ನಮ್ಮ ಜರ್ಮನಿಯ ಸಮುದಾಯದ ಕುರಿತ ಒಂದು ಅಪ್‌ಡೇಟ್: 15 ಮಿಲಿಯನ್ ಮತ್ತು ಬೆಳೆಯುತ್ತಿದೆ!

ಜಾಗತಿಕವಾಗಿ, ಪ್ರತಿ ತಿಂಗಳು 750 ಮಿಲಿಯನ್ ಜನರು Snapchat ಬಳಸಲು ಇಷ್ಟಪಡುತ್ತಾರೆ, ಏಕೆಂದರೆ ಇದು ಅವರು ಸ್ನೇಹಿತರ ಜೊತೆ ಸಂಪರ್ಕ ಹೊಂದಬಹುದಾದ, ತಮ್ಮನ್ನು ಅಭಿವ್ಯಕ್ತಪಡಿಸಬಹುದಾದ ಮತ್ತು ಜಗತ್ತಿನ ಕುರಿತು ತಿಳಿದುಕೊಳ್ಳಬಹುದಾದ ಸ್ಥಳವಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ಸಮುದಾಯ ನಿರಂತರವಾಗಿ ಬೆಳೆಯುತ್ತಿದೆ - ಮತ್ತು ಜರ್ಮನಿಯಲ್ಲಿ ನಾವು 15 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದೇವೆ ಎಂದು ಪ್ರಕಟಿಸಲು ಇಂದು ನಾವು ಹರ್ಷಿತರಾಗಿದ್ದೇವೆ!
ಈ ಮೈಲಿಗಲ್ಲನ್ನು ಸಂಭ್ರಮಿಸಲು, ಜರ್ಮನಿಯ Snapchatter ಗಳ ಕುರಿತು ಕೆಲವು ವಿನೋದದ ವಾಸ್ತವಾಂಶಗಳನ್ನು ನಿಮ್ಮೊಂದಿಗೆ ನಾವು ಹಂಚಿಕೊಳ್ಳುತ್ತಿದ್ದೇವೆ:
  • ನವಪೀಳಿಗೆಯ ಜನರು ನಮ್ಮನ್ನು ಇಷ್ಟಪಡುತ್ತಾರಾದರೂ ಸಹ, ಜರ್ಮನಿಯಲ್ಲಿನ ಬಹುತೇಕ 40% Snapchatter ಗಳು 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. 
  • ಜರ್ಮನಿಯಲ್ಲಿ Snapchatter ಗಳು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚಾಟ್ ಮಾಡಲು, ತಮ್ಮ ಮೆಚ್ಚಿನ ಶೋಗಳ ಹೈಲೈಟ್‌ಗಳನ್ನು ನೋಡಲು ಅಥವಾ ತಮ್ಮ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳಲು - ಪ್ರತಿ ದಿನ ಸರಾಸರಿ 30 ಬಾರಿ ಆ್ಯಪ್ ತೆರೆಯುತ್ತಾರೆ.
  • 75% ಜನರು ಪ್ರತಿದಿನ ತಮ್ಮನ್ನು ಸೃಜನಶೀಲವಾಗಿ ಅಭಿವ್ಯಕ್ತಪಡಿಸಲು, ವಿನೋದ ಹೊಂದಲು ಮತ್ತು ಉಡುಪುಗಳನ್ನು ಪ್ರಯತ್ನಿಸಲು ಮತ್ತು ಖರೀದಿಸಲು ಕೂಡ ನಮ್ಮ ವರ್ಧಿತ ವಾಸ್ತವ ಲೆನ್ಸ್‌ಗಳನ್ನು ಬಳಸುತ್ತಾರೆ.
ಒಂದು ಮುಖ್ಯ ವಿಷಯ ಅವರನ್ನು ಒಗ್ಗೂಡಿಸುತ್ತದೆ - ವಿನೋದಮಯವಾಗಿರುವ, ಒತ್ತಡವಿಲ್ಲದ ಮತ್ತು ಸ್ನೇಹಿತರು, ಕುಟುಂಬದವರು ಮತ್ತು ಜಗತ್ತಿನ ನಡುವೆ ನೈಜ ಸಂಪರ್ಕಗಳಿಗಾಗಿ ಬೆಂಬಲಿಸುವ ವೇದಿಕೆಯ ಕುರಿತ ಪ್ರೀತಿ.
ನಮ್ಮೊಂದಿಗೆ snap ಮಾಡುತ್ತಿರುವುದಕ್ಕಾಗಿ ನಮ್ಮ ಜರ್ಮನ್ ಸಮುದಾಯಕ್ಕೆ ಧನ್ಯವಾದಗಳು!


ನಾವು ಬಳಕೆದಾರರ ಮೆಟ್ರಿಕ್ಸ್ ಅನ್ನು ಹೇಗೆ ಲೆಕ್ಕಾಚಾರ ಮಾಡುತ್ತೇವೆ ಎನ್ನುವ ಕುರಿತ ವಿವರಗಳಿಗಾಗಿ ನಮ್ಮ SEC ಫೈಲಿಂಗ್ಸ್ ನೋಡಿ

ಮರಳಿ ಸುದ್ಧಿಗೆ