ಜೂನ್ 19, 2023
ಜೂನ್ 19, 2023

Snap ಸಂಶೋಧನಾ ತಂಡವು ಜನರೇಟಿವ್ AI ಗಾಗಿ ಹೊಸ ಪಠ್ಯದಿಂದ-ಚಿತ್ರ ಡಿಫ್ಯೂಷನ್ ಮಾಡೆಲ್ ಅನ್ನು ಪರಿಚಯಿಸಿದೆ 

ಹೊಸ ವರದಿಯಲ್ಲಿ, Snap ಸಂಶೋಧನಾ ತಂಡವು ಎರಡು ಸೆಕೆಂಡ್‌ಗಳ ಒಳಗೆ ಚಿತ್ರ ಜನರೇಟ್ ಮಾಡುವಿಕೆಯೊಂದಿಗೆ ಲಭ್ಯವಿರುವ ಅತಿವೇಗದ ಸಾಧನದಲ್ಲಿನ ಮಾಡೆಲ್‌ಗಾಗಿ ಒಂದು ವಿಧಾನವನ್ನು ಪ್ರಸ್ತುತಪಡಿಸಿದೆ.

Snap ನಲ್ಲಿ, ಸೃಜನಶೀಲತೆಯನ್ನು ವರ್ಧಿಸುವ ಮತ್ತು ಕಲ್ಪನೆಗಳನ್ನು ವಾಸ್ತವವಾಗಿಸುವ ಹೊಸ ವೈಶಿಷ್ಟ್ಯಗಳು ಮತ್ತು ಉತ್ಪನ್ನಗಳಿಂದ ನಾವು ಸ್ಫೂರ್ತಿಗೊಂಡಿದ್ದೇವೆ, ಇವೆಲ್ಲವನ್ನೂ ಜನರೇಟಿವ್ AI ತಂತ್ರಜ್ಞಾನದಿಂದ ಸಕ್ರಿಯಗೊಳಿಸಲಾಗಿದೆ. ಈ ಅನುಭವಗಳಲ್ಲಿ ಭಾರೀ ಆಸಕ್ತಿ ಇದೆಯಾದರೂ, ಅವುಗಳ ಸಂಕೀರ್ಣ ತಾಂತ್ರಿಕ ಸಂರಚನೆಯಿಂದಾಗಿ ನಿರ್ದಿಷ್ಟವಾಗಿ ಮೊಬೈಲ್‌ನಲ್ಲಿ ಅವುಗಳನ್ನು ಸಾಕಾರಗೊಳಿಸಲು, ಅವುಗಳಿಗೆ ಬಹಳಷ್ಟು ಸಮಯ, ಸಂಪನ್ಮೂಲಗಳು ಮತ್ತು ಪ್ರಕ್ರಿಯೆಗೊಳಿಸುವ ಶಕ್ತಿ ಬೇಕಾಗುತ್ತದೆ. 

ಆದ ಕಾರಣ ಇಂದು, ಮೊಬೈಲ್‌ನಲ್ಲಿ ಪಠ್ಯ ಇನ್‌ಪುಟ್‌ನಿಂದ ಚಿತ್ರ ಜನರೇಟ್ ಮಾಡುವಿಕೆಯ ಮಾಡೆಲ್ ರನ್‌ಟೈಮ್ ಅನ್ನು ಎರಡು ಸೆಕೆಂಡ್‌ಗಿಂತ ಕಡಿಮೆ ಮಾಡುವ SnapFusion ಎಂಬ ಹೊಸ ಮಾಡೆಲ್‌ ಅನ್ನು Snap ಸಂಶೋಧನಾ ತಂಡ ಅಭಿವೃದ್ಧಿಪಡಿಸಿದೆ ಎಂದು ತಿಳಿಸಲು ರೋಮಾಂಚಿತರಾಗಿದ್ದೇವೆ-ಇದು ಅಧ್ಯಯನ ಸಮುದಾಯ ಈವರೆಗೆ ಪ್ರಕಟಿಸಿರುವ ಅತಿ ವೇಗದ ಸಮಯವಾಗಿದೆ. 

ನೆಟ್‌ವರ್ಕ್ ಸಂರಚನೆಯನ್ನು ಆಪ್ಟಿಮೈಸ್ ಮಾಡುವ ಮತ್ತು ಡಿನಾಯ್ಸಿಂಗ್ ಪ್ರಕ್ರಿಯೆಯ ಮೂಲಕ Snap ಸಂಶೋಧನಾ ತಂಡವು ಈ ಮುನ್ನಡೆಯನ್ನು ಸಾಧಿಸಿದ್ದು, ಚಿತ್ರದ ಗುಣಮಟ್ಟವನ್ನು ನಿರ್ವಹಿಸುತ್ತಲೇ ಅದನ್ನು ಅಸಾಧಾರಣ ದಕ್ಷತೆಯದ್ದನ್ನಾಗಿ ಮಾಡಿದೆ. ಹಾಗಾಗಿ, ಪಠ್ಯ ಸುಳಿವುಗಳನ್ನು ಆಧರಿಸಿ ಚಿತ್ರಗಳನ್ನು ಜನರೇಟ್ ಮಾಡಲು ಮಾಡೆಲ್ ಅನ್ನು ರನ್ ಮಾಡುವುದು ಹಾಗೂ ಇತರ ಸಂಶೋಧನೆಗಳು ಪ್ರಸ್ತುತಿಗೆ ತೆಗೆದುಕೊಳ್ಳುವ ನಿಮಿಷಗಳು ಅಥವಾ ಗಂಟೆಗಳ ಬದಲಾಗಿ ಮೊಬೈಲ್‌ನಲ್ಲಿ ಕೆಲವೇ ಸೆಕೆಂಡ್‌ಗಳಲ್ಲಿ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಪಡೆಯುವುದು ಸಾಧ್ಯವಾಗಿದೆ. 

ಈ ಮಾಡೆಲ್ ಇನ್ನೂ ಆರಂಭಿಕ ಹಂತದಲ್ಲಿದೆಯಾದರೂ ಸಹ, ಭವಿಷ್ಯದಲ್ಲಿ ಮೊಬೈಲ್‌ನಲ್ಲಿ ಉನ್ನತ ಗುಣಮಟ್ಟದ ಜನರೇಟಿವ್ AI ಅನುಭವಗಳನ್ನು ಸಮೃದ್ಧಿಗೊಳಿಸಲು ಈ ಕಾರ್ಯವು ಸಾಮರ್ಥ್ಯ ಹೊಂದಿದೆ. ಈ ಮುನ್ನಡೆಯ ಕುರಿತು ಇನ್ನಷ್ಟು ಓದಲು, ದಯವಿಟ್ಟು ನಮ್ಮ ಇನ್ನಷ್ಟು ವಿವರವಾದ ವರದಿಯನ್ನು ಇಲ್ಲಿ ಪರಿಶೀಲಿಸಿ. 

ಮರಳಿ ಸುದ್ಧಿಗೆ