SPS 2023: AR ಮೂಲಕ ಲೈವ್ ಸಂಗೀತ ಅನುಭವವನ್ನು ವರ್ಧಿಸುವುದು

ಹೊಸ ವರ್ಧಿತ ವಾಸ್ತವ ಅನುಭವಗಳು ಮತ್ತು ತಂತ್ರಜ್ಞಾನದೊಂದಿಗೆ ಸಂಗೀತ ಉತ್ಸವಕ್ಕೆ ಹೋಗುವುದನ್ನು ಅಥವಾ ಲೈವ್ ಸಂಗೀತ ಗೋಷ್ಠಿಯನ್ನು ನೋಡುವುದನ್ನು Snapchat ಇನ್ನಷ್ಟು ತಲ್ಲೀನಗೊಳಿಸುವಂತೆ ಮಾಡುತ್ತಿದೆ
Snap ನಲ್ಲಿ, ಜನರು ಜಗತ್ತಿನ ಮತ್ತು ತಾವು ಕಾಳಜಿ ಮಾಡುವ ವಿಷಯಗಳ ಕುರಿತ ಅನುಭವ ಪಡೆಯಲು ಸಹಾಯ ಮಾಡುವುದಕ್ಕಾಗಿ ಹೊಸ ವಿಧಾನಗಳನ್ನು ನಿರ್ಮಿಸಲು ನಾವು ಇಷ್ಟಪಡುತ್ತೇವೆ — ಅದು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ದೈನಂದಿನ ಸಂವಹನವಾಗಿರಬಹುದು, AR ಟ್ರೈ-ಆನ್ ತಂತ್ರಜ್ಞಾನದೊಂದಿಗೆ ಫ್ಯಾಶನ್ ಸುಧಾರಣೆ ಮಾಡುವುದಿರಬಹುದು, ಕ್ರೀಡಾಕೂಟಗಳಿಗೆ ಹಾಜರಾಗಿ ಅಭಿಮಾನಿಯ ಅನುಭವ ಹೆಚ್ಚಿಸಿಕೊಳ್ಳುವುದಾಗಿರಬಹುದು, ಮತ್ತು ಲೈವ್ ಸಂಗೀತ ವೀಕ್ಷಿಸುವುದು ಕೂಡ ಆಗಿರಬಹುದು.

ನಮ್ಮ ಸಮುದಾಯ ಸಂಗೀತಾಭಿಮಾನಿಗಳಿಂದ ಕೂಡಿದೆ ಮತ್ತು 85% Snapchatter ಗಳು ಲೈವ್ ಸಂಗೀತ ನೋಡಲು ಹೋಗುವ ಅವರ ಅನುಭವವನ್ನು ವರ್ಧಿಸಲು ಆ್ಯಪ್ ಬಳಸಿಕೊಂಡು ವರದಿ ಮಾಡುತ್ತಾರೆ.1ಈ ವರ್ಷ, ಹಿಂದೆಂದೂ ಕಾಣದಂತಹ ರೀತಿಯಲ್ಲಿ ಲೈವ್ ಸಂಗೀತ ಅನುಭವಿಸಲು ಸಜ್ಜಾಗಿ! 
