ಇವತ್ತು, ನಾವು Bitmoji ಪೇಂಟ್ ಅನ್ನು ಘೋಷಿಸಿದ್ದು, ಇದು ಒಂದು ಬೃಹತ್ ಚಿತ್ರಸಂಗ್ರಹಕ್ಕೆ ಏಕಕಾಲಕ್ಕೆ ಕೊಡುಗೆ ನೀಡಲು ಲಕ್ಷಾಂತರ ಜನರು ಜೊತೆಗೂಡಬಹುದಾದ Snapchat ಒಳಗಿನ ಹೊಸ ಆಟವಾಗಿದೆ.
Snap ಗೇಮ್ಸ್ ಸ್ಟುಡಿಯೋದಿಂದ ನಿರ್ಮಿಸಲಾಗಿರುವ, Bitmoji ಪೇಂಟ್ Snapchat ಒಳಗಡೆ ನವೀನ ಪೀಳಿಗೆಯ ಆಟವನ್ನು ಪರಿಚಯಿಸುತ್ತದೆ. Snapchatter ಗಳ Bitmoji ಗಳು ಜಗತ್ತಿನಾದ್ಯಂತೆ ಪ್ರಯಾಣಿಸಬಹುದು, ಸ್ನೇಹಿತರೊಂದಿಗೆ ಜೊತೆಗೂಡಬಹುದು ಮತ್ತು ಒಂದು ಹಂಚಿಕೊಂಡ ಕ್ಯಾನ್ವಾಸ್‌ನಲ್ಲಿ ತಮ್ಮ ಕಲ್ಪನೆಯನ್ನು ಹರಿಯಬಿಡಬಹುದು. ಸರಳ ಗೀಚುವಿಕೆಯಿಂದ, ಮೋಜಿನ ಸಂದೇಶಗಳು ಅಥವಾ ಬೃಹತ್ ಭೂದೃಶ್ಯಗಳವರೆಗೆ ಎಲ್ಲವೂ Bitmoji ಪೇಂಟ್‌ನಲ್ಲಿ ಸಾಧ್ಯ ಇವೆ.
ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇಲ್ಲಿದೆ:
ಆಟಗಾರರು ಚಾಟ್ (ರಾಕೆಟ್ ಐಕಾನ್‌ನ ಹಿಂದೆ) ಅಥವಾ ಹುಡುಕಾಟದ ಮೂಲಕ ಆಟಗಾರರು ಆಟಕ್ಕೆ ಸೇರುತ್ತಾರೆ, ಮತ್ತು ಆಕಾಶದಲ್ಲಿ ತೇಲುತ್ತಿರುವ ಅನೇಕ ದ್ವೀಪಗಳಿರುವ ಗ್ರಹವನ್ನು ಕಾಣುತ್ತಾರೆ.
ಪ್ರತಿ ದ್ವೀಪ ಒಂದು ಸರ್ವರ್ ಆಗಿದ್ದು ನೂರಾರು ಇತರ ನೈಜ ಆಟಗಾರರೊಂದಿಗೆ ಇಲ್ಲಿಗೆ ಆಟಗಾರರು ಸೇರಬಹುದಾಗಿದೆ. ಆಟಗಾರರು ಸೇರಲು ದ್ವೀಪವನ್ನು ಆಯ್ಕೆ ಮಾಡಿದಾಗ, ಅವರನ್ನು ಲೈವ್ ಆದ, ಎಡಿಟ್ ಮಾಡಬಹುದಾದ ಕ್ಯಾನ್ವಾಸ್ ಮೇಲೆ ಕೂರಿಸಲಾಗುತ್ತದೆ.
3 ಮೋಡ್‌ಗಳ ನಡುವೆ ಬದಲಿಸುವ ಮೂಲಕ ಪೇಂಟ್ ಮಾಡಲು, ಅನ್ವೇಷಿಸಲು ಮತ್ತು ಹರಟೆ ಹೊಡೆಯಲು ಆಟಗಾರರಿಗೆ ಸಾಧ್ಯವಾಗುತ್ತದೆ: ಸರಿಯಿರಿ, ಪೇಂಟ್ ಮಾಡಿ ಮತ್ತು ಮ್ಯಾಪ್.
ವ್ಯವಸ್ಥಿತವಾಗಿ ಆಟದಲ್ಲಿ ನೀವು ಇತರ Snapchatter ಗಳೊಂದಿಗೆ ಮುಖಾಮುಖಿಯಾಗಬಹುದು, ಮತ್ತು ಇಮೋಟ್‌ಗಳ ಮೆನುವಿನ ಮೂಲಕ ಅವರೊಂದಿಗೆ ಪರಸ್ಪರ ಸಂವಹನ ನಡೆಸಹುದು.
ನಿಮಗೆ ಸಂಬಂಧಿಸಿಲ್ಲದ ಏನಾದರೂ ಕಾಣಿಸುತ್ತಿದೆಯೇ? ನಮ್ಮ ಆ್ಯಪ್‌ನಲ್ಲಿನ ವರದಿಗಾರಿಕೆ ಆಯ್ಕೆ ಬಳಸಿ ಅದನ್ನು ತ್ವರಿತವಾಗಿ ವರದಿ ಮಾಡಿ.
Android ಬಳಕೆದಾರರಿಗಾಗಿ Bitmoji ಪೇಂಟ್ ಅನುಭವವನ್ನು ವೈಯಕ್ತಿಕಗೊಳಿಸಲು ನಾವು Snap ಟೋಕನ್‌ಗಳನ್ನು ಕೂಡ ಪರಿಚಯಿಸುತ್ತಿದ್ದೇವೆ. Snap ಟೋಕನ್‌ಗಳು ಡಿಜಿಟಲ್ ಸರಕುಗಳಾಗಿದ್ದು ಅವುಗಳನ್ನು ಖರೀದಿಸಬಹುದು ಮತ್ತು ನಿಮ್ಮ Snapchat ಖಾತೆಗೆ ಸಂಪರ್ಕ ಹೊಂದಿರುವ ವರ್ಚುವಲ್ ವ್ಯಾಲೆಟ್‌ನಲ್ಲಿ ದಾಸ್ತಾನು ಮಾಡಬಹುದು. Android ನಲ್ಲಿ Bitmoji ಪೇಂಟ್ ಒಳಗಡೆ, ಆಟದಲ್ಲಿ ಹೆಚ್ಚು ವೇಗವಾಗಿ ಸರಿದಾಡಲು ರೋಲರ್ ಸ್ಕೇಟ್‌ಗಳಿಗಾಗಿ, ಅಥವಾ ದೊಡ್ಡ ರಚನೆಗಳನ್ನು ಮಾಡಲು ಇಂಕ್ ಪೇಂಟರ್ ಅಥವಾ ಪೇಂಟ್ ರೋಲರ್‌ಗಳಂಥ ವಸ್ತುಗಳಿಗಾಗಿ Snap ಟೋಕನ್‌ಗಳನ್ನು ಬಳಸಬಹುದು.
ಇಂದಿನಿಂದ ಆರಂಭಿಸಿ Bitmoji ಪೇಂಟ್ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಹೊಸ, ಕಲಾ ಜಗತ್ತಿನ ಭವಿಷ್ಯವನ್ನು ರೂಪಿಸಲು ನಮ್ಮ ಕಮ್ಯುನಿಟಿ ಏನನ್ನು ಸೃಷ್ಟಿಸುತ್ತದೆ ಎನ್ನುವುದನ್ನು ನೋಡಲು ನಾವು ರೋಮಾಂಚಿತರಾಗಿದ್ದೇವೆ.