Snap Partner Summit | Plug in to Snap Kit

To date, more than 200 apps have integrated with Snap Kit, powering all sorts of unique experiences that bring some of Snapchat’s most popular features to partner applications, and allow Snapchatters to create Snaps using creative tools built by our partners. Today we’re excited to announce new Snap Kit experiences.
ಈವರೆಗೆ, 200 ಕ್ಕೂ ಹೆಚ್ಚು ಆ್ಯಪ್‌ಗಳನ್ನು Snap ಕಿಟ್‌ನೊಂದಿಗೆ ಏಕೀಕೃತಗೊಳಿಸಲಾಗಿದೆ, ಇದು ಎಲ್ಲ ಬಗೆಯ ವಿಶಿಷ್ಟ ಅನುಭವವನ್ನು ಸಂಚಾಲಿತಗೊಳಿಸಿದ್ದು Snapchat ನ ಅತ್ಯಂತ ಜನಪ್ರಿಯ ವೈಶಿಷ್ಟ್ಯಗಳನ್ನು ಪಾಲುದಾರರ ಅಪ್ಲಿಕೇಶನ್‌ಗಳಿಗೆ ತರುತ್ತವೆ, ಮತ್ತು ನಮ್ಮ ಪಾಲುದಾರರು ನಿರ್ಮಿಸಿರುವ ಕ್ರಿಯೇಟಿವ್ ಟೂಲ್‌ಗಳನ್ನು ಬಳಸಿಕೊಂಡು Snap ಗಳನ್ನು ರಚಿಸಲು Snapchatters ಗೆ ಅವಕಾಶ ನೀಡುತ್ತದೆ.
ಇಂದು ನಾವು ಹೊಸ Snap ಕಿಟ್ ಅನುಭವಗಳನ್ನು ಘೋಷಿಸಲು ಉತ್ಸುಕರಾಗಿದ್ದೇವೆ:
ಆ್ಯಪ್ ಕಥೆಗಳನ್ನು ಪರಿಚಯಿಸಲಾಗುತ್ತಿದೆ
Snapchat ಕ್ಯಾಮೆರಾದಿಂದ ನೇರವಾಗಿ ಇನ್ನೊಂದು ಆ್ಯಪ್‌ನ ಒಳಗಡೆಯ ಕಥೆಗೆ ಕಂಟೆಂಟ್ ಹಂಚುವುದಕ್ಕೆ ಆ್ಯಪ್‌ ಕಥೆಗಳು Snapchatters ಗೆ ಅವಕಾಶ ನೀಡುತ್ತವೆ.
  • ನಿಮ್ಮ Tinder ಪ್ರೊಫೈಲ್‌ನಲ್ಲಿ ಒಂದು ಕಥೆಗೆ ನಿಮ್ಮ ಬಚ್ಚಿಟ್ಟ ಪ್ರತಿಭೆಯ ಒಂದು Snap ಹಂಚಿಕೊಳ್ಳಿ.
  • Houseparty ಯಲ್ಲಿ ಒಂದು ಕಥೆಗೆ ನಿಮ್ಮ ದಿನದ Snap ಹಂಚಿಕೊಳ್ಳಿ.
  • ಗ್ರಾಹಕರು ಮುಂದಿನ ಬಾರಿ ನಿಮ್ಮೊಂದಿಗೆ ಸೇರುವುದನ್ನು ಪ್ರೋತ್ಸಾಹಿಸಲು AdventureAide ನಲ್ಲಿ ನಿಮ್ಮ ಇತ್ತೀಚಿನ ಪ್ರಯಾಣದ Snap ಹಂಚಿಕೊಳ್ಳಿ
ಕ್ರಿಯೇಟಿವ್ ಕಿಟ್
ಸಂಭಾಷಣೆಗಳು ಸಾಮಾನ್ಯವಾಗಿ ಕಂಟೆಂಟ್ ಮತ್ತು ನೀವು ಕಾಳಜಿ ವಹಿಸುವ ಕಾರಣಗಳ ಕುರಿತಾಗಿರುತ್ತವೆ. ಅದನ್ನು ಶೀಘ್ರ ಘೋಷಿಸಲು ನಾವು ಉತ್ಸುಕರಾಗಿದ್ದೇವೆ, ನೀವು ನೇರವಾಗಿ ಒಂದು Snap ಮೇಲೆ ನಿಮ್ಮ ಮೆಚ್ಚಿನ ಸೇವೆಗಳಿಂದ ವೈಯಕ್ತಿಕ ಸ್ಟಿಕರ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
  • ನೀವು ನೋಡುತ್ತಿರುವ ಶೋಗಳನ್ನು ಹಂಚಿಕೊಳ್ಳಲು Netflix ಬಳಸಿ.
