The Frame Makes the Photograph

A common thing we hear about social media today is that near-constant picture taking means not ‘living in the moment’. We should put the phone down and just experience life rather than worry ourselves with its documentation. This sentiment wrongly assumes that documentation and experience are essentially at odds, a conceptual remnant of how we used to think of photography, as an art object, as content, rather than what it is often today, less an object and more a sharing of experience. But not all social media are built the same, and I think we can use a distinction in social platforms: those that are based in social media versus those that are more fundamentally about communication.
ಸಾಮಾಜಿಕ ಮಾಧ್ಯಮದ ಬಗ್ಗೆ ನಾವು ಇಂದು ಕೇಳುವ ಒಂದು ಸಾಮಾನ್ಯ ವಿಷಯವೆಂದರೆ, ನಿರಂತರವಾಗಿ ಚಿತ್ರ ತೆಗೆಯುವುದು ಎಂದರೆ ‘ಈ ಕ್ಷಣದಲ್ಲಿ ಜೀವಿಸುವುದು’ ಎಂದರ್ಥವಲ್ಲ. ನಾವು ಫೋನ್ ಅನ್ನು ಕೆಳಗಿಳಿಸಬೇಕು ಮತ್ತು ಅದರ ದಾಖಲಾತಿಗಳೊಂದಿಗೆ ನಮ್ಮನ್ನು ಚಿಂತೆಗೀಡು ಮಾಡುವ ಬದಲು ಜೀವನವನ್ನು ಅನುಭವಿಸಬೇಕು ಈ ದೃಷ್ಟಿಕೋನವು ದಾಖಲೆಗಳು ಮತ್ತು ಅನುಭವವು ಅಂತರ್ಗತವಾಗಿ ವಿರೋಧಾಭಾಸವಾಗಿದೆ ಎಂದು ತಪ್ಪಾಗಿ ಊಹಿಸುತ್ತದೆ, ನಾವು ಫೋಟೋಗ್ರಫಿಯನ್ನು ಹೇಗೆ ಪರಿಗಣಿಸುತ್ತಿದ್ದೆವು, ಕಲಾತ್ಮಕ ವಸ್ತುವಾಗಿ, ವಿಷಯ ವಾಗಿ ಎಂಬುದರ ಪರಿಕಲ್ಪನಾ ಶೇಷಕ್ಕಿಂತ ಹೆಚ್ಚಾಗಿ, ಅದು ಇಂದು ಸಾಮಾನ್ಯವಾಗಿ ಏನಾಗಿದೆ, ಒಂದು ವಸ್ತುವಿಗಿಂತ ಕಡಿಮೆ ಮತ್ತು ಅನುಭವ ಹಂಚಿಕೆಗಿಂತ ಹೆಚ್ಚು. ಆಆದರೆ, ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಒಂದೇ ರೀತಿಯಲ್ಲಿ ನಿರ್ಮಿಸಲಾಗಿಲ್ಲ. ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳಲ್ಲಿ ನಾವು ಒಂದು ವ್ಯತ್ಯಾಸವನ್ನು ಬಳಸಬಹುದು ಎಂದು ನಾನು ಭಾವಿಸುತ್ತೇನೆ: ಸಾಮಾಜಿಕ ಮಾಧ್ಯಮ ಆಧಾರಿತ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಸಂವಹನಕ್ಕೆ ಹೆಚ್ಚು ಮೂಲಭೂತವಾದ ವೇದಿಕೆಗಳು.
