Snap Partner Summit | Introducing Snap Games

Introducing Snap Games: mobile games, made for friends! You can launch Snap Games right from the Chat bar, allowing you and your friends to instantly play together. It feels like you’re sitting shoulder to shoulder, playing on the same screen.
ಎಂಟು ವರ್ಷಗಳ ಹಿಂದೆ, ನಿಮ್ಮ ಸ್ನೇಹಿತರೊಂದಿಗೆ ಮಾತನಾಡುವುದನ್ನು ಹೆಚ್ಚು ವೇಗ ಮತ್ತು ಮೋಜಿನದಾಗಿ ಮಾಡಲು ನಾವು Snapchat ರಚಿಸಿದೆವು.
ಆದರೆ ಸ್ನೇಹ ಎನ್ನುವುದು ನೀವು ಮಾತನಾಡುವ ಸಂಗತಿಗಳಿಗಿಂತ ಹೆಚ್ಚಿನದಾಗಿದೆ. ನೀವು ಜತೆಯಾಗಿ ಪಡೆದ ಅನುಭವಗಳು ಕೂಡ ಸ್ನೇಹದಲ್ಲಿ ಸೇರುತ್ತವೆ — ಆದ್ದರಿಂದ ಸ್ನೇಹಿತರು ಜೊತೆಯಾಗಿ ಆಟವಾಡಲು ಸಂಪೂರ್ಣ ಹೊಸ ಅನುಭವವನ್ನು ನಿರ್ಮಿಸಲು ನಾವು ಕಠಿಣ ಪರಿಶ್ರಮಪಡುತ್ತಿದ್ದೇವೆ.
ಪರಿಚಯಿಸುತ್ತಿದ್ದೇವೆ Snap ಗೇಮ್ಸ್: ಮೊಬೈಲ್ ಗೇಮ್ಸ್, ಸ್ನೇಹಿತರಿಗಾಗಿ ತಯಾರಿಸಿದಂಥವು!
ನೀವು ಮತ್ತು ನಿಮ್ಮ ಸ್ನೇಹಿತರು ತಕ್ಷಣವೇ ಜೊತೆಯಾಗಿ ಆಡಲು ಅವಕಾಶ ಪಡೆಯುವುದಕ್ಕೆ, ಚಾಟ್‌ ಬಾರ್‌ನಿಂದಲೇ ನೀವು Snap ಗೇಮ್ಸ್ ಅನ್ನು ಆರಂಭಿಸಬಹುದು — ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲ. ಯಾವ ಸ್ನೇಹಿತರೊಂದಿಗೆ ನೀವು ಆಡುತ್ತಿದ್ದೀರಿ ಎನ್ನುವುದನ್ನು ನೋಡಬಹುದು, ಅವರಿಗೆ ಚಾಟ್ ಕಳುಹಿಸಬಹುದು, ಅಥವಾ ವಾಯ್ಸ್ ಚಾಟ್‌ನೊಂದಿಗೆ ಲೈವ್ ಆಗಿ ಮಾತನಾಡಲೂಬಹುದು. ನೀವು ಭುಜಕ್ಕೆ ಭುಜ ತಾಗಿಸಿ ಕೂತು, ಒಂದೇ ಸ್ಕ್ರೀನ್‌ನಲ್ಲಿ ಆಡುತ್ತಿದ್ದೀರಿ ಎನ್ನುವ ಭಾವನೆ ಮೂಡಿಸುತ್ತದೆ.
