Harmony Korine's Debut Short Film Shot on Spectacles 3 Explores Storytelling in 3D

Today, we unveiled Duck Duck by Harmony Korine, an experimental short film shot using Spectacles 3 to explore storytelling in 3D.
ಇಂದು, ನಾವು ಹಾರ್ಮನಿ ಕೊರಿನ್‌ರವರ ಡಕ್ ಡಕ್ ಅನ್ನು ಅನಾವರಣಗೊಳಿಸಿದ್ದೇವೆ, ಇದೊಂದು ಪ್ರಾಯೋಗಿಕ ಕಿರುಚಿತ್ರವಾಗಿದ್ದು, Spectacles 3 ಯನ್ನು ಬಳಸಿ 3D ಯಲ್ಲಿ ಸ್ಟೋರಿ ಹೇಳುವುದನ್ನು ಪರಿಶೋಧಿಸಲಾಗಿದೆ. ಮೂರು ಆಯಾಮದ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು Spectacles 3 ಡ್ಯುಯಲ್ HD ಕ್ಯಾಮೆರಾಗಳನ್ನು ಹೊಂದಿದ್ದು, Snap ‌ಗಳನ್ನು 3D ಎಫೆಕ್ಟ್‌ಗಳೊಂದಿಗೆ ಪರಿವರ್ತಿಸುವ ಸಾಮರ್ಥ್ಯವನ್ನು ಅನ್ಲಾಕ್ ಮಾಡುತ್ತದೆ.
ಕಿಡ್ಸ್ , ಸ್ಪ್ರಿಂಗ್ ಬ್ರೇಕರ್ಸ್ ಮತ್ತು ತೀರಾ ಇತ್ತೀಚಿನ, ಬೀಚ್ ಬಮ್ ಗೆ ಹೆಸರುವಾಸಿಯಾಗಿರುವ, ಕಲ್ಟ್ ಚಲನಚಿತ್ರ ನಿರ್ಮಾಪಕ ಹಾರ್ಮನಿ ಕೊರಿನ್‌ರವರು Spectacles 3 ಯೊಂದಿಗೆ ಸಿನಿಮೀಯ ಸಾಧನವಾಗಿ ಪ್ರಯೋಗಗಳನ್ನು ಮಾಡಿದ್ದಾರೆ, ಇದು ವರ್ಧಿತ ವಾಸ್ತವವನ್ನು ಮೂರು ಆಯಾಮದ ದೃಶ್ಯಗಳಲ್ಲಿ ತಲ್ಲೀನಗೊಳಿಸುವ ಸ್ಟೋರಿ ಹೇಳುವಿಕೆಗೆ ಒಳಪಡಿಸುತ್ತದೆ.
Spectacles 3 ಅನ್ನು ಬಳಸಿಕೊಂಡು, ಹಾರ್ಮನಿ ಕೊರಿನ್ ಮಿಯಾಮಿಯನ್ನು ಡಕ್ ಡಕ್‌ ನಲ್ಲಿ ಧ್ವನಿ ಮತ್ತು ಬಣ್ಣದ ಅನಿಯಂತ್ರಿತ ಡ್ರೀಮ್‌ಸ್ಕೇಪ್ ಆಗಿ ಪರಿವರ್ತಿಸುತ್ತಾರೆ - ವೇರೇಬಲ್ ಸಿನೆಮಾ, ವರ್ಧಿತ ರಿಯಾಲಿಟಿ ಮತ್ತು ತಲ್ಲೀನಗೊಳಿಸುವ, ಸ್ವಯಂಪ್ರೇರಿತ ಸ್ಟೋರಿ ಹೇಳುವಿಕೆಯ ಉದಯೋನ್ಮುಖ ವಿಭಾಗಗಳನ್ನು ಪರಿಶೋಧಿಸುತ್ತಾರೆ. ಚಿತ್ರದ ಹೈಬ್ರಿಡ್ ರಿಯಾಲಿಟಿಯು 3D ಎಫೆಕ್ಟ್ಸ್ ಅನ್ನು ಅಭಿವೃದ್ಧಿಪಡಿಸಿದ ಫೋರ್ಥ್ ಫಿಲ್ಮ್ ಮೂಲಕ ಜೀವಂತವಾಗಿದೆ, ಇದು Snapchat ನಲ್ಲಿ Spectacles 3 ಬಳಕೆದಾರರಿಗೆ ಲಭ್ಯವಿರುತ್ತದೆ.