ಸಂಶೋಧಕ ಶೆರ್ರಿ ಟರ್ಕಲ್ ಇತ್ತೀಚಿನ ನ್ಯೂಯಾರ್ಕ್ ಟೈಮ್ಸ್ ಅಂಕಣದಲ್ಲಿ ಈ ವಿಷಯವನ್ನು ಚರ್ಚಿಸುತ್ತ , ಅತ್ಯಂತ ಪ್ರಸಿದ್ಧ ಹಾಸ್ಯನಟ ಅಜೀಜ್ ಅನ್ಸಾರಿ ಬೀದಿಯಲ್ಲಿ ಅಭಿಮಾನಿಗಳನ್ನು ಸ್ವಾಗತಿಸುವ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಜನರಿಗೆ ಅವರ ಜೊತೆ ಫೋಟೋ ತೆಗೆಸಿಕೊಂಡು ಒಂದು ದಾಖಲೆ ಪುರಾವೆಯನ್ನು ಇರಿಸಿಕೊಳ್ಳುವ ಬಯಕೆ, ಆದರೆ ಅವರು ತಮ್ಮ ಕೆಲಸದ ಬಗ್ಗೆ ಸಂಭಾಷಣೆಯನ್ನು ನಡೆಸುತ್ತಾರೆ, ಇದರಿಂದಾಗಿ ಅನೇಕ ಅಭಿಮಾನಿಗಳು ಅತೃಪ್ತರಾಗುತ್ತಾರೆ. ಸಾಧಾರಣವಾಗಿ ಸಾಮಾಜಿಕ ಮಾಧ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಇದು ಪ್ರತಿನಿಧಿಸುತ್ತದೆ ಎಂದು ಟರ್ಕರ್ ಸಾಮ್ಯತೆ ಮಾಡಿ ಹೇಳುತ್ತಾರೆ, ಆದರೆ ಇದು ಜನರು ಇಂದು ಸಾಮಾಜಿಕ ಮಾಧ್ಯಮ ಸೇವೆಗಳನ್ನು ಬಳಸುತ್ತಾರೆ ಎನ್ನುವುದರ ಗಣನೀಯ ತಪ್ಪು ಅರ್ಥೈಸುವಿಕೆ, ಮತ್ತು ತಿಳುವಳಿಕೆಯ ಕೊರತೆ ಎಂದು ನಾನು ಭಾವಿಸುತ್ತೇನೆ. ಪ್ರಸಿದ್ಧ ವ್ಯಕ್ತಿಯನ್ನು ಭೇಟಿಯಾಗುವ ವಿಶೇಷ ಕ್ಷಣದ ಸಾಕ್ಷ್ಯವನ್ನು ಇರಿಸಿಕೊಳ್ಳಲು ನೀವು ಬಯಸಬಹುದು; ಸಂಭಾಷಣೆಗಳು ಚೆನ್ನಾಗಿರಬಹುದು, ಆದರೆ ಒಬ್ಬ ಸೆಲೆಬ್ರಿಟಿ ಜೊತೆಗೆ ಇದು ಏಕಮುಖ ಸಂಭಾಷಣೆಯಾಗುತ್ತದೆ, ಅವರು ನಿಮ್ಮನ್ನು ನೆನಪಿಟ್ಟುಕೊಳ್ಳುವುದಿಲ್ಲ ಅಥವಾ ಇನ್ನೊಂದು ದಿನ ಸಂಭಾಷಿಸಲು ಬಯಸಬಹುದು. ಟರ್ಕಲ್ ಅವರು ಮಾಡುವ ರೀತಿ, ಆನ್‌ಲೈನ್‌ನಲ್ಲಿ ಪ್ರತಿದಿನದ ಸಾಮಾಜಿಕ ಸಂಪರ್ಕವನ್ನು ಒಬ್ಬ ಸೆಲೆಬ್ರಿಟಿಯನ್ನು ಬೇಟಿಯಾಗುವುದಕ್ಕೆ ಹೋಲಿಸುವುದು ತಪ್ಪಾಗುತ್ತದೆ. ಖಂಡಿತವಾಗಿ, ಅನ್ಸಾರಿಯವರನ್ನು ಭೇಟಿಯಾಗುವ ಸನ್ನಿವೇಶದಲ್ಲಿ ಒಂದು ಸಂಭಾಷಣೆಗಿಂತ ಹೆಚ್ಚಿನದನ್ನು ದಾಖಲಿಸಲು ಕೆಲವರು ಬಯಸುತ್ತಾರೆ, ಆದರೆ ಪ್ರತಿದಿನದ ಡಿಜಿಟಲ್ ಮಾಧ್ಯಮದ ಸಾಮಾಜಿಕ ಸಂವಹನವು ಮಾಧ್ಯಮ ಉದ್ದೇಶಕ್ಕಿಂತ ಹೆಚ್ಚಾಗಿ ಪರಸ್ಪರ ಸಂಭಾಷಣಾ ಕೇಂದ್ರಿತವಾಗಿರುತ್ತದೆ, ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎನ್ನುವುದನ್ನು ಆಧರಿಸಿ, ಸಾಮಾಜಿಕ ಮಾಧ್ಯಮಗಳು ಒಂದಿಷ್ಟು ಭಿನ್ನವಾದ್ದನ್ನು ಉತ್ತೇಜಿಸಬಹುದು ಅಥವಾ ನಿರ್ಬಂಧಿಸಬಹುದು.
