ಇವತ್ತು, ನಾವು ನಮ್ಮ ಸ್ನೇಹಿತರೊಂದಿಗೆ ಹೇಗೆ ಮಾತನಾಡುತ್ತೇವೆ ಎನ್ನುವುದನ್ನು ವರ್ಧಿತ ರಿಯಾಲಿಟಿ ಬದಲಾಯಿಸುತ್ತಿದೆ. Snapchat ನಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಲೆನ್ಸ್‌ಗಳಿವೆ, ಮತ್ತು ನಮ್ಮ 75% ಗಿಂತಲೂ ಹೆಚ್ಚಿನ ದೈನಂದಿನ ಸಕ್ರಿಯ ಬಳಕೆದಾರರು ಪ್ರತಿ ದಿನ AR ನೊಂದಿಗೆ ಸಂವಹನ ನಡೆಸುತ್ತಾರೆ. ಆದರೆ, ಜಗತ್ತನ್ನು ಸಂಪೂರ್ಣ ಹೊಸ ವಿಧಾನಗಳಲ್ಲಿ ನೋಡಲು ನಾವು AR ಬಳಸುವ ಭವಿಷ್ಯವನ್ನು ನಾವು ಊಹಿಸಿಕೊಳ್ಳುತ್ತಿದ್ದೇವೆ.
ಕಳೆದ ವರ್ಷ ನಾವು ಲ್ಯಾಂಡ್‌ಮಾರ್ಕರ್‌ಗಳನ್ನು ಪರಿಚಯಿಸಿದೆವು, ಇವು ಪ್ರತ್ಯೇಕ ಕಟ್ಟಡಗಳನ್ನು ಗುರುತಿಸುವ ಸಾಮರ್ಥ್ಯವನ್ನು Snapchat ಕ್ಯಾಮೆರಾಗಳಿಗೆ ಒದಗಿಸಿದವು ಮತ್ತು ವಿಶ್ವದ ಕೆಲವು ಅತ್ಯದ್ಭುತ ಲ್ಯಾಂಡ್‌ಮಾರ್ಕ್‌ಗಳೊಡನೆ ಸಂವಹನ ನಡೆಸಲು ಲೆನ್ಸ್‌ಗಳಿಗೆ ಅನುಕೂಲ ಕಲ್ಪಿಸಿದವು. ಬಕಿಂಗ್‌ಹ್ಯಾಮ್ ಅರಮನೆಯಿಂದ, ನ್ಯೂಯಾರ್ಕ್‌ನ ಫ್ಲಾಟಿರಾನ್ ಕಟ್ಟಡ, ತಾಜ್ ಮಹಲ್‌ನವರೆಗೆ, ವಿಶ್ವದ ಅತ್ಯಂತ ಸೃಜನಶೀಲ ಜನರ ದೃಷ್ಟಿಕೋನಗಳಿಂದ ಸಂಪೂರ್ಣ ಹೊಸ ಬಗೆಯಲ್ಲಿ ಈ ಸ್ಥಳಗಳು ಜೀವ ತಳೆದವು, ನಮ್ಮ ಭೌತಿಕ ಮತ್ತು ಡಿಜಿಟಲ್ ಜಗತ್ತಿನ ಸಂಬಂಧವನ್ನು ಇನ್ನಷ್ಟು ನಿಕಟಗೊಳಿಸಿದವು.
ಇವತ್ತು ನಾವು ಸ್ಥಳೀಯ ಲೆನ್ಸ್‌ಗಳಿಗೆ ಮುಂದಿನ ಹೆಜ್ಜೆ ಇರಿಸುತ್ತಿದ್ದು, ಇದು ಆಧುನಿಕ ತಂತ್ರಜ್ಞಾನವನ್ನು ವಿಕಾಸಗೊಳಿಸುತ್ತದೆ ಮತ್ತು ಸಿಟಿ ಬ್ಲಾಕ್‌ಗಳು ಸೇರಿದಂತೆ, ದೊಡ್ಡ ಪ್ರದೇಶಗಳನ್ನು ವರ್ಧಿಸುವುದನ್ನು ಸಾಧ್ಯವಾಗಿಸುತ್ತದೆ. 360-ಡಿಗ್ರಿ ಚಿತ್ರಗಳಿಂದ, ಮತ್ತು ಕಮ್ಯುನಿಟಿ Snap ಗಳಿಂದ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ, ಭೌತಿಕ ಜಗತ್ತಿನ ಡಿಜಿಟಲ್ ಪ್ರತಿನಿಧಿಸುವಿಕೆಯನ್ನು ನಿರ್ಮಿಸಲು, ಮತ್ತು ಭಿನ್ನ ದೃಷ್ಟಿಕೋನದಿಂದ ವರ್ಧಿತ ಅನುಭವವನ್ನು ನೋಡಲು ನಮಗೆ ಸಾಧ್ಯವಾಗಿದೆ. ಇದನ್ನು 3D ಮರುನಿರ್ಮಾಣ, ಮೆಷಿನ್ ಲರ್ನಿಂಗ್ ಮತ್ತು ಹಂಚಿಕೆ ಮಾಡಿದ ಕ್ಲೌಡ್ ಕಂಪ್ಯೂಟ್‌ನೊಂದಿಗೆ ಸಂಯೋಜಿಸುವ ಮೂಲಕ, ನಾವು ಈಗ ಇಡೀ ನಗರ ಬ್ಲಾಕ್‌ಗಳನ್ನು ಮ್ಯಾಪ್ ಮಾಡಬಹುದು.
ಈ ವಾರ