Who Can View My Snaps and Stories

Two questions we get a lot are “do you keep all of the Snaps?” and “do you look at them?” An earlier blog post detailed how Snaps are stored and when they are deleted, so now with the introduction of Stories, we’d like to share a bit about access.
ಎರಡು ಪ್ರಶ್ನೆಗಳನ್ನು ನಮಗೆ ಬಹಳಷ್ಟು ಬಾರಿ ಕೇಳಲಾಗುತ್ತದೆ "ನೀವು ಎಲ್ಲ Snaps ಇರಿಸಿಕೊಳ್ಳುತ್ತೀರಾ? ಮತ್ತು "ನೀವು ಅವುಗಳನ್ನು ನೋಡುತ್ತೀರಾ?" ಈ ಹಿಂದಿನ ಬ್ಲಾಗ್ ಪೋಸ್ಟ್‌ನಲ್ಲಿ Snap ಗಳನ್ನು ಹೇಗೆ ದಾಸ್ತಾನು ಮಾಡಲಾಗುತ್ತದೆ ಮತ್ತು ಯಾವಾಗ ಅವುಗಳನ್ನು ಅಳಿಸಲಾಗುತ್ತದೆ ಎನ್ನುವುದನ್ನು ವಿವರಿಸಿದ್ದೆವು, ಆದ್ದರಿಂದ ಈಗ ಕಥೆಗಳ ಪರಿಚಯಿಸುವಿಕೆಯೊಂದಿಗೆ, ಪ್ರವೇಶದ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಳ್ಳಲು ನಾವು ಬಯಸುತ್ತೇವೆ.
ಸಂಗ್ರಹಣೆ
ನಮ್ಮ ಹಿಂದಿನ ಬ್ಲಾಗ್‌ಪೋಸ್ಟ್‌ನಲ್ಲಿ ವಿವರಿಸಿದಂತೆ, ಸ್ವೀಕರಿಸುವವರು ತೆರೆದ ಬಳಿಕ Snaps ಅನ್ನು ನಮ್ಮ ಸರ್ವರ್‌ಗಳಿಂದ ಅಳಿಸಲಾಗುತ್ತದೆ. ಹಾಗಿದ್ದರೆ ಅವುಗಳನ್ನು ತೆರೆಯುವ ಮೊದಲು ಅವುಗಳಿಗೆ ಏನಾಗುತ್ತದೆ? Snapchat ನ ಬಹುತೇಕ ಮೂಲಸೌಕರ್ಯ Google ನ ಕ್ಲೌಡ್ ಕಂಪ್ಯೂಟಿಂಗ್ ಸೇವೆಯಾದ App Engine ನಲ್ಲಿ ಹೋಸ್ಟ್ ಮಾಡಲ್ಪಟ್ಟಿರುತ್ತದೆ. ತೆರೆಯದಿರುವ Snaps ಸೇರಿದಂತೆ ನಮ್ಮ ಬಹುತೇಕ ಡೇಟಾ, ಅವುಗಳನ್ನು ಅಳಿಸುವವರೆಗೆ App Engine ನ ಡೇಟಾ ಸ್ಟೋರ್‌ನಲ್ಲಿ ಉಳಿಸಲ್ಪಟ್ಟಿರುತ್ತವೆ.
ಮರುಪಡೆಯುವಿಕೆ
ತೆರೆಯದಿರುವ Snaps ಅನ್ನು ಡೇಟಾ ಸ್ಟೋರ್‌ನಿಂದ ಮರುಪಡೆಯುವ ಸಾಮರರ್ಥ್ಯ Snapchat ಗೆ ಇರುತ್ತದೆಯೇ? ಹೌದು—ಒಂದು ವೇಳೆ Snaps ಅನ್ನು ಡೇಟಾಸ್ಟೋರ್‌ನಿಂದ ಮರುಪಡೆಯಲು ನಮಗೆ ಸಾಧ್ಯವಾಗದಿದ್ದರೆ, ಕಳುಹಿಸುವವರು ಬಯಸಿದ ಸ್ವೀಕರಿಸುವವರಿಗೆ ಅದನ್ನು ಡೆಲಿವರ್ ಮಾಡಲು ನಮಗೆ ಸಾಧ್ಯವಾಗುವುದಿಲ್ಲ. ಸಾಮಾನ್ಯ ಸಂದರ್ಭಗಳಲ್ಲಿ ನಾವು Snaps ಅನ್ನು ಮ್ಯಾನುವಲ್‌ ಆಗಿ ಮರುಪಡೆದು ವೀಕ್ಷಿಸುತ್ತೇವೆಯೇ? ಇಲ್ಲ. Snaps ಅನ್ನು ಅವುಗಳ ಸ್ವೀಕರಿಸುವವನಿ(ರಿ)ಗೆ ಕಳುಹಿಸುವ ಸಾಮಾನ್ಯ ಪ್ರಕ್ರಿಯೆ ಸ್ವಯಂಚಾಲಿತವಾಗಿರುತ್ತದೆ.