"Spectacles 3 ಸಂಪೂರ್ಣವಾಗಿ ವಿಶಿಷ್ಟ ಸ್ವರೂಪವಾಗಿದ್ದು ಅದು ಚಲನಚಿತ್ರ, ನಿರೂಪಣೆ, ಯಾವುದು ಅನಿಮೇಟೆಡ್ ಮತ್ತು ಯಾವುದು ನೈಜವಾಗಿದೆ ಎಂಬುದರ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಾಯಿಸಿದೆ" ಎಂದು ಹಾರ್ಮನಿ ಕೊರಿನ್ ಹೇಳಿದರು. "ಮೊದಲ-ವ್ಯಕ್ತಿಯ ದೃಷ್ಟಿಕೋನ ಮತ್ತು 3D ಪರಿಣಾಮಗಳನ್ನು ಸಂಯೋಜಿಸುವ ಮೂಲಕ, ಸನ್‌ಗ್ಲಾಸ್‌ಗಳು ತಮ್ಮದೇ ಆದ ಹೈಪರ್-ಪರ್ಸನಲ್ ಬ್ರಹ್ಮಾಂಡದಲ್ಲಿ ವಾಸಿಸುತ್ತವೆ ಮತ್ತು ಡಕ್ ಡಕ್ ನ ಬಹು-ಸಂವೇದನಾ ಅನುಭವವನ್ನು ಪ್ರೇರೇಪಿಸಲು ಸಹಾಯ ಮಾಡಿದೆ- ನೀವು ಅದನ್ನು ನೋಡುವಾಗ ಈ ಜಗತ್ತಿನಲ್ಲಿ ನಡೆಯುವಂತೆ."
"ಹಾರ್ಮನಿ ಕೊರಿನ್ ಮತ್ತು Spectacles ಇಬ್ಬರೂ ತಲ್ಲೀನಗೊಳಿಸುವ ಸ್ಟೋರಿ ಹೇಳುವಿಕೆಯ ಗಡಿಗಳನ್ನು ತಳ್ಳಲು ಸಹಾಯ ಮಾಡುತ್ತಾರೆ" ಎಂದು Spectacles ನ ಹಾರ್ಡ್‌ವೇರ್ ನಿರ್ದೇಶಕ ಸ್ಟೀನ್ ಸ್ಟ್ರಾಂಡ್ ಹೇಳಿದರು. "ನಿಮ್ಮ ಎರಡು ಕಣ್ಣುಗಳಂತೆ ಆಳವನ್ನು ಸೆರೆಹಿಡಿಯುವ ಸಾಮರ್ಥ್ಯದೊಂದಿಗೆ, Spectacles 3 ಡಕ್ ಡಕ್ ಗಾಗಿ ಹಾರ್ಮನಿ ಕೊರಿನ್ ಅವರ ವಿಶಿಷ್ಟ ದೃಷ್ಟಿಗೆ ಜೀವ ತುಂಬುತ್ತದೆ, ಈ ಹೊಸ ತಂತ್ರಜ್ಞಾನವು ಸೃಜನಶೀಲ ಸ್ಟೋರಿ ಹೇಳುವಿಕೆಯ ಭವಿಷ್ಯವನ್ನು ಹೇಗೆ ತಿಳಿಸುತ್ತದೆ ಎಂಬುದನ್ನು ತೋರಿಸುತ್ತದೆ."