ಆರು ಶೀರ್ಷಿಕೆಗಳೊಂದಿಗೆ Snap ಗೇಮ್ಸ್ ಬಿಡುಗಡೆಯಾಗುತ್ತಿದೆ:
  • Bitmoji ಪಾರ್ಟಿ: Snap ಗೇಮ್ಸ್‌ಗಾಗಿನ Snap ನ ಪ್ರಮುಖ, ಫಸ್ಟ್ ಪಾರ್ಟಿ IP ಯಾಗಿದ್ದು, ನೀವು ಮತ್ತು ನಿಮ್ಮ ಸ್ನೇಹಿತರನ್ನು ಪ್ರದರ್ಶಿಸುತ್ತದೆ, ನೀವು ನಾಲ್ಕು ವೇಗವಾದ ಮಿನಿ ಗೇಮ್‌ಗಳಾದ: ಪೂಲ್ ಪಾರ್ಟಿ, ಕಿಕ್ ಆಫ್, ಸ್ಪಿನ್ ಸೆಷನ್, ಮತ್ತು ಜಾಂಬೀ ಎಸ್ಕೇಪ್ ಅನ್ನು ಪೂರ್ಣಗೊಳಿಸುತ್ತಿರುವಂತೆ ನಿಮ್ಮBitmoji ಗಳ 3D ಯನ್ನು ಜೀವಂತವಾಗಿಸುತ್ತದೆ.
  • ಆಲ್ಫಾಬೇರ್ ಹಸಲ್: (ಸ್ಪ್ರೈ ಫಾಕ್ಸ್) - ಆಲ್ಫಾಬೇರ್ ಹಸಲ್ ಒಂದು ಟ್ವಿಸ್ಟ್‌ನೊಂದಿಗೆ ವೇಗವಾದ ಸಹಕಾರಿ ಶಬ್ದದ ಆಟವಾಗಿದೆ. ಶಬ್ದಗಳನ್ನು ಸ್ಪೆಲ್ ಮಾಡುವುದಕ್ಕೆ, ಮುದ್ದಾದ ಕರಡಿಗಳನ್ನು ಸಂಗ್ರಹಿಸುವುದಕ್ಕೆ, ಮತ್ತು ತಮ್ಮ ಸ್ವಂತ ವೈಯಕ್ತಿಕ ಕರಡಿ ಹಳ್ಳಿಯನ್ನು ನಿರ್ಮಿಸುವುದಕ್ಕೆ ಆಟಗಾರರ ಜೊತೆಯಾಗಿ ಕೆಲಸ ಮಾಡಬಹುದು.
  • C.A.T.S. (ಕ್ರ್ಯಾಶ್ ಅರೇನಾ ಟರ್ಬೊ ಸ್ಟಾರ್ಸ್) ಡ್ರಿಫ್ಟ್ ರೇಸ್:(ಜೆಪ್ಟೊ ಲ್ಯಾಬ್) - C.A.T.S. ಒಂದು ಮಲ್ಟಿಪ್ಲೇಯರ್ ರೇಸಿಂಗ್ ಗೇಮ್ ಆಗಿದ್ದು, ವೇಗವಾಗಿ ಮುಂದುವರಿಯಲು, ಅಥವಾ ವಿರೋಧಿಗಳನ್ನು ಸ್ಲೋ ಡೌನ್ ಮಾಡಲು ಟ್ರ್ಯಾಕ್‌ನುದ್ದಕ್ಕೆ ಚದುರಿರುವ ಬೂಸ್ಟರ್‌ಗಳನ್ನು ಬಳಸಲು 6 ಆಟಗಾರರವರೆಗೆ ಆಹ್ವಾನಿಸುತ್ತದೆ. ದಾರಿಯುದ್ದಕ್ಕೆ C.A.T.S. ಯುನಿವರ್ಸ್‌ನಿಂದ ಹೊಸ ವಾಹನಗಳನ್ನು ಸಂಗ್ರಹಿಸಿ.
  • ಸ್ನೇಕ್ ಸ್ಕ್ವಾಡ್:(ಗೇಮ್ ಕ್ಲೋಷರ್) - ಸ್ನೇಕ್ ಸ್ಕ್ವಾಡ್ ಒಂದು ಮಲ್ಟಿಪ್ಲೇಯರ್ ಬ್ಯಾಟಲ್-ರಾಯೇಲ್ ಗೇಮ್ ಆಗಿದೆ. ಯುದ್ಧಕ್ಕೆ ತೆರಳಲು ನಿಮ್ಮ ಮೆಚ್ಚಿನ ಅವತಾರ್ ಆಯ್ಕೆ ಮಾಡಿ ಮತ್ತು ನಿಮ್ಮ ಸ್ಪರ್ಧಿಯನ್ನು ನಾಶಪಡಿಸುವುದಕ್ಕಾಗಿ ದೊಡ್ಡದಾಗಿ ಬೆಳೆಯಲು ನಿಮ್ಮ ಸ್ಕ್ವಾಡ್‌ನೊಂದಿಗೆ ಯುದ್ಧಭೂಮಿಯ ಸುತ್ತ ಹಾವಿಗೆ ಮಾರ್ಗದರ್ಶನ ನೀಡಿ.
