ಡಿಸೆಂಬರ್ 09, 2024
ಡಿಸೆಂಬರ್ 09, 2024

Snap ನಲ್ಲಿ 2024

ಪ್ರತಿ ದಿನ, 850 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರ ನಮ್ಮ ಸಮುದಾಯವು 1 ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು ಮತ್ತು ತಮ್ಮ ನಿಕಟ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕಗೊಳ್ಳಲು Snapchat ಗೆ ಬರುತ್ತಾರೆ. ಇನ್ನೊಂದು ಫಲಪ್ರದ ವರ್ಷಕ್ಕೆ ನಾವು ವಿದಾಯ ಹೇಳುತ್ತಿರುವ ಸಂದರ್ಭ, "Snap ನಲ್ಲಿ 2024" ಮೂಲಕ ಈ ವರ್ಷ Snapchatter ಗಳು ಏನೇನು ಮಾಡಿದರು ಎನ್ನುವ ಕುರಿತು ತಿಳಿಸಲು ನಾವು ಒಂದು ಕ್ಷಣ ತೆಗೆದುಕೊಳ್ಳುತ್ತಿದ್ದೇವೆ.

"Snap ನಲ್ಲಿ 2024" ಈ ವರ್ಷ ಆ್ಯಪ್‌ನಲ್ಲಿ Snapchatter ಗಳು ಹೇಗೆ ತೊಡಗಿಸಿಕೊಂಡರು, ರಚಿಸಿದರು ಮತ್ತು ಅನ್ವೇಷಿಸಿದರು ಎನ್ನುವುದನ್ನು ಅವಲೋಕನ ಮಾಡುತ್ತದೆ. ಬದುಕಿನ ಪ್ರತಿದಿನದ ಘಟನೆಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಜಾಗತಿಕ ಟ್ರೆಂಡ್‌ಗಳನ್ನು ರೂಪಿಸುವುದರವರೆಗೆ, ಈ ಒಳನೋಟಗಳು ಸಾಂಸ್ಕೃತಿಕ ಕ್ಷಣಗಳ ಪಕ್ಷಿನೋಟವನ್ನು ಮತ್ತು ನಮ್ಮ ಸಮುದಾಯದ ಅಭಿಪ್ರಾಯವನ್ನು ಅನುರಣಿಸಿದ ಉತ್ಸಾಹದ ಬಿಂದುಗಳನ್ನು ಒದಗಿಸುತ್ತವೆ.


ಕ್ರೀಡಾಭಿಮಾನವನ್ನು ಪ್ರೇರೇಪಿಸುವುದು

ಜಾಗತಿಕವಾಗಿ ಸರಾಸರಿ ಸ್ಪಾಟ್‌ಲೈಟ್‌ನೊಳಗೆ ಕ್ರೀಡಾ ಕಂಟೆಂಟ್‌ನ ಮೇಲೆ 25 ಮಿಲಿಯನ್‌ಗೂ ಅಧಿಕ ನಿಮಿಷಗಳನ್ನು ಕಳೆಯುವುದರೊಂದಿಗೆ, ಕ್ರೀಡೆಯು ಅಭಿಮಾನಿಗಳ ಅನುಭವವನ್ನು ಪರಿವರ್ತಿಸುವುದನ್ನು ಮತ್ತು Snapchatter ಗಳನ್ನು ಒಗ್ಗೂಡಿಸುವುದನ್ನು ಮುಂದುವರಿಸಿದೆ. 2 ಅಭಿಮಾನಿಗಳು ಲೈವ್ ಕ್ಷಣಗಳನ್ನು ಸಂಭ್ರಮಿಸಲು, ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ಅಥವಾ ಸರಳವಾಗಿ ಅವರು ಮೆಚ್ಚುವ ಕ್ರೀಡಾಪಟುಗಳನ್ನು ಬೆಂಬಲಿಸಲು ಪ್ಲ್ಯಾಟ್‌ಫಾರ್ಮ್ ಅನ್ನು ಬಳಸುತ್ತಿರುವಾಗ, ನಮ್ಮ ಸಮುದಾಯವು ಪರಸ್ಪರ ಹಾಗೂ ತಮ್ಮ ಮೆಚ್ಚಿನ ಪಂದ್ಯಗಳು, ತಂಡಗಳು, ಕ್ರೀಡಾ ಅಂಕಿಅಂಶಗಳು ಮತ್ತು ಕಂಟೆಂಟ್ ಸೃಷ್ಟಿಕರ್ತರ ಜೊತೆಗೆ ಸಂಪರ್ಕಗೊಳ್ಳಲು ಈ ಅವಕಾಶವನ್ನು ಬಳಸಿಕೊಂಡರು.

