
ಮಹಿಳಾ ವಿಶ್ವಕಪ್ 2023 ಅನ್ನು ಸಂಭ್ರಮಿಸುತ್ತಿದ್ದೇವೆ
ತಲ್ಲೀನಗೊಳಿಸುವ ಹೊಸ AR, ಸೃಜನಾತ್ಮಕ ಪರಿಕರಗಳು ಮತ್ತು ವಿಷಯದೊಂದಿಗೆ Snapchat ನಿಮ್ಮನ್ನು ಮಹಿಳಾ ವಿಶ್ವಕಪ್ ರಾಷ್ಟ್ರೀಯ ತಂಡಗಳು ಮತ್ತು ಆಟಗಾರರನ್ನು ಹತ್ತಿರ ತರುತ್ತದೆ.
2023 ವಿಶ್ವ ಕಪ್ ಈ ವಾರ ಆರಂಭವಾಗಲಿದೆ ಮತ್ತು ಅದರೊಂದಿಗೆ, ವಿಶ್ವಾದ್ಯಂತದ Snapchatter ಗಳಿಗೆ ಅದ್ಭುತ ಆಟವನ್ನು ಅನುಭವಿಸಲು, ಸಂಭ್ರಮಿಸಲು ಮತ್ತು ಅದರೊಂದಿಗೆ ತೊಡಗಿಕೊಳ್ಳಲು ಹೊಸ ವಿಧಾನಗಳು ಲಭ್ಯವಾಗಲಿವೆ.
ಈ ವಾರದಿಂದ ಆರಂಭಿಸಿ, 750 ಮಿಲಿಯನ್ ಗೂ ಅಧಿಕ ಜನರ Snapchat ನ ಜಾಗತಿಕ ಸಮುದಾಯವು ಪ್ಲ್ಯಾಟ್‌ಫಾರ್ಮ್‌ನಾದ್ಯಂತದ ಸಮ್ಮೋಹಕ ಅನುಭವಗಳ ಸರಣಿಯ ಮೂಲಕ ಮಹಿಳಾ ಫುಟ್‌ಬಾಲ್‌ಗಾಗಿ ತಮ್ಮ ಅಭಿಮಾನ ಮತ್ತು ಬೆಂಬಲವನ್ನು ತೋರಿಸಬಹುದು. U.S. ಮಹಿಳಾ ರಾಷ್ಟ್ರೀಯ ತಂಡದೊಂದಿಗೆ (USWNT) ಇದೇ ಮೊದಲ ಬಾರಿಯ AR ಅನುಭವದಿಂದ, ಮಹಿಳಾ ಲೆನ್ಸ್ ಕ್ರಿಯೇಟರ್‌ಗಳು ರಚಿಸಿದ ಹೊಸ AR ಲೆನ್ಸ್‌ಗಳು ಮತ್ತು ರೋಮಾಂಚಕ ಕ್ರಿಯೇಟಿವ್ ಟೂಲ್ಸ್‌ವರೆಗೆ, ಈ ವಿಶ್ವಕಪ್ ಅನ್ನು ಮರೆಯಲಾಗದ ಈವೆಂಟ್ ಆಗಿಸುವ ಮಹಿಳೆಯರನ್ನು ಸಂಭ್ರಮಿಸುವಂತೆ ನಾವು Snapchat ಸಮುದಾಯವನ್ನು ಪ್ರೋತ್ಸಾಹಿಸುತ್ತೇವೆ.
