Protecting your Privacy

There’s been some confusion about the updated Privacy Policy and Terms of Service we rolled out last week. We never want to create any misunderstanding over our commitment to protecting your privacy.
ನಾವು ಕಳೆದ ವಾರ ಹೊರತಂದಿರುವ ನವೀಕರಿಸಿದ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳಬಗ್ಗೆ ಕೆಲವು ಗೊಂದಲಗಳಿವೆ. ನಾವು ನಿಮ್ಮ ಗೌಪ್ಯತೆಯನ್ನು ರಕ್ಷಿಸುವ ನಮ್ಮ ಬದ್ಧತೆಯ ಮೇಲೆ ಎಂದಿಗೂ ಯಾವುದೇ ತಪ್ಪುತಿಳುವಳಿಕೆಯನ್ನು ಉಂಟುಮಾಡಲು ಬಯಸುವುದಿಲ್ಲ.
ಮೊದಲನೆಯದಾಗಿ, ನಾವು ಈ ಬಗ್ಗೆ ಸ್ಪಷ್ಟವಾಗಿದ್ದೇವೆ: ನೀವು ನಿಮ್ಮ ಸ್ನೇಹಿತರಿಗೆ ಕಳುಹಿಸುವ Snap ಮತ್ತು Chat ಗಳು ಮುಂಚಿತವಾಗಿಯೇ ನವೀಕರಿಸಿರುವುದರಿಂದ ಇಂದು ಗೌಪ್ಯವಾಗಿಯೇ ಉಳಿಯುತ್ತವೆ. ನಮ್ಮ ಗೌಪ್ಯತೆ ನೀತಿಯು ಹೇಳುವುದನ್ನು ಮುಂದುವರಿಸುತ್ತದೆ-ಅದು ಈ ಮೊದಲು ಮಾಡಿದಂತೆಯೇ- ಅಂತಹ ಸಂದೇಶಗಳು "ಅವುಗಳು ವೀಕ್ಷಿಸಲ್ಪಟ್ಟಿವೆ ಅಥವಾ ಅವಧಿ ಮೀರಿವೆ ಎಂದು ನಾವು ಪತ್ತೆಹಚ್ಚಿದ ನಂತರ ನಮ್ಮ ಸರ್ವರ್‌ಗಳಿಂದ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತವೆ". ಖಂಡಿತವಾಗಿಯೂ, ಸ್ವೀಕರಿಸುವವರು ನಿಮ್ಮ Snap ಅಥವಾ Chat ಗಳನ್ನು ಯಾವಾಗಲೂ ಸ್ಕ್ರೀನ್‌ಶಾಟ್ ತೆಗೆಯಬಹುದು ಅಥವಾ ಸೇವ್ ಮಾಡಬಹುದು. ಆದರೆ, ಮುಖ್ಯವಾದ ಅಂಶವೇನೆಂದರೆ, Snapchat ಎಂದಿಗೂ-ನಿಮ್ಮ ಗೌಪ್ಯ Snap ಅಥವಾ Chat ಗಳನ್ನು ದಾಸ್ತಾನು-ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ಅವುಗಳು ಓದಲ್ಪಟ್ಟಂತೆ ಸಾಧ್ಯವಾದಷ್ಟು ಬೇಗನೆ ನಾವು ನಮ್ಮ ಸರ್ವರ್‌ಗಳಿಂದ ಅವುಗಳನ್ನು ಅಳಿಸಿಹಾಕುವುದನ್ನು ಮುಂದುವರಿಸುತ್ತೇವೆ-ಮತ್ತು ಅವುಗಳನ್ನು ಜಾಹೀರಾತುದಾರರು ಅಥವಾ ಉದ್ಯಮ ಪಾಲುದಾರೊಂದಿಗೆ-ನಾವು ಹಂಚಿಕೊಳ್ಳುವುದಿಲ್ಲ.
ನಮ್ಮ ಸೇವಾ ನಿಬಂಧನೆಗಳು ನೀವು ರಚಿಸುವ ವಿಷಯವನ್ನು ಬಳಸಲು ವ್ಯಾಪಕ ಲೈಸೆನ್ಸ್ ಅನ್ನು ನಮಗೆ ನೀಡುತ್ತವೆ—ನಮ್ಮಂತಹ ಸೇವಾ ಪೂರೈಕೆದಾರರಿಗೆ ಸಾಮಾನ್ಯವಾದ ಲೈಸೆನ್ಸ್. ಉದಾಹರಣೆಗೆ, ಲೈವ್ ಸ್ಟೋರಿಗಳಿಗೆ Snap ಗಳನ್ನು ಸಲ್ಲಿಸುವಾಗ ನಮಗೆ ಈ ಅನುಮತಿ ಬೇಕು, ನಾವು ಈ ಸ್ಟೋರಿಗಳನ್ನು ಪ್ರಪಂಚದಾದ್ಯಂತ ತೋರಿಸಲು ಶಕ್ತರಾಗಿರಬೇಕು ಮತ್ತು ಅವುಗಳಿಗೆ ಪ್ರತಿಕ್ರಿಯೆ ನೀಡಲು ಅಥವಾ ಸಂಯೋಜಿಸಲು ಸಹ ನಾವು ಸಮರ್ಥರಾಗಿರಬೇಕು (ನಮ್ಮ ನಿಯಮಗಳು ಮತ್ತು ಗೌಪ್ಯತೆ ನೀತಿಯ ಹಿಂದಿನ ಆವೃತ್ತಿಗಳಲ್ಲಿ ನಾವು ಮಾಡಬಹುದೆಂದು ನಾವು ಹೇಳಿದ್ದೇವೆ). ಆದರೆ, ಗೌಪ್ಯತೆ ನೀತಿ ಮತ್ತು ಅಪ್ಲಿಕೇಶನ್‌ನಲ್ಲಿ ನಿಮ್ಮ ಸ್ವಂತ ಗೌಪ್ಯತೆ ಸೆಟ್ಟಿಂಗ್ಸ್ ನಿಮ್ಮ ವೈಯಕ್ತಿಕ ಸಂವಹನಗಳು ನಿಜವಾಗಿಯೂ ವೈಯಕ್ತಿಕವಾಗಿ ಉಳಿಯುವಿಕೆಯ ಮುಂದುವರಿಕೆಯು ಸಾಧ್ಯವಾಗುವಂತೆ ಆ ಲೈಸೆನ್ಸ್‌ನ ಸ್ವರೂಪವನ್ನು ನಿರ್ಬಂಧಿಸುವ ಬಗ್ಗೆ ನಾವು ಸ್ಪಷ್ಟವಾಗಿರಲು ಪ್ರಯತ್ನಿಸಿದ್ದೇವೆ.