  • ಸಾಮಾಜಿಕ ತಾಣದಲ್ಲಿ ತಮ್ಮ ಮೆಚ್ಚಿನ ತಂಡ ಅಥವಾ ಕ್ರೀಡಾಪಟುಗಳನ್ನು ಫಾಲೋ ಮಾಡುತ್ತಿರುವುದರಿಂದ ಅವರಿಗೆ ತಾವು ನಿಕಟರಾಗಿರುವ ಭಾವನೆಯನ್ನು ಹೊಂದಿರುವುದಾಗಿ US ನ 93% Snapchatter ಗಳು ಹೇಳಿದ್ದಾರೆ 3

  • ಈ ವರ್ಷ "ಜೆರ್ಸಿ ಪ್ರಯತ್ನಿಸಿ ನೋಡಿ" ಲೆನ್ಸ್‌ಗಳಲ್ಲಿ NBA ಅತ್ಯಂತ ಹೆಚ್ಚು ಬಳಸಲ್ಪಟ್ಟಿದ್ದು, ಈ ಲೆನ್ಸ್ ಬಳಸಿಕೊಂಡು 800K+ Snap ಗಳನ್ನು ರಚಿಸಲಾಗಿದೆ 4

Sh(AR)ing is c(AR)ing

Snapchat ಕಮರ್ಷಿಯಲ್‌ಗಳು, Snap ಜಾಹೀರಾತುಗಳು ಮತ್ತು AR ಲೆನ್ಸ್‌ಗಳು ಜಾಗತಿಕವಾಗಿ ಇತರ ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳ ಹೋಲಿಕೆಯಲ್ಲಿ 5 ಪಟ್ಟಿಗೂ ಅಧಿಕ ಸಕ್ರಿಯ ಗಮನವನ್ನು ತಲುಪಿಸುವುದಕ್ಕೆ ಕಾರಣವಿದೆ. 5 ಟ್ರೈ-ಆನ್ ಲೆನ್ಸ್‌ಗಳಿಂದ ಹಿಡಿದು ತಲ್ಲೀನಗೊಳಿಸುವ ಬ್ರ್ಯಾಂಡ್ ಕಥೆ ಹೇಳುವುದರವರೆಗೆ, AR Snapchatter ಗಳನ್ನು ಮುನ್ನೆಲೆಯಲ್ಲಿ ನಿಲ್ಲಿಸುತ್ತದೆ ಮತ್ತು ಪ್ರತಿದಿನದ ಕ್ಷಣಗಳು ಮತ್ತು ಆವಿಷ್ಕಾರದ ನಡುವಿನ ಅಂತರವನ್ನು ನಿವಾರಿಸುತ್ತದೆ. 2024 ರಲ್ಲಿ, ತಮ್ಮ ಮೆಚ್ಚಿನ ಸಿನಿಮಾಗಳು ಮತ್ತು ಆಹಾರವನ್ನು ಪ್ರದರ್ಶಿಸುವ ಲೆನ್ಸ್‌ಗಳ ವಿಷಯದಲ್ಲಿ Snapchatter ಗಳಿಗೆ ಇದು ನಿರ್ದಿಷ್ಟವಾಗಿ ರೋಮಾಂಚನಕಾರಿಯಾಗಿತ್ತು.

  • US ನಲ್ಲಿ 2024 ರಲ್ಲಿ ಅತಿ ಹೆಚ್ಚು ಆಯ್ಕೆ ಮಾಡಲಾದ ಪ್ರಾಯೋಜಿತವಲ್ಲದ ಲೆನ್ಸ್‌ಗಳಲ್ಲಿ ಇವು ಸೇರಿವೆ: ಪಿಂಕ್ ಡಾಗ್, ಸಾಫ್ಟ್ ಫಿಲ್ಟರ್, ಸ್ಕ್ರಿಬಲ್ ವರ್ಡ್ 2

  • 2024 ರಲ್ಲಿ US ನಲ್ಲಿ ಅತ್ಯಂತ ಹೆಚ್ಚು ಹಂಚಿಕೊಳ್ಳಬಹುದಾದ ಪ್ರಾಯೋಜಿತ ಲೆನ್ಸ್‌ಗಳಲ್ಲಿ ವೆನಮ್ ಮತ್ತು ಬೊಜಾಂಗಲ್ಸ್ / ಟ್ರೈ-ಆರ್ಕ್ ಫುಡ್ ಸಿಸ್ಟಮ್ಸ್, ಇಂಕ್. ಸೇರಿವೆ. 2

  • ಜಾಗತಿಕವಾಗಿ ಅತ್ಯಂತ ಹೆಚ್ಚು ಹಂಚಿಕೊಳ್ಳಬಹುದಾದ Bitmoji ಲೆನ್ಸ್‌ಗಳಲ್ಲಿ ಇವು ಸೇರಿವೆ: ಆ್ಯಪಲ್‌ಬೀಸ್ ಮತ್ತು ಪೆಪ್ಸಿ 2

ಹೊಸ ನೋಟ, ಯಾರಿದು?