ಸಾಮಾಜಿಕ ವೇದಿಕೆಗಳಲ್ಲಿ ನಡೆಯುವ ಫೋಟೋಗ್ರಫಿಯನ್ನು ಅರ್ಥ ಮಾಡಿಕೊಳ್ಳುವ ಬಗೆ ಎಂದರೆ ಅದನ್ನು ಒಂದು ಕಲಾಕೃತಿಯನ್ನು ರಚಿಸುವುದರ ಕುರಿತಾಗಿರುವ ಸಾಂಪ್ರದಾಯಿಕ ಫೋಟೋಗ್ರಫಿ ಜೊತೆ ಹೋಲಿಕೆ ಮಾಡುವುದಲ್ಲ, ಬದಲಾಗಿ ಸ್ವತಃ ಅನುಭವದ ಕುರಿತು ಮಾತನಾಡುವಿಕೆ ಎಂದು ಅರ್ಥೈಸಿಕೊಳ್ಳಬೇಕು. ಇದು ಕಡಿಮೆ ಅರ್ಥವಂತಿಕೆ ಹೊಂದಿರುವ ಮತ್ತು ಹೆಚ್ಚು ಕಣ್ಸೆಳೆಯುವ ಮಾಧ್ಯಮವಾಗಿದೆ; ನಿಮ್ಮ ದೃಷ್ಟಿಕೋನ, ನಿಮ್ಮ ಅನುಭವವನ್ನು ಪ್ರಸ್ತುತದಲ್ಲಿ ತೋರಿಸುತ್ತದೆ. ನೈಜ ವಾಸ್ತವತೆಯ ಅಲ್ಪಕಾಲೀನ ಕ್ಷಣವನ್ನು ವರ್ಗಾಯಿಸಬಹುದಾದ ವಸ್ತುವಾಗಿಸುವುದು ಸಾಂಪ್ರದಾಯಿಕ ಫೋಟೋಗ್ರಫಿಯ ಉದ್ದೇಶವಾಗಿದೆ, ಆದರೆ ಸಾಮಾಜಿಕ snap ನಲ್ಲಿ ಅದು ಕೇವಲ ಒಂದು ಸಾಧನವಾಗಿದೆ. ಫೋಟೋಗಳನ್ನು ರಚಿಸುವುದು ಈಗ ಅತ್ಯಂತ ಸುಲಭವಾಗಿರುವುದರಿಂದ, ವಸ್ತುವಾಗಿ ಅವುಗಳ ಇರುವಿಕೆಯಷ್ಟೇ ವಿಶೇಷ ಅಥವಾ ಆಸಕ್ತಿಕರವಾಗುವುದಿಲ್ಲ, ಬದಲಾಗಿ, ಸಂವಹನವಾಗಿ ಅವು ಹೆಚ್ಚು ಚಲನಶೀಲವಾಗಿರುತ್ತವೆ; ದೃಶ್ಯ ಸಂಭಾಷಣೆ ಈಗ ಹಿಂದಿನ ಕಲಾತ್ಮಕತೆಗಿಂತ ಹೆಚ್ಚಾಗಿ ಭಾಷಾಶಾಸ್ತ್ರವಾಗಿದೆ. ಆದ್ದರಿಂದ, ಸಾಮಾಜಿಕ ಫೋಟೋಗ್ರಫಿಯನ್ನು ಕ್ಷಣದಿಂದ ವಿಚಲಿತವಾಗುವಿಕೆ ಅಥವಾ ಸಂಭಾಷಣೆ ಎಂದು ಅರ್ಥ ಮಾಡಿಕೊಳ್ಳುವುದರ ಬದಲಾಗಿ. ಆಳವಾದ ಸಾಮಾಜಿಕ ತೊಡಗಿಕೊಳ್ಳುವಿಕೆ ಎಂದು ಅರ್ಥೈಸಿಕೊಳ್ಳಬೇಕು.
ಟರ್ಕಲ್ ತಮ್ಮ ವಿಶ್ಲೇಷಣೆಯನ್ನು -ನೀವು ಸ್ವಂತ ತೆಗೆದುಕೊಳ್ಳುವ- ಸೆಲ್ಫೀಗಳ ಮೇಲೆ ಕೇಂದ್ರೀಕರಿಸುತ್ತಾರೆ ಮತ್ತು ನಾವು ಕ್ಷಣಗಳ ಅನುಭವವನ್ನು ಅದರ ದಾಖಲಿಸುವಿಕೆಗಾಗಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ವಾದಿಸುತ್ತಾರೆ. ಆದರೆ ಸೆಲ್ಫೀಗಳನ್ನು ಸ್ವಂತ ಫೋಟೋಗಳ ರಾಶಿಯಂತೆ ನೋಡುವ ಬದಲಾಗಿ ಒಂದು ಹಂಚಿಕೊಳ್ಳುವ ಅನುಭವದಂತೆ, ಇದು ನಾನಿರುವ ಬಗೆ , ನಾನು ಇಲ್ಲಿದ್ದೆ, ನನಗೆ ಹೀಗನಿಸುತ್ತಿತ್ತು ಎನ್ನುವುದರ ಸಂವಹನವಾಗಿ, ಸೆಲ್ಫೀಗಳ ಸಾಮಾನ್ಯತೆ ಆಶ್ಚರ್ಯಕರವಾಗಿಲ್ಲ ಅಥವಾ ಸಮಾಜ ವಿರೋಧಿಯಂತೂ ಖಂಡಿತ ಅಲ್ಲ. ಸೆಲ್ಫೀಗಳು ಹೆಚ್ಚಾಗಿ ಪ್ರಸಿದ್ಧರೊಂದಿಗಿನ ಅತ್ಯಂತ ವಿರಳ ಘಟನೆಗಳನ್ನು ದಾಖಲಿಸುತ್ತಿಲ್ಲ ಆದರೆ ಅದಕ್ಕೆ ವಿರುದ್ಧವಾಗಿ, ಪ್ರತಿದಿನದ ಬದುಕಿನ ಕ್ಷಣಗಳನ್ನು ಅದರ ಎಲ್ಲ ವೈವಿಧ್ಯತೆಯೊಂದಿಗೆ ದಾಖಲಿಸುತ್ತಿವೆ. ಪರಿಶುದ್ಧವಾಗಿ ಫ್ರೇಮ್ ಮಾಡಿದ ಮತ್ತು ಪರಿಪೂರ್ಣ ಬೆಳಕಿರುವ ಸಮುದ್ರ ಕಿನಾರೆಯ ಫೋಟೋ ಒಂದು ಉತ್ತಮ ಕಲಾಕೃತಿಯಾಗುತ್ತದೆ ಆದರೆ ಅದರ ಹೋಲಿಕೆಯಲ್ಲಿ ಸಾಮಾಜಿಕ ಫೀಡ್‌ಗಳಲ್ಲಿ ಒಂದೇ ಶಾಟ್ ಹೇಗೆ ಬಹುಬಾರಿ ಪ್ರಕಟವಾಗುತ್ತದೆ ಎಂದು ಹೇಳುವುದು ಬೋರ್ ಹೊಡೆಸುವ ಭಾಷಣವಾಗಬಹುದು. ಅದರ ಬದಲಾಗಿ, ಸೆಲ್ಫೀ ಅನ್ನುವುದು ನಿಮ್ಮ ವಿಶಿಷ್ಟ ಚಿತ್ರ ಮಾತುಕತೆಯಾಗಿದೆ, ನಿಮ್ಮ ಸೆಲ್ಫೀಯನ್ನು ಬೇರೆ ಯಾರೂ ತೆಗೆಯಲು ಸಾಧ್ಯವಿಲ್ಲ, ಅದು ಚಿತ್ರವಾಗಿ ನಿಮ್ಮ ಸ್ವಂತ ಧ್ವನಿ ಮತ್ತು ಆ ಕಾರಣದಿಂದ ಆತ್ಮೀಯ ಮತ್ತು ಅಭಿವ್ಯಕ್ತಿಶೀಲವಾಗಿರುತ್ತದೆ. ಇದು ಈ ಕ್ಷಣದಲ್ಲಿ ತೀವ್ರವಾಗಿದೆ ಮತ್ತು ಅದಕ್ಕಾಗಿಯೇ ನಾವು ಅವುಗಳನ್ನು ಹಂಚಿಕೊಳ್ಳಲು ಮತ್ತು ವೀಕ್ಷಿಸಲು ಬಯಸುತ್ತೇವೆ.
***
ಆಧುನಿಕ ಫೋಟೋ ಹಂಚಿಕೆಯ ಈ ಉದಾಹರಣೆಯ ಮೂಲಕ, ಇಲ್ಲಿ ಮಾಡಿರುವ ವ್ಯತ್ಯಾಸವು ಸಾಮಾಜಿಕ ಸೇವೆಗಳ ನಡುವೆ ಮುಖ್ಯವಾಗಿ ವಿಷಯ ಮತ್ತುಸಂವಹನದ ಮೇಲೆ ಆಧರಿತವಾಗಿದೆ. ಖಂಡಿತವಾಗಿ, ಎಲ್ಲ ಸಾಮಾಜಿಕ ಮಾಧ್ಯಮಗಳೂ ಎರಡೂ ಆಗಿವೆ, ಆದರೆ ಎಲ್ಲ ಮಾಧ್ಯಮಗಳೂ ಎರಡರ ಮೇಲೂ ಒಂದೇ ಸಮನಾಗಿ ಗಮನ ಕೇಂದ್ರೀಕರಿಸುವುದಿಲ್ಲ.
