ಏಪ್ರಿಲ್ 28, 2022
ಏಪ್ರಿಲ್ 28, 2022

Welcome to SPS 2022

Snapchat has changed a lot over the years, and our camera has become far more powerful – evolving from a way to communicate visually in a Snap into an augmented reality platform.

ಏಪ್ರಿಲ್ 28, 2022 ರಂದು ನಾಲ್ಕನೆಯ ವಾರ್ಷಿಕ Snap ಪಾಲುದಾರರ ಶೃಂಗಸಭೆಯಲ್ಲಿ ಮಾತನಾಡುತ್ತ Snap Inc. ನ CEO ಇವಾನ್ ಸ್ಪೀಗೆಲ್ ಮಾಡಿದ ಪ್ರಧಾನ ಭಾಷಣದ ಸಾರಾಂಶ ಈ ಕೆಳಗಿನಂತಿದೆ. ನೀವು ಪೂರ್ಣ ವೀಡಿಯೊವನ್ನು ಇಲ್ಲಿ ನೋಡಬಹುದು. 

ಎಲ್ಲರಿಗೂ ನಮಸ್ಕಾರ, 4ನೇ ವಾರ್ಷಿಕ Snap ಪಾಲುದಾರರ ಶೃಂಗಸಭೆಗೆ ಸ್ವಾಗತ!

ನಿಮ್ಮೊಂದಿಗೆ ಹಂಚಿಕೊಳ್ಳಲು ನಮ್ಮ ಬಳಿ ಸಾಕಷ್ಟು ರೋಮಾಂಚಕ ಸಂಗತಿಗಳಿವೆ.

ಮೊದಲನೆಯದಾಗಿ, ಲಾಸ್‌ ಏಂಜಲೀಸ್‌ನಲ್ಲಿರುವ ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನಿಜಕ್ಕೂ ಅದ್ಭುತ ಎಂದು ಹೇಳಬಯಸುತ್ತೇನೆ.

ನಿಮ್ಮ ಪಾಲುದಾರಿಕೆಗಾಗಿ ತುಂಬಾ ಧನ್ಯವಾದಗಳು.

ನಿಮ್ಮೊಂದಿಗೆ ಕೆಲಸ ಮಾಡುತ್ತ ನಾವು ಸಾಕಷ್ಟು ಖುಷಿಪಟ್ಟೆವು. ಮತ್ತೀಗ, ಒಂದು ಕಾಲದಲ್ಲಿ ಬಹಳ ದೂರದ ಮಾತಾಗಿದ್ದ ವರ್ಧಿತ ವಾಸ್ತವದ ಮೂಲಕ ವಿಶ್ವವನ್ನು ಕಾಣುವ ತಂತ್ರಜ್ಞಾನವು, ಇಂದು ನಮ್ಮ ಕ್ಯಾಮೆರಾ ಮೂಲಕ ಸಾಧ್ಯವಾಗಿದೆ.

ವಿಶ್ವಾದ್ಯಂತ 300 ಮಿಲಿಯನ್‌ಗೂ ಅಧಿಕ ದೈನಂದಿನ ಬಳಕೆದಾರರಿರುವ 600 ಮಿಲಿಯನ್‌ಗೂ ಹೆಚ್ಚು ಜನರ ನಮ್ಮ ಸಮುದಾಯಕ್ಕೆ ಸೇವೆ ಒದಗಿಸುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ.

ಈಗ ನಾವು 20 ಕ್ಕೂ ಹೆಚ್ಚು ದೇಶಗಳಲ್ಲಿನ 13-34 ವಯೋಮಿತಿಯೊಳಗಿನ 75% ಗೂ ಅಧಿಕ ಜನರನ್ನು ತಲುಪುತ್ತಿದ್ದೇವೆ. ಹಾಗೂ ಸತತ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ದೈನಂದಿನ ಬಳಕೆದಾರರ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ, ನಮ್ಮ ಜಾಗತಿಕ ಸಮುದಾಯ ಬೆಳೆಯುತ್ತಲೇ ಇದೆ.

