Update on Third-Party Apps

We promised that we would continue to improve the security and reliability of our service and today we’re announcing a change in the way we treat third-party applications.
ಕೆಲವು ವಾರಗಳ ಹಿಂದೆ Snap ಗಳನ್ನು ಉಳಿಸುವ ಸೇವೆ ಒದಗಿಸುತ್ತಿದ್ದ ಥರ್ಡ್-ಪಾರ್ಟ್ ಆ್ಯಪ್‌ನಲ್ಲಿ ಸುರಕ್ಷತೆಯನ್ನು ಕಡೆಗಣಿಸಿದ ಸಂದರ್ಭ ನಾವು ಥರ್ಡ್‌-ಪಾರ್ಟಿ ಆ್ಯಪ್‌ಗಳ ಕುರಿತು ಬರೆದಿದ್ದೆವು. ಆ ಸಮಯದಲ್ಲಿ, ನಮ್ಮ ಸೇವೆಯ ಭದ್ರತೆ ಮತ್ತು ವಿಶ್ವಾಸಾರ್ಹತೆ ಸುಧಾರಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು ಮತ್ತು ಥರ್ಡ್‌-ಪಾರ್ಟಿ ಅಪ್ಲಿಕೇಶನ್‌ಗಳನ್ನು ನಾವು ಪರಿಗಣಿಸುವ ವಿಧಾನದಲ್ಲಿನ ಬದಲಾವಣೆಯನ್ನು ಇವತ್ತು ನಾವು ಘೋಷಿಸುತ್ತಿದ್ದೇವೆ.
Snapchat ಅನ್ನು ಇನ್ನಷ್ಟು ಉತ್ತಮಗೊಳಿಸಲು ಡೆವಲಪರ್‌ಗಳು ಪ್ರಯತ್ನಿಸಿದ ಕೆಲವು ವಿಧಾನಗಳನ್ನು ನಾವು ಆನಂದಿಸಿದ್ದೇವೆ. ದುರದೃಷ್ಟವಶಾತ್, ಕೆಲವು ಡೆವಲಪರ್‌ಗಳು Snapchatter ಗಳನ್ನು ಮೋಸಗೊಳಿಸುವ ಮತ್ತು ಅವರ ಖಾತೆಗಳ ದುರ್ಬಳಕೆ ಮಾಡುವ ಸೇವೆಗಳನ್ನು ನಿರ್ಮಿಸುತ್ತಾರೆ.
ನಮ್ಮ ಕಮ್ಯುನಿಟಿಯಲ್ಲಿ ಅದು ಸಂಭವಿಸದಂತೆ ತಡೆಯಲು ನಾವು ಬಯಸುತ್ತೇವೆ. ಇಂದಿನಿಂದ, Snapchatter ಗಳು ಥರ್ಡ್‌-ಪಾರ್ಟಿ ಆ್ಯಪ್‌ಗಳನ್ನು ಬಳಸುತ್ತಿರಬಹುದು ಎಂದು ನಮಗೆ ಕಂಡುಬಂದಾಗ ನಾವು ಅವರಿಗೆ ಸೂಚನೆ ನೀಡುತ್ತೇವೆ ಹಾಗೂ ಅವರ ಪಾಸ್‌ವರ್ಡ್ ಬದಲಿಸುವಂತೆ ಮತ್ತು ಅನಧಿಕೃತ ಆ್ಯಪ್‌ಗಳ ಬಳಕೆಯನ್ನು ನಿಲ್ಲಿಸುವಂತೆ ಆ Snapchatter ಗಳಿಗೆ ನಾವು ವಿನಂತಿಸುತ್ತೇವೆ.
ನಿಮ್ಮ Snapchat ಅನುಭವದಲ್ಲಿ ನಿಮ್ಮಲ್ಲಿ ಹೆಚ್ಚಿನವರು ಇಂದು ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ. ಕೆಲವು ಅಸಾಧಾರಣ ಸಂಗತಿಗಳನ್ನು ಶೀಘ್ರ ನಿಮ್ಮ ಮುಂದೆ ತರಲಿದ್ದೇವೆ.
ಹ್ಯಾಪಿ Snapping!
Back To News