Snapchat ನಲ್ಲಿ ಸೌಂದರ್ಯವು ಪ್ರವರ್ಧಮಾನವಾಗುತ್ತಿದ್ದು, ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹೊಸ ನೋಟಗಳನ್ನು ಮತ್ತು ದಿನಚರಿಗಳನ್ನು ಹಂಚಿಕೊಳ್ಳುವುದನ್ನು AR ಟ್ರೈ-ಆನ್ ಇನ್ನಷ್ಟು ವಿನೋದಮಯವಾಗಿಸಿದೆ. ಹೊಸ ತುಟಿಯ ಬಣ್ಣದ ಕುರಿತು ಗುಂಪು ಚಾಟ್‌ನಲ್ಲಿ ಅವರು ಮತದಾನ ಮಾಡುತ್ತಿರಬಹುದು ಅಥವಾ ಇತ್ತೀಚಿನ ಐಲೈನರ್ ಟ್ರೆಂಡ್ ಅನ್ನು ಪರೀಕ್ಷಿಸುತ್ತಿರಬಹುದು, US ನಲ್ಲಿ ಸಾಧಾರಣ AR ಲೆನ್ಸ್‌ಗಳ ಹೋಲಿಕೆಯಲ್ಲಿ ಸೌಂದರ್ಯ ಲೆನ್ಸ್‌ಗಳು ಅಧಿಕ ತೊಡಗಿಸಿಕೊಳ್ಳುವಿಕೆಗೆ ಕಾರಣವಾಗಿವೆ. 6

  • 2024 ರಲ್ಲಿ, ಸುಮಾರು 113 ಮಿಲಿಯನ್ Snapchatter ಗಳು ಜಾಗತಿಕವಾಗಿ ಕನಿಷ್ಠ ಒಂದು ಬಾರಿ ಪ್ರಾಯೋಜಿತ ಸೌಂದರ್ಯ ಲೆನ್ಸ್ ಅನ್ನು ಅನುಭವಿಸಿದ್ದಾರೆ 2

  • US ನಲ್ಲಿ 2024 ರಲ್ಲಿ ಅತಿ ಹೆಚ್ಚು ಹಂಚಿಕೊಳ್ಳಬಹುದಾದ ಕೆಲವು ಸೌಂದರ್ಯ ಲೆನ್ಸ್‌ಗಳಲ್ಲಿ ಇವು ಸೇರಿವೆ: ಅಲ್ಟಾ ಬ್ಯೂಟಿ ಮತ್ತು göt2b ಮೆಟಾಲಿಕ್ 2

  • 2024 ಒಂದರಲ್ಲೇ, ಜಾಗತಿಕವಾಗಿ ಸ್ಪಾಟ್‌ಲೈಟ್‌ನಲ್ಲಿ 262 ಮಿಲಿಯನ್‌ ಗಂಟೆಗಳಿಗೂ ಅಧಿಕ ಸೌಂದರ್ಯ ಕಂಟೆಂಟ್ ಅನ್ನು Snapchatter ಗಳು ವೀಕ್ಷಿಸಿದ್ದಾರೆ 2

  • ಲೆನ್ಸ್‌ಗಳ ಸ್ಯಾಂಪಲ್‌ಗಳನ್ನು ಆಧರಿಸಿ, US ನಲ್ಲಿ, ಲಿಪ್‌ಸ್ಟಿಕ್ ಟ್ರೈ-ಆನ್‌ಗಳು 16% ಅಧಿಕ ಪ್ಲೇಟೈಮ್‌ಗೆ ಕಾರಣವಾಗಿವೆ ಮತ್ತು ಐಲೈನರ್ ಟ್ರೈ-ಆನ್‌ಗಳು 14% ಅಧಿಕ ಪ್ಲೇಟೈಮ್‌ಗೆ ಕಾರಣವಾಗಿವೆ 7

ಫ್ಯಾಷನ್ ಅನ್ನು ಮುನ್ನಡೆಸುವುದು

ಫ್ಯಾಷನ್ ಎಂಬುದು ಸ್ವಯಂ-ಅಭಿವ್ಯಕ್ತಿಯ ಕುರಿತಾಗಿದೆ ಮತ್ತು AR ಟ್ರೈ-ಆನ್ ಲೆನ್ಸ್‌ಗಳು, Bitmoji Fashion ಮತ್ತು ಇನ್ನಷ್ಟರೊಂದಿಗೆ ತಮ್ಮ ಶೈಲಿಯನ್ನು ಅನ್ವೇಷಿಸಲು Snapchat ನಮ್ಮ ಸಮುದಾಯಕ್ಕೆ ಅದನ್ನು ಇನ್ನೂ ಸುಲಭವಾಗಿಸುತ್ತದೆ. ಈ ವರ್ಷ, ಟ್ರೆಂಡಿಂಗ್ ಬ್ಯಾಗಿ ಲುಕ್ ಜೊತೆಗೆ ತಮ್ಮ Bitmoji ಗೆ ಹೊಸ ರೂಪ ನೀಡುವುದನ್ನು Snapchatter ಗಳು ಇಷ್ಟಪಟ್ಟರು ಮತ್ತು ಮಳಿಗೆಗೆ ಹೋಗುವ ಅಗತ್ಯವಿಲ್ಲದೆ ಐಷಾರಾಮಿ ಪರಿಕರಗಳನ್ನು ಪ್ರಯತ್ನಿಸಿ ನೋಡಿ ವಿನೋದಿಸಿದರು, ಈ ಮೂಲಕ ಐಷಾರಾಮಿ ಹಿಂದೆಂದಿಗಿಂತಲೂ ಹೆಚ್ಚು ಕೈಗೆಟುಕುವಂಥದ್ದಾಗಿದೆ.