ಕಾಲಕ್ರಮೇಣ Snapchat ಸಾಕಷ್ಟು ಬದಲಾಗಿದೆ, ಮತ್ತು ಒಂದು Snap ನಲ್ಲಿ ದೃಶ್ಯಾತ್ಮಕವಾಗಿ ಸಂವಹನ ಮಾಡುವ ವಿಧಾನದಿಂದ ಆರಂಭಗೊಂಡು ವರ್ಧಿತ ವಾಸ್ತವ ವೇದಿಕೆಯಾಗಿ ನಮ್ಮ ಕ್ಯಾಮೆರಾ ಇದೀಗ ಬಹಳಷ್ಟು ಶಕ್ತಿಯುತವಾಗಿದೆ.

ನಮ್ಮ ಕ್ಯಾಮೆರಾದ ಮೂಲಕ ಒಟ್ಟಾರೆ ಹೊಸ ವಿಧಾನಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು, ಸರಾಸರಿ ದಿನಕ್ಕೆ 6 ಶತಕೋಟಿ ಬಾರಿ Snapchat ನಲ್ಲಿ ವರ್ಧಿತ ವಾಸ್ತವ ಲೆನ್ಸ್‌ಗಳೊಂದಿಗೆ ಜನರು ಸಂವಹನ ನಡೆಸುತ್ತಾರೆ.

ಇಂದು, ನಮ್ಮ Snap ಪಾಲುದಾರರ ಶೃಂಗಸಭೆಯನ್ನು ನಾವು ಉಕ್ರೇನ್‌ನಲ್ಲಿನ ನಮ್ಮ ತಂಡದ ಸದಸ್ಯರಿಗೆ ಸಮರ್ಪಿಸುತ್ತಿದ್ದೇವೆ. ನಮ್ಮ ವರ್ಧಿತ ವಾಸ್ತವದ ವೇದಿಕೆಯ ಅಡಿಪಾಯವನ್ನು ಸ್ಥಾಪಿಸಿದ ಕಂಪನಿಯಾದ Looksery ಯ ತವರು ಉಕ್ರೇನ್ ಆಗಿದೆ.

ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಉತ್ಪನ್ನಗಳು ಮತ್ತು ಸೇವೆಗಳು ನಮ್ಮ ಉಕ್ರೇನ್ ತಂಡದ ಸದಸ್ಯರ ಸೃಜನಶೀಲತೆ ಮತ್ತು ಜಾಣ್ಮೆಯಿಲ್ಲದಿದ್ದಲ್ಲಿ ಸಾಧ್ಯವಾಗುತ್ತಿರಲಿಲ್ಲ ಮತ್ತು ಹಲವಾರು ಅಮಾಯಕರ ಪ್ರಾಣಕ್ಕೆ ಕುತ್ತು ತಂದ ಯುದ್ಧ ನಮಗೆ ದುಃಖವುಂಟುಮಾಡಿದೆ.

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.

ವರ್ಧಿತ ವಾಸ್ತವ ಮುಖ್ಯವಾಗಿದೆ ಏಕೆಂದರೆ ಇದು ನೈಜ ಜಗತ್ತಿನಲ್ಲಿ ನಮ್ಮೆದುರು ನಾವು ಕಾಣುವ ಮತ್ತು ಅನುಭವಿಸುವ ಸಂಗತಿಗಳನ್ನು ಕಂಪ್ಯೂಟಿಂಗ್‌ನ ಶಕ್ತಿಯೊಂದಿಗೆ ಸಂಯೋಜಿಸುತ್ತದೆ. ಇದು ನಮ್ಮ ಬದುಕಿನಲ್ಲಿ ತಡೆರಹಿತವಾಗಿ ತಂತ್ರಜ್ಞಾನವನ್ನು ನೇಯ್ಗೆ ಮಾಡುವ ಮೂಲಕ, ಕಂಪ್ಯೂಟಿಂಗ್ ಅನ್ನು ಪರಿಚಿತ ವಾತಾವರಣದಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