ಇಂದಿನ ಪ್ರಬಲ ಸಾಮಾಜಿಕ ಸೇವೆಗಳು ಮಾಧ್ಯಮ ವಸ್ತುವಿನ ಬಗ್ಗೆ ಬಹಳ ಕಾಳಜಿಯನ್ನು ಹೊಂದಿವೆ, ಅನನ್ಯ ಅನುಭವವನ್ನು ಪ್ರತ್ಯೇಕವಾಗಿ ಎಳೆಯಲಾಗುತ್ತದೆ, ವಿವೇಚಿಸಲಾಗುತ್ತದೆ, ಪ್ರೊಫೈಲ್ ಅಥವಾ ಸ್ಟ್ರೀಮ್‌ಗೆ ಸೇರಿಸಲಾಗುತ್ತದೆ ಮತ್ತು ಎಷ್ಟು ಜನರು ಅದನ್ನು ಗೌರವಿಸುತ್ತಾರೆ ಎಂಬುದನ್ನು ಪ್ರಮಾಣೀಕರಿಸಲು ಎಲ್ಲಾ ರೀತಿಯ ಮೆಟ್ರಿಕ್‌ಗಳನ್ನು ನೀಡುತ್ತಾರೆ. ಹೆಚ್ಚು ಪ್ರಬಲವಾದ ಸಾಮಾಜಿಕ ಮಾಧ್ಯಮವು ಅವರ ವೆಬ್‌ಸೈಟ್‌ಗಳನ್ನು ಮತ್ತು ಈ ಮಾಧ್ಯಮ ವಸ್ತುಗಳ ಸುತ್ತ ನಿಮ್ಮ ಅನುಭವವನ್ನು ಹೆಚ್ಚು ಸುಲಭವಾಗಿ ಆಯೋಜಿಸುತ್ತದೆ, ಅದು ಫೋಟೋಗಳು, ವೀಡಿಯೊಗಳು, ಟೆಕ್ಸ್ಟ್ ಬ್ಲಾಕ್‌ಗಳು, ಚೆಕ್-ಇನ್‌ಗಳು ಇತ್ಯಾದಿಗಳ ರೂಪದಲ್ಲಿರುತ್ತದೆ. ನೀವು ಕ್ಲಿಕ್ ಮಾಡಲು, ಕಾಮೆಂಟ್ ಮಾಡಲು, ಮತ್ತು ಹಂಚಿಕೊಳ್ಳಲು ಅವು ಅನುಭವದ ಮೂಲಭೂತ ಘಟಕಗಳಾಗಿರುತ್ತವೆ. ಒಂದು ಫೋಟೋ ಪ್ರಕಟಿಸಲಾಗಿದೆ, ಮತ್ತು ಸ್ಕ್ರೀನ್‌ನಲ್ಲಿ ಅಕ್ಕ-ಪಕ್ಕದಲ್ಲಿ. ಆ ಫೋಟೋದ ಸುತ್ತ ಸಂಭಾಷಣೆ ನಡೆಯುತ್ತದೆ.
ಪರ್ಯಾಯವಾಗಿ, —ಬಳಕೆದಾರರಿಂದ ಮೆಚ್ಚಲ್ಪಡುವ ಆದರೆ ಬಹುತೇಕ ವಿಶ್ಲೇಷಣೆಗಳಲ್ಲಿ ಅನ್ವೇಷಿಸದಿರುವ— ಈ ಅಲ್ಪಕಾಲಿಕ ಸಾಮಾಜಿಕ ಮಾಧ್ಯಮದ ಒಂದು ಮುಖ್ಯ ಅಂಶವೆಂದರೆ ಇದು ಮೂಲಭೂತ ಸಾಂಸ್ಥಿಕ ಘಟಕವನ್ನು ತಿರಸ್ಕರಿಸುತ್ತದೆ. Snap ನಲ್ಲಿ ಯಾವುದೇ ಅಭಿಪ್ರಾಯಗಳು ಪ್ರದರ್ಶಿತವಾಗುವುದಿಲ್ಲ, ಯಾವುದೇ ಹಾರ್ಟ್ ಅಥವಾ ಲೈಕ್ ಸಂಕೇತಗಳು ಇರುವುದಿಲ್ಲ. ಅಲ್ಪಕಾಲಿಕತೆಯೊಂದಿಗೆ, ಅವರ ಸುತ್ತಲೂ ಇರುವ ಬದಲು ಫೋಟೋಗಳ ಮೂಲಕ ಸಂವಹನ ಮಾಡಲಾಗುತ್ತದೆ.
ಈ ಮಾಧ್ಯಮ ವಸ್ತು, ಉದಾಹರಣೆಗೆ ಫೋಟೋ, ಪ್ರಬಲ ಸಾಮಾಜಿಕ ಮಾಧ್ಯಮದ ಕೊನೆಯಾಗಿಲ್ಲ, ಆದರೆ ಕೇವಲ ಕ್ಷಣಿಕ ಸೇವೆಗಳಿಗೆ ಮಾರ್ಗವಾಗಿದ್ದು ಮಾಧ್ಯಮ ವಸ್ತು ಮರೆಯಾಗಿಸಲು ಮತ್ತು ಇತರ ಸೇವೆಗಳನ್ನು ಯಾವುದರ ಮೇಲೆ ನಿರ್ಮಿಸಲಾಗಿದೆಯೋ ಅದನ್ನು ಬಳಸಿ ಬಿಸಾಡಬಹುದಾದದ್ದನ್ನಾಗಿಸುತ್ತದೆ. ವೃದ್ಧಿಯಾಗುತ್ತಿರುವ ಸೆಲ್ಫೀಗಳ ಹಾಗೆ, ನೈಜ ಫೋಟೋಗ್ರಫಿ ವಸ್ತು ಕೇವಲ ಸಂವಹನದ ಉಪಉತ್ಪನ್ನವಾಗಿರುತ್ತದೆಯೇ ಹೊರತು ಅದರ ಕೇಂದ್ರವಾಗಿರುವುದಿಲ್ಲ.
