ಡಿಸೆಂಬರ್ 19, 2024
ಡಿಸೆಂಬರ್ 19, 2024

Check Out Your 2024 Snapchat Recap

and some stand out stats for the year!

ಈ ರಜಾದಿನದ ಸೀಸನ್‌ ನಿಮ್ಮ ಸ್ನೇಹಿತರು, ಕುಟುಂಬದವರ ಜೊತೆಗೆ ಮತ್ತು ಕಳೆದ ವರ್ಷದ ನೆನಪುಗಳನ್ನು ಸಂಭ್ರಮಿಸುವ ಸಮಯವಾಗಿದೆ. Snapchatter ಗಳ 2024 ರ ಮೆಚ್ಚಿನ ನೆನಪುಗಳನ್ನು ಮರುಸ್ಮರಿಸಲು ನೆರವಾಗುವುದಕ್ಕೆ, ಈ ವಾರ ನಾವು ಪ್ರತಿ Snapchatter ಗೆ ವೈಯಕ್ತಿಕಗೊಳಿಸಲಾಗಿರುವ ನಮ್ಮ ವೈಯಕ್ತಿಕಗೊಳಿಸಿದ Snapchat ರೀಕ್ಯಾಪ್‌ ಅನ್ನು ಬಿಡುಗಡೆ ಮಾಡಿದ್ದೇವೆ.

ರೀಕ್ಯಾಪ್‌ನ ಭಾಗವಾಗಿ, Snapchatter ಗಳು ದೂರದ ಪ್ರವಾಸದಲ್ಲಿರಲಿ ಅಥವಾ ಮನೆಯಲ್ಲಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯುತ್ತಿರಲಿ, ಅವರು ತಮ್ಮ ಎಲ್ಲ ಮೆಚ್ಚಿನ ಕ್ಷಣಗಳ Snap ಗಳನ್ನು ಮರಳಿ ನೋಡಬಹುದು. ಈ ವರ್ಷ, ಇದೇ ಮೊದಲ ಬಾರಿಗೆ, Snapchatter ಗಳು ಎಷ್ಟು ಚಾಟ್‌ಗಳು ಮತ್ತು Snap ಗಳನ್ನು ಕಳುಹಿಸಿದರು, ಎಷ್ಟು ಕಥೆಗಳನ್ನು ಪೋಸ್ಟ್ ಮಾಡಿದರು, ಎಷ್ಟು ನೆನಪುಗಳನ್ನು ಉಳಿಸಿದರು ಮತ್ತು ಎಷ್ಟು ಕರೆಗಳನ್ನು ಮಾಡಿದರು ಎನ್ನುವ ಮಾಹಿತಿಯೊಂದಿಗೆ ಅವರು ಹೇಗೆ ಸಂವಹನ ನಡೆಸಿದರು ಎಂಬ ಕುರಿತ ವಿಶೇಷ ಒಳನೋಟಗಳನ್ನು ನಾವು ಅವರಿಗೆ ಒದಗಿಸಲಿದ್ದೇವೆ.

ಒಟ್ಟಾರೆಯಾಗಿ, 2024 ಸಾಕಷ್ಟು ಸಮೃದ್ಧ ವರ್ಷವಾಗಿತ್ತು ಮತ್ತು Snapchatter ಗಳು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡುತ್ತ ಹಾಗೂ ಮುಂಬರುವ ವರ್ಷಗಳಿಗಾಗಿ ನೆನಪುಗಳನ್ನು ಉಳಿಸುತ್ತ ಸಾಕಷ್ಟು ಸಮಯವನ್ನು ಕಳೆದರು – ಹಾಗೂ ಈ ಕುರಿತು ಹಂಚಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಅಂಕಿಅಂಶಗಳಿವೆ! ದಯವಿಟ್ಟು ಗಮನಿಸಿ...

ಕೆಲವು Snapchatter ಗಳು:

  • 4,677 ಕ್ಕಿಂತ ಹೆಚ್ಚು ಕಥೆಗಳನ್ನು ಪೋಸ್ಟ್ ಮಾಡಿದ್ದಾರೆ. (ಅದು ಸರಾಸರಿ ಪ್ರತಿ ದಿನ 12 ಕಥೆಗಳಿಗಿಂತ ಹೆಚ್ಚಿನ ಪೋಸ್ಟ್.)

  • 6,376+ ನೆನಪುಗಳನ್ನು ಉಳಿಸಿದ್ದಾರೆ – ಅದು ಪ್ರತಿ ದಿನ ಸುಮಾರು 17 ವಿಶೇಷ ಕ್ಷಣಗಳು! 

  • 34,010 ಕ್ಕೂ ಹೆಚ್ಚು Snap ಗಳನ್ನು ಕಳುಹಿಸಿದ್ದಾರೆ ಮತ್ತು 58,734 ಕ್ಕೂ ಹೆಚ್ಚು Snap ಗಳನ್ನು ಸ್ವೀಕರಿಸಿದ್ದಾರೆ

  • ಮತ್ತು 63,327 ಕ್ಕೂ ಹೆಚ್ಚು ಚಾಟ್‌ಗಳನ್ನು ಕಳುಹಿಸಿದ್ದಾರೆ

ಹ್ಯಾಪಿ ಹಾಲಿಡೇಸ್ ಮತ್ತು ಹ್ಯಾಪಿ ಸ್ನ್ಯಾಪಿಂಗ್‌!

ಸುದ್ದಿಗೆ ಮರಳಿ