Our Biggest Update Yet: v4.0 Phantom

It’s been a busy couple of months at Snapchat. With over 50 million snaps shared every day, we’ve had to do a lot of work to make sure our service can continue to support a growing community of snappers. Today, we’re thrilled to announce a major update to our iPhone application – video snaps!
Snapchat ನಲ್ಲಿ ಇದು ಕೆಲವು ಕಾರ್ಯನಿರತ ತಿಂಗಳುಗಳಾಗಿವೆ. ಪ್ರತಿದಿನ 50 ಮಿಲಿಯನ್ Snap‌ಗಳನ್ನು ಹಂಚಿಕೊಳ್ಳುವುದರೊಂದಿಗೆ, ಬೆಳೆಯುತ್ತಿರುವ Snappers‌ಗಳ ಸಮುದಾಯವನ್ನು ಬೆಂಬಲಿಸಲು ನಮ್ಮ ಸೇವೆಯು ಮುಂದುವರಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಾಕಷ್ಟು ಕೆಲಸ ಮಾಡಬೇಕಾಗಿತ್ತು. ಇಂದು, ನಮ್ಮ iPhone ಅಪ್ಲಿಕೇಶನ್‌ - ವೀಡಿಯೊ Snap‌ಗಳ ಪ್ರಮುಖ ನವೀಕರಣವನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ !
Snapchat ಕ್ಷಣಗಳು ಸಂಭವಿಸಿದಂತೆಯೇ ಹಂಚಿಕೊಳ್ಳುವುದಾಗಿದೆ, ಮತ್ತು ಆ ಕ್ಷಣಗಳನ್ನು ಸೆರೆಹಿಡಿಯಲು ವೀಡಿಯೋ ಉತ್ತಮ ಮಾರ್ಗವಾಗಿದೆ. ದುರದೃಷ್ಟವಶಾತ್, ಹೆಚ್ಚಿನ ಕ್ಯಾಮೆರಾ ಅಪ್ಲಿಕೇಶನ್‌ಗಳೊಂದಿಗೆ, ನಿಮ್ಮ ಸ್ಟಿಲ್ ಕ್ಯಾಮೆರಾದಿಂದ ನಿಮ್ಮ ವೀಡಿಯೋ ಕ್ಯಾಮರಾಕ್ಕೆ ನೀವು ಬದಲಾಯಿಸುವ ಮತ್ತು ಮುಂದುವರೆಯಲು ಸಿದ್ಧವಾಗುವ ಹೊತ್ತಿಗೆ, ನೀವು ಈಗಾಗಲೇ ಆ ಕ್ಷಣವನ್ನು ಕಳೆದುಕೊಂಡಿದ್ದೀರಿ. ಇದು ನಿಜವಾಗಿಯೂ ನಿರಾಶಾದಾಯಕವಾಗಿದೆ. ಆದ್ದರಿಂದ ನಾವು ವಿಭಿನ್ನವಾದದ್ದನ್ನು ನಿರ್ಮಿಸಿದ್ದೇವೆ - ಮತ್ತು ಇದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ನಾವು ಭಾವಿಸುತ್ತೇವೆ.
ಫೋಟೋ ಮತ್ತು ವೀಡಿಯೋ ಸೆಟ್ಟಿಂಗ್ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಟಾಗಲ್ ಮಾಡುವ ಬದಲು, ನಾವು ಅವುಗಳನ್ನು ಒಂದೇ ಬಟನ್ ಆಗಿ ಸಂಯೋಜಿಸಿದ್ದೇವೆ. ಒಂದು ವೇಳೆ ನೀವು ಫೋಟೋ ತೆಗೆದುಕೊಳ್ಳಲು ಬಯಸಿದರೆ, ಬಟನ್ ಟ್ಯಾಪ್ ಮಾಡಿ. ಒಂದು ವೇಳೆ ನೀವು ವೀಡಿಯೋವನ್ನು ಸೆರೆಹಿಡಿಯಲು ಬಯಸಿದರೆ, ಬಟನ್ ಅನ್ನು ಒತ್ತಿಹಿಡಿಯಿರಿ. ನೀವು ರೆಕಾರ್ಡಿಂಗ್ ಪೂರ್ಣಗೊಳಿಸಿದಾಗ, ನಿಮ್ಮ ಬೆರಳನ್ನು ಮೇಲಕ್ಕೆತ್ತಿ. ಬಹಳಷ್ಟು ಸರಳ. ವೀಡಿಯೋ Snap‌ಗಳು ಹತ್ತು ಸೆಕೆಂಡುಗಳವರೆಗೆ ಇರುತ್ತವೆ ಮತ್ತು ಫೋಟೋ Snap‌ಗಳಂತೆ, ಅಪ್ಲಿಕೇಶನ್‌ನಲ್ಲಿ ಒಮ್ಮೆ ಮಾತ್ರ ವೀಕ್ಷಿಸಬಹುದು.
ಆದರೆ ಅಷ್ಟೆ ಅಲ್ಲ - ಈ ಅಪ್‌ಡೇಟ್‌ ಇನ್ನೂ ಬಹಳಷ್ಟು ಉತ್ತಮ ವಿಷಯಗಳನ್ನು ಹೊಂದಿದೆ. ಪೂರ್ಣ-ಪರದೆಯ ಪೂರ್ವವೀಕ್ಷಣೆ, ಸೇರಿಸಿದ ಲ್ಯಾಂಡ್‍ಸ್ಕೇಪ್ ಶೀರ್ಷಿಕೆಗಳೊಂದಿಗೆ ಸೆರೆಹಿಡಿಯುವುದು ಮತ್ತು ಕಳುಹಿಸುವುದನ್ನು ನಾವು ಇನ್ನಷ್ಟು ವೇಗಗೊಳಿಸಿದ್ದೇವೆ (ನಿಮ್ಮ iDevice ಅನ್ನು ತಿರುಗಿಸಿ!) ಮತ್ತು ನಿಮಗೆ Snapಗಳನ್ನು ಯಾರು ಕಳುಹಿಸಬಹುದು ಎಂಬುದನ್ನು ನಿರ್ವಹಿಸುವುದಕ್ಕೆ ನಿಮಗೆ ಸಹಾಯ ಮಾಡಲು ಹೊಸ ಸೆಟ್ಟಿಂಗ್‌ಗಳ ಪುಟವಿದೆ.
ಯಾವಾಗಿನಂತೆ, ನಿಮ್ಮ ಪ್ರತಿಕ್ರಿಯೆಯನ್ನು ನಾವು ಪ್ರಶಂಸಿಸುತ್ತೇವೆ! ನಿಮಗೆ ಸಹಾಯ ಬೇಕಾದಲ್ಲಿ ಅಥವಾ ಹಾಯ್ ಹೇಳಲು ಬಯಸಿದರೆ ನಮ್ಮ ಈ ಮುಂದಿನ ವಿಳಾಸಕ್ಕೆ ಇಮೇಲ್ ಕಳುಹಿಸಲು ಹಿಂಜರಿಯಬೇಡಿ: support@snapchat.com
Back To News