Introducing Cameos

From Lenses to Bitmoji and everywhere in between, we’re always working on fun new ways to express yourself in the moment. We’re launching another feature to help bring your conversations to life: Cameos!
ಲೆನ್ಸ್‌ಗಳಿಂದ Bitmoji ವರೆಗೆ ಹಾಗೂ ಈ ಮಧ್ಯೆ ಎಲ್ಲದರಲ್ಲೂ ನಿಮ್ಮ ಕ್ಷಣವನ್ನು ಖುಷಿಯಿಂದ ವ್ಯಕ್ತಪಡಿಸಲು ಹೊಸ ವಿಧಾನಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಶೀಘ್ರದಲ್ಲೇ, ನಿಮ್ಮ ಸಂವಾದಗಳಿಗೆ ಜೀವಂತಿಕೆ ತುಂಬಲು Cameos ಎಂಬ ಇನ್ನೊಂದು ವೈಶಿಷ್ಟ್ಯವನ್ನು ನಾವು ಪರಿಚಯಿಸುತ್ತಿದ್ದೇವೆ!
Cameo ಗಳು ನಿಮ್ಮನ್ನು ಸಣ್ಣ, ಲೂಪ್‌ ವೀಡಿಯೋಗಳ ಸ್ಟಾರ್ ಆಗಿಸುತ್ತವೆ. ಇವುಗಳನ್ನು ಚಾಟ್‌ನಲ್ಲಿ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು. ನಿಮ್ಮ ಉತ್ಸಾಹ, ಖುಷಿ ವ್ಯಕ್ತಪಡಿಸಲು ಅಥವಾ ಸುಮ್ಮನೆ ಹಾಯ್‌ ಎಂದು ಹೇಳಲು ಸೂಕ್ತವಾದ Cameo ಇಲ್ಲಿ ಸಿಗುತ್ತದೆ. ನಿಮ್ಮ ಸ್ವಂತದ್ದನ್ನಾಗಿಸಿಕೊಳ್ಳುವುದಕ್ಕಾಗಿ ಕೆಲವು Cameo ಗಳ ಶೀರ್ಷಿಕೆಯನ್ನೂ ನೀವು ಬದಲಿಸಿಕೊಳ್ಳಬಹುದು!
ನಿಮ್ಮ ಸ್ಟಿಕರ್‌ಗಳ ಪಕ್ಕದಲ್ಲೇ ಚಾಟ್‌ನಲ್ಲಿ Cameo ಗಳು ಸಿಗುತ್ತವೆ. ಅಲ್ಲಿಂದಲೇ ನೀವು ಕಳುಹಿಸಲೂಬಹುದು. ಮುಂದಿನ ವಾರಗಳಲ್ಲಿ iOS‌ ಮತ್ತು Android ‌ಗೆ ಬಿಡುಗಡೆಯಾಗಲಿವೆ. ಆರಂಭದಲ್ಲಿ 150 ಕ್ಕೂ ಹೆಚ್ಚು Cameo ಗಳು ಇರಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೇರ್ಪಡೆಯಾಗಲಿವೆ.
ನಿಮ್ಮ ಚಾಟ್‌ ಸ್ಟಿಕರ್ ಬಾರ್‌ನಲ್ಲಿ Cameo ಬಟನ್‌ ಟ್ಯಾಪ್‌ ಮಾಡಿ. ಸೆಲ್ಫಿ ತೆಗೆದುಕೊಳ್ಳಿ. ನಿಮಗೆ ಇಷ್ಟವಾದ ದೃಶ್ಯ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರೂ ತಮ್ಮ Cameo ಸೆಟಪ್‌ ಮಾಡಿದ್ದರೆ,Cameo ದಲ್ಲಿ ನಿಮ್ಮ ಸ್ನೇಹಿತರನ್ನೂ ನೀವು ಸೇರಿಸಿಕೊಳ್ಳಬಹುದು.
ಇನ್ನೇಕೆ ತಡ, ನಿಮ್ಮದೇ Cameo ರಚಿಸಿ.
Back To News