ನಿಮ್ಮ Snap ಗಳಿಗೆ ಡೆಪ್ತ್ ಸೇರಿಸುವ 3D ಕ್ಯಾಮೆರಾ ಮೋಡ್ ಅನ್ನು ಪರಿಚಯಿಸಲು ಇವತ್ತು ನಾವು ಉತ್ಸುಕರಾಗಿದ್ದೇವೆ. ನೀವು ಅವುಗಳನ್ನು ನೋಡುವಾಗ ನಿಮ್ಮ ಫೋನ್ ಅನ್ನು ಹೇಗೆ ತಿರುಗಿಸುತ್ತೀರಿ ಎನ್ನುವುದನ್ನು ಆಧರಿಸಿ ದೃಷ್ಟಿಕೋನ ಮತ್ತು ನೋಟವನ್ನು ಬದಲಿಸುವ, ಸ್ಥಳ ವಿವರಗಳನ್ನು ಕಲೆಹಾಕುವ Snap ಗಳನ್ನು ಸೆರೆಹಿಡಿಯಲು ಇವುಗಳನ್ನು ಬಳಸಿ, ಈ ಹೊಸ Snap ಗಳು ಭಿನ್ನವಾಗಿ ಕಾಣಿಸುತ್ತವೆ, ಭಿನ್ನವಾಗಿ ವರ್ತಿಸುತ್ತವೆ, ಮತ್ತು ಭಿನ್ನ ಅನುಭವ ನೀಡುತ್ತವೆ.
ಫಿಲ್ಟರ್ ಕರೋಸೆಲ್ನಲ್ಲಿ ನೀವು ಸ್ವೈಪ್ ಮಾಡಬಹುದಾದ ಹೊಸ 3D ಎಫೆಕ್ಟ್ಗಳನ್ನು ಸಹ ನಾವು ಪರಿಚಯಿಸುತ್ತಿದ್ದೇವೆ. ಒಟ್ಟಾರೆಯಾಗಿ ಅವು ಸಜೀವ ಮತ್ತು ಮಾಂತ್ರಿಕವಾಗಿ ಕಾಣಿಸುತ್ತವೆ, ನೈಜ ಸಂಗತಿಗೆ ಒಂದು ಹೆಜ್ಜೆ ಹತ್ತಿರವಿರುವ ರೀತಿಯಲ್ಲಿ ನಿಮ್ಮ ಬದುಕು ಮತ್ತು ಅನುಭವಗಳನ್ನು ಹತ್ತಿರ ತರುತ್ತವೆ
ಆರಂಭದಲ್ಲಿ ಕೆಲವು ಬೆರಳೆಣಿಕೆ ಫೋನ್ಗಳಲ್ಲಿ ಈ ಹೊಸ ಸಾಮರ್ಥ್ಯವನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ, ಆದರೆ ಯಾವುದೇ ಫೋನ್ ಇದನ್ನು ಸ್ವೀಕರಿಸಬಲ್ಲದು ಮತ್ತು ಈ Snap ಗಳ ಪೈಕಿ ಒಂದರೊಂದಿಗೆ ಸಂವಹನ ಮಾಡಬಹುದು. ಒಂದು ಕಥೆಯಲ್ಲಿ ನೀವು ಈ ಹೊಸ ಬಗೆಯ Snap ಗಳನ್ನು ಕಂಡರೆ, ನಿಮ್ಮ ಫೋನ್ಗೆ ಸಣ್ಣ ಅಲುಗಾಟ ನೀಡುವ ಮೂಲಕ ನೀವು ಅವುಗಳನ್ನು ಸಜೀವವಾಗಿಸಬಹುದು.
ಹ್ಯಾಪಿ Snapping!