  • ಟಿನಿ ರಾಯೇಲ್: (ಜ್ಯಾಂಗಾ) - ಟಿನಿ ರಾಯೇಲ್™ ಒಂದು ವೇಗವಾದ, ಮೇಲಿಂದ ಕೆಳಗಿನವರೆಗೆ ಮೋಜಿನಿಂದ ಕೂಡಿದ ಬ್ಯಾಟಲ್ ರಾಯೇಲ್ ಗೇಮ್ ಆಗಿದೆ — ಕ್ಲಾಸಿಕ್ ಬ್ಯಾಟಲ್ ರಾಯೇಲ್ ಅನುಭವವನ್ನು, Snapchat ವೇದಿಕೆಗಾಗಿ ಮರು-ಸಂಶೋಧಿಸಲಾಗಿದೆ. ಕೇವಲ ಒಬ್ಬ ಆಟಗಾರ—ಅಥವಾ ತಂಡ—ಉಳಿಯುವ ತನಕ ಲೂಟಿ ಮಾಡಲು ಮತ್ತು ವಿಜೇತರಾಗಲು ಈ ತ್ವರಿತ 2-ನಿಮಿಷಗಳ ಸುತ್ತಿನಲ್ಲಿ ಸ್ನೇಹಿತರೊಂದಿಗೆ ಜೊತೆಗೂಡಿ ಅಥವಾ ಒಬ್ಬಂಟಿಯಾಗಿ ಆಟವಾಡಿ.
  • ಜಾಂಗೀ ರೆಸ್ಕ್ಯೂ ಸ್ಕ್ವಾಡ್: (ಪಿಕ್‌ಪಾಕ್) - ಜಾಂಬೀ ವಿನಾಶದ ಮುಂಚೂಣಿ ಸಾಲನ್ನು ಪ್ರವೇಶಿಸಲು ನಿಮ್ಮ ಜೊತೆಗಾರ ಜಾಂಬೀ ರೆಸ್ಕ್ಯೂ ಸ್ವ್ಯಾಡ್ ಜೊತೆಗೆ ಕೈಜೋಡಿಸಿ. ಹಸಿದ ದಂಡಿನಿಂದ ಬದುಕುಳಿದವರನ್ನು ರಕ್ಷಿಸಿ ಮತ್ತು ನಿಮ್ಮಿಂದ ಸಾಧ್ಯವಿರುವಷ್ಟು ಪೂರೈಕೆಯನ್ನು ಸಂಗ್ರಹಿಸಿ. ಆದರೆ ನೀವು ಹೆಲಿಕಾಪ್ಟರ್ ಅನ್ನು ಸುರಕ್ಷಿತ ಸ್ಥಳಕ್ಕೆ ತರಲು ಸಾಧ್ಯವಾಗದಿದ್ದರೆ, ನೀವು ಹಿಂದುಳಿಯುತ್ತೀರಿ!
Snap ಗೇಮ್‌ಗಳು ನಮ್ಮ ಗೇಮ್ ಡೆವಲಪ್‌ಮೆಂಟ್ ಪಾಲುದಾರರು ಮತ್ತು Snap ಗೆ ಹಣ ಗಳಿಸುವ ಅವಕಾಶವನ್ನು ಒಳಗೊಂಡಿರುತ್ತವೆ. Q3 2018 ಯಲ್ಲಿ ಬಿಡುಗಡೆ ಮಾಡಲಾದ Snap ನ ಸ್ಕಿಪ್ ಮಾಡಲು ಸಾಧ್ಯವಾಗದ, ಆರು ಸೆಕೆಂಡ್‌ಗಳ ವಾಣಿಜ್ಯ ಜಾಹೀರಾತು ಮಾದರಿಗಳ ವೀಡಿಯೋ ಜಾಹೀರಾತುಗಳೊಂದಿಗೆ ವೇದಿಕೆ ಆರಂಭಗೊಳ್ಳಲಿದೆ.