ನಮ್ಮ ವರ್ಧಿತ ವಾಸ್ತವ ತಂತ್ರಜ್ಞಾನವು ಸ್ವಯಂ-ಅಭಿವ್ಯಕ್ತಿಗಾಗಿ ವಿನೋದಮಯ ಸಲಕರಣೆ ರೂಪದಲ್ಲಿ ಆರಂಭವಾಯಿತು, ಆದರೆ ನಮ್ಮ ಪಾಲುದಾರರ ಅನ್ವೇಷಣೆಯ ಮೂಲಕ ಅದೀಗ ವಿಸ್ತಾರವಾಗಿದೆ. ನಮ್ಮ ಸಮುದಾಯಕ್ಕೆ ಹೊಸ ಭಾಷೆಗಳನ್ನು ಕಲಿಯಲು, ಹಿಂದೆಂದೂ ಕಾಣದ ರೀತಿ ಲೈವ್ ಈವೆಂಟ್‌ಗಳನ್ನು ಅನುಭವಿಸಲು, ಈ ಹಿಂದೆ ಹೇಳದೆ ಇದ್ದ ಕತೆಗಳನ್ನು ಹೇಳುವ ಸ್ಮಾರಕಗಳನ್ನು ನಿರ್ಮಿಸಲು ಮತ್ತು ಹೊಸ ಸ್ನೀಕರ್‌ಗಳ ಜೋಡಿಯನ್ನು ಸುಲಭವಾಗಿ ಪ್ರಯತ್ನಿಸಿ ನೋಡಲು ಅವಕಾಶ ಕಲ್ಪಿಸುವ AR ಅನುಭವಗಳ ಶ್ರೇಣಿಯನ್ನು ನಮ್ಮ ಕ್ರಿಯೇಟರ್‌ಗಳು ಮತ್ತು ಡೆವಲಪರ್‌ಗಳು ನಿರ್ಮಿಸುತ್ತಿದ್ದಾರೆ.

ವರ್ಧಿತ ವಾಸ್ತವದಲ್ಲಿ ನಮ್ಮ ಹೂಡಿಕೆಗಳು ಮಾನವರಿಗೆ ಸೇವೆಯನ್ನು ಒದಗಿಸುವ ಮತ್ತು ಬಳಸಲು ಅರ್ಥಗರ್ಭಿತ ಮತ್ತು ಪರಿಚಿತ ಎನ್ನಿಸುವ ತಂತ್ರಜ್ಞಾನಗಳನ್ನು ನಿರ್ಮಾಣ ಮಾಡುವ ನಮ್ಮ ನಿರಂತರ ಪ್ರಯತ್ನವನ್ನು ಪ್ರತಿನಿಧಿಸುತ್ತವೆ.

ಸ್ವಯಂ-ಅಭಿವ್ಯಕ್ತಿಗೆ ಬಲ ತುಂಬಲು ಕ್ಯಾಮೆರಾಗೆ Snapchat ಅನ್ನು ತೆರೆಯುವ ಮೂಲಕ ನಾವು ಆರಂಭಿಸಿದೆವು. ನಂತರ, ಡಿಜಿಟಲ್ ಸಂವಹನವನ್ನು ನಾವು ಮುಖಾಮುಖಿಯಾಗಿ ನಾವು ಹೇಗೆ ಸಂವಹನ ನಡೆಸುತ್ತೇವೋ ಅದೇ ರೀತಿ ಕ್ಷಣಿಕವಾಗಿಸಿದೆವು, ಮತ್ತು ನೈಜ ಸ್ನೇಹಿತರ ನಡುವೆ ಸಂಪರ್ಕ ಕಲ್ಪಿಸಲು ಗಮನ ಕೇಂದ್ರೀಕರಿಸಿದೆವು. ಮಾನವರು ತಮ್ಮ ಪೂರ್ಣ ಶ್ರೇಣಿಯ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಆರಾಮದಾಯಕ ಭಾವನೆಯನ್ನು ಹೊಂದಬೇಕು ಎಂದು ನಾವು ಯಾವಾಗಲೂ ಬಯಸಿದ್ದೆವು.