"ಮಹಿಳೆಯರ ಕ್ರೀಡೆಗೆ ಬೆಂಬಲ ನೀಡುವ ನಮ್ಮ ಬದ್ಧತೆಯನ್ನು ನಾವು ಮುಂದುವರಿಸುತ್ತಿರುವಂತೆ, 2023 ವಿಶ್ವ ಕಪ್‌ನ Snapchat ಸಮ್ಮಾನಿತವಾಗಿದ್ದು, ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ಆಟಗಾರರು ಪರಸ್ಪರ ಸೆಣೆಸುತ್ತಿರುವಂತೆ ತಮ್ಮ ನೆಚ್ಚಿನ ರಾಷ್ಟ್ರೀಯ ತಂಡಗಳು ಮತ್ತು ಆಟಗಾರರೊಂದಿಗೆ ಅಭಿಮಾನಿಗಳಿಗೆ ಇನ್ನಷ್ಟು ಆತ್ಮೀಯತೆಯನ್ನು ಸೃಷ್ಟಿಸುತ್ತಿದೆ. ತಲ್ಲೀನಗೊಳಿಸುವ ಕಂಟೆಂಟ್ ಕವರೇಜ್, ಕ್ರಿಯೇಟರ್ ಸಹಭಾಗಿತ್ವಗಳು ಮತ್ತು ಹೊಸ, ನವೀನ AR ಅನುಭವಗಳ ಮೂಲಕ, ಹಿಂದೆಂದೂ ಕಾಣದ ರೀತಿಯಲ್ಲಿ ತಮ್ಮ ಫುಟ್‌ಬಾಲ್ ಅಭಿಮಾನವನ್ನು ವ್ಯಕ್ತಪಡಿಸಲು Snapchatter ಗಳಿಗೆ ಸರಿಸಾಟಿಯಿಲ್ಲದ ಅವಕಾಶ ಸಿಗಲಿದೆ." — ಎಮ್ಮಾ ವೇಕ್ಲಿ, ಕ್ರೀಡಾ ಪಾಲುದಾರಿಕೆಗಳು, Snap Inc.
AR ಅನುಭವಗಳು
ಈ ವರ್ಷ, Snapchat U.S. ಸಾಕರ್ ಮತ್ತು USWNT ಜೊತೆ ಸಹಭಾಗಿತ್ವದಲ್ಲಿ ನಿರ್ಮಿಸಿದ ವಿನೂತನ AR ಲೆನ್ಸ್ ಅನ್ನು ಬಿಡುಗಡೆ ಮಾಡುತ್ತಿದೆ. ವಿನೂತನ USWNT ‘ಟೀಮ್ ಟ್ರ್ಯಾಕರ್’ ಲೆನ್ಸ್ USWNT ರೋಸ್ಟರ್, ಸ್ಟಾರ್‌ಗಳು, ಸುದ್ದಿ, ವಿನೋದಮಯ ವಾಸ್ತವಾಂಶಗಳ 3D Bitmoji ಅವತಾರ್‌ಗಳು ಮತ್ತು ನೈಜ ಸಮಯದಲ್ಲಿ ಅಪ್‌ಡೇಟ್ ಆಗುವ ಹೈಲೈಟ್‌ಗಳೊಂದಿಗೆ ತಂಡಕ್ಕೆ ಅಭಿಮಾನಿಗಳನ್ನು ಇನ್ನಷ್ಟು ಹತ್ತಿರವಾಗಿಸಲು ಸುಧಾರಿತ AR ತಂತ್ರಜ್ಞಾನವನ್ನು ಬಳಸುತ್ತದೆ.

ಜಾಗತಿಕ AR ಲೆನ್ಸ್‌ಗಳು ಕೂಡ ವಿಶ್ವ ಕಪ್‌ನಲ್ಲಿ ಭಾಗವಹಿಸುವ ಪ್ರತಿ ದೇಶಕ್ಕೂ ಕೂಡ ಲಭ್ಯವಿದೆ ಇದರಿಂದಾಗಿ ಎಲ್ಲೇ ಇರುವ Snapchatter ಗಳು ಕೂಡ ತಮ್ಮ ದೇಶದ ಕುರಿತಾದ ಹೆಮ್ಮೆಯನ್ನು ಪ್ರದರ್ಶಿಸಬಹುದು.
ಜಾಗತಿಕ ಅಭಿಮಾನಿ ಸೆಲ್ಫಿ ಅನುಭವ: ಪ್ರತಿ ಭಾಗವಹಿಸುವ ದೇಶಕ್ಕಾಗಿ ವಿಶಿಷ್ಟ ಸೆಲ್ಫಿ ಲೆನ್ಸ್ ಕಂಡುಕೊಳ್ಳಲು Snapchatter ಗಳು ‘ಅಕ್ರಾಸ್ ದ ಗ್ಲೋಬ್’ ಲೆನ್ಸ್ ಮೂಲಕ ಸ್ಕ್ರಾಲ್ ಮಾಡಬಹುದು. AR ನಲ್ಲಿ ಪರಿಣತಿ ಹೊಂದಿರುವ ಮಹಿಳೆಯರ ನೇತೃತ್ವದ ಡಚ್ XR ಡಿಸೈನ್ ಸ್ಡುಡಿಯೋ VideOrbit Studio ದಲ್ಲಿ ಮಹಿಳಾ ಲೆನ್ಸ್ ಕ್ರಿಯೇಟರ್‌ಗಳು ಈ ಲೆನ್ಸ್‌ಗಳನ್ನು ರಚಿಸಿದ್ದಾರೆ ಮತ್ತು ಸಿದ್ಧಪಡಿಸಿದ್ದಾರೆ ಎಂದು ಹಂಚಿಕೊಳ್ಳಲು ನಾವು ಹೆಮ್ಮೆಪಡುತ್ತೇವೆ.
