ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಜೊತೆಗೆ ಒಂದು ಕ್ಷಣವನ್ನು ಹಂಚಿಕೊಳ್ಳಲು Snapchat ಯಾವಾಗಲೂ ಅತಿ ವೇಗದ ವಿಧಾನವಾಗಿದೆ, ಏಕೆಂದರೆ Snapchat ನಲ್ಲಿ ಸಾವಿರ ಪದಗಳಿಗೆ ಸಮನಾಗಿರುವ ಚಿತ್ರಗಳ ಮೂಲಕ ಮಾತುಕತೆ ನಡೆಯುತ್ತದೆ.
Snapping ಮಾಡುವುದು ಪಠ್ಯಸಂದೇಶದಲ್ಲಿ ಸಾಧ್ಯವಿಲ್ಲದ ರೀತಿಯಲ್ಲಿ ನಿಮ್ಮನ್ನು ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತದೆ – ಮತ್ತು ಹೊಸ ಕ್ರಿಯೇಟಿವ್ ಹಾಗೂ ಕಸ್ಟಮೈಸೇಷನ್ ವೈಶಿಷ್ಟ್ಯಗಳ ಜೊತೆಗೆ, ನಿಮ್ಮ ಸಂವಹನ ಶೈಲಿಯನ್ನು ಸಾಕಾರಗೊಳಿಸಬಹುದು:
ನಮಗೆ ಇದರ ಧ್ವನಿ ಇಷ್ಟ - Snapchat+ ಸಬ್‌ಸ್ಕ್ರೈಬರ್‌ಗಳು ಈಗ ತಮ್ಮ ಪ್ರತಿ ಸ್ನೇಹಿತರು ಅಥವಾ ಗುಂಪು ಚಾಟ್‌ಗಳಿಗೆ ತಮ್ಮದೇ ಆದ ರಿಂಗ್‌ಟೋನ್ ಅನ್ನು ಆರಿಸಿಕೊಳ್ಳಬಹುದು. ಕಸ್ಟಮ್ ರಿಂಗ್‌ಟೋನ್‌ಗಳೊಂದಿಗೆ, ನಿಮ್ಮ ಫೋನ್ ಅನ್ನು ನೋಡದೆಯೂ ಸಹ ನಿಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂದು ನೀವು ಹೇಳಬಹುದು!
ಹೇಯ್ DJ, ಹಿಟ್ ರೀಪ್ಲೇ! - ನೀವು ಈಗಷ್ಟೇ ಕಳುಹಿಸಿರುವುದನ್ನು ಮರುವೀಕ್ಷಿಸಲು ಎಂದಾದರೂ ಬಯಸಿದ್ದೀರಾ? ಶೀಘ್ರದಲ್ಲಿ, Snapchat+ ಸಬ್‌ಸ್ಕ್ರೈಬರ್‌ಗಳು ತಮ್ಮ ಸ್ವಂತ Snap ಕಳುಹಿಸಿದ ಬಳಿಕ ಅದನ್ನು 5 ನಿಮಿಷಗಳವರೆಗೆ ರೀಪ್ಲೇ ಮಾಡಬಹುದು.
ಯಾರಾದರೂ ಕರೋಕೆ ಹೇಳಿದರಾ? - ನಿಮ್ಮ Snap ಗಳಿಗೆ ನೀವು ಸಂಗೀತ ಸೇರಿಸಿದಾಗ, ನಮ್ಮ ಹೊಸ ಲಿರಿಕ್ ಸ್ಟಿಕ್ಕರ್‌ಗಳ ಜೊತೆಗೆ ಎಂದಿಗೂ ಬೀಟ್ ಮಿಸ್ ಮಾಡಿಕೊಳ್ಳಬೇಡಿ. . . .
ಹೊಸ ಕಾಮಿಕ್ಸ್ ನೀವು ಮತ್ತು ನಿಮ್ಮ ಆತ್ಮೀಯ ಸ್ನೇಹಿತರಿಗಾಗಿ - ವಿನೋದಮಯ, ಕಾಮಿಕ್ ಸರಣಿ ಶೈಲಿಯ ಕಥೆಗಳ ಜೊತೆಗೆ ಸಂಪರ್ಕಿತರಾಗಿ ಉಳಿಯುವ ವಿಧಾನವಾಗಿ ನಮ್ಮ ಸಮುದಾಯವು ದೀರ್ಘಕಾಲದಿಂದ Bitmoji ಕಥೆಗಳನ್ನು ಇಷ್ಟಪಟ್ಟಿದೆ. ಈಗ, ನೀವು ಮತ್ತು ನಿಮ್ಮ ಸ್ನೇಹಿತರನ್ನು ಒಳಗೊಂಡ ಇನ್ನೂ ಹೆಚ್ಚು ವೈಯಕ್ತಿಕಗೊಳಿಸಲಾದ ಕಂಟೆಂಟ್‌ಗಾಗಿ ನಮ್ಮ 3D Bitmoji ಅವತಾರ್ ಹೊಂದಿರುವ ಹೊಚ್ಚ ಹೊಸ ಎಪಿಸೋಡ್‌ಗಳನ್ನು ನಾವು Snapchatter ಗಳಿಗಾಗಿ ತರುತ್ತಿದ್ದೇವೆ.
ಯಾರು, ನಾನಾ? ಹೌದು, ನೀವೇ! - ನಿಮ್ಮ ಸ್ವಂತ ಬಿಲ್‌ಬೋರ್ಡ್ ಮೇಲೆ ಕಾಣಿಸಿಕೊಳ್ಳಿ, ನಮ್ಮ ಹೊಸ AI ಲೆನ್ಸ್‌ನಿಂದ ಇದು ಸಾಧ್ಯವಾಗಿದೆ
Happy Snapping!