ಮಾಧ್ಯಮ ವಸ್ತುವಿನ ಪ್ರಾಮುಖ್ಯತೆಯನ್ನು ಕಡೆಗಣಿಸುವ ಮೂಲಕ, ಅದನ್ನು ಬಳಸಿ ಬಿಸಾಡುವಂಥದ್ದನ್ನಾಗಿ ಮಾಡುವ ಮೂಲಕ, ಮಹತ್ವವನ್ನು ಸಂವಹನದ ಮೇಲೆಯೇ ಇರಿಸಲಾಗುತ್ತದೆ. Snap ನ ಆತ್ಮೀಯತೆ ವರ್ಸಸ್ ಇನ್ನೊಂದು ತಾಣದಲ್ಲಿ ಹಂಚಿಕೊಳ್ಳಲಾಗುವ ಸ್ಥಿರ ಚಿತ್ರದ ಕುರಿತು ಇದು ವಿಶಾಲವ್ಯಾಪ್ತಿಯಲ್ಲಿ ವಿವರಿಸುತ್ತದೆ. ಇತರ ಸೇವೆಗಳು, ಮತ್ತು ಅವುಗಳ ನೇರ ಸಂದೇಶ ಕಳುಹಿಸುವಿಕೆ ಅಂಶಗಳೂ ಸಹ, ನಿರಂತರ ಮಾಧ್ಯಮ ವಸ್ತುಗಳಿಂದ ಮತ್ತು ಅವುಗಳ ಸುತ್ತ ಸಂಘಟಿತವಾಗಿರುತ್ತವೆ. ಇದು ಮಾಧ್ಯಮ ಆಧಾರಿತ ಸಾಮಾಜಿಕತೆಯಾಗಿದ್ದು, ಸಾಮಾಜಿಕ ಮಾಧ್ಯಮಕ್ಕೆ ಅದರ ಹೆಸರನ್ನು ನೀಡುತ್ತದೆ.
ಒಂದು ಚಿತ್ರ ಅಂಚುಗಳನ್ನು ಹೊಂದಿದ್ದಾಗ, ಫೋಟೋಗ್ರಾಫ್ ಆಗುತ್ತದೆ. ಫ್ರೇಮ್ ಫೋಟೋವನ್ನು ರೂಪಿಸುತ್ತದೆ. ವಾಸ್ತವದಲ್ಲಿ, Snapchat ಸಾಮಾನ್ಯವಾಗಿ ಫ್ರೇಮ್‌ ಇಲ್ಲದೆ, ಪೂರ್ಣ ಸ್ಕ್ರೀನ್‌ನಲ್ಲಿ, ಕಲಾಕೃತಿಗಿಂತ ಹೆಚ್ಚಾಗಿ ಆತ್ಮೀಯ ಕ್ಷಣವಾಗಿ ಇರುತ್ತದೆ. ಅನುಭವದ ಟ್ರೋಫಿಗಳನ್ನು ಹಂಚಿಕೊಳ್ಳುವುದು ಮತ್ತು ಅವುಗಳ ಸುತ್ತ ಸಂವಹನ ನಡೆಯುತ್ತದೆ ಎಂದು ನಿರೀಕ್ಷಿಸುವುದರ ಬದಲು, ಕ್ಷಣಗಳು, ಅನುಭವ, ಸಂವಹನದ ಮೇಲೆ ಗಮನ ಕೇಂದ್ರೀಕರಿಸುವುದರ ಪರವಾಗಿ ಒಂದು ಕಲಾಕೃತಿಯ ವಿಷಯವು ಮರೆಯಾಗುವಂತೆ ಅಲ್ಪಕಾಲಿಕ ನೆಟ್‌ವರ್ಕ್ ಮಾಡುತ್ತದೆ; ಇದು ಮಾಧ್ಯಮಕ್ಕಿಂತ ಹೆಚ್ಚು ಸಾಮಾಜಿಕ, ನೆಟ್‌ವರ್ಕ್‌ಗಿಂತ ಹೆಚ್ಚು ಸಾಮಾಜಿಕ.
