Snap Partner Summit | The Future of Lenses

Today, we’re making it easier to find the right Lenses at the right time. Just press and hold on your camera screen to Scan the world around you.
ಸುಮಾರು ನಾಲ್ಕು ವರ್ಷಗಳ ಹಿಂದೆ, ನಾವು ಲೆನ್ಸ್‌ಗಳನ್ನು ಪರಿಚಯಿಸಿದ್ದೇವೆ: ನಿಮ್ಮ ಸೆಲ್ಫಿಯನ್ನು ನೋಡಲು ಒಂದು ಸಂಪೂರ್ಣ ಹೊಸ ವಿಧಾನ!
ನಾವು ತಯಾರಿಸಿದ ಮೊದಲ ಲೆನ್ಸ್‌ಗಳು ಸ್ವಯಂ ಅಭಿವ್ಯಕ್ತಿಗಾಗಿ ಮಾಡಿರುವಂತವು. ಮುಂದೆ ಬಂದದ್ದು ವರ್ಲ್ಡ್ ಲೆನ್ಸ್‌ಗಳು: 3D ಸ್ಟಿಕ್ಕರ್‌ಗಳು, Bitmoji ಮತ್ತು ನಿಮ್ಮ ಸುತ್ತಲ ಜಗತ್ತಿನಲ್ಲಿ ಆವರಿಸಿದಂಥ ಡ್ಯಾನ್ಸಿಂಗ್ ಹಾಟ್‌ ಡಾಗ್‌ಗಳು. ತೀರಾ ಇತ್ತೀಚೆಗೆ, ನಾವು Snappables ಅನ್ನು ಪ್ರಾರಂಭಿಸಿದ್ದೇವೆ - ಇವು ನಿಮ್ಮ ಮುಖದೊಂದಿಗೆ ನೀವು ಆಡಬಹುದಾದ ಆಟಗಳು!
ಕೇವಲ ಒಂದು ವರ್ಷದಲ್ಲಿ, ನಮ್ಮ ಸಮುದಾಯದಿಂದ 400,000 ಕ್ಕೂ ಹೆಚ್ಚು ಲೆನ್ಸ್‌ಗಳನ್ನು ರಚಿಸಲಾಗಿದೆ, ಮತ್ತು ಜನರು ಆ ಲೆನ್ಸ್‌ಗಳ ಮೂಲಕ 15 ಬಿಲಿಯನ್‌ಗಿಂತಲೂ ಹೆಚ್ಚು ಬಾರಿ ಪ್ಲೇ ಮಾಡಿದ್ದಾರೆ! * ಲೆನ್ಸ್ ಕ್ರಿಯೇಟರ್‌ಗಳು ತಮ್ಮ ಕೆಲಸವನ್ನು ಪ್ರದರ್ಶಿಸುವುದಕ್ಕೆ ಮತ್ತು ಅವರ ಪ್ರೇಕ್ಷಕರ ಕುರಿತು ಇನ್ನಷ್ಟು ತಿಳಿದುಕೊಳ್ಳುವುದಕ್ಕೆ ನೆರವಾಗಲು ನಾವು ಕ್ರಿಯೇಟರ್ ಪ್ರೊಫೈಲ್‌ಗಳನ್ನು ಪರಿಚಯಿಸುತ್ತಿದ್ದೇವೆ.
ನಾವು ಅವುಗಳನ್ನು ಲೆನ್ಸ್‌ಗಳೆಂದು ಕರೆಯುತ್ತೇವೆ ಏಕೆಂದರೆ ಅವುಗಳು ನಿಮ್ಮ ಪ್ರಪಂಚವನ್ನು ಕೇವಲ ಫಿಲ್ಟರ್ ಮಾತ್ರ ಮಾಡುವುದಷ್ಟೇ ಅಲ್ಲ. ಅವುಗಳು ನಿಮ್ಮನ್ನು ಹೊಸ ವಿಷಯಗಳಲ್ಲಿ ಮಗ್ನರಾಗುವಂತೆ ಮಾಡುತ್ತವೆ. ಭವಿಷ್ಯದಲ್ಲಿ ಮುಂದೊಂದು ದಿನ,ನಿಮ್ಮ ಸುತ್ತಲಿನ ಪ್ರಪಂಚದೊಂದಿಗೆ ಮಾತನಾಡಲು, ಸೃಷ್ಟಿಸಲು, ಕಲಿಯಲು ಮತ್ತು ಆಡಲು ಈ ರೀತಿಯ ಅನುಭವಗಳು ಹೊಸ ವಿಧಾನಗಳೊಂದಿಗೆ ಲಭ್ಯವಾಗುತ್ತವೆ ಎಂದು ನಾವು ನಂಬುತ್ತೇವೆ.