FIFA ಲೆನ್ಸ್: ಹೊಸ AR ಲೆನ್ಸ್ FIFA Fancestry ಕ್ವಿಜ್ ಅನ್ನು ಒಳಗೊಂಡಿದ್ದು ತಾವು ಯಾವ ದೇಶಗಳಿಗೆ ಬೆಂಬಲಿಸವುದು ಸೂಕ್ತ ಎನ್ನುವುದನ್ನು Snapchatter ಗಳು ಕಂಡುಕೊಳ್ಳಬಹುದು!
USWNT ಜೆರ್ಸಿ ಟ್ರೈ ಆನ್ ಲೆನ್ಸ್: Snapchatter ಗಳು ಅಧಿಕೃತ 2023 USWNT ಜೆರ್ಸಿಯಲ್ಲಿ ಹೇಗೆ ಕಾಣಿಸುತ್ತೇವೆ ಎನ್ನುವುದನ್ನು ನೋಡಬಹುದು, ಇದು Snap ನ ಲೈವ್ ಉಡುಪು ವರ್ಗಾವಣೆ ತಂತ್ರಜ್ಞಾನದಿಂದ ಸಂಚಾಲಿತವಾಗಿದೆ.
Togethxr AR ಲೆನ್ಸ್: ಮಹಿಳಾ ಕ್ರೀಡಾಪಟುಗಳು ಮತ್ತು ಮಹಿಳಾ ಕ್ರೀಡೆಯಲ್ಲಿ ಸಮಾನತೆ, ವೈವಿಧ್ಯತೆ ಮತ್ತು ಹೂಡಿಕೆಯನ್ನು ಪ್ರತಿಪಾದಿಸುವ, ಅಲೆಕ್ಸ್ ಮೋರ್ಗನ್, ಚೋಲ್ ಕಿಮ್, ಸಿಮೋನ್ ಮ್ಯಾನ್ಯುಯೆಲ್ ಮತ್ತು ಸ್ಯೂ ಬರ್ಡ್ ಅವರಿಂದ ಸ್ಥಾಪಿಸಲ್ಪಟ್ಟಿರುವ ಮೀಡಿಯಾ ಮತ್ತು ಕಾಮರ್ಸ್ ಕಂಪನಿಯಾದ Togethxr ಜೊತೆಗೆ ಪಾಲುದಾರಿಕೆಯಲ್ಲಿ ಒಂದು ಹೊಸ ಲೆನ್ಸ್. The Togethxr ಲೆನ್ಸ್ ಅನ್ನು VideOrbit ನಿರ್ಮಿಸಿದೆ ಮತ್ತು ಮಹಿಳೆಯರ ಕ್ರೀಡೆಗೆ ತಮ್ಮ ಬೆಂಬಲ ಮತ್ತು ಪ್ರತಿಪಾದನೆಯನ್ನು ತೋರಿಸುವಂತೆ Snapchatter ಗಳನ್ನು ಉತ್ತೇಜಿಸುತ್ತದೆ.
ಕ್ರಿಯೇಟಿವ್ ಟೂಲ್ಸ್
ಸಂಪೂರ್ಣ ಹೊಸ ಕ್ರಿಯೇಟಿವ್ ಟೂಲ್ಸ್ ಗುಚ್ಛವು ಟೂರ್ನಮೆಂಟ್ ಉದ್ದಕ್ಕೂ ತಮ್ಮ ಅಭಿಮಾನವನ್ನು ವರ್ಧಿಸಿಕೊಳ್ಳಲು ಎಲ್ಲರಿಗೂ ಅವಕಾಶ ಕಲ್ಪಿಸುತ್ತದೆ!
Bitmoji: adidas ಜೊತೆಗೆ ಪಾಲುದಾರಿಕೆಯೊಂದಿಗೆ, ತಮ್ಮ ದೇಶದ ತಂಡವನ್ನು ಹುರಿದುಂಬಿಸಲು Snapchatter ಗಳು ತಮ್ಮ Bitmoji ಅವತಾರ್‌ಗಳಿಗೆ ಆಯ್ದ, ಅಧಿಕೃತ ಫುಟ್‌ಬಾಲ್ ಕಿಟ್‌ಗಳೊಂದಿಗೆ ಉಡುಪು ತೊಡಿಸಬಹುದು.