ಮುಂಬರುವ ತಿಂಗಳುಗಳಲ್ಲಿ, Snapchat ಸಮುದಾಯಕ್ಕಾಗಿ ಅತ್ಯುತ್ತಮ ಗೇಮಿಂಗ್ ಅನುಭವವನ್ನು ತರುವುದಕ್ಕಾಗಿ ವಿವಿಧ ಪೀಳಿಗೆ ಮತ್ತು ಶೈಲಿಗಳಾದ್ಯಂತ Snap ಗೇಮ್ಸ್ ನಿಧಾನವಾಗಿ ತನ್ನ ಡೆವಲಪರ್ ಪಾಲುದಾರರನ್ನು ವಿಸ್ತರಿಸಲಿದೆ.
ಗೇಮ್ ಕ್ಲೋಷರ್ ಕುರಿತು
ಸ್ನೇಹಿತರೊಂದಿಗೆ ಆಟವಾಡಲು ಒಂದು ರೋಮಾಂಚಕ ಫ್ಯಾಂಟಸಿ ಶೂಟರ್ ಗೇಮ್ ಆಗಿರುವ ಹಿಟ್ ಮೆಸೆಂಜರ್ ಗೇಮ್ EverWing ಸೇರಿದಂತೆ, HTML5 ಆ್ಯಪ್‌ಗಳನ್ನು ರಚಿಸಲು ಮತ್ತು ವಿತರಿಸಲು ಹಾಗೂ ಅವುಗಳನ್ನು ದೊಡ್ಡ ಪ್ರೇಕ್ಷಕರ ಎದುರು ತರುವುದಕ್ಕಾಗಿ ಗೇಮ್ ಕ್ಲೋಷರ್ ತಂತ್ರಜ್ಞಾನವನ್ನು ಸೃಷ್ಟಿಸುತ್ತದೆ. 2011ರಲ್ಲಿ ಸ್ಥಾಪನೆಯಾದಾಗಿನಿಂದ, ಗೇಮ್ ಕ್ಲೋಷರ್ ಅನ್ನು ಸಹ-ಸಂಸ್ಥಾಪಕ ಮತ್ತು CEO ಮೈಕೆಲ್ ಕಾರ್ಟರ್ ಮುನ್ನಡೆಸುತ್ತಿದ್ದಾರೆ. ಉನ್ನತ ಕಾರ್ಯಕ್ಷಮತೆಯ ಮೆಸೆಂಜರ್ ಗೇಮ್‌ಗಳನ್ನು ರಚಿಸಲುಮ ವಿತರಿಸಲು, ಅತ್ಯುತ್ತಮವಾಗಿಸಲು, ಮತ್ತು ಕಾರ್ಯಾಚರಣೆ ಮಾಡಲು ಗೇಮ್ ಕ್ಲೋಷರ್ ತಂತ್ರಜ್ಞಾನ ವೇದಿಕೆ ಸಾಬೀತುಪಡಿಸಿರುವ ಟೂಲ್‌ಗಳನ್ನು ಒದಗಿಸುತ್ತದೆ.