ಇಂದು, ಸರಿಯಾದ ಸಮಯದಲ್ಲಿ ಸರಿಯಾದ ಲೆನ್ಸ್‌ಗಳನ್ನು ಕಂಡುಹಿಡಿಯುವುದನ್ನು ನಾವು ಸುಲಭಗೊಳಿಸುತ್ತಿದ್ದೇವೆ.
AR ಬಾರ್ ಮತ್ತು ಸ್ಕ್ಯಾನ್
ವೇದಿಕೆಯಲ್ಲಿ ಒಂದು ಹೊಸ, ಏಕೀಕೃತ ಲೆನ್ಸ್ ಅನುಭವ ಮತ್ತು ಹೆಚ್ಚುವರಿ , ರೊಬಸ್ಟಾ ಕ್ಯಾಮೆರಾ ಹುಡುಕಾಟ ಸಾಮರ್ಥ್ಯಗಳನ್ನೂ ಕೂಡ Snap ಪರಿಚಯಿಸುತ್ತಿದೆ. ಶೀಘ್ರದಲ್ಲಿ Snapchatters ಗೆ “AR ಬಾರ್” ಮತ್ತು "ಸ್ಕ್ಯಾನ್" ಲಭ್ಯವಾಗಲಿವೆ.
Snapchat ನಲ್ಲಿ ಲೆನ್ಸ್‌ಗಳನ್ನು ಹುಡುಕಲು ಮತ್ತು ಕ್ಯಾಮೆರಾ ಹುಡುಕಾಟ ಅನುಭವಗಳನ್ನು ನ್ಯಾವಿಗೇಟ್ ಮಾಡಲು Snapchatters ಗೆ ಹಿಂದೆಂದಿಗಿಂತಲೂ ಸುಲಭವಾಗಿಸುವುದಕ್ಕಾಗಿ AR ಬಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. AR ಬಾರ್‌ನೊಂದಿಗೆ, ಮೊತ್ತ ಮೊದಲ ಬಾರಿಗೆ, ಎಲ್ಲವನ್ನೂ ಒಂದೇ ಸ್ಥಳದಲ್ಲಿ ಸೃಷ್ಟಿ, ಸ್ಕ್ಯಾನ್, ಬ್ರೌಸ್, ಮತ್ತು ಅನ್ವೇಷಣೆ ಮಾಡಲು Snapchatters ಗೆ ಸಾಧ್ಯವಾಗುತ್ತದೆ.
ಸಾಂದರ್ಭಿಕವಾಗಿ ಸಂಬಂಧಿತ ಲೆನ್ಸ್‌ಗಳು ಮತ್ತು ಕ್ಯಾಮೆರಾ ಆಧರಿತ ಅನುಭವಗಳನ್ನು ಕೇವಲ ಒಂದು ಟ್ಯಾಪ್‌ನಲ್ಲಿ ಪತ್ತೆಮಾಡಲು ವಿನ್ಯಾಸಗೊಳಿಸಲಾಗಿರುವ ಹೊಸ ಸ್ಕ್ಯಾನ್ ಬಟನ್ ಅನ್ನೂ AR ಬಾರ್ ಹೊಂದಿರಲಿದೆ.