ಈ ಮುಂದಿನ ದೇಶಗಳಿಗಾಗಿ ಅಧಿಕೃತ ಟೀಮ್ ಕಿಟ್‌ಗಳುadidas ಫ್ಯಾನ್ ಗೇರ್ ವಿಭಾಗದಲ್ಲಿ ಲಭ್ಯ ಇವೆ: ಕೊಲಂಬಿಯಾ, ಕೋಸ್ಟ ರಿಕಾ, ಇಟಲಿ, ಜಮೈಕಾ, ಫಿಲಿಫೈನ್ಸ್, ಸ್ವೀಡನ್, ಅರ್ಜೆಂಟಿನಾ, ಜರ್ಮನಿ, ಜಪಾನ್ ಮತ್ತು ಸ್ಪೇನ್.
ಅಧಿಕೃತ ಟೀಮ್ ಕಿಟ್‌ಗಳು ಈ ದೇಶಗಳಿಗೂ ಕೂಡ ಲಭ್ಯ ಇವೆ: ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಇಂಗ್ಲೆಂಡ್, ಫ್ರಾನ್ಸ್, ದಕ್ಷಿಣ ಕೊರಿಯಾ, ನೆದರ್ಲೆಂಡ್ಸ್, ನ್ಯೂ ಜೀಲ್ಯಾಂಡ್, ನೈಜೀರಿಯಾ, ನಾರ್ವೆ, ಪೋರ್ಚುಗಲ್ ಮತ್ತು USA.
ಹೆಚ್ಚುವರಿ ದೇಶಗಳ ಕಿಟ್‌ಗಳು Bitmoji ಫ್ಯಾನ್ ಗೇರ್ ವಿಭಾಗದಲ್ಲಿ ಈ ದೇಶಗಳಿಗಾಗಿ ಲಭ್ಯ ಇವೆ: ಚೀನಾ, ಡೆನ್ಮಾರ್ಕ್, ಐರ್ಲೆಂಡ್, ಹೈಟಿ, ಮೊರಕ್ಕೋ, ಪನಾಮಾ, ದಕ್ಷಿಣ ಆಫ್ರಿಕಾ, ಸ್ವಿಜರ್ಲೆಂಡ್, ವಿಯೆಟ್ನಾಂ ಮತ್ತು ಝಾಂಬಿಯಾ.
ಸ್ಟಿಕ್ಕರ್‌ಗಳು ಮತ್ತು ಫಿಲ್ಟರ್‌ಗಳು: ಸ್ನೇಹಿತರೊಂದಿಗೆ ಚಾಟ್ ಮಾಡಿ ಮತ್ತು ಆಸ್ಟ್ರೇಲಿಯಾ, ಫ್ರಾನ್ಸ್, ನಾರ್ವೆ, USA, ಸ್ವೀಡನ್, ನೈಜೀರಿಯಾ, ನ್ಯೂಜಿಲ್ಯಾಂಡ್ ಮತ್ತು ಸ್ಪೇನ್‌ಗಾಗಿ ಅಧಿಕೃತ ಮಹಿಳಾ ರಾಷ್ಟ್ರೀಯ ತಂಡದ ಸ್ಟಿಕ್ಕರ್‌ಗಳು ಮತ್ತು ಫಿಲ್ಟರ್‌ಗಳು ಸೇರಿದಂತೆ, ಪ್ರತಿ ಭಾಗವಹಿಸುವ ದೇಶಕ್ಕಾಗಿ ನಿಮ್ಮ Snap ಗಳನ್ನು ಸ್ಟಿಕ್ಕರ್‌ಗಳು ಮತ್ತು ಫಿಲ್ಟರ್‌ಗಳಿಂದ ಅಲಂಕರಿಸಿ.