  • 2024 ರ ಅಗ್ರ ಖರೀದಿಸಬಹುದಾದ Bitmoji Fashion ಉಡುಪುಗಳು: ಬ್ಯಾಗಿ ಸ್ವೇಟ್‌ಪ್ಯಾಂಟ್ಸ್, ಬ್ಯಾಗಿ ಸ್ಕೇಟರ್ ಜಾರ್ಟ್ಸ್, ಬ್ಯಾಗಿ ಕಾಮೊ ಕಾರ್ಗೊ ಪ್ಯಾಂಟ್ಸ್, ಪ್ಲಶ್ ಪಂಪ್‌ಕಿನ್ ಸ್ಲಿಪರ್‌ಗಳು, ಪ್ಲಶ್ ಕ್ಯಾಟ್ ಸ್ಲಿಪ್ಪರ್‌ಗಳು 8

  • ಉತ್ಪನ್ನ ಕೆಟಗರಿ ಪ್ರಕಾರ ಜಾಗತಿಕವಾಗಿ ರಿಟೇಲ್ ಐಷಾರಾಮಿಯಲ್ಲಿ ಅತಿ ಹೆಚ್ಚು ಹಂಚಿಕೊಳ್ಳಬಹುದಾದ ಕೆಲವು ಪ್ರಾಯೋಜಿತ ಲೆನ್ಸ್‌ಗಳಲ್ಲಿ ಇವು ಸೇರಿವೆ: ಡಿಯೊರ್ ಮತ್ತು ಸ್ಟೋನ್ ಐಲ್ಯಾಂಟ್, ಚೊಪಾರ್ಡ್ - ಜ್ಯುವೆಲರಿ, ಕಾರ್ಟಿಯರ್ - ವಾಚ್ 2

  • ಜಾಹೀರಾತುದಾರರು ಪ್ರಾಯೋಜಿತ ಲೆನ್ಸ್‌ಗಳಾಗಿ ಮಾಡಿದ ಅತ್ಯಂತ ಜನಪ್ರಿಯ ಉಡುಪು ಮತ್ತು ಪರಿಕರ ಉತ್ಪನ್ನ ಕೆಟಗರಿಗಳು: ಕನ್ನಡಕ, ಉಡುಪು, ಟೋಪಿಗಳು, ಪಾದರಕ್ಷೆ, ಆಭರಣ ಮತ್ತು ಕೈಗಡಿಯಾರಗಳು 2

ಸಂಗೀತದ ಮೂಲಕ ಸಂಪರ್ಕ

Snapchat ನಲ್ಲಿ ಸಂಗೀತ ಕೇವಲ ಮನರಂಜನೆಗಾಗಿ ಇಲ್ಲ - ಅದು ಕುಟುಂಬಗಳು, ಸ್ನೇಹಿತರು ಮತ್ತು ಅಭಿಮಾನಿಗಳ ನಡುವೆ ಬಾಂಧವ್ಯ ಬೆಸೆಯುತ್ತದೆ. ಅತಿ ಹೆಚ್ಚು ಹಂಚಿಕೊಂಡ ಸಂಗೀತ ಲೆನ್ಸ್‌ಗಳ ಪೈಕಿ ಒಂದು ಎನ್ನಿಸಿಕೊಂಡು ಚಾರ್ಟ್‌ಗಳಲ್ಲಿ ಅಗ್ರಸ್ಥಾನ ಪಡೆದ ಚಾರ್ಲಿ XCX ಅವರ 360 ಲೆನ್ಸ್ ಜೊತೆಗೆ Snapchatter ಗಳು ತಮ್ಮ ಅತ್ಯುತ್ತಮ "ತುಂಟ" ನೋಟವನ್ನು ಪ್ರದರ್ಶಿಸಿದರು ಮತ್ತು US ನಲ್ಲಿ ಕ್ಯೂರ್ ಅವರ "ಫ್ರೈಡೇ, ಐ ಆ್ಯಮ್ ಇನ್ ಲವ್" ಮತ್ತು ಟಾಮಿ ರಿಚ್‌ಮ್ಯಾನ್ ಅವರ "ಮಿಲಿಯನ್ ಡಾಲರ್ ಬೇಬಿ" ಯಂತಹ ಇತ್ತೀಚಿನ ಹಿಟ್‌ಗಳು Snap ಗಳನ್ನು ರಚಿಸಲು ಬಳಸಲಾದ ಅಗ್ರ ಟ್ರ್ಯಾಕ್‌ಗಳಲ್ಲಿ ಇದ್ದವು. 