Gucci ಅವರ ಬೆಂಬಲದೊಂದಿಗೆ, ಡಕ್ ಡಕ್ ಡಿಸೆಂಬರ್ 4 ರ ಸಂಜೆ ಮಿಯಾಮಿ ಬೀಚ್‌ನ ಆರ್ಟ್ ಬಾಸೆಲ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು. Gucci ಯವರ‍ೊಂದಿಗಿನ ಹಾರ್ಮನಿ ಕೊರಿನ್‌ರವರ ದೀರ್ಘಕಾಲದ ಸಂಬಂಧವು 2019 ರ ಫೋಟೋಗ್ರಾಫಿಂಗ್ ಹಾಲಿಡೇ “ಗಿಫ್ಟ್ ಗಿವಿಂಗ್” ಅಭಿಯಾನ, ಕ್ರೂಸ್ 2020 Adv ಅಭಿಯಾನ, ಪ್ರಿ-ಫಾಲ್ 2019 ಸಂಗ್ರಹ ಲುಕ್‌ಬುಕ್ ಮತ್ತು ಪುರುಷರ ಟೈಲರಿಂಗ್ Adv ಅಭಿಯಾನ, ಜೊತೆಗೆ ಹಾರ್ಮನಿ ಕೊರಿನ್‌ರ Gucci ಎಂಬ ಸೀಮಿತ ಆವೃತ್ತಿಯ ಆರ್ಟ್‌ಬುಕ್ ಗಳನ್ನು ಒಳಗೊಂಡಿದೆ. ಜೂನ್ 2019 ರಲ್ಲಿ, ಮಿಲನ್‌ನ Gucci ಹಬ್‌ನಲ್ಲಿ ನಡೆದ ಪುರುಷರ ಫ್ಯಾಷನ್ ವೀಕ್‌ನಲ್ಲಿ Gucci ಯವರು ಹಾರ್ಮನಿ ಕೊರಿನ್ ರವರಿಗೆ - ದಿ ಕ್ರ್ಯಾಕ್-ಅಪ್  ಸಿನಿಮೀಯ ಪ್ರದರ್ಶನವನ್ನು ಸಮರ್ಪಿಸಿದರು.
ಈ ಸಹಯೋಗದ ಭಾಗವಾಗಿ, ಹಾರ್ಮನಿ ಕೊರಿನ್ ಮತ್ತು Gucci ರವರು Spectacles ‌ನೊಂದಿಗಿನ ಸಹಭಾಗಿತ್ವದಲ್ಲಿ ಹಾರ್ಮನಿ ಕೊರಿನ್‌ರವರ ಸೀಮಿತ ಆವೃತ್ತಿಯ Spectacles x Gucci ಯನ್ನು ರಚಿಸಿದರು. ಆರ್ಟ್ ಬೇಸೆಲ್ ಮಿಯಾಮಿ ಬೀಚ್ 2019 ಕ್ಕಾಗಿ ಪ್ರತ್ಯೇಕವಾಗಿ ರಚಿಸಲಾದ ಸೀಮಿತ ಆವೃತ್ತಿಯ Spectacles 3, ಹಾರ್ಮನಿ ಕೊರಿನ್‌ರಿಂದ ಸ್ಫೂರ್ತಿ ಪಡೆದಿದೆ ಮತ್ತು ರಚನೆಕಾರರಿಗಾಗಿ Gucci ಯೊಂದಿಗೆ ವಿನ್ಯಾಸಗೊಂಡಿದೆ. ಪ್ರಪಂಚದಾದ್ಯಂತದ Snapchatter ‌ಗಳು ಇಲ್ಲಿ ಹಾರ್ಮನಿ ಕೊರಿನ್‌ರ Spectacles x Gucci ಯಲ್ಲಿ ವರ್ಚುಯಲ್ ಆಗಿ ಪ್ರಯತ್ನಿಸಬಹುದು.
ಡಕ್ ಡಕ್ ಅನ್ನು www.spectacles.comನಲ್ಲಿ ನೋಡಬಹುದು. ಹಾರ್ಮನಿ ಕೊರಿನ್ ಅವರ ಚಲನಚಿತ್ರ ಮತ್ತು ಸೀಮಿತ ಆವೃತ್ತಿ Spectacles x Gucci ಡಿಸೆಂಬರ್ 5 ರಿಂದ 8 ರವರೆಗೆ ಮಿಯಾಮಿ ಬೀಚ್‌ನ ಆರ್ಟ್ ಬೇಸೆಲ್ ಸಮಯದಲ್ಲಿ Miami Beach from December 5 to 8 at The Melin Building in Miami Art District: 3930 NE 2nd Avenue, Ste 200, Miami, FL 33137 ಇಲ್ಲಿಯ ದಿ ಮೆಲಿನ್ ಕಟ್ಟಡದಲ್ಲಿ ಪ್ರಥಮವಾಗಿ ಪ್ರದರ್ಶನಗೊಳ್ಳಲಿದೆ. ಮಾಹಿತಿ ಮತ್ತು ಪ್ರದರ್ಶನ ಸಮಯವನ್ನು ಇಲ್ಲಿ ಕಾಣಬಹುದು.
Back To News