Introducing our First CitizenSnap Report

Today we are releasing our first-ever CitizenSnap report, which explains the way we operate our business and support our team, our community, and our partners – as well as, more broadly, our society and environment.
ಸಂಪಾದಕರ ಟಿಪ್ಪಣಿ: Snap CEO ಇವಾನ್ ಸ್ಪೀಗೆಲ್ ಜುಲೈ 29 ರಂದು Snap ತಂಡದ ಎಲ್ಲಾ ಸದಸ್ಯರಿಗೆ ಈ ಕೆಳಗಿನ ಜ್ಞಾಪನೆಯನ್ನು ಕಳುಹಿಸಿದ್ದಾರೆ.
ಆತ್ಮೀಯರೇ,
ಇಂದು ನಾವು ನಮ್ಮ ಮೊಟ್ಟಮೊದಲ CitizenSnap ವರದಿಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಅದು ನಾವು ನಮ್ಮ ವ್ಯವಹಾರವನ್ನು ನಿರ್ವಹಿಸುವ ರೀತಿ ಮತ್ತು ನಮ್ಮ ತಂಡ, ನಮ್ಮ ಸಮುದಾಯ ಮತ್ತು ನಮ್ಮ ಪಾಲುದಾರರ - ಜೊತೆಗೆ, ಹೆಚ್ಚು ವಿಶಾಲವಾಗಿ, ನಮ್ಮ ಸಮಾಜ ಮತ್ತು ಪರಿಸರವನ್ನು ಬೆಂಬಲಿಸುವ ವಿಧಾನವನ್ನು ವಿವರಿಸುತ್ತದೆ. ನಮ್ಮ ವೈವಿಧ್ಯತೆ, ನೀತಿ ಮತ್ತು ಸೇರ್ಪಡೆ ಪ್ರಯತ್ನಗಳು ಮತ್ತು ಸಂಬಂಧಿತ ಡೇಟಾಗಳನ್ನು ಸಹ ವಿವರಿಸುವ ಈ ವರದಿಯು ಆರೋಗ್ಯಕರವಾದ ಸಮಾಜವನ್ನು ಹಾಗೂ ಸ್ವಚ್ಛ ಮತ್ತು ಸುರಕ್ಷಿತವಾದ ವಾತಾವರಣವನ್ನು ಸೃಷ್ಟಿಸಲು ಕೊಡುಗೆ ನೀಡುವುದು Snap ‌ನ ಉತ್ತಮ ಆಸಕ್ತಿಯಾಗಿದೆ ಎಂಬ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ, ಇದರಿಂದಾಗಿ ನಮ್ಮ ವ್ಯವಹಾರ ಅದರ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಾಧ್ಯವಾಗುತ್ತದೆ. ನಮ್ಮ ತಂಡ, ಸಮುದಾಯ ಮತ್ತು ಪಾಲುದಾರರ ಯಶಸ್ಸಿನ ಉಪಉತ್ಪನ್ನವಾಗಿ ನಾವು ಲಾಭ ಪಡೆಯಲು ಬಯಸುತ್ತೇವೆ - ಅವರ ವೆಚ್ಚದಲ್ಲಿ ಅಲ್ಲ.