  • US ನಲ್ಲಿ 79% Snapchatter ಗಳು ತಮ್ಮ ಸಂಗೀತದ ಬಗ್ಗೆ ತೀವ್ರಾಸಕ್ತರಾಗಿದ್ದಾರೆ 3

  • ಒಬ್ಬ ಕಲಾವಿದರನ್ನು ಹೊಂದಿದ್ದ US ನಲ್ಲಿ ಅತಿ ಹೆಚ್ಚು ಹಂಚಿಕೊಳ್ಳಬಹುದಾದ ಲೆನ್ಸ್‌ಗಳ ಪೈಕಿ ಒಂದು: ಚಾರ್ಲಿ XCX 2

  • US ನಲ್ಲಿ ಕಂಟೆಂಟ್ ರಚನೆಗಾಗಿ ಬಳಸಲಾದ ಕೆಲವು ಅಗ್ರ ಹಾಡುಗಳು: ಕ್ಯೂರ್ ಅವರ "ಫ್ರೈಡೇ ಐ ಆ್ಯಮ್ ಇನ್ ಲವ್", ಆರ್ಟ್‌ಮಾಸ್ ಅವರ "ಐ ಲೈಕ್ ದ ವೇ ಯು ಕಿಸ್ ಮಿ", ಟಾಮಿ ರಿಚ್‌ಮ್ಯಾನ್ ಅವರ "ಮಿಲಿಯನ್ ಡಾಲರ್ ಬೇಬಿ", ದ ವೀಕೆಂಟ್ ಮತ್ತು ಮಡೋನ್ನಾ ಅವರ "ಪಾಪ್ಯುಲರ್"

ಜಗತ್ತಿನಾದ್ಯಂತ Snap ಮಾಡಿ

ಸ್ಪಾಟ್‌ಲೈಟ್‌ನಲ್ಲಿ ತಮ್ಮ ಕನಸಿನ ತಾಣದ ಇಣುಕುನೋಟವನ್ನು ಪಡೆಯುವುದರಿಂದ ನೈಜ ಸಮಯದಲ್ಲಿ ತಮ್ಮ ಪ್ರಯಾಣದ Snap ಗಳನ್ನು ತೆಗೆದುಕೊಳ್ಳುವವರೆಗೆ, Snapchat ನಲ್ಲಿ ಜಾಗತಿಕ ಅನ್ವೇಷಣೆಯು ನಡೆಯುತ್ತದೆ. 2024 ಒಂದರಲ್ಲೇ, ಜಾಗತಿಕವಾಗಿ Snapchatter ಗಳು ಸ್ಪಾಟ್‌ಲೈಟ್‌ನಲ್ಲಿ 73 ಮಿಲಿಯನ್ ಗಂಟೆಗಳಿಗೂ ಅಧಿಕ ಪ್ರಯಾಣದ ಕಂಟೆಂಟ್ ಅನ್ನು ವೀಕ್ಷಿಸಿದರು ಮತ್ತು ಅಮೆರಿಕದೊಳಗೆ ಪ್ರಯಾಣಿಸಿದ ಪ್ರಯಾಣಿಕರು ವಿಸಿಟ್‌ಸ್ಕಾಟ್‌ಲ್ಯಾಂಡ್ ಮತ್ತು ಲಾಸ್ ವೆಗಾಸ್‌ನಂತರ ಬ್ರ್ಯಾಂಡ್‌ಗಳಿಂದ ಪ್ರಾಯೋಜಿತ AR ಲೆನ್ಸ್‌ಗಳನ್ನು ಹಂಚಿಕೊಂಡು, ಸ್ನೇಹಿತರು ಮತ್ತು ಕುಟುಂಬದವರಿಗೆ ಡಿಜಿಟಲ್ ಪ್ರಯಾಣದ ಸ್ಫೂರ್ತಿಯಾದರು! 2

  • US ನಲ್ಲಿನ ಜನಪ್ರಿಯ ಉದ್ಯಾನಗಳು ಇವುಗಳ ಭಾಗವಾಗಿವೆ: ಕ್ಯಾಲಿಫೋರ್ನಿಯಾ ಸ್ಟೇಟ್ ಪಾರ್ಕ್ಸ್, NYC ಪಾರ್ಕ್ಸ್, ಚಿಕಾಗೊ ಪಾರ್ಕ್ಸ್ 2

  • US ನಲ್ಲಿನ ಜನಪ್ರಿಯ ಥೀಮ್ ಪಾರ್ಕ್‌ಗಳಲ್ಲಿ ಇವು ಸೇರಿವೆ: ಸಿಕ್ಸ್ ಫ್ಲ್ಯಾಗ್ಸ್ ಮತ್ತು ಸೆಡಾರ್ ಫೇರ್ ಅಮ್ಯೂಸ್‌ಮೆಂಟ್ ಪಾರ್ಕ್ಸ್ 2

  • US ನಲ್ಲಿನ ಜನಪ್ರಿಯ ಹೋಟೆಲ್‌ಗಳಲ್ಲಿ ಇವು ಸೇರಿವೆ: ಹಿಲ್ಟನ್, ಹಾಲಿಡೇ ಇನ್ ಎಕ್ಸ್‌ಪ್ರೆಸ್, ಹ್ಯಾಂಪ್ಟನ್ ಬೈ ಹಿಲ್ಟನ್, ಮ್ಯಾರಿಯಟ್ ಹೋಟೆಲ್ಸ್ 2