ಕ್ಯಾಮಿಯೋಗಳು: Snapchat ಸಂಭಾಷಣೆಗಳನ್ನು ಹೆಚ್ಚು ವೈಯಕ್ತಿಕ ಮತ್ತು ವಿನೋದಮಯವಾಗಿಸಲು ನಿಮ್ಮ ಕ್ಯಾಮಿಯೋಗಳನ್ನು ಸೇರಿಸಿ. ಕ್ಯಾಮಿಯೋಗಳು ಪ್ರತಿ ತಂಡಕ್ಕಾಗಿ ಲಭ್ಯ ಇವೆ ಮತ್ತು adidas ಜೊತೆಗೆ ನಮ್ಮ ಪಾಲುದಾರಿಕೆ ಮೂಲಕ ಈ ದೇಶಗಳಿಗಾಗಿ ಅಧಿಕೃತ ರಾಷ್ಟ್ರೀಯ ತಂಡದ ಕಿಟ್‌ಗಳು ಲಭ್ಯ ಇವೆ: ಅರ್ಜೆಂಟೈನಾ, ಕೊಲಂಬಿಯಾ, ಕೋಸ್ಟ ರಿಕಾ, ಜರ್ಮನಿ, ಇಟಲಿ, ಜಮೈಕಾ, ಜಪಾನ್, ಫಿಲಿಪೈನ್ಸ್, ಸ್ಪೇನ್ ಮತ್ತು ಸ್ವೀಡನ್.
ಕಂಟೆಂಟ್
ಮೀಡಿಯಾ ಪಾಲುದಾರರು ಮತ್ತು ಕ್ರಿಯೇಟರ್‌ಗಳಿಂದ ಎಲ್ಲ ಗೋಲ್‌ಗಳು, ಹೈಲೈಟ್‌ಗಳು ಮತ್ತು ತೆರೆಯ ಹಿಂದಿನ ದೃಶ್ಯಗಳನ್ನು ನೋಡಿ.
U.S. ಸಾಕರ್ ಆ್ಯಪ್ ಏಕೀಕರಣ: ಲೇಖನಗಳನ್ನು ಮುನ್ನೋಟ ಮಾಡಲು ಮತ್ತು ತಮ್ಮ ಪ್ರತಿಕ್ರಿಯೆಗಳನ್ನು ಸೆರೆಹಿಡಿಯಲು ಒಂದು ಹೊಸ ಲೆನ್ಸ್ ಬಳಸಿಕೊಂಡು, U.S. ಸಾಕರ್ ಆ್ಯಪ್‌ನಿಂದ ನೇರವಾಗಿ ಅಭಿಮಾನಿಗಳು ತಮ್ಮ Snapchat ಕಥೆಗೆ U.S. ಸಾಕರ್ ಸುದ್ದಿಯನ್ನು ಪೋಸ್ಟ್ ಮಾಡಬಹುದು.
ಶೋಗಳು: Togethxr ಕಥೆಗಳು ಪುಟದಲ್ಲಿ ‘ಆಫ್‌ಸೈಡ್ ಸ್ಪೆಷಲ್’ ಎನ್ನುವ ಹೆಸರಿನ ಒಂದು ಹೊಸ, ವಾರಕ್ಕೆ ಎರಡು ಬಾರಿಯ ಶೋ ಅನ್ನು ನಿರ್ಮಿಸಲಿದೆ. ಆನ್-ಫೀಲ್ಡ್ ಮ್ಯಾಜಿಕ್‌ನಿಂದ ಆಫ್-ಫೀಲ್ಡ್ ಕ್ಷಣಗಳು ಮತ್ತು ಸ್ಟೋರಿಲೈನ್‌ಗಳವರೆಗೆ, ಮಹಿಳಾ ಸಾಕರ್‌ನ ಎಲ್ಲ ವಿಷಯಗಳನ್ನು ಅವಲೋಕಿಸಿ.
UK ನಲ್ಲಿ ITV ಮತ್ತು Australia ದಲ್ಲಿ Optus Sport ಕೂಡ ಕಥೆಗಳ ಟ್ಯಾಬ್‌ನಲ್ಲಿ ಅಧೀಕೃತ ವಿಶ್ವ ಕಪ್ ಹೈಲೈಟ್‌ಗಳನ್ನು ಒದಗಿಸಲಿವೆ..