Live Nation
ಲೈವ್ ಸಂಗೀತ ಮತ್ತು ವರ್ಧಿತ ವಾಸ್ತವವನ್ನು ವರ್ಧಿಸಲು ಮತ್ತು 16 ಅತಿದೊಡ್ಡ ಉತ್ಸವಗಳಿಗೆ ಕಸ್ಟಮ್ AR ಅನುಭವಗಳನ್ನು ತರಲು, Live Nation ಜೊತೆಗೆ ನಾವು ನಮ್ಮ ಹಲವು-ವರ್ಷಗಳ ಪಾಲುದಾರಿಕೆಯನ್ನು ಮುಂದುವರಿಸುತ್ತಿದ್ದೇವೆ, ಉತ್ಸವಗಳಲ್ಲಿ ಈ ಕೆಳಗಿನವು ಸೇರಿವೆ:
  • ಬಿಯಾಂಡ್ ವಂಡರ್‌ಲ್ಯಾಂಡ್ ಸದರ್ನ್ ಕ್ಯಾಲಿಫೋರ್ನಿಯಾ (ಸ್ಯಾನ್ ಬರ್ನಾರ್ಡಿನೊ, CA)
  • ಎಲೆಕ್ಟ್ರಿಕ್ ಡೈಸಿ ಕಾರ್ನಿವಲ್ (ಲಾಸ್ ವೆಗಾಸ್, NV) 
  • ಕ್ರೀಮ್‌ಫೀಲ್ಡ್ಸ್‌ ಸೌಥ್ (ಹೈಲ್ಯಾಂಡ್ಸ್ ಪಾರ್ಕ್, UK)
  • ರೂಟ್ಸ್ ಪಿಕ್‌ನಿಕ್ (ಫಿಲಿಡೆಲ್ಫಿಯಾ, PA)
  • ದಿ ಗವರ್ನರ್ಸ್ ಬಾಲ್ (ನ್ಯೂಯಾರ್ಕ್, NY)
  • ಬೊನ್ನಾರೂ ಮ್ಯೂಸಿಕ್ & ಆರ್ಟ್ಸ್ ಫೆಸ್ಟಿವಲ್ (ಮ್ಯಾಂಚೆಸ್ಟರ್, TN)
  • ಡೇ ಟ್ರಿಪ್ ಫೆಸ್ಟಿವಲ್ (ಲಾಂಗ್ ಬೀಚ್, CA) 
  • ವೈರ್‌ಲೆಸ್ ಫೆಸ್ಟಿವಲ್ (ಫಿನ್ಸ್‌ಬರಿ ಪಾರ್ಕ್, UK)
  • ಲೊಲ್ಲಾಪಲೂಝಾ ಪ್ಯಾರಿಸ್ (ಪ್ಯಾರಿಸ್, ಫ್ರಾನ್ಸ್) 
  • ರೋಲಿಂಗ್ ಲೌಡ್ ಮಿಯಾಮಿ (ಮಿಯಾಮಿ, FL)
  • ಲೊಲ್ಲಾಪಲೂಝಾ (ಚಿಕಾಗೊ, IL) 
  • ಕ್ರೀಮ್‌ಫೀಲ್ಡ್ಸ್ ನಾರ್ಥ್ (ಡೇರ್ಸ್‌ಬರಿ ಎಸ್ಟೇಟ್, UK)
  • ರೀಡಿಂಗ್ ಫೆಸ್ಟಿವಲ್ (ರೀಡಿಂಗ್, UK) 
  • ಲೀಡಿಂಗ್ ಫೆಸ್ಟಿವಲ್ (ಬ್ರಾಹ್ಮಮ್ ಪಾರ್ಕ್, UK) 
  • ಲೈಟ್ಸ್ ಆನ್ (ಮೌಂಟೇನ್ ವ್ಯೂ, CA)
  • ಆಸ್ಟಿನ್ ಸಿಟಿ ಲಿಮಿಟ್ಸ್ (ಆಸ್ಟಿನ್, TX)

ನಮ್ಮ AR ಕಂಪಾಸ್ ಮತ್ತು ಮೈದಾನಗಳ 3D ಮ್ಯಾಪ್ ಅವುಗಳೆಲ್ಲದರಲ್ಲೂ ಲಭ್ಯವಿರಲಿದೆ, ಈ ಮೂಲಕ ಸರಿಯಾದ ಸಮಯದಲ್ಲಿ ಸರಿಯಾದ ವೇದಿಕೆಗೆ ನೀವು ಸಾಗಲು ಹಾಗೂ ಜನಸಂದಣಿಯಲ್ಲಿ ಕಳೆದುಹೋಗುವ ಬದಲಾಗಿ ನಿಮ್ಮ ಸ್ನೇಹಿತರನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು Snap ಗಳನ್ನು ವರ್ಧಿಸಲು AR ಲೆನ್ಸ್‌ಗಳೊಂದಿಗೆ, ಉತ್ಸವಕ್ಕೆ ತೆರಳುವವರು ನಿಜಕ್ಕೂ ಸಂಗೀತವನ್ನು ಭಿನ್ನವಾಗಿ ಕಾಣಬಹುದು.