ನಾವು ಗೌಪ್ಯತೆ ನೀತಿ ಮತ್ತು ಬಳಕೆಯ ನಿಬಂಧನೆಗಳನ್ನು ಪುನರ್ವೀಕ್ಷಿಸುತ್ತಿರುವ ಬಗ್ಗೆ ನಿಮಗೆ ಆಶ್ಚರ್ಯವಾಗಿರಬಹುದು. ಇಲ್ಲಿ ಅಂತಹ ಕೆಲವು ಮುಖ್ಯ ಕಾರಣಗಳಿವೆ:
  • ನಾವು ಮಾಡಿದ ಮುಖ್ಯ ವಿಷಯವೆಂದರೆ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಪುನಃ ಬರೆಯುವುದು, ಇದರಿಂದ ಜನರು ನಿಜವಾಗಿ ಮಾತನಾಡುವ ವಿಧಾನವನ್ನು ಅವರು ಓದುತ್ತಾರೆ. ನಾವು ಯಾವಾಗಲೂ ನಮ್ಮ ಸಮುದಾಯದೊಂದಿಗೆ ಮುಂಚೂಣಿಯಲ್ಲಿರಲು ಮತ್ತು ಸ್ಪಷ್ಟವಾಗಿರಲು ಪ್ರಯತ್ನಿಸುತ್ತೇವೆ.
  • ಅಪ್ಲಿಕೇಶನ್‌ನಲ್ಲಿನ ಖರೀದಿಗಳಿಗೆ ಸಂಬಂಧಿಸಿದಂತೆ ನಾವು ಸೇವಾ ನಿಯಮಗಳಿಗೆ ಭಾಷೆಯನ್ನು ಸೇರಿಸಿದ್ದೇವೆ. ನಾವು ಈಗ ರಿಪ್ಲೇಗಳನ್ನು ಮಾರಾಟ ಮಾಡುತ್ತಿದ್ದೇವೆ - ಮತ್ತು ಶೀಘ್ರದಲ್ಲೇ ನಿಮ್ಮ ಬಳಿಗೆ ತರಲು ನಾವು ಎದುರು ನೋಡುತ್ತಿರುವ ಕೆಲವು ಉತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಹೊಂದಿದ್ದೇವೆ.
  • Snapchat‌ನಲ್ಲಿ ನಿಮ್ಮನ್ನು ಹುಡುಕಲು ಸ್ನೇಹಿತರಿಗೆ ಸ್ವಲ್ಪ ಸುಲಭವಾಗಿಸಲು, ನಿಮ್ಮ ಹೆಸರಿನಂತೆ ಯಾವ ಮಾಹಿತಿ ಇತರ Snapchatters‌ಗಳಿಗೆ ಗೋಚರಿಸುತ್ತದೆ ಮತ್ತು ಆ ಮಾಹಿತಿಯನ್ನು ನೀವು ಹೇಗೆ ಮಾರ್ಪಡಿಸಬಹುದು ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ.
ಸೇವಾ ನಿಬಂಧನೆಗಳು ಮತ್ತು ಗೌಪ್ಯತೆ ನೀತಿಗಳೆರಡೂ ಮುಖ್ಯ ದಾಖಲೆಗಳಾಗಿದ್ದು, ಇದರಿಂದ ನಾವು ಎಲ್ಲಾ Snapchatter ಗಳು ಅವುಗಳನ್ನು ಓದಲು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. ಯಾವಾಗ Snap‌ಗಳು ಮತ್ತು Chat‌ಗಳನ್ನು ಅಳಿಸಲಾಗುತ್ತದೆ? ಎಂಬ ಲೇಖನಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ Snapchat ಬೆಂಬಲ ವನ್ನು ಪರಿಶೀಲಿಸಿ. ಮತ್ತು ನಮ್ಮ ಸಮುದಾಯ ಮಾರ್ಗಸೂಚಿಗಳು.
Back To News