ಇದರ ಪರಿಣಾಮವಾಗಿ, ತಾವು Snapchat ಬಳಸಿದಾಗ, ಆರಾಮದಾಯಕ, ಸಂತಸ ಮತ್ತು ಸಂಪರ್ಕಿತರಾಗಿರುವ ಭಾವನೆ ಉಂಟಾಗುತ್ತದೆ ಎಂದು 90% ಗೂ ಅಧಿಕ Snapchatter ಗಳು ಹೇಳುತ್ತಾರೆ. (1)

ಇತರ ಆ್ಯಪ್‌ಗಳಿಗೆ ಹೋಲಿಸಿದಾಗ, Snapchat ಗೆ #1 ಅತ್ಯಂತ ಸಂತೋಷದ ವೇದಿಕೆ ಎಂದು ಶ್ರೇಯಾಂಕ ನೀಡಲಾಗಿದೆ. (2)

ಕಾಲಕ್ರಮೇಣ, ನಮ್ಮ ಪಾಲುದಾರರು Snapchat ಗಾಗಿ ನಿರ್ಮಾಣ ಮಾಡುವ ಹಾಗೂ ವರ್ಧಿತ ವಾಸ್ತವ ಅನುಭವಗಳು, ಕಂಟೆಂಟ್, ಗೇಮ್‌ಗಳು ಮತ್ತು ಇನ್ನಷ್ಟರೊಂದಿಗೆ ನಮ್ಮ ಪ್ರೇಕ್ಷಕರನ್ನು ತಲುಪುವ ವಿಧಾನಗಳನ್ನು ಅಭಿವೃದ್ಧಿಪಡಿಸುವುದನ್ನು ನಾವು ಮುಂದುವರಿಸಿದ್ದೇವೆ. Snap ಕಿಟ್, ಕ್ಯಾಮೆರಾ ಕಿಟ್ ಮತ್ತು Bitmoji ಏಕೀಕರಣಗಳನ್ನು ಬಳಸಿಕೊಂಡು ನಮ್ಮ ಪಾಲುದಾರರು ಹೆಚ್ಚು ಹೆಚ್ಚು Snap ತಂತ್ರಜ್ಞಾನಗಳನ್ನು ತಮ್ಮ ಸ್ವಂತ ಆ್ಯಪ್‌ಗಳು ಮತ್ತು ಸೇವೆಗಳಲ್ಲಿ ಅಳವಡಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ವಿನೂತನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಈಗ ನಾವು ಅರ್ಧ ಮಿಲಿಯನ್‌ಗೂ ಹೆಚ್ಚು ಪಾಲುದಾರರು, ಕ್ರಿಯೇಟರ್‌ಗಳು ಮತ್ತು ಡೆವಲಪರ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಈಗಾಗಲೇ 2,50,000 ಕ್ರಿಯೇಟರ್‌ಗಳು 2.5 ಮಿಲಿಯನ್‌ಗೂ ಹೆಚ್ಚು ಲೆನ್ಸ್‌ಗಳನ್ನು ನಿರ್ಮಿಸಿದ್ದು ಅವುಗಳನ್ನು 5 ಟ್ರಿಲಿಯನ್ ಬಾರಿಗೂ ಹೆಚ್ಚು ಕಾಲ ವೀಕ್ಷಣೆ ಮಾಡಲಾಗಿದೆ.