ಮೂವೀ ಮೇನಿಯಾ

ತಮ್ಮ ಸುತ್ತಲಿನ ಇತ್ತೀಚಿನ ಬ್ಲಾಕ್‌ಬಸ್ಟರ್‌ಗಳು ಮತ್ತು ಟ್ರೆಂಡ್‌ಗಳ ಕುರಿತು ತಾಜಾ ಮಾಹಿತಿ ತಿಳಿದಿರುವುದನ್ನು ನಮ್ಮ ಸಮುದಾಯವು ಇಷ್ಟಪಡುತ್ತದೆ - ವಾಸ್ತವದಲ್ಲಿ, US ನಲ್ಲಿನ 88% Snapchatter ಗಳು ತೀವ್ರ ಸಿನಿಮಾಸಕ್ತರಾಗಿದ್ದಾರೆ. 9 ಮನರಂಜನೆ ಕಂಪನಿಗಳಿಂದ ಪ್ರತಿಕ್ರಿಯಾಶೀಲ AR ಲೆನ್ಸ್‌ಗಳು ಹಾಗೂ ಟ್ರೇಲರ್‌ಗಳು ಮತ್ತು ತೆರೆಮರೆಯ ದೃಶ್ಯಗಳೊಂದಿಗೆ 2024 ರಲ್ಲಿ ಹೊಸ ಸಿನಿಮಾ ಬಿಡುಗಡೆಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳ ಸುತ್ತ ಉತ್ಸಾಹವನ್ನು ಹೆಚ್ಚಿಸಲು ಕೂಡ ನಾವು ಸಹಾಯ ಮಾಡಿದ್ದು, ಥಿಯೇಟರ್‌ನತ್ತ ಸಾಗಲು ಪ್ರೇರೇಪಿಸುವುದಕ್ಕೆ ನೆರವಾದೆವು. 

  • 2024 ರಲ್ಲಿ US ನಲ್ಲಿ ಅತಿ ಹೆಚ್ಚು ಹಂಚಿಕೊಳ್ಳಬಹುದಾದ ಕೆಲವು ಮನರಂಜನೆಯ ಲೆನ್ಸ್‌ಗಳಲ್ಲಿ ಇವು ಸೇರಿವೆ: ವೆನಮ್: ದಿ ಲಾಸ್ಟ್ ಡ್ಯಾನ್ಸ್ ಮತ್ತು ನಿಕೆಲೊಡಿಯೊನ್ ಅವರ ಕಿಡ್ಸ್ ಚಾಯ್ಸ್ ಅವಾರ್ಡ್ಸ್ 2

ಸ್ನ್ಯಾಕ್ ಮಾಡಬಹುದಾದ Snap ಗಳು

Snap ಮ್ಯಾಪ್‌ನಲ್ಲಿ ಹೊಸ ರೆಸ್ಟೊರಂಟ್‌ಗಳನ್ನು ಹುಡುಕುವುದರಿಂದ ಹಿಡಿದು ಆ್ಯಪಲ್‌ಬೀಸ್ ಮತ್ತು ಬೊಜಾಂಗಲ್ಸ್‌ನಂತಹ ಬ್ರ್ಯಾಂಡ್‌ಗಳಿಂದ ವಿನೋದಮಯ ಮತ್ತು ಸ್ನ್ಯಾಕ್ ಮಾಡಬಹುದಾದ ಪ್ರಾಯೋಜಿತ AR ಲೆನ್ಸ್‌ಗಳನ್ನು ಹಂಚಿಕೊಳ್ಳುವವರೆಗೆ, Snapchatter ಗಳು ಅತ್ಯಂತ ಆಹಾರಪ್ರಿಯರಾಗಿದ್ದಾರೆ. US ನಲ್ಲಿ 2024 ರಲ್ಲಿ ಆ್ಯಪ್‌ನಲ್ಲಿ Snapchatter ಗಳು ರೆಸ್ಟೊರಂಟ್‌ಗಳಿಗೆ 896 ಮಿಲಿಯನ್‌ಗೂ ಅಧಿಕ ಭೇಟಿಗಳು ಮತ್ತು 75 ಮಿಲಿಯನ್‌ಗೂ ಅಧಿಕ ಚೆಕ್-ಇನ್‌ಗಳನ್ನು ಮಾಡಿದ್ದಾರೆ!

