ಜುಲೈ 08, 2012
ಜುಲೈ 08, 2012

100 ಮಿಲಿಯನ್ ಚಿತ್ರಗಳು

Snapchatಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ನಾವು ಬಯಸುತ್ತೇವೆ. ನಮ್ಮ ಸೇವೆ ಮೂಲಕ 110 ಮಿಲಿಯನ್‌ಗಿಂತಲೂ ಹೆಚ್ಚು ಚಿತ್ರಗಳನ್ನು ಕಳುಹಿಸಲಾಗಿದೆ! ವೂಹೂ! ನೀವು ಇಲ್ಲದೆ ನಾವು ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಕಳೆದ ಕೆಲವು ವಾರಗಳಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಇಬ್ಬರು ಅದ್ಭುತ ಮತ್ತು ಅಪಾರ ಪ್ರತಿಭೆಯ ಎಂಜಿನಿಯರ್‌ಗಳು (ಮತ್ತು ಸ್ನೇಹಿತರು) ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಘೋಷಿಸಲು ನಾವು ರೋಮಾಂಚಿತರಾಗಿದ್ದೇವೆ - ಡೇನಿಯಲ್ ಮತ್ತು ಡೇವಿಡ್‌ಗೆ ಸ್ವಾಗತ! ನಾವು ಅದ್ಭುತ ಸಮುದಾಯ ಮ್ಯಾನೇಜರ್ ಡೇನಾರನ್ನೂ ನೇಮಕ ಮಾಡಿಕೊಂಡಿದ್ದೇವೆ, ಇವರು ಈಗಾಗಲೇ ನಮ್ಮ ಭಾರೀ ಇಮೇಲ್ ಬ್ಯಾಕ್‌ಲಾಗ್‌ನಿಂದ ನಾವು ಹೊರಬರಲು ನಮಗೆ ಸಹಾಯ ಮಾಡುತ್ತಿದ್ದಾರೆ. ನೀವು ಇನ್ನೂ ಬೆಂಬಲಕ್ಕಾಗಿ ಕಾಯುತ್ತಿದ್ದರೆ (ಕ್ಷಮಿಸಿ!) ಸಹಾಯವು ನಿಮ್ಮ ಹಾದಿಯಲ್ಲಿದೆ ಎಂದು ನಾವು ಭರವಸೆ ನೀಡುತ್ತೇವೆ.

ನಾವು ಸದ್ಯ ನಮ್ಮ ಅತಿ ವೇಗದ ಮತ್ತು ಮೋಜಿನ ಅಪ್‌ಡೇಟ್ ಅನ್ನು ಪರೀಕ್ಷಿಸುತ್ತಿದ್ದೇವೆ, ಇದು ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪಾಸ್‌ವರ್ಡ್ ರಿಕವರಿ, ದೋಷದ ಸರಿಪಡಿಸುವಿಕೆ, ವೇಗದ ಕ್ಯಾಮರಾ ಮತ್ತು ಡ್ರಾಯಿಂಗ್ ಶೀಘ್ರ ನಿಮ್ಮ ಸಮೀಪದ iOS ಸಾಧನಕ್ಕೆ ಬರಲಿವೆ! ನಮ್ಮ ಕಾರ್ಯದಲ್ಲಿ ನಾವು ಕೆಲವು ಅತಿ ಗೌಪ್ಯತೆಯ ಸಂಗತಿಯನ್ನೂ ಹೊಂದಿದ್ದೇವೆ.

ನಮ್ಮ Android ಅಭಿಮಾನಿಗಳಿಗೆ - ನಿಮ್ಮ ಎಲ್ಲ ಸಾಧನಗಳಿಗೆ ಅದ್ಭುತ Snapchat ಅನುಭವ ನಿರ್ಮಿಸಲು ನಾವು ಕಠಿಣ ಪರಿಶ್ರಮ ಪಡುತ್ತಿದ್ದೇವೆ! ಇದು ಸುಲಭವಲ್ಲ ಆದರೆ ಇದು ಅದ್ಭುತ ಪ್ರಾಡಕ್ಟ್ ಎನ್ನುವುದನ್ನು ಖಚಿತಪಡಿಸಲು ನಾವು ಬಯಸುತ್ತೇವೆ. ನೀವು ಬಿಡುಗಡೆಗೆ ಮುಂಚಿನ ಆವೃತ್ತಿ ಪರೀಕ್ಷಿಸಲು ಆಸಕ್ತರಾಗಿದ್ದರೆ, ನಮಗೊಂದು ಮೇಲ್ ಕಳುಹಿಸಿ.

ಕೊನೆಯದಾಗಿ ಆದರೆ ಮುಖ್ಯವಾಗಿ - Snapchat ಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ನಿಮ್ಮೆಲ್ಲರಿಗೂ ನಾವು ಧನ್ಯವಾದ ಸಲ್ಲಿಸಲು ಬಯಸುತ್ತೇವೆ. ನಮ್ಮ ಸೇವೆಯ ಮೂಲಕ 110 ಮಿಲಿಯನ್‌ಗೂ ಹೆಚ್ಚು ಚಿತ್ರಗಳನ್ನು ಕಳುಹಿಸಲಾಗಿದೆ! ವೂಹೂ! ನೀವಿಲ್ಲದೆ ಇದನ್ನು ಮಾಡಲು ನಮಗೆ ಸಾಧ್ಯವಾಗುತ್ತಿರಲಿಲ್ಲ.

ಸುದ್ದಿಗೆ ಮರಳಿ