ಇದರರ್ಥ ನಮ್ಮ ಸಂಬಂಧಗಳು ಮತ್ತು ನಮ್ಮ ತಂಡ, ನಮ್ಮ ಸಮುದಾಯ ಮತ್ತು ನಮ್ಮ ಪಾಲುದಾರರೊಂದಿಗೆ ನಾವು ವರ್ತಿಸುವ ರೀತಿಯಲ್ಲಿ ನಮ್ಮ ಯಶಸ್ಸನ್ನು ನಾವು ವ್ಯಾಖ್ಯಾನಿಸುತ್ತೇವೆ. ಹಂಚಿಕೆಯ ಯಶಸ್ಸಿನಿಂದ ಎಲ್ಲಾ ಪಕ್ಷಗಳು ಪ್ರಯೋಜನ ಪಡೆಯುವಂತಹ ಗೆಲುವು-ಗೆಲುವು-ಗೆಲುವು ಪಾಲುದಾರಿಕೆಗಳನ್ನು ನಿರ್ಮಿಸಲು ನಾವು ಪ್ರಯತ್ನಿಸುತ್ತೇವೆ. ಕಾರ್ಪೊರೇಟ್ ಪೌರತ್ವವು ನಮ್ಮ ವ್ಯವಹಾರಕ್ಕೆ ಒಂದು ಪರಿಕರವಲ್ಲ, ಅದು ನಾವು ವ್ಯವಹಾರ ನಡೆಸುವ ವಿಧಾನವನ್ನು ಪ್ರತಿಬಿಂಬಿಸುತ್ತದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಾವು ಪ್ರಧಾನ ಕಚೇರಿಯನ್ನು ಹೊಂದಿದ್ದು, ಇದೊಂದು ಕಾರ್ಪೋರೇಟ್ ವ್ಯಕ್ತಿತ್ವದ ವಿಶಿಷ್ಟ ಇತಿಹಾಸವನ್ನು ಹೊಂದಿರುವ ದೇಶವಾಗಿದೆ, ಅದರ ಸಂವಿಧಾನದ 14 ನೇ ತಿದ್ದುಪಡಿಯಿಂದ ಸಮಾನ ರಕ್ಷಣೆಯನ್ನು ಖಾತರಿಪಡಿಸಲಾಗಿದೆ.(ಅಂತರ್ಯುದ್ಧದ ನಂತರ ಪುನರ್ನಿರ್ಮಾಣದ ಸಮಯದಲ್ಲಿ ಅಂಗೀಕರಿಸಲಾಗಿದೆ). ವ್ಯವಹಾರಗಳು ಸಮಾಜದಲ್ಲಿ ಕೇವಲ ಲಾಭ-ಹೆಚ್ಚಿಸುವ ಯಂತ್ರಗಳಲ್ಲ, ಆದರೆ ಸಹ ನಾಗರಿಕರಂತೆ - ಹಕ್ಕುಗಳು ಮತ್ತು ಜವಾಬ್ದಾರಿಗಳೊಂದಿಗೆ ಭಾಗವಹಿಸುತ್ತವೆ ಎಂದು US ಸರ್ಕಾರ ಮತ್ತು ನ್ಯಾಯಾಲಯಗಳು ಸ್ಪಷ್ಟಪಡಿಸಿವೆ. ನಮ್ಮ ಜವಾಬ್ದಾರಿಗಳು ನಾವು ಕಾರ್ಯನಿರ್ವಹಿಸುವ ದೇಶಗಳ ಕಾನೂನುಗಳ ಮೂಲಭೂತ ಅನುಸರಣೆಯನ್ನು ಮೀರಿ ವಿಸ್ತರಿಸುತ್ತವೆ ಮತ್ತು ಸಕಾರಾತ್ಮಕ ವ್ಯತ್ಯಾಸವನ್ನು ಮಾಡುವ ಬದ್ಧತೆಯನ್ನು ಸಹ ಒಳಗೊಂಡಿರುತ್ತದೆ.
US ನಲ್ಲಿ, ನಮ್ಮ ಹಿಂದಿನದನ್ನು ಅಂಗೀಕರಿಸದೆ ಮತ್ತು ಇತರ ಜನರ ವೆಚ್ಚದಲ್ಲಿ ನಾವು ಇಂದು ಇಲ್ಲಿದ್ದೇವೆ ಎಂದು ಗುರುತಿಸದೆ ನಾವು ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ನಾವು ಕಲಿತಿದ್ದೇವೆ. ನಮ್ಮ ರಾಷ್ಟ್ರದ ಸಂಪತ್ತನ್ನು ಕದ್ದ ಭೂಮಿಯಲ್ಲಿ ಮತ್ತು ಕದ್ದ ಕಾರ್ಮಿಕರ ಮೇಲೆ ನಿರ್ಮಿಸಲಾಗಿದೆ: ಸ್ಥಳೀಯ ಜನರಿಂದ ವಿಸ್ತಾರವಾದ ಭೂಮಿಯನ್ನು ಬಲವಂತವಾಗಿ ತೆಗೆದುಕೊಂಡಂತೆ, ಗುಲಾಮಿ ಜನರು ನಮ್ಮ ರಾಷ್ಟ್ರೀಯ ಸಮೃದ್ಧಿಗೆ ಆರ್ಥಿಕ ಅಡಿಪಾಯವನ್ನು ಹಾಕಿದರು. ಲಾಸ್ ಏಂಜಲೀಸ್‌ನಲ್ಲಿರುವ ನಮ್ಮ ಪ್ರಧಾನ ಕಚೇರಿ ಮೂಲತಃ ಚುಮಾಶ್ ಮತ್ತು ಟೋಂಗ್ವಾಕ್ಕೆ ಸೇರಿದ ಭೂಮಿಯಲ್ಲಿದೆ.