  • 2024 ರಲ್ಲಿ US ನಲ್ಲಿನ ಜನಪ್ರಿಯ ರೆಸ್ಟೊರಂಟ್‌ಗಳಲ್ಲಿ ಇವು ಸೇರಿವೆ: ಟ್ಯಾಕೊ ಬೆಲ್, ಚಿಕ್-ಫಿಲ್-ಎ, ಸೋನಿಕ್, ವೆಂಡಿಸ್ 10

  • US ನಲ್ಲಿ ರೆಸ್ಟೊರಂಟ್‌ಗಳಿಗಾಗಿ ಅತಿ ಹೆಚ್ಚು ಹಂಚಿಕೊಳ್ಳಬಹುದಾದ ಪ್ರಾಯೋಜಿತ ಲೆನ್ಸ್‌ಗಳಲ್ಲಿ ಇವು ಸೇರಿವೆ: ಆ್ಯಪಲ್‌ಬೀಸ್ ಮತ್ತು ಬೊಜಾಂಗಲ್ಸ್ 2

Snapchat ಜೊತೆಗೆ ಬೆಳೆಯುವುದು

ಈ ವರ್ಷ ನಮಗೆ 13 ವರ್ಷವಾಯಿತು ಮತ್ತು ಈ ಸಮಯದಲ್ಲಿ, ನಾವು ಬಹುಪೀಳಿಗೆಯ ತೊಡಗಿಸಿಕೊಳ್ಳುವಿಕೆಗಾಗಿ ವೇದಿಕೆಯಾಗಿ ವಿಕಸನಗೊಂಡಿದ್ದೇವೆ. US ನಲ್ಲಿನ 50% ಗೂ ಅಧಿಕ Snapchatter ಗಳು 25 ವರ್ಷ ಮತ್ತು ಹೆಚ್ಚಿನ ವಯಸ್ಸಿನವರಾಗಿದ್ದಾರೆ, 11 ಮತ್ತು ನವಪೀಳಿಗೆಯವರು ಮತ್ತು ಮಿಲೇನಿಯಲ್ಸ್ ನಮ್ಮೊಂದಿಗೆ ದೊಡ್ಡವರಾಗುತ್ತಿದ್ದು, ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಬಂಧಗಳನ್ನು ವರ್ಧಿಸಿಕೊಳ್ಳಲು ಮತ್ತು ಟ್ರೆಂಡ್‌ಗಳನ್ನು ಅನ್ವೇಷಿಸಲು ನಮ್ಮ ಸೇವೆಯ ಬಳಕೆಯನ್ನು ಮುಂದುವರಿಸಿದ್ದಾರೆ. ನಮ್ಮ ಸಮುದಾಯದ ಎಲ್ಲ ಮೈಲುಗಲ್ಲುಗಳಾದ್ಯಂತ ಅವರ ಬದುಕಿನ ಭಾಗವಾಗಲು ನಾವು ರೋಮಾಂಚಿತರಾಗಿದ್ದೇವೆ!

  • ಒಂದು ಪೂರ್ಣ ವರ್ಷ ಒಬ್ಬ Snapchatter ನಮ್ಮ ಜೊತೆಗೆ ಉಳಿದುಕೊಂಡಾಗ, ಮುಂದಿನ 5 ವರ್ಷಗಳ ಕಾಲ ಅವರ ವಾರ್ಷಿಕ ಉಳಿಕೆ ದರವು ಸರಾಸರಿ 90% ಆಗಿರುತ್ತದೆ 12

  • ನೀವು ನವಪೀಳಿಗೆಯವರಾಗಿರಬಹುದು ಅಥವಾ ಮಿಲೇನಿಯಲ್ ಆಗಿರಬಹುದು, ಕನಿಷ್ಠ 95% ದೈನಂದಿನ Snapchatter ಗಳು Snapchat ನಲ್ಲಿ ಒಂದು ಸೆಷನ್‌ನಲ್ಲಿ ಬಹು ಟ್ಯಾಬ್‌ಗಳನ್ನು ಬಳಸುತ್ತಾರೆ 13

  • 2024 ರಲ್ಲಿ, ಜಾಗತಿಕವಾಗಿ 578 ಮಿಲಿಯನ್‌ಗೂ ಅಧಿಕ Snapchatter ಗಳು 118 ಮಿಲಿಯನ್‌ ಗಂಟೆಗಳಿಗೂ ಅಧಿಕ ಪೋಷಕರ ಕಂಟೆಂಟ್ ಅನ್ನು ವೀಕ್ಷಿಸಿದರು. 2

ಇದು ನಮಗೆ ಮತ್ತು ಜಗತ್ತಿನಾದ್ಯಂತದ Snapchatter ಗಳಿಗೆ ಮಹತ್ವದ ವರ್ಷವಾಗಿತ್ತು. ಮಂಗಳವಾರ, ಡಿಸೆಂಬರ್ 17 ರಂದು ನಿಮ್ಮ ಮೆಚ್ಚಿನ ನೆನಪುಗಳನ್ನು ಒಳಗೊಂಡ ನಿಮ್ಮ ವೈಯಕ್ತಿಕಗೊಳಿಸಿದ ವರ್ಷಾಂತ್ಯದ ಪುನರಾವಲೋಕನವನ್ನು ನಿರೀಕ್ಷಿಸಿ.

ಹ್ಯಾಪಿ ಸ್ನ್ಯಾಪಿಂಗ್, 2025 ರಲ್ಲಿ ಮತ್ತೆ ಸಿಗೋಣ!

ಸುದ್ದಿಗೆ ಮರಳಿ

1

Snap Inc. Q2 2024 ಗಳಿಕೆಗಳು

2

Snap Inc. ಆಂತರಿಕ ಡೇಟಾ, 1ನೇ ಜನ - 13ನೇ ನವೆಂ 2024

3

Snap Inc. ಆಯೋಜಿಸಿದ್ದ ಪ್ಯಾಶನ್ ಪಾಯಿಂಟ್ಸ್ 2024 NRG ಅಧ್ಯಯನ.