ನಮ್ಮ ಬಹುತೇಕ ಸಾಮಾಜಿಕ ಮಾಧ್ಯಮಗಳು ಕಂಟೆಂಟ್ ಮೇಲೆ, ಮಾಧ್ಯಮ ವಿಷಯಗಳ ಮೇಲೆ ನಿಶ್ಚಿತವಾಗಿರುವುದಕ್ಕೆ ಬಹುಶಃ ಇದೇ ಕಾರಣ, ಏಕೆಂದರೆ ಕಂಟೆಂಟ್ ಅನ್ನು ಸಂಗ್ರಹಣೆ ಮಾಡಬಹುದು. ವೆಬ್‌ ತಾಣಕ್ಕೆ ಸರ್ಚ್‌ ಎಂಜಿನ್‌ಗಳು ಮಾಡುವ ರೀತಿಯ ಸೂಚ್ಯಂಕಗೊಳಿಸಬಹುದಾದ ಮಾಹಿತಿಯಂತೆ ಸಾಮಾಜಿಕತೆಯನ್ನು ಕಾಣಲಾಗುತ್ತಿದೆ. ಫೋಟೋಗಳು ಮತ್ತು ಉಳಿದವನ್ನು ಅಳತೆ ಮಾಡಲು, ಟ್ರ್ಯಾಕ್ ಮಾಡಲು ಮತ್ತು ಶ್ರೇಯಾಂಕ ನೀಡಲು ರೆಕಾರ್ಡ್ ಮಾಡಲಾಗುತ್ತದೆ, ಉಳಿಸಲಾಗುತ್ತದೆ ಮತ್ತು ಪ್ರೊಫೈಲ್‌ಗಳಾಗಿ ಸಂಘಟಿತಗೊಳಿಸಲಾಗುತ್ತದೆ. ಇದು ಅರ್ಥಪೂರ್ಣವಾಗಿತ್ತು, ಇದನ್ನು ಮಾಡುವುದಕ್ಕಾಗಿಯೇ ಜನರು ಬಹುತೇಕ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಬಳಸುತ್ತಿದ್ದರು. ಬಹುಶಃ ಇದು ಮೊಬೈಲ್ ಫೋನ್‌ನ ಏರಿಕೆಯಾಗಿರಬಹುದು, ಅಲ್ಲಿ ಜನರು ಕಡಿಮೆ ಮಾಹಿತಿ ಶೋಧನೆ ಮತ್ತು ಹೆಚ್ಚು ಸಂವಹನ ನಡೆಸುತ್ತಾರೆ, ಇದು ಸಾಮಾಜಿಕವಾಗಿ ಏನನ್ನಾದರೂ ಸಂಘಟಿಸಲು ದೋಷಪೂರಿತ ಮಾದರಿಯಾಗಿದೆ ಎಂದು ಬಹಿರಂಗಪಡಿಸಿತು. ನಾನು ಬಹಳ ಊಹಾತ್ಮಕ ಟಿಪ್ಪಣಿಯೊಂದಿಗೆ ಮುಗಿಸುತ್ತಿದ್ದೇನೆ, ಆದರೆ ಇದು ನಿಶ್ಚಿತವಾಗಿ ಇದು ಮೂಲಭೂತವಾಗಿ ಮಾಧ್ಯಮ ವಿಷಯಗಳ ಮೇಲೆ ಆಧರಿತವಾಗಿರುವ ಸಾಮಾಜಿಕತೆಯ ಕುರಿತು ಮರುಚಿಂತನೆ ನಡೆಸಬೇಕಾದ ಸಮಯ.
ಮಾಧ್ಯಮ ವಸ್ತುವಿನ ಆಕರ್ಷಕತೆಯನ್ನು ಮತ್ತು ಒಂದು ಫೋಟೋ ಬಾರ್ಡರ್ ಒಳಗಡೆ ಇರಿಸಿರುವ ಆ ಸುಂದರ ಕ್ಷಣಗಳನ್ನು ಉತ್ಪಾದಿಸುತ್ತ ಮತ್ತು ನೋಡುತ್ತ ಕಾಲಕಳೆಯುವುದನ್ನು ನಾವು ಯಾಕೆ ಮುಂದುವರಿಸಬಯಸುತ್ತೇವೆ ಎನ್ನುವುದನ್ನು ಈಗಲೂ ಅರ್ಥಮಾಡಿಕೊಳ್ಳಬಹುದು. ಅತ್ಯಂತ ತೀವ್ರತೆಯ, ಸೂರ್ಯಾಸ್ತಮಾನದ, ಕೌಟುಂಬಿಕ ಮಿಲನದ, ಪ್ರಸಿದ್ಧ ಕಾಮಿಡಿಯನ್‌ ಭೇಟಿಯ ಕ್ಷಣಗಳನ್ನು ನೀವು ನೋಡುತ್ತೀರಿ; ಶಾಶ್ವತವಾಗಿ ಉಳಿಸಿದ ಒಂದು ಪ್ರಮುಖ ಫೋಟೋಗೆ ಖಂಡಿತವಾಗಿ ಜಾಗವಿದೆ. ನಾನು ಆಗಾಗ್ಗೆ ವಾದಿಸುತ್ತಿದ್ದಂತೆ, ಅಲ್ಪಕಾಲಿಕ ಮತ್ತು ಶಾಶ್ವತ ಸಾಮಾಜಿಕ ಮಾಧ್ಯಮವು ವಿರೋಧಕ್ಕಿಂತ ಹೆಚ್ಚಾಗಿ ಒಟ್ಟಿಗೆ ಕೆಲಸ ಮಾಡುತ್ತದೆ. Snaps ಗಳನ್ನು ಸಹ ಹೆಚ್ಚಾಗಿ ಕಲೆಯ ದೊಡ್ಡ ತುಣುಕುಗಳಾಗಿ ಪರಿವರ್ತಿಸಲಾಗುತ್ತದೆ.