ಲೆನ್ಸ್ ಸ್ಟುಡಿಯೋ ಮೂಲಕ Snap ನ ಸಾರ್ವಜನಿಕ ಸಮುದಾಯ ಸೃಷ್ಟಿಸಿರುವವುಗಳೂ ಸೇರಿದಂತೆ, ಸ್ಕ್ಯಾನ್‌ನೊಂದಿಗೆ ಸಂಬಂಧಿತ ಲೆನ್ಸ್‌ಗಳು ಕ್ಯಾಮೆರಾ ವ್ಯೂನಲ್ಲಿ ಏನಿದೆ ಎನ್ನುವುದನ್ನು ಆಧರಿಸಿ Snapchatters ಗೆ ಕ್ರಿಯಾತ್ಮಕವಾಗಿ ಕಾಣಿಸುತ್ತವೆ.
Snap ಹೊಸ ಸ್ಕ್ಯಾನ್ ಪಾಲುದಾರರನ್ನೂ ಪರಿಚಯಿಸುತ್ತಿದೆ.
Photomath ಜೊತೆಗೆ ಪಾಲುದಾರಿಕೆಯೊಂದಿಗೆ, ಕ್ಯಾಮರಾದೊಳಗೆ ಗಣಿತದ ಸಮಸ್ಯೆಯ ಉತ್ತರವನ್ನು ಕಂಡುಕೊಳ್ಳಲು Snapchat ಕ್ಯಾಮರಾವನ್ನು ಗಣಿತ ಸಮಸ್ಯೆಯತ್ತ ಹಿಡಿಯಲು Snapchatters ಗೆ ಸಾಧ್ಯವಾಗುತ್ತದೆ. ಹೆಚ್ಚುವರಿಯಾಗಿ, ಪಾಲುದಾರ GIPHY ಯೊಂದಿಗಿನ ಏಕೀಕರಣದೊಂದಿಗೆ, ಸಾಂದರ್ಭಿಕವಾಗಿ ಸಂಬಂಧಿತವಾದ, Snapchat ಕ್ಯಾಮೆರಾ ವ್ಯೂನಲ್ಲಿ ಏನಿದೆ ಎನ್ನುವುದನ್ನು ಆಧರಿಸಿ, ಕ್ರಿಯಾತ್ಮಕವಾಗಿ ಸೃಷ್ಟಿಸಿದ GIF ಲೆನ್ಸ್‌ಗಳಿಂದ ಅವರ Snap ಗಳನ್ನು ಅಲಂಕರಿಸಲು ಯಾವುದೇ Snapchatter ಅನ್ನು ಆಹ್ವಾನಿಸಬಹುದು.
ಲೆನ್ಸ್ ಸ್ಟುಡಿಯೋ ಮತ್ತು "ಲ್ಯಾಂಡ್‌ಮಾರ್ಕರ್‌ಗಳು"
Snap ನ ಲೆನ್ಸ್ ಸ್ಟುಡಿಯೋ ಎನ್ನುವುದು, Snapchat ನಲ್ಲಿ ಯಾರಾದರೂ ಲೆನ್ಸ್‌ಗಳನ್ನು ನಿರ್ಮಿಸಲು ಮತ್ತು ವಿತರಣೆ ಮಾಡಲು ಇರುವ ಒಂದು ಉಚಿತ, ಸಾರ್ವಜನಿಕವಾಗಿ ಲಭ್ಯವಿರುವ ಡೆಸ್ಕ್‌ಟಾಪ್ ಆ್ಯಪ್ ಆಗಿದೆ. Snap ನ ಅತ್ಯಾಧುನಿಕ ಕಂಪ್ಯೂಟರ್ ವಿಷನ್ ಮತ್ತು ಗ್ರಾಫಿಕ್ಸ್ ತಂತ್ರಜ್ಞಾನವನ್ನು ಕ್ರಿಯೇಟರ್‌ಗಳಿಗೆ ಸರಳ ಟೆಂಪ್ಲೇಟ್‌ಗಳಾಗಿ ಲೆನ್ಸ್ ಸ್ಟುಡಿಯೋ ರೂಪಿಸುತ್ತದೆ. ಲೆನ್ಸ್ ಸ್ಟುಡಿಯೋ ಮೂಲಕ Snap ನ ಸಮುದಾಯದಿಂದ 400,000 ಕ್ಕೂ ಹೆಚ್ಚಿನ ಲೆನ್ಸ್‌ಗಳನ್ನು ರಚಿಸಲಾಗಿದೆ, ಮತ್ತು ಆ ಲೆನ್ಸ್‌ಗಳನ್ನು 15 ಬಿಲಿಯನ್‌ಗಿಂತ ಹೆಚ್ಚು ಬಾರಿ ಪ್ಲೇ ಮಾಡಲಾಗಿದೆ.