4

Snap Inc. ಆಂತರಿಕ ಡೇಟಾ ಜನ 1 - ನವೆಂ 13, 2024, 10% ಸ್ಯಾಂಪ್ಲಿಂಗ್ ಆಧರಿಸಿ ರಚಿಸಿದ ಒಟ್ಟು Snap ಗಳನ್ನು ನಿರ್ಧರಿಸಲಾಗಿದೆ

5

Snap inc ಮತ್ತು OMG ಆಯೋಜಿಸಿದ್ದ, Amplified Intelligence ನಿಂದ ನಡೆಸಲಾದ AR ಮತ್ತು ಗಮನ 2023 ಅಧ್ಯಯನ

6

Snap Inc ಆಂತರಿಕ ಡೇಟಾ 1 ಜೂನ್ 2023, 1 ಆಗಸ್ಟ್ 2024

7

ಸೆಪ್ಟೆಂಬರ್ 13, 2024 ರ ಪ್ರಕಾರ Snap Inc ಆಂತರಿಕ ಡೇಟಾ

8

Snap Inc. ಆಂತರಿಕ ಡೇಟಾ ಜನವರಿ 1, 2024 - ನವೆಂಬರ್ 17, 2024

9

NRG ಫ್ಯೂಚರ್ ಆಫ್ ಫಿಲ್ಮ್ ಆಗಸ್ಟ್ 2024 ಸಂಶೋಧನೆ

10

Snap Inc. ಆಂತರಿಕ ಡೇಟಾ, 1ನೇ ಜನ - 31ನೇ ಅಕ್ಟೋ 2024

11

Snap Inc. ಆಂತರಿಕ ಡೇಟಾ ಮಾರ್ಚ್ 14, 2024

12

Snap Inc. ಆಂತರಿಕ ಡೇಟಾ Q4 2016 - Q4 2022

13

Snap Inc ಆಯೋಜಿಸಿದ್ದ ಆಲ್ಟರ್ ಏಜೆಂಟ್ಸ್ ಅವರು ನಡೆಸಿದ ನಾವು ಹೇಗೆ Snap ಮಾಡುತ್ತೇವೆ 2024 ಸಂಶೋಧನೆ

1

Snap Inc. Q2 2024 ಗಳಿಕೆಗಳು

2

Snap Inc. ಆಂತರಿಕ ಡೇಟಾ, 1ನೇ ಜನ - 13ನೇ ನವೆಂ 2024

3

Snap Inc. ಆಯೋಜಿಸಿದ್ದ ಪ್ಯಾಶನ್ ಪಾಯಿಂಟ್ಸ್ 2024 NRG ಅಧ್ಯಯನ.

4

Snap Inc. ಆಂತರಿಕ ಡೇಟಾ ಜನ 1 - ನವೆಂ 13, 2024, 10% ಸ್ಯಾಂಪ್ಲಿಂಗ್ ಆಧರಿಸಿ ರಚಿಸಿದ ಒಟ್ಟು Snap ಗಳನ್ನು ನಿರ್ಧರಿಸಲಾಗಿದೆ

5

Snap inc ಮತ್ತು OMG ಆಯೋಜಿಸಿದ್ದ, Amplified Intelligence ನಿಂದ ನಡೆಸಲಾದ AR ಮತ್ತು ಗಮನ 2023 ಅಧ್ಯಯನ

6

Snap Inc ಆಂತರಿಕ ಡೇಟಾ 1 ಜೂನ್ 2023, 1 ಆಗಸ್ಟ್ 2024

7

ಸೆಪ್ಟೆಂಬರ್ 13, 2024 ರ ಪ್ರಕಾರ Snap Inc ಆಂತರಿಕ ಡೇಟಾ

8

Snap Inc. ಆಂತರಿಕ ಡೇಟಾ ಜನವರಿ 1, 2024 - ನವೆಂಬರ್ 17, 2024

9

NRG ಫ್ಯೂಚರ್ ಆಫ್ ಫಿಲ್ಮ್ ಆಗಸ್ಟ್ 2024 ಸಂಶೋಧನೆ

10

Snap Inc. ಆಂತರಿಕ ಡೇಟಾ, 1ನೇ ಜನ - 31ನೇ ಅಕ್ಟೋ 2024

11

Snap Inc. ಆಂತರಿಕ ಡೇಟಾ ಮಾರ್ಚ್ 14, 2024

12

Snap Inc. ಆಂತರಿಕ ಡೇಟಾ Q4 2016 - Q4 2022

13

Snap Inc ಆಯೋಜಿಸಿದ್ದ ಆಲ್ಟರ್ ಏಜೆಂಟ್ಸ್ ಅವರು ನಡೆಸಿದ ನಾವು ಹೇಗೆ Snap ಮಾಡುತ್ತೇವೆ 2024 ಸಂಶೋಧನೆ