗೊಳಿಸಿದ ಕಥೆಗಳ ಜೊತೆಗೆ, ನೀವು ಸ್ಥಳೀ ಬಾಸ್ಕೆಟ್‌ಬಾಲ್ ಪಂದ್ಯ ನೋಡಬಹುದು, ನಿಮ್ಮ ಮೆಚ್ಚಿನ ಬಾರ್‌ನಲ್ಲಿನ ದೃಶ್ಯವನ್ನು ನೋಡಬಹುದು, ನಿಮ್ಮ ಮೆಚ್ಚಿನ ಫ್ಯಾಶನ್ ವೀಕ್‌ ಶೋಗಳನ್ನು ವೀಕ್ಷಿಸಬಹುದು, ದೂರದ ಸ್ಥಳದಿಂದ ಸ್ಫೂರ್ತಿಗೊಳ್ಳಬಹುದು, ಅಥವಾ ನಾಯಿಮರಿಗಳಿರುವ ಕಥೆಗಳನ್ನು ಸುಮ್ಮನೆ ಟ್ಯಾಪ್ ಮಾಡುತ್ತ ನೋಡುತ್ತಿರಬಹುದು — ಎಲ್ಲವಕ್ಕೂ ಒಂದು ಕಥೆಯಿದೆ!
ಕಥೆಗಳ ಅತ್ಯುತ್ತಮ ಭಾಗವೆಂದರೆ ನಮ್ಮ ಕಮ್ಯುನಿಟಿಯ ಕಣ್ಣುಗಳ ಮೂಲಕ ಜಗತ್ತನ್ನು ನೋಡುವುದು. ನಿಮ್ಮ ದೃಷ್ಟಿಕೋನವನ್ನು ಸೇರಿಸುವುದು ಸುಲಭ — ಒಂದು Snap ತೆಗೆದುಕೊಳ್ಳಿ ಮತ್ತು ಅದನ್ನು ನಮ್ಮ ಕಥೆಗೆ ಸೇರಿಸಿ! ನೀವು ಏನನ್ನು Snapping ಮಾಡುತ್ತಿದ್ದೀರಿ ಅನ್ನುವುದನ್ನು ಆಧರಿಸಿ ಸಂಬಂಧಿತ ಕಥೆಗಳಲ್ಲಿ ಅದನ್ನು ಸೇರಿಸಿರುವುದನ್ನು ನೀವು ನೋಡಬಹುದು.
ಆಯ್ದ ನಗರಗಳಲ್ಲಿ ಇಂದಿನಿಂದ ಹುಡುಕಾಟದಲ್ಲಿ ನಾವು ಕಥೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ ಮತ್ತು ನಾವು ಆನಂದಿಸುವಷ್ಟೇ ನೀವೂ ಅವುಗಳನ್ನು ಆನಂದಿಸುತ್ತೀರಿ ಎಂದು ನಿರೀಕ್ಷಿಸುತ್ತೇವೆ!
Back To News