ಪಿಕ್‌ಪಾಕ್ ಕುರಿತು
ಪಿಕ್‌ಪಾಕ್ ಎನ್ನುವುದು ಮೊಬೈಲ್, ಟ್ಯಾಬ್ಲೆಟ್, ಮತ್ತು ಡೆಸ್ಕ್‌ಟಾಪ್‌ಗಳಾದ್ಯಂತ ಅದ್ಭುತ ಗೇಮ್‌ಗಳ ಪ್ರಮುಖ ರಚನೆಕಾರನಾಗಿದೆ. ಮೂಲ, ಪರವಾನಗಿ ಪಡೆದ ಮತ್ತು ಥರ್ಡ್ ಪಾರ್ಟಿ ಅಭಿವೃದ್ಧಿಪಡಿಸಿದ ಗುಣಲಕ್ಷಣಗಳೊಂದಿಗೆ, ಪಿಕಪ್ ಮತ್ತು ಪ್ಲೇ ಗೇಮ್‌ಪ್ಲೇ, ಉನ್ನತ ಗುಣಮಟ್ಟದ ಕಲೆ, ಮತ್ತು ಮನಸೂರೆಗೊಳ್ಳುವ ಆಡಿಯೋ ವಿನ್ಯಾಸದೊಂದಿಗೆ ಎಲ್ಲ ಗ್ರಾಹಕರ ಕಣ್ಸೆಳೆಯುವ ಮತ್ತು ಅದ್ಭುತ ಗೇಮ್ ಅನುಭವಗಳನ್ನು ಒದಗಿಸುವ ಗೇಮ್‌ಗಳನ್ನು ಪಿಕ್‌ಪಾಕ್‌ ಒದಗಿಸುತ್ತದೆ. ಜನಪ್ರಿಯ ಫ್ಲಿಕ್ ಕಿಕ್® ಸರಣಿ, BAFTA ನಾಮನಿರ್ದೇಶಿತ ಸೂಪರ್ ಮಾನ್‌ಸ್ಟರ್ಸ್ ಏಟ್ ಮೈ ಕಾಂಡೊ™, ಇಂಟು ದ ಡೆಡ್®, ಶಾಟರ್®, ಮತ್ತು ಇನ್ನೂ ಹಲವು ಸೇರಿದಂತೆ ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯವಾಗಿ ಯಶಸ್ವಿಯಾದ ಅನೇಕ ಗೇಮ್‌ಗಳನ್ನು ಪಿಕ್‌ಪಾಕ್ ಬಿಡುಗಡೆ ಮಾಡಿದೆ. ಒಂದು ಕ್ಷಣ ಬಿಡುವು ಮಾಡಿಕೊಳ್ಳಿ ಮತ್ತು ಪಿಕ್‌ಪಾಕ್‌ನಿಂದ ಒಂದು ಆಟ ಆಡಿ.
ಸ್ಪ್ರೈ ಫಾಕ್ಸ್ ಕುರಿತು
ಸ್ಪ್ರೈ ಫಾಕ್ಸ್ 18 ಜನರ ಕಂಪನಿಯಾಗಿದ್ದು, ಸುಮಾರು 10 ವರ್ಷ ಹಳೆಯದಾಗಿದೆ, 15 ವಿಶಿಷ್ಟ ಗೇಮ್‌ಗಳನ್ನು ಬಿಡುಗಡೆ ಮಾಡಿದೆ, ಪ್ರಶಸ್ತಿ ವಿಜೇತ ಆಲ್ಫಾಬೇರ್, ಟ್ರಿಪಲ್ ಟೌನ್ ಮತ್ತು ರಿಯಲ್ಮ್ ಆಫ್ ದ ಮ್ಯಾಡ್‌ ಗಾಡ್ ಇವುಗಳಲ್ಲಿ ಸೇರಿವೆ, ಮತ್ತು ಜಗತ್ತನ್ನು ಸಂತಸಮಯ ಸ್ಥಳವಾಗಿಸುವ ಅಸಲಿ, ಸಮಾಜ-ಪರ ಗೇಮ್‌ಗಳಲ್ಲಿ ವಿಶೇಷ ಗಮನ ನೀಡುತ್ತಿದೆ.