ಈಗ 21 ದೇಶಗಳಲ್ಲಿ 700 ಕ್ಕೂ ಅಧಿಕ Discover ಪಾಲುದಾರರಿದ್ದಾರೆ, ಮತ್ತು ಕಳೆದ ವರ್ಷ ಅರ್ಧ ಶತಕೋಟಿಗೂ ಹೆಚ್ಚು Snapchatter ಗಳು Discover ನಲ್ಲಿ ಶೋಗಳನ್ನು ವೀಕ್ಷಿಸಿದರು.

ಸ್ಪಾಟ್‌ಲೈಟ್‌ನಲ್ಲಿ ವೀಕ್ಷಣೆಯ ಸಮಯ ಹೆಚ್ಚುತ್ತಲೇ ಇದೆ ಮತ್ತು ಹಿಂದಿನ ವರ್ಷದ ಹೋಲಿಕೆಯಲ್ಲಿ ವಾರಕ್ಕೆ 5 ಪಟ್ಟಿನಷ್ಟು ಹೆಚ್ಚು Snap ಗಳನ್ನು ಜನರು ಸ್ಪಾಟ್‌ಲೈಟ್‌ಗೆ ಸಲ್ಲಿಸುತ್ತಿದ್ದಾರೆ.

ಪ್ರಾರಂಭಿಸಿದಾಗಿನಿಂದ ಈವರೆಗೆ 340 ಮಿಲಿಯನ್‌ಗೂ ಅಧಿಕ Snapchatter ಗಳು ಗೇಮ್‌ಗಳು ಮತ್ತು ಮಿನಿಗಳನ್ನು ಬಳಸಿದ್ದಾರೆ.

ನಮ್ಮು Snap ಮ್ಯಾಪ್, ನೆನಪುಗಳು ಮತ್ತು ಹುಡುಕಿ ಅಲ್ಲಿನ ಮೊದಲ ಎರಡು ಲೇಯರ್‌ಗಳನ್ನು ಪ್ರಾರಂಭಿಸಿದಾಗಿನಿಂದ ಈವರೆಗೆ 100 ಮಿಲಿಯನ್‌ಗೂ ಹೆಚ್ಚು ಬಾರಿ ಬಳಸಲಾಗಿದೆ.

Snapchatter ಗಳು ತಮ್ಮನ್ನು ಅಭಿವ್ಯಕ್ತಿಪಡಿಸಲು Snap ಕಿಟ್ ಡೆವಲಪರ್‌ಗಳು ಮತ್ತು ಪಾಲುದಾರರು ಸಹಾಯ ಮಾಡುತ್ತಿದ್ದಾರೆ. ಕಳೆದ ವರ್ಷ, Spotify ನಿಂದ ಹಾಡುಗಳು ಅಥವಾ Twitter ನಿಂದ ಟ್ವೀಟ್‌ಗಳು ರೀತಿಯಲ್ಲಿ ನಮ್ಮ ಪಾಲುದಾರರ ಆ್ಯಪ್‌ಗಳಿಂದ Snapchatter ಗಳು 6 ಶತಕೋಟಿಗೂ ಹೆಚ್ಚು ಬಾರಿ Snapchat ನಲ್ಲಿ ಕಂಟೆಂಟ್ ಹಂಚಿಕೊಂಡಿದ್ದಾರೆ.

