ಆಗಸ್ಟ್ 02, 2021
ಆಗಸ್ಟ್ 02, 2021

Snapchat ಪ್ರೊಫೈಲ್‌ಗಳು 3D Bitmoji ಜೊತೆಗೆ ಹೊಸ ನೋಟವನ್ನು ಪಡೆಯುತ್ತವೆ

Bitmoji, ಪ್ರೊಫೈಲ್‌ಗಳಲ್ಲಿ 3D Bitmoji ಜೊತೆಗೆ Snap ಪ್ರೊಫೈಲ್‌ಗಳಿಗೆ ಹೊಸ ನೋಟ ಮತ್ತು ಹೊಸ ಆಯಾಮವನ್ನು ನೀಡುತ್ತಿದೆ.

ಇದೀಗ, Snapchatterಗಳು ಆಯ್ಕೆ ಮಾಡಲು 1,200 ಕ್ಕೂ ಹೆಚ್ಚು ದೇಹದ ಭಂಗಿಗಳು, ಮುಖಭಾವಗಳು, ಸನ್ನೆಗಳು ಮತ್ತು ಹಿನ್ನೆಲೆಗಳ ಸಂಯೋಜನೆಗಳೊಂದಿಗೆ ಇನ್ನೂ ಹೆಚ್ಚು ಅನನ್ಯ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಬಹುದು.

Bitmoji ಹೊಸನೋಟದ Snap ಪ್ರೊಫೈಲ್‌ಗಳನ್ನು ಮತ್ತು ಪ್ರೊಫೈಲ್‌ಗಳಲ್ಲಿ 3DBitmoji ಮೂಲಕ ಹೊಸ ಆಯಾಮ ನೀಡುತ್ತಿದೆ.

Snapchatter ಗಳು ಇನ್ನೂ ಹೆಚ್ಚು ವಿಶಿಷ್ಟ ರೀತಿಯಲ್ಲಿ ತಮ್ಮನ್ನು ವ್ಯಕ್ತಪಡಿಸಬಹುದು. ಆಯ್ಕೆ ಮಾಡಿಕೊಳ್ಳಲು ದೇಹದ ಭಂಗಿಗಳ, ಮುಖ ಭಾವಗಳ, ಸಂಜ್ಞೆಗಳ ಹಾಗೂ ಹಿನ್ನಲೆಗಳ 1,200 ಸಂಯೋಜನೆಗಳು ಈಗ ಲಭ್ಯವಿವೆ.

ಶಾಂತಿ ಸಂಕೇತಗಳು ಮತ್ತು ಪ್ರಾರ್ಥಿಸುವ ಕೈಗಳಿಂದ ಹಿಡಿದು, ನಯನ ಮನೋಹರ ಬೀಚ್‌ಗಳವರೆಗೆ ಹಾಗೂ ಟ್ರೆಂಡಿಯಾಗಿರುವ ಪ್ರಾಣಿಗಳ ಪ್ರಿಂಟ್ ಹಿನ್ನಲೆಗಳವರೆಗೆ -- Snapchatters ಈಗ ತಮ್ಮ 3D Bitmoji ಯನ್ನು ತಮ್ಮ ಮೂಡ್‌ಗೆ ತಕ್ಕ ಹಾಗೆ ಮ್ಯಾಚ್ ಮಾಡಬಹುದು.

Snapchatters ತಮ್ಮ 3D Bitmoji ಅನ್ನು Snap ಪ್ರೊಫೈಲ್‌ಗಳು, ಫ್ರೆಂಡ್‍ಶಿಪ್ ಪ್ರೊಫೈಲ್‌ಗಳಲ್ಲಿ ನೋಡುತ್ತಾರೆ ಹಾಗೂ ತಮ್ಮ ಕಸ್ಟಮೈಜ್ ಮಾಡಲಾದ 3D Bitmoji ಅನ್ನು ಹಂಚಿಕೊಳ್ಳಲು ಆಯ್ಕೆಯನ್ನು ಹೊಂದಿರುತ್ತಾರೆ.

Bitmoji ಸೆಟ್ ಅಪ್ ಅನ್ನು ಇನ್ನೂ ಹೊಂದಿಲ್ಲವೇ? ಪ್ರಾರಂಭಿಸಲು ನಮ್ಮ ಬೆಂಬಲ ಪುಟ ಕ್ಕೆ ಭೇಟಿ ನೀಡಿ.

ಸುದ್ದಿಗೆ ಹಿಂತಿರುಗಿ