ಜೆಪ್ಟೊಲ್ಯಾಬ್ ಕುರಿತು
ಜೆಪ್ಟೊಲ್ಯಾಬ್ ಒಂದು ಜಾಗತಿಕ ಕಂಪನಿಯಾಗಿದ್ದು, ಆವಿಷ್ಕಾರದಿಂದ ತುಂಬಿರುವ ಮತ್ತು ತನ್ನ ಮೂಲ ಲಕ್ಷಣವಾದ ಗುಣಮಟ್ಟದಿಂದ ಸಾಣೆ ಹಿಡಿದಿರುವ ಮೋಜಿನ ಗೇಮ್‌ಗಳನ್ನು ಸೃಷ್ಟಿಸುತ್ತದೆ. 1.2 ಶತಕೋಟಿ ಬಾರಿ ಡೌನ್‌ಲೋಡ್ ಮಾಡಲಾಗಿರುವ ಅವರ ಕಟ್‌ ದ ರೋಪ್ ಗೇಮ್‌ಗಳ ಯಶಸ್ಸಿನ ಬಳಿಕ, ಕಂಪನಿಯು 200 ಮಿಲಿಯನ್ ಸಂಯೋಜಿತ ಡೌನ್‌ಲೋಡ್‌ಗಳೊಂದಿಗೆ ಬೃಹತ್ ಬಹು ಆಟಗಾರರ ಮೊಬೈಲ್ ಶೀರ್ಷಿಕೆಗಳಾದ ಕಿಂಗ್ ಆಫ್ ಥೀವ್ಸ್ ಮತ್ತು C.A.T.S.: ಕ್ರ್ಯಾಶ್ ಅರೇನಾ ಟರ್ಬೊ ಸ್ಟಾರ್ಸ್ ಅನ್ನು ಬಿಡುಗಡೆ ಮಾಡಿತು. 2017ರಲ್ಲಿ, Google Play ನಿಂದ C.A.T.S. ಗೇಮ್ ಆಫ್ ದ ಇಯರ್ ಪ್ರಶಸ್ತಿಗೆ ಪಾತ್ರವಾಯಿತು ಮತ್ತು Apple ಆ್ಯಪ್‌ ಸ್ಟೋರ್‌ನ ಅತ್ಯುತ್ತಮ ಗೇಮ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು
ಜ್ಯಾಂಗಾ ಕುರಿತು
2007ರಲ್ಲಿ ಸ್ಥಾಪನೆಯಾದಾಗಿನಿಂದ, ಗೇಮ್‌ಗಳ ಮೂಲಕ ಜಗತ್ತಿಗೆ ಸಂಪರ್ಕ ಕಲ್ಪಿಸುವುದು ಜ್ಯಾಂಗಾದ ಧ್ಯೇಯವಾಗಿದೆ. ಇಲ್ಲಿಯವರೆಗೆ, ಫಾರ್ಮ್‌ವಿಲ್ಲೆ ™, ಜ್ಯಾಂಗಾ ಪೋಕರ್ ™, ವರ್ಡ್ಸ್ ವಿತ್ ಫ್ರೆಂಡ್ಸ್™, ಹಿಟ್ ಇಟ್ ರಿಚ್ ಅನ್ನೂ ಒಳಗೊಂಡಂತೆ ವೆಬ್ ಮತ್ತು ಮೊಬೈಲ್‌ನಾದ್ಯಂತ 1 ಬಿಲಿಯನ್‌ಗಿಂತಲೂ ಹೆಚ್ಚು ಜನರು ಜ್ಯಾಂಗಾ ಆಟಗಳನ್ನು ಆಡಿದ್ದಾರೆ. ™ ಸ್ಲಾಟ್‌ಗಳು ಮತ್ತು CSR ರೇಸಿಂಗ್™. Apple iOS, Google Android ಮತ್ತು Facebook ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಜ್ಯಾಂಗಾದ ಗೇಮ್‌ಗಳು ಲಭ್ಯ ಇವೆ. ಕಂಪನಿ ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿದೆ, ಮತ್ತು U.S.,ಕೆನಡಾ, U.K.,ಐರ್‌ಲ್ಯಾಂಡ್, ಭಾರತ, ಟರ್ಕಿ ಮತ್ತು ಫಿನ್‌ಲ್ಯಾಂಡ್‌ಗಳಲ್ಲಿ ಹೆಚ್ಚುವರಿ ಕಚೇರಿಗಳನ್ನು ಹೊಂದಿದೆ.
Back To News