  • ನೀವು ಕೇಳಿಸಿಕೊಳ್ಳುತ್ತಿರುವ ಪಾಡ್‌ಕಾಸ್ಟ್ ಹಂಚಿಕೊಳ್ಳಲು Breaker ಅಥವಾ Anchor ಬಳಸಿ.
  • ನೀವು ಇಷ್ಟಪಡುವ ಒಂದು ಹಾಡನ್ನು ಹಂಚಿಕೊಳ್ಳಲು Anghami(ಮಧ್ಯಪ್ರಾಚ್ಯದಲ್ಲಿ) ಅಥವಾ JioSavvn (ಭಾರತದಲ್ಲಿ) ಬಳಸಿ.
  • ಒಂದು ಅರ್ಥಪೂರ್ಣ ಉದ್ದೇಶವನ್ನು ಹಂಚಿಕೊಳ್ಳಲು GoFundMe ಬಳಸಿ.
  • Snapchat ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಸುಂದರ ಫೊಟೋಗಳನ್ನು ಹಂಚಿಕೊಳ್ಳಲು VSCO ಬಳಸಿ.
ಇಂಥ ಬಹು ಏಕೀಕರಣಗಳ ಜೊತೆಗೆ, ಸ್ನೇಹಿತರು ನೋಡಲು, ಕೇಳಲು ಅಥವಾ ಸ್ವಂತವಾಗಿ ದೇಣಿಗೆ ನೀಡಲು ಮೇಲಕ್ಕೆ ಸ್ವೈಪ್ ಮಾಡಬಹುದು!
Bitmoji ಕಿಟ್
ತಮ್ಮ Bitmoji ಗಳನ್ನು ಇನ್ನೂ ಹೆಚ್ಚಿನ ಸ್ಥಳಗಳಿಗೆ ತರಲು ನಮ್ಮ ಸಮುದಾಯಕ್ಕೆ Bitmoji ಕಿಟ್ ನೆರವಾಗುತ್ತದೆ.
  • Venmoದಲ್ಲಿ ನಿಮ್ಮ ಪಾವತಿಗಳಿಗೆ ಸನ್ನಿವೇಶವನ್ನು ಸೇರಿಸಲು Bitmoji ಬಳಸಿ.
  • ನೀವು Fitbit ನೊಂದಿಗೆ ಸಂಚರಿಸುತ್ತಿರುವಂತೆ, ನಿಮ್ಮ ಮಣಿಕಟ್ಟಿನ ಮೇಲೆಯೇ, ನಿಮ್ಮ Bitmoji ಪ್ರತಿಕ್ರಿಯಿಸುವುದನ್ನು ನೋಡಿ. ಸ್ವಯಂ-ಸ್ಫೂರ್ತಿ ಅಂದರೆ ಇದೇ ಅಲ್ಲವೇ!
ಜಾಹೀರಾತು ಕಿಟ್ ಅನ್ನು ಪರಿಚಯಿಸಲಾಗುತ್ತಿದೆ
ನಮ್ಮ ಹೊಸ Snap ಆಡಿಯೆನ್ಸ್ ನೆಟ್‌ವರ್ಕ್ ಪ್ರವೇಶಿಸಲು ಮತ್ತು ಜನಪ್ರಿಯ ಮೊಬೈಲ್ ಜಾಹೀರಾತು ಮಾದರಿ, Snap Ads ಅನ್ನು ಅವರ ಆ್ಯಪ್‌ಗಳಿಗೆ ತರಲು ಡೆವಲಪರ್‌ಗಳಿಗೆ Ad Kit ಅವಕಾಶ ನೀಡುತ್ತದೆ. ಇದು ನಮ್ಮ ಪಾಲುದಾರರು ಬೆಳೆಯಲು ನೆರವಾಗುತ್ತದೆ, ಮತ್ತು Snapchat ಸಮುದಾಯವನ್ನು ಹೊಸ ವಿಧಾನಗಳಲ್ಲಿ ಸಂಪರ್ಕಿಸಲು ಜಾಹೀರಾತುರಾರರಿಗೆ ಅವಕಾಶ ಕಲ್ಪಿಸುತ್ತದೆ.
ಇಂದಿನಿಂದ SnapKit.com ನಲ್ಲಿ ನಾವು ಜಾಹೀರಾತು ಕಿಟ್ ಮತ್ತು ಆ್ಯಪ್ ಸ್ಟೋರಿಗಳಿಗಾಗಿ (ಸ್ಟೋರಿ ಕಿಟ್‌ನ ಭಾಗ) ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ.
ಹ್ಯಾಪಿ ಸ್ನ್ಯಾಪಿಂಗ್!
Back To News