ಈ ವಾರ, ನಾವು ಭಾರತದಲ್ಲಿ ಬೆಳೆಯುತ್ತಿರುವ ನಮ್ಮ Snapchatter ಸಮುದಾಯವನ್ನು ಮತ್ತು ನಾವು ನಿರ್ಮಿಸಿರುವ ಬಲವಾದ ಸಹಭಾಗಿತ್ವವನ್ನು ಆಚರಿಸಲು ಒಂದು ವರ್ಚುಯಲ್ ಈವೆಂಟ್ ಆಯೋಜಿಸಿದ್ದೇವೆ.
ನೀವು ಜಗತ್ತಿನಲ್ಲಿ ಎಲ್ಲಿದ್ದರೂ Snapchap ಅನ್ನು ಸಾಂಸ್ಕೃತಿಕವಾಗಿ ಪ್ರಸ್ತುತವೆಂದು ಭಾವಿಸುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ. ಭಾಷೆಗಳಿಂದ ಹಿಡಿದು ವಿಷಯದವರೆಗೆ, ರಚನೆಕಾರರಿಂದ ಹಿಡಿದು AR ವರೆಗೆ, ನಮ್ಮ ತಂಡವು ಕಳೆದ ವರ್ಷದಲ್ಲಿ, ನಮ್ಮ ಭಾರತೀಯ ಸಮುದಾಯವು ಅಳವಡಿಸಿಕೊಳ್ಳಬಹುದಾದ ಅನುಭವದ ನಿರ್ಮಾಣಕ್ಕಾಗಿ ನಿಜಕ್ಕೂ ಶ್ರಮಿಸುತ್ತಿದೆ.
ವರ್ಚುಯಲ್ ಈವೆಂಟ್‌ನಲ್ಲಿ, ನಮ್ಮ ಅಸ್ತಿತ್ವದಲ್ಲಿರುವ ಪಾಲುದಾರರ ಅದ್ಭುತ ಕಾರ್ಯವನ್ನು ನಾವು ಹೈಲೈಟ್ ಮಾಡಿದ್ದೇವೆ ಮತ್ತು ಹೆಲವು ಹೊಸಬರ ಬಗ್ಗೆ ಒಂದಷ್ಟು ರೋಚಕ ಸುದ್ದಿಗಳನ್ನು ಹಂಚಿಕೊಂಡಿದ್ದೇವೆ.
ಡಿಸ್ಕವರ್ ಫ್ರಂಟ್‌ನಲ್ಲಿ, ನಾವು Snap ಒರಿಜಿನಲ್ ಸರಣಿ, ಫೋನ್ ಸ್ವಾಪ್‌ನ ಹಿಂದಿ ರೂಪಾಂತರವನ್ನು ರಚಿಸುತ್ತಿದ್ದೇವೆ ಮತ್ತು ಅನುಷ್ಕಾ ಸೇನ್, ರಾಫ್ತಾರ್, ರೂಹಿ ಸಿಂಗ್ ಮತ್ತು ವೀರ್ ದಾಸ್ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನೊಳಗೊಂಡ ಹೊಸ ವಿಶೇಷ ಪ್ರದರ್ಶನಗಳನ್ನು ಹೊಂದಿದ್ದೇವೆ. ಈ ಪ್ರದರ್ಶನಗಳು 2021ರಲ್ಲಿ ಹೊರಬರುತ್ತವೆ.
ಪ್ರತಿಯೊಬ್ಬರೂ ತಿಳಿದಿರುವ ಮತ್ತು ಇಷ್ಟಪಡುವ ಆಟದ ಕಸ್ಟಮ್ ನಿರ್ಮಿತ ಆವೃತ್ತಿಯನ್ನು ರಚಿಸುತ್ತಿರುವ ನಮ್ಮ ಮೊದಲ ಇಂಡಿಯನ್ Snap ಗೇಮ್ಸ್ ಪಾಲುದಾರರಾದ ಮೂನ್‌ಫ್ರಾಗ್ ಲ್ಯಾಬ್ಸ್ ಅನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ - ಲೂಡೋ ಕ್ಲಬ್. ನಮ್ಮ ಹಿಟ್ ಗೇಮ್ ರೆಡಿ ಚೆಫ್ ಗೋಗೆ ಭಾರತೀಯ ಕಿಚನ್ ಚಾಲೆಂಜ್ ‘ದೋಸಾ ಡ್ಯಾಶ್’ ಅನ್ನು ಸೇರಿಸಲು ನಾವು Mojiworksನಲ್ಲಿ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇವೆ!
ಅಂತಿಮವಾಗಿ, NDTV ಮತ್ತು ಆಲ್ಟ್ ಬಾಲಾಜಿಯೊಂದಿಗಿನ Snap ಕಿಟ್ ಸಂಯೋಜನೆಯೊಂದಿಗೆ,Snapchatter ಗಳು ಬ್ರೇಕಿಂಗ್ ನ್ಯೂಸ್‌ನಿಂದ ಹಿಡಿದು, ಅವರು ವೀಕ್ಷಿಸುವ ಪ್ರದರ್ಶನಗಳವರೆಗೆ, ಬೆಲೆ ಹೋಲಿಕೆ ಮಾಹಿತಿ ಮತ್ತು ರೈಲಿನಲ್ಲಿ ದೇಶಾದ್ಯಂತ ಪ್ರಯಾಣಿಸುವಾಗ ಅವರ ನೈಜ ಸಮಯದ ETA ಸೇರಿ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಾಗುತ್ತದೆ!
ಕಳೆದ ವರ್ಷದಲ್ಲಿ ಸುಮಾರು 150% ದೈನಂದಿನ ಸಕ್ರಿಯ ಬಳಕೆದಾರರ ಬೆಳವಣಿಗೆಯೊಂದಿಗೆ*, ಇದು ಪ್ರಾರಂಭ ಮಾತ್ರ. ನಮ್ಮ ಸಮುದಾಯವು ಈ ಹೊಸ ವೈಶಿಷ್ಟ್ಯಗಳು ಮತ್ತು ಅನುಭವಗಳನ್ನು ಆನಂದಿಸುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ನಾವು ಸಹಭಾಗಿತ್ವವನ್ನು ಪಡೆಯುವ ಎಲ್ಲಾ ಸೃಜನಶೀಲ ಪಾಲುದಾರರಿಗೆ ದೊಡ್ಡ ಧನ್ಯವಾದ ಹೇಳಲು ಬಯಸುತ್ತೇವೆ.
* Snap Inc ಆಂತರಿಕ ಡೇಟಾ, Q3 2019 vs Q3 2020