ಹಾಗಾದರೆ, ಇನ್ನೂ ತೆರೆದಿಲ್ಲ ಎಂದು ಊಹಿಸಿಕೊಂಡು, Snap ಅನ್ನು ಮ್ಯಾನುವಲ್ ಆಗಿ ತೆರೆಯಬಹುದಾದ ಸನ್ನಿವೇಶ ಯಾವುದು? ಉದಾಹರಣೆಗೆ, ಇತರ ವಿದ್ಯುನ್ಮಾನ ಸೇವಾ ಪೂರೈಕೆದಾರರ ಹಾಗೆ, ಕೆಲವೊಮ್ಮೆ ನಮಗೂ ಅನುಮತಿಯಿರುತ್ತದೆ, ಮತ್ತು ಕೆಲವೊಮ್ಮೆ ಮಾಹಿತಿಯನ್ನು ಪ್ರವೇಶಿಸಿ ಬಹಿರಂಗಪಡಿಸಬೇಕಾದ ಕಾನೂನು ಅಗತ್ಯವಿರುತ್ತದೆ. ಉದಾಹರಣೆಗೆ, Snap ಗಳ ಕಂಟೆಂಟ್‌ಗಾಗಿ ಕಾನೂನು ಜಾರಿ ಸಂಸ್ಥೆಯಿಂದ ಸರ್ಚ್‌ ವಾರಂಟ್ ಪಡೆದರೆ ಮತ್ತು ಆ Snap ಗಳು ಈಗಲೂ ನಮ್ಮ ಸರ್ವರ್‌ಗಳಲ್ಲಿದ್ದರೆ, ವಿನಂತಿ ಮಾಡಿದ ಕಾನೂನು ಜಾರಿ ಸಂಸ್ಥೆಗೆ ಆ Snap ಗಳನ್ನು ನೀಡುವುದನ್ನು ಎಲೆಕ್ಟ್ರಾನಿಕ್ ಸಂವಹನ ಗೌಪ್ಯತಾ ಕಾಯ್ದೆ (ECPA) ಎನ್ನುವ ಕೇಂದ್ರದ ಕಾನೂನು ಅಗತ್ಯವಾಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಾವು ಮಾಹಿತಿಯನ್ನು ಯಾವಾಗ ಬಹಿರಂಗಮಾಡಬಹುದು ಎನ್ನುವುದನ್ನು ವಿವರಿಸುವ ನಮ್ಮ ಗೌಪ್ಯತೆ ನೀತಿಯ ವಿಭಾಗವನ್ನು ನೋಡಿ.
ಮೇ 2013 ರಿಂದ, ಸುಮಾರು ಡಜನ್‌ನಷ್ಟು ಸರ್ಚ್ ವಾರಂಟ್‌ಗಳನ್ನು ನಾವು ಸ್ವೀಕರಿಸಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಜಾರಿಗಾಗಿ ತೆರೆಯದಿರುವ Snaps ಅನ್ನು ನಾವು ಹಾಜರುಪಡಿಸಬೇಕಾಯಿತು. ಇದು ಪ್ರತಿನಿತ್ಯ ಕಳುಹಿಸಲಾಗುವ 350 ಮಿಲಿಯನ್ Snaps ಗಳ ಪೈಕಿ ಅಷ್ಟೇ.
ಕಾನೂನು ಜಾರಿ ಸಂಬಂಧಿತ ಮನವಿಗಳು ಕೆಲವೊಮ್ಮೆ ಒಂದಿಷ್ಟು ಸಮಯ Snaps ಅನ್ನು ಸಂರಕ್ಷಿಸಿಡುವ ಅಗತ್ಯವನ್ನು ಸೃಷ್ಟಿಸುತ್ತವೆ, ಉದಾಹರಣೆಗೆ Snaps ಗಾಗಿ ಸರ್ಚ್ ವಾರಂಟ್ ಜಾರಿ ಮಾಡಬೇಕೇ ಎಂದು ಕಾನೂನು ಜಾರಿ ಸಂಸ್ಥೆ ನಿರ್ಧಾರ ಮಾಡುತ್ತಿರುವಾಗ.
ತೆರೆಯದಿರುವ Snaps ಅನ್ನು ಮರುಪಡೆಯಲು ಬಳಸುವ ಟೂಲ್‌ಗೆ ಸದ್ಯ ಕಂಪನಿಯಲ್ಲಿ ಇಬ್ಬರು ಮಾತ್ರ ಪ್ರವೇಶ ಹೊಂದಿದ್ದಾರೆ, ನಮ್ಮ ಸಹ ಸಂಸ್ಥಾಪಕ ಮತ್ತು CTO ಬಾಬ್ಬಿ (ಇವರೇ ಕೋಡ್ ಮಾಡಿರುವುದು) , ಮತ್ತು ನಾನು.