ಆಫ್ರಿಕನ್ ಅಮೇರಿಕನ್ ಕುಟುಂಬಗಳು ಬಿಳಿ ಅಮೆರಿಕನ್ ಕುಟುಂಬಗಳ ಸಂಪತ್ತಿನ ಸರಾಸರಿ ಹತ್ತನೇ ಒಂದು ಭಾಗವನ್ನು ಹೊಂದಿದ್ದಾರೆಂದು ಅರ್ಥಮಾಡಿಕೊಳ್ಳುವುದು, ಅಗತ್ಯವಾಗಿ, ನಮ್ಮ ನಡವಳಿಕೆಯ ದೋಷಾರೋಪಣೆಯಾಗಿದೆ. 2018ರಲ್ಲಿ ಸ್ಥಳೀಯ ಅಮೆರಿಕನ್ನರು ಬಿಳಿ ಅಮೆರಿಕನ್ನರಿಗಿಂತ ಎರಡೂವರೆ ಪಟ್ಟು ಹೆಚ್ಚು ಬಡತನದ ಪ್ರಮಾಣವನ್ನು ಹೊಂದಿದ್ದರು. ಈ ಸಂಗತಿಗಳು ನಾವು ಅರಿತುಕೊಳ್ಳಲು ಬಯಸುವ ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ.
ನಮಗೆ ಒಂದು ಆಯ್ಕೆ ಇದೆ ಎಂಬುದು ಸ್ಪಷ್ಟವಾಗಿದೆ: ಈ ಅಸಮಾನತೆಗಳನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಾಶ್ವತವಾಗಿಸಲು ಅನುಮತಿಸುವುದು - ಅಥವಾ ಸಮಾಜವಾಗಿ ನಾವು ಎತ್ತಿಹಿಡಿಯಲು ಬಯಸುವ ಹಂಚಿಕೆಯ ಮೌಲ್ಯಗಳನ್ನು ಉತ್ತಮವಾಗಿ ಪೂರೈಸಲು ನಮ್ಮ ಪಾಲಿನದ್ದನ್ನು ಮಾಡುವುದು. ನಮ್ಮ ನಾಗರಿಕರಲ್ಲಿ ಅಸಮಾನವಾಗಿ ಹೂಡಿಕೆ ಮಾಡುವ ಯುನೈಟೆಡ್ ಸ್ಟೇಟ್ಸ್ ನಲ್ಲಿನ ಬೃಹತ್ ಮತ್ತು ನಡೆಯುತ್ತಿರುವ ರಚನಾತ್ಮಕ ಅಸಮಾನತೆಗಳು ಮತ್ತು ನೀತಿಗಳನ್ನು ಗಮನದಲ್ಲಿಟ್ಟುಕೊಂಡು, ವ್ಯವಹಾರವಾಗಿ ನಮ್ಮ ಅತ್ಯಂತ ಶ್ರಮದಾಯಕ ಪ್ರಯತ್ನಗಳು ಸಹ ವಿಶಾಲವಾದ ಸಾಮಾಜಿಕ ಬದಲಾವಣೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸೂಚಿಸುವುದು ತಪ್ಪುದಾರಿಗೆಳೆಯುವಂತಿದೆ, ಆದರೆ ನಾವು ಏನನ್ನೂ ಮಾಡದೇ ಸುಮ್ಮನೆ ನಿಲ್ಲುವುದಿಲ್ಲ. ನಾವು ಅದನ್ನು ನಾವು ಒಬ್ಬರ‍ೇ ಮಾಡಲು ಸಾಧ್ಯವಿಲ್ಲ, ಆದರೆ ನಾವು ನಮ್ಮ ನಾವು ನಮ್ಮ ಪಾಲಿನದ್ದನ್ನು ಮಾಡುತ್ತೇವೆ.
ನಮ್ಮ ದೇಶದ ಭವಿಷ್ಯದಲ್ಲಿ ನಾವು ಮಾಡಬೇಕಾದ ಹೂಡಿಕೆಗಳಿಗಾಗಿ - ಬಡತನವನ್ನು ನಿವಾರಿಸಲು, ಶೈಕ್ಷಣಿಕ ಅವಕಾಶವನ್ನು ಒದಗಿಸಲು, ಅಗತ್ಯವಾದ ಡಿಜಿಟಲ್ ಮೂಲಸೌಕರ್ಯಗಳನ್ನು ನಿರ್ಮಿಸಲು ಮತ್ತು ನಮ್ಮ ಅನ್ಯಾಯದ ಇತಿಹಾಸವನ್ನು ಎದುರಿಸಲು ನಾವು ನಮ್ಮ ಧ್ವನಿಯನ್ನು, ನಮ್ಮ ವ್ಯಕ್ತಿತ್ವವನ್ನು ಬಳಸುತ್ತೇವೆ. ಈ ಪ್ರಯತ್ನಗಳು ನಮ್ಮ ವ್ಯವಹಾರದೊಳಗೆ ಪ್ರಾರಂಭವಾಗುತ್ತವೆ, ನಮ್ಮ ವೇತನ ಅಭ್ಯಾಸಗಳು, ನೇಮಕ ಮತ್ತು ಸೇರ್ಪಡೆ ಕಾರ್ಯಕ್ರಮಗಳು, ತೆರಿಗೆ ತಂತ್ರ, ಪೂರೈಕೆ ಸರಪಳಿ ಮತ್ತು ಇಂಧನ ಬಳಕೆಯಂತಹ ನಾವು ಹೆಚ್ಚು ನೇರವಾಗಿ ಪರಿಣಾಮ ಬೀರಬಹುದಾದವುಗಳು. ನಾವು ಏನನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆಂದೆರೆ ನಮ್ಮ ತಂಡದ ಎಲ್ಲಾ ಸದಸ್ಯರು, ನಮ್ಮ ಸಮುದಾಯ ಮತ್ತು ನಮ್ಮ ಪಾಲುದಾರರು ಅರ್ಥಮಾಡಿಕೊಂಡಿದ್ದಾರೆ ಮತ್ತು ಮೆಚ್ಚುಗೆಯನ್ನು ಹೊಂದಿದ್ದಾರೆ - ಸಂಭ್ರಮಿಸುತ್ತಾರೆ - ಅವರು ತಾವೇನಾಗಿರುವರ‍ೋ ಅದಕ್ಕಾಗಿ : ಪ್ರತಿಯೊಬ್ಬ ವ್ಯಕ್ತಿಯು ಅವರ ವ್ಯತ್ಯಾಸಗಳಲ್ಲಿ ಸಮಾನರಾಗಿರುತ್ತಾರೆ.
ದಯವಿಟ್ಟು ನಮ್ಮ ಮೊದಲ Citizensnap ವರದಿಯನ್ನು “ಪ್ರಾಥಮಿಕ ಕರಡು” ಎಂದು ಪರಿಗಣಿಸಿ, ಇದು ಈ ಪ್ರಯತ್ನಗಳ ಬಗ್ಗೆ ನಾವು ಹೇಗೆ ಹೋಗುತ್ತಿದ್ದೇವೆ ಎಂಬುದರ ಬಗ್ಗೆಗಿನ ವಿವರಣೆ ಮತ್ತು ಕಲಿಯಲು, ಬೆಳೆಯಲು ಮತ್ತು ಪುನರಾವರ್ತಿಸುವ ನಮ್ಮ ಬಯಕೆಯ ಪ್ರತಿಫಲನವಾಗಿದೆ. ಇಂದು ನಾವು ನಮ್ಮ ಆಸ್ಪಿರೇಷನ್‍ಗಳಿಂದ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ನಾವು ಮಾಡಲು ಹೆಚ್ಚಿನ ಪ್ರಮಾಣದ ಕೆಲಸವನ್ನು ಹೊಂದಿದ್ದೇವೆ ಮತ್ತು ಸಾರ್ವಜನಿಕವಾಗಿ ನಮ್ಮನ್ನು ನಾವು ಹೊಣೆಗಾರರನ್ನಾಗಿ ಮಾಡುವುದು ಮುಖ್ಯ ಎಂದು ನಮ್ಮ ತಂಡವು ಬಲವಾಗಿ ಭಾವಿಸುತ್ತದೆ. Snap ನ ಬೆಳವಣಿಗೆಯ ಮೇಲಿನ ದೀರ್ಘಾವಧಿಯ ಮಿತಿಯು ನಮ್ಮ ವಿಶಾಲ ಸಮಾಜದ ಯಶಸ್ಸು ಎಂದು ನಾವು ನಂಬುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಹೂಡಿಕೆ ಮಾಡುತ್ತೇವೆ.
ಇವಾನ್
Back To News