Snap ಸ್ಟಾರ್‌ಗಳು ಮತ್ತು ಕ್ರಿಯೇಟರ್‌ಗಳು : Snapchatter ಗಳು ಅಲಿಶಾ ಲೆಹ್‌ಮ್ಯಾನ್, ಅಸಿಸಾತ್ ಒಶೊಒಲಾ, ಜಾರ್ಡಿನ್ ಹ್ಯುಟೆಮಾ, ಜ್ಯುಲಿಯಾ ಗ್ರಾಸೋ, ಮ್ಯಾಡಿಸನ್ ಹೆಮಾಂಡ್, ಮೆಗಾನ್ ರೆಯಿಸ್, ರ್ಯಾನ್ ಟೊರಿರೋ ಮತ್ತು ಆಂಟೊನಿಯೊ ಸ್ಯಾಂಟಿಯಾಗೊ ಸೇರಿದಂತೆ ತಮ್ಮ ಕೆಲವು ಮೆಚ್ಚಿನ ಫುಟ್‌ಬಾಲರ್‌ಗಳು, ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರಿಯೇಟರ್‌ಗಳನ್ನು ಕಥೆಗಳು ಮತ್ತು ಸ್ಪಾಟ್‌ಲೈಟ್‌ನಾದ್ಯಂತ ಅನುಸರಿಸುವ ಮೂಲಕ ಅನನ್ಯ, ಆನ್ ದ ಗ್ರೌಂಡ್ ಕಂಟೆಂಟ್ ಅನ್ನು ಅನುಸರಿಸಬಹುದು.
U.S. ಸಾಕರ್ ತಮ್ಮ Snap ಸ್ಟಾರ್ ಪ್ರೊಫೈಲ್‌ಗೆ ಟೂರ್ನಮೆಂಟ್ ಉದ್ದಕ್ಕೂ ನಿಯಮಿತ ಅಪ್‌ಡೇಟ್‌ಗಳು ಮತ್ತು ಕಂಟೆಂಟ್ ಅನ್ನು ಪೋಸ್ಟ್ ಮಾಡಲಿದೆ.
ಸ್ಪಾಟ್‌ಲೈಟ್ ಸವಾಲುಗಳು: U.S. ನಲ್ಲಿರುವ Snapchatter ಗಳಿಗೆ ಈ ಕೆಳಗಿನವುಗಳು ಸೇರಿದಂತೆ ಮಹಿಳಾ ಸಾಕರ್ ಥೀಮ್‌ನ ಸ್ಪಾಟ್‌ಲೈಟ್ ಸವಾಲುಗಳಿಗೆ ತಮ್ಮ ಅತ್ಯುತ್ತಮ Snap ಗಳನ್ನು ಸಲ್ಲಿಸಿದ್ದಕ್ಕಾಗಿ $30,000 ವರೆಗೆ ಗೆಲ್ಲುವ ಅವಕಾಶ ಇರಲಿದೆ:
#TeamSpirit (ಜುಲೈ 19-25) -ನಿಮ್ಮ ಮೆಚ್ಚಿನ ಮಹಿಳಾ ಫುಟ್‌ಬಾಲ್ ತಂಡಕ್ಕಾಗಿ ನಿಮ್ಮ ಅಭಿಮಾನವನ್ನು ಪ್ರದರ್ಶಿಸಿ!
#GoalCelebration (ಜುಲೈ 31-ಆಗಸ್ಟ್ 6) - ಒಂದು ಐಕಾನಿಕ್ ಮಹಿಳಾ ಫುಟ್‌ಬಾಲ್ ಗೋಲ್ ಸಂಭ್ರಮಾಚರಣೆಯನ್ನು ಮರುಸೃಷ್ಟಿಸಲು ಡೈರೆಕ್ಟರ್ ಮೋಡ್ ಬಳಸಿ!
#SoccerWatchParty (ಆಗಸ್ಟ್ 17-21) – ನಿಮ್ಮ ಮಹಿಳಾ ಫುಟ್‌ಬಾಲ್ ಪಾರ್ಟಿ ವೀಕ್ಷಣೆಯನ್ನು ಪ್ರದರ್ಶಿಸಲು ಸ್ಥಳ ಟ್ಯಾಗ್ ಬಳಸಿ!
Snap ಮ್ಯಾಪ್: ಪ್ರತಿ ಮ್ಯಾಚ್, ವೀಕ್ಷಣೆಯ ಪಾರ್ಟಿ, ಸಂಭ್ರಮಾಚರಣೆ ಮತ್ತು ಇನ್ನಷ್ಟಕ್ಕಾಗಿ Snap Map ನಲ್ಲಿ ಕ್ಯೂರೇಟ್ ಮಾಡಿದ ಕಥೆಗಳು.
ನಿಮ್ಮನ್ನು ಪಂದ್ಯದಲ್ಲಿ ಭೇಟಿಯಾಗುತ್ತೇವೆ! 👻⚽