ಸರಿ, ಹಾಗಿದ್ದರೆ ಕಥೆಗಳನ್ನು ಹೇಗೆ ನಿರ್ವಹಣೆ ಮಾಡುತ್ತೀರಿ?
ಕಥೆಗಳು ಮತ್ತು Snaps ನಡುವಿನ ಅತಿ ದೊಡ್ಡ ವ್ಯತ್ಯಾಸ ಏನೆಂದರೆ ಬಳಕೆದಾರರು ಅಳಿಸದ ಹೊರತು, ಕಥೆಗಳು 24 ಗಂಟೆ ಲಭ್ಯ ಇರುತ್ತವೆ ಮತ್ತು ಆ ಸಮಯದಲ್ಲಿ ಪದೇಪದೇ ನೋಡಬಹುದು. ತೆರೆಯದಿರುವ Snaps ಅನ್ನು ನೋಡುವವರೆಗೆ ಅಥವಾ ಒಂದು ವೇಳೆ ತೆರೆಯದಿದ್ದರೆ 30 ದಿನಗಳ ಕಾಲ ಸಂಗ್ರಹಣೆ ಮಾಡಲಾಗುತ್ತದೆ, ಆದರೆ ನಿಮ್ಮ ಕಥೆಗಳಿಗೆ ಸೇರಿಸಲಾಗಿರುವ Snaps ಅನ್ನು 24 ಗಂಟೆಗಳ ನಂತರ ನಮ್ಮ ಸರ್ವರ್‌ಗಳಿಂದ ತೆಗೆಯಲಾಗುತ್ತದೆ. Snaps ಗೆ ಮೇಲೆ ವಿವರಿಸಿರುವಂತೆ ಕಥೆಗಳು ಕೂಡ ಪ್ರವೇಶ ಮತ್ತು ಬಹಿರಂಗಪಡಿಸುವಿಕೆಗೆ ಅದೇ ರೀತಿಯ ಕಾನೂನು ಅಗತ್ಯಗಳನ್ನು ಹೊಂದಿರುತ್ತವೆ.
ಕಮ್ಯುನಿಟಿ ಮಾರ್ಗಸೂಚಿಗಳು
ನಮ್ಮ ಸೇವೆಯ ನಿಯಮಗಳ ಮತ್ತು ಕಮ್ಯುನಿಟಿ ಮಾರ್ಗಸೂಚಿಗಳು Snapchat ಬಳಸುವುದಕ್ಕೆ ನಿಮಗೆ ನಿಯಮಗಳನ್ನು ತಿಳಿಸುತ್ತವೆ. ಒಂದು ವೇಳೆ ಒಬ್ಬ ಬಳಕೆದಾರ ನಿಯಮಗಳನ್ನು ಮುರಿಯುತ್ತಿದ್ದಾರೆ ಎನ್ನುವ ವರದಿಯನ್ನು ನಾವು ಸ್ವೀಕರಿಸಿದರೆ, ಅವರು ಪೋಸ್ಟ್ ಮಾಡಿರುವ ಕಥೆಯನ್ನು ನಾವು ಪರಿಶೀಲಿಸಬಹುದು ಮತ್ತು ಸೂಕ್ತ ಕ್ರಮ ಕೈಗೊಳ್ಳಬಹುದು. ಇದರಲ್ಲಿ ಕಥೆಯನ್ನು ಅಳಿಸುವುದು, ಖಾತೆಯ ಮೇಲೆ ಎಚ್ಚರಿಕೆ ತೋರಿಸುವುದು, ಅಥವಾ ಖಾತೆಯನ್ನು ರದ್ದು ಮಾಡುವುದೂ ಕೂಡ ಒಳಗೊಂಡಿರಬಹುದು.
ನಮ್ಮ ಅಭ್ಯಾಸಗಳ ಕುರಿತು ನಮ್ಮ ಗೌಪ್ಯತೆ ನೀತಿ ಇನ್ನಷ್ಟು ಮಾಹಿತಿಯನ್ನು ಒಳಗೊಂಡಿದೆ. ನಾವು ಹೇಗೆ ಕಾರ್ಯಾಚರಣೆ ಮಾಡುತ್ತೇವೆ ಎನ್ನುವ ಕುರಿತು ಈ ಪೋಸ್ಟ್ ನಿಮಗೆ ಉತ್ತಮ ತಿಳುವಳಿಕೆ ನೀಡಿದೆ ಎಂದು ಭಾವಿಸುತ್ತೇವೆ. ನಿಮ್ಮ ಸೃಜನಶೀಲತೆ ಮತ್ತು ಹುಮ್ಮಸ್ಸಿನಿಂದ ನಾವು ನಿರಂತರ ಬೆರಗಾಗುತ್ತೇವೆ. ಅಂಥ ಅದ್ಭುತ ಸಮುದಾಯವನ್ನು ನಿರ್ಮಿಸಿದ್ದಕ್ಕೆ ಧನ್ಯವಾದಗಳು.
Back To News