ಸಕಾರಾತ್ಮಕ ಪ್ರಭಾವ ಉಂಟುಮಾಡಲು ಪ್ರಯತ್ನಿಸುತ್ತಿರುವ ಯುವ ನಾಯಕರ ಮುಂದಿನ ಪೀಳಿಗೆಯನ್ನು ಬೆಂಬಲಿಸಲು ಕೂಡ ನಾವು ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಕಳೆದ ಅಕ್ಟೋಬರ್‌ನಲ್ಲಿ, ಚುನಾವಣೆಗೆ ಸ್ಪರ್ಧಿಸುವ ಮೂಲಕ ಸ್ಥಳೀಯ ಸಮುದಾಯದವರ ಬದುಕಿನಲ್ಲಿ ಹೇಗೆ ಬದಲಾವಣೆ ತರಬಹುದು ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು Snapchatter ಗಳಿಗೆ ಸಹಾಯ ಮಾಡುವುದಕ್ಕಾಗಿ 10 ಲಾಭರಹಿತ ಸಂಸ್ಥೆಗಳೊಂದಿಗೆ ನಾವು ಪಾಲುದಾರಿಕೆ ಮಾಡಿಕೊಂಡಿದ್ದೇವೆ.

ಸ್ನೇಹಿತರಿಂದ ಉತ್ತೇಜನ ಮತ್ತು ನಮ್ಮ ಪಾಲುದಾರ ಸಂಘಟನೆಗಳಿಂದ ಬೆಂಬಲದೊಂದಿಗೆ, ನಮ್ಮ ಚುನಾವಣೆಗೆ ಸ್ಪರ್ಧಿಸಿ ಮಿನಿಯು Snapchatter ಗಳು ಸ್ಥಳೀಯ ನಾಯಕತ್ವದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಒಂದು ವಿನೋದಮಯ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಚುನಾವಣೆಗೆ ಸ್ಪರ್ಧಿಸಲು Snapchatter ಗಳು ಸ್ನೇಹಿತರನ್ನು ನಾಮನಿರ್ದೇಶನ ಮಾಡಬಹುದು ಮತ್ತು ತಾವು ಕಾಳಜಿ ವಹಿಸುವ ಸಮಸ್ಯೆಗಳ ಅನುಸಾರ ವಿಂಗಡಿಸಲಾಗಿರುವ ಸ್ಥಳೀಯ ಹುದ್ದೆಗಳನ್ನು ಅನ್ವೇಷಿಸಬಹುದು — ಇವೆಲ್ಲವೂ ಒಂದೇ ಕೇಂದ್ರೀಕೃತ ಅಭಿಯಾನ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯ ಇವೆ.

4 ಮಿಲಿಯನ್‌ಗೂ ಹೆಚ್ಚು ಜನರು ಈಗಾಗಲೇ ಚುನಾವಣೆಗೆ ಸ್ಪರ್ಧಿಸಿ ಮಿನಿಯನ್ನು ಬಳಸಿದ್ದಾರೆ. ನಮ್ಮ ಒಬ್ಬ ಪಾಲುದಾರರೊಂದಿಗೆ 25,000 ಕ್ಕಿಂತಲೂ ಹೆಚ್ಚು ಸೈನ್‌ ಅಪ್‌ಗಳೊಂದಿಗೆ, Snapchatter ಗಳು ಈಗಾಗಲೇ ತಮ್ಮ ಅಭಿಯಾನಗಳನ್ನು ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Snapchat ಸಮುದಾಯ ಮತ್ತು ನಮ್ಮ ಎಲ್ಲ ಪಾಲುದಾರರ ಅತ್ಯುತ್ಸಾಹ, ಸೃಜನಶೀಲತೆ ಮತ್ತು ಆಶಾವಾದದಿಂದ ನಾವು ಬಹಳಷ್ಟು ಪ್ರೇರಣೆ ಪಡೆದಿದ್ದೇವೆ. ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಲು ನಿಮ್ಮೆಲ್ಲರೊಂದಿಗೆ ಸಹಭಾಗಿತ್ವವನ್ನು ಮುಂದುವರಿಸಲು ನಾವು ರೋಮಾಂಚಿತರಾಗಿದ್ದೇವೆ.

1. 2022 Alter Agents ಮಾರ್ಗ Snap Inc.

2. 2021 Goodques Path to Purchase ಮಾರ್ಗ Snap Inc.

Back To News