ಆದರೆ ಆ ಕ್ಷಣಗಳ ಪ್ರಾಮುಖ್ಯತೆಯನ್ನು ಮೆಚ್ಚುವಷ್ಟೇ ಸುಲಭವಾಗಿ, ಅವುಗಳ ನಡುವಿನ ಮಾಮೂಲಿ ಕ್ಷಣಗಳನ್ನು ಕಡೆಗಣಿಸುವುದೂ ಕೂಡ ಅಷ್ಟೇ ಸುಲಭ. ಸಾಮಾಜಿಕ ಜಗತ್ತನ್ನು ಅಧ್ಯಯನ ಮಾಡುವವರು ಕ್ಷುಲ್ಲಕ ಎನ್ನುವಂತೆ ಕಾಣುವುದರ ಸಂಕೀರ್ಣತೆಗಳನ್ನೂ ಮೆಚ್ಚುತ್ತಾರೆ. ಬೋರಿಂಗ್, ಏಕತಾನ ಎಂಬಂತೆ ಕಂಡುಬರುವ ದೈನಂದಿನ ಬದುಕಿನ ಕ್ಷಣಗಳು ಬಹಳ ಮುಖ್ಯವಾಗಿವೆ. ಸಣ್ಣ ಸಾಮಾಜಿಕ ಅಲಂಕಾರಗಳು ನಮ್ಮ ಬದುಕಿನ ವಿನ್ಯಾಸವನ್ನು ಹೆಚ್ಚು ಆಕರ್ಷಕವಾಗಿಸುತ್ತವೆ: ಹಲೋ ಅನ್ನುವುದು, ಮುಗುಳ್ನಗುವುದು, ಪರಸ್ಪರರನ್ನು, ನಮ್ಮ ಮುಖಗಳನ್ನು, ನಮ್ಮ ವಸ್ತುಗಳನ್ನು, ಮತ್ತು ಒಳ್ಳೆಯದ್ದರಿಂದ ಕೆಟ್ಟದ್ದರವರೆಗೆ ನಮ್ಮ ಮೂಡ್‌ಗಳನ್ನು ಒಪ್ಪಿಕೊಳ್ಳುವುದು. ಶಾಶ್ವತ ಸಾಮಾಜಿಕ ಮಾಧ್ಯಮಗಳು ಈ ಮಹತ್ವದ ಕ್ಷುಲ್ಲಕತೆಗಳನ್ನು ಆರಾಮದಾಯಕ ರೀತಿಯಲ್ಲಿ ಕ್ಯಾಪ್ಚರ್ ಮಾಡಲು ಕಷ್ಟಪಡುತ್ತವೆ. ಮತ್ತು ಇಲ್ಲಿ ಅಲ್ಪಕಾಲಿಕ ಸಾಮಾಜಿಕ ಮಾಧ್ಯಮ ಪ್ರಕಾಶಿಸುತ್ತದೆ; ಕ್ಷಣಭಂಗುರವಾದ, ಸಾಮಾನ್ಯವಾಗಿ ಮೋಜಿನದೂ ಆದ, ಯಾವಾಗಲೂ ಸ್ವರೂಪದಲ್ಲಿ ಮುಖ್ಯವಾದ ಪ್ರತಿದಿನದ ಸಂವಹನಕ್ಕಾಗಿ ನಿರ್ಮಿಸಲಾಗಿದೆ. ಸಾಮಾಜಿಕ ಬದುಕನ್ನು ಕೇವಲ ಕ್ಷಣಗಳನ್ನು ಟ್ರೋಫಿಯಂತೆ ಕ್ಯಾಪ್ಚರ್ ಮಾಡುವುದನ್ನಾಗಿ ಪರಿಗಣಿಸದೆ, ತಾತ್ಕಾಲಿಕ ಸಾಮಾಜಿಕ ಮಾಧ್ಯಮ ಹೆಚ್ಚು ಚಿರಪರಿಚಿತ, ಇದು ಪ್ರತಿದಿನದ ಕ್ಷುಲಕವಾದ ಸಂಗತಿಗಳಿಗೆ ಮಹತ್ವ ನೀಡುತ್ತದೆ.
Back To News