ಇವತ್ತು, ಹ್ಯಾಂಡ್‌ ಟ್ರ್ಯಾಕಿಂಗ್, ಬಾಡಿ ಟ್ರ್ಯಾಕಿಂಗ್ ಮತ್ತು ಪೆಟ್ ಟ್ರ್ಯಾಕಿಂಗ್‌ಗಾಗಿ ಟೆಂಪ್ಲೇಟ್‌ಗಳು ಸೇರಿದಂತೆ, ಲೆನ್ಸ್ ಸೃಷ್ಟಿಗೆ ಇನ್ನಷ್ಟು ಸಾಮರ್ಥ್ಯಗಳನ್ನು ಸೇರಿಸಲು ಲೆನ್ಸ್ ಸ್ಟುಡಿಯೋವನ್ನು Snap ಅಪ್‌ಡೇಟ್ ಮಾಡುತ್ತಿದೆ.
ಮೊತ್ತಮೊದಲ ಬಾರಿಗೆ, Snap ನ ಹೊಚ್ಚ ಹೊಸ ಲ್ಯಾಂಡ್‌ಮಾರ್ಕರ್ ಲೆನ್ಸ್ ಅನುಭವಗಳಿಗಾಗಿ ಲೆನ್ಸ್ ಸ್ಟುಡಿಯೋ ಟೆಂಪ್ಲೇಟ್‌ಗಳನ್ನು ಒಳಗೊಳ್ಳಲಿದೆ. ವಿಶ್ವದ ಅತ್ಯಂತ ಐಕಾನಿಕ್ ಲ್ಯಾಂಡ್‌ಮಾರ್ಕ್‌ಗಳನ್ನು ನೈಜ ಸಮಯದಲ್ಲಿ ಪರಿವರ್ತಿಸಬಲ್ಲಂಥ ವರ್ಧಿತ ರಿಯಾಲಿಟಿ ಅನುಭವಗಳನ್ನು ಈ ಲೆನ್ಸ್‌ಗಳು ಸಕ್ರಿಯಗೊಳಿಸುತ್ತವೆ.
ಇವತ್ತು ಕ್ರಿಯೇಟರ್‌ಗಳಿಗೆ ಐದು ಸ್ಥಳಗಳಿಗೆ ಟೆಂಪ್ಲೇಟ್‌ಗಳು ಲಭ್ಯ ಇವೆ, ಇವು ಸೇರಿದಂತೆ: ಬಕಿಂಗ್‌ಹ್ಯಾಮ್ ಅರಮನೆ (ಲಂಡನ್), ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟೋಲ್ ಬಿಲ್ಡಿಂಗ್ (ವಾಷಿಂಗ್ಟನ್,D.C.), ಐಫೆಲ್ ಟವರ್ (ಪ್ಯಾರಿಸ್), ಫ್ಲಾಟಿರಾನ್ ಬಿಲ್ಡಿಂಗ್ (ನ್ಯೂ ಯಾರ್ಕ್ ನಗರ), ಮತ್ತು ಚೈನೀಸ್ ಥಿಯೇಟರ್ (ಲಾಸ್ ಏಂಜಲೀಸ್), ಇನ್ನಷ್ಟು ಸೇರ್ಪಡೆಯಾಗಲಿವೆ.
ಈ ಭೌತಿಕ ಸ್ಥಳಗಳಿಗೆ ಭೇಟಿ ನೀಡುವ Snapchatters ಇಂದಿನಿಂದ ಆರಂಭಿಸಿ ಈ ಲ್ಯಾಂಡ್‌ಮಾರ್ಕರ್ ಸಕ್ರಿಯಗೊಳಿಸಿರುವ ಲೆನ್ಸ್‌ಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ.
Back To News