Happy Holidays

The holidays are a great time to hang out with friends and spend time with family – it’s always better together! We couldn’t think of a better time to announce Groups, a new way to communicate with up to 16 friends on Snapchat.
ಸ್ನೇಹಿತರೊಂದಿಗೆ ಸುತ್ತಾಡಲು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಲು ರಜಾದಿನಗಳು ಅತ್ಯುತ್ತಮ ಸಮಯವಾಗಿವೆ – ಜೊತೆಯಾಗಿರುವುದು ಯಾವಾಗಲೂ ಉತ್ತಮ! Snapchat ನಲ್ಲಿ 16 ರವೆರೆಗೆ ಸ್ನೇಹಿತರೊಂದಿಗೆ ಸಂವಹನ ಮಾಡಬಹುದಾದ ಹೊಸ ವಿಧಾನ, ಗುಂಪುಗಳನ್ನು ಘೋಷಿಸಲು ಇದಕ್ಕಿಂತ ಉತ್ತಮ ಸಮಯ ಇರಬಹುದು ಎಂದು ನಮಗೆ ಅನಿಸುತ್ತಿಲ್ಲ.
Snap ಕಳುಹಿಸುವಾಗ, ಅಥವಾ ನೀವು ಹೊಸ ಚಾಟ್ ಮಾಡುತ್ತಿರುವಾಗ ಗುಂಪುಗಳನ್ನು ರಚಿಸಬಹುದು. ನಿಮ್ಮ ಸ್ನೇಹಿತರು ಗುಂಪು ಚಾಟ್‌ನಲ್ಲಿ ಇರುವಾಗ, ಚಾಟ್‌ನ ಕೆಳಭಾಗದಲ್ಲಿ ನಾವು ಅವರ ಹೆಸರನ್ನು ತೋರಿಸುತ್ತೇವೆ. ಪರಸ್ಪರ ಚಾಟ್‌ ಮಾಡುವುದಕ್ಕಾಗಿ ಅವರ ಹೆಸರನ್ನು ಟ್ಯಾಪ್ ಮಾಡಿ ಅಷ್ಟೇ, ಮತ್ತು ನಂತರ ಒಂದು ಸ್ವೈಪ್‌ನಲ್ಲಿ ಗುಂಪಿಗೆ ಹಿಂತಿರುಗಿ! ಇದನ್ನು ನಾವು ತ್ವರಿತ ಚಾಟ್ ಎಂದು ಕರೆಯುತ್ತೇವೆ, ಮತ್ತು ಇಡೀ ಗುಂಪನ್ನು ಸ್ಪ್ಯಾಮ್ ಮಾಡದೆ ಒಬ್ಬ ಸ್ನೇಹಿತನೊಂದಿಗೆ ಸಂಭಾಷಣೆಯನ್ನು ನಡೆಸಲು ಇದು ಅತಿ ವೇಗದ ವಿಧಾನವಾಗಿದೆ.
ಒಂದು ಗುಂಪಿಗೆ ಕಳುಹಿಸಿದ ಚಾಟ್‌ಗಳನ್ನು 24 ಗಂಟೆಗಳ ಬಳಿಕ ಡಿಫಾಲ್ಟ್ ಆಗಿ ಅಳಿಸಲಾಗುತ್ತದೆ. ಒಂದು ಗುಂಪಿಗೆ ಕಳುಹಿಸಿದ Snap ಗಳನ್ನು ಪ್ರತಿಯೊಬ್ಬ ಸ್ವೀಕರಿಸುವವರು ಕೇವಲ ಒಮ್ಮೆ ಮಾತ್ರ ತೆರೆಯಬಹುದು ಮತ್ತು ಮರುಪ್ಲೇ ಮಾಡಬಹುದು. ಒಂದು ವೇಳೆ Snap ಅನ್ನು ತೆರೆಯದಿದ್ದರೆ, ಚಾಟ್‌ಗಳ ಹಾಗೆ, ಅದನ್ನು 24 ಗಂಟೆಗಳ ಒಳಗೆ ಅಳಿಸಲಾಗುತ್ತದೆ.
ನಾವು ಎರಡು ಹೊಸ ಕ್ರಿಯೇಟಿವ್ ಟೂಲ್‌ಗಳನ್ನೂ ಪರಿಚಯಿಸಿದ್ದೇವೆ – ಕತ್ತರಿ ಮತ್ತು ಪೇಂಟ್‌ಬ್ರಷ್. ಒಂದು Snap ಅನ್ನು ಸ್ಟಿಕರ್ ಆಗಿ ಬದಲಿಸಲು ಮುನ್ನೋಟ ಸ್ಕ್ರೀನ್‌ನಲ್ಲಿ ಅದನ್ನು ಕತ್ತರಿಸುವುದಕ್ಕೆ ಕತ್ತರಿ ಬಳಸಿ! ಮೆಮೊರಿಗಳಲ್ಲಿ Snap ಗಳಿಗೆ ಪೇಂಟ್‌ಬ್ರಷ್ ಅನ್ನು ಅನ್ವಯಿಸಬಹುದು, ಮತ್ತು ಇದು ಒಂದು Snap ಅನ್ನು ಅದ್ಭುತ ಕಲಾಕೃತಿಯಾಗಿ ಬದಲಿಸುತ್ತದೆ!
ನಾವು ನಿಮ್ಮ ಬೆಂಬಲಕ್ಕೂ ಋಣಿಯಾಗಿದ್ದೇವೆ. ಇನ್ನೊಂದು ಅದ್ಭುತ ವರ್ಷಕ್ಕಾಗಿ ಧನ್ಯವಾದಗಳು – ನಿಮ್ಮೆಲ್ಲರಿಗೂ ಉತ್ಪನ್ನಗಳನ್ನು ನಿರ್ಮಿಸುವುದನ್ನು ನಾವು ಇಷ್ಟಪಡುತ್ತೇವೆ! ನಿಮಗೆ ಅದ್ಭುತ 2017 ಅನ್ನು ಹಾರೈಸುತ್ತೇವೆ.
Back To News