Disguise ಜೊತೆಗೆ ಹೊಸ ಏಕೀಕರಣ
ಇಂದು, ನಾವು ಲೈವ್ ಈವೆಂಟ್ ವಿಷುವಲೈಜೇಷನ್ ಮತ್ತು ವರ್ಚುವಲ್ ಪ್ರೊಡಕ್ಷನ್ ತಂತ್ರಜ್ಞಾನದಲ್ಲಿ ಉದ್ಯಮದ ನಾಯಕನಾಗಿರುವ Disguise ಜೊತೆಗೆ ನಮ್ಮ ಹೊಸ ಏಕೀಕರಣವನ್ನೂ ಕೂಡ ಹಂಚಿಕೊಂಡಿದ್ದೇವೆ, ಇದು Snap AR ಅನ್ನು ವಿಶ್ವದ ಕೆಲವು ಅತಿದೊಡ್ಡ ತಾಣಗಳು ಮತ್ತು ಟೂರ್‌ಗಳಿಗೆ ತರಲಿದೆ. ಭವಿಷ್ಯದ ಶೋಗಳ ಸಂದರ್ಭ, Disguise RenderStream ಮೂಲಕ ವೇದಿಕೆಯಲ್ಲಿನ ವಿಷುವಲ್ ಪ್ರೊಡಕ್ಷನ್‌ನೊಂದಿಗೆ ಸಂವಹನ ನಡೆಸುವ Snapchat ಕ್ಯಾಮೆರಾ ಮೂಲಕ ಅಭಿಮಾನಿಗಳು AR ದೃಶ್ಯಗಳನ್ನು ನೋಡಬಹುದು, ಈ ಮೂಲಕ ಹಿಂದೆಂದೂ ಕಾಣದ ರೀತಿಯಲ್ಲಿ ಕಲಾವಿದರ ಸೃಜನಶೀಲ ದೃಷ್ಟಿಯನ್ನು ವಾಸ್ತವರೂಪಕ್ಕೆ ತರಬಹುದು.
ಕೈಗೊ
ವಿಶ್ವದ ಅತ್ಯಂತ ಪ್ರಸಿದ್ಧ ಡಿಜೆಗಳಲ್ಲಿ ಒಬ್ಬರಾದ ಕೈಗೊ ಅವರೊಂದಿಗೆ ಕೂಡ, ಈ ಬೇಸಿಗೆಯಲ್ಲಿ ಅವರ ಕೆಲವು ಸಂಗೀತ ಕಚೇರಿಗಳಿಗೆ AR ಅನುಭವಗಳನ್ನು ಸೃಷ್ಟಿಸುವುದಕ್ಕಾಗಿ ನಾವು ಕೈಜೋಡಿಸುತ್ತಿದ್ದೇವೆ, ಇದರಿಂದಾಗಿ ಅಭಿಮಾನಿಗಳು ಅವರ ಸಂಗೀತದಲ್ಲಿ ತಲ್ಲೀನರಾಗಬಹುದು ಮತ್ತು ಈ ವರ್ಷದ ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಕಲಾವಿದರೊಂದಿಗೆ ಕೆಲಸ ಮಾಡಲು ನಾವು ಕಾತುರರಾಗಿದ್ದೇವೆ.
ಲೈವ್ ಪ್ರದರ್ಶನಗಳನ್ನು ಇನ್ನೂ ಹೆಚ್ಚು ತಲ್ಲೀನಗೊಳಿಸುವಂತೆ ಮಾಡುವುದನ್ನು ಮುಂದುವರಿಸಲು ನಾವು ಬಹಳ ಹರ್ಷಿತರಾಗಿದ್ದೇವೆ, ಈ ಮೂಲಕ Snapchatter ಗಳು ಸಂಗೀತವನ್ನು ನಿಜಕ್ಕೂ ಭಿನ್ನವಾಗಿ ಕಾಣಬಹುದು.
ಮರಳಿ ಸುದ್ಧಿಗೆ
1 Crowd DNA ಯಿಂದ ನಡೆಸಲಾದ 2023 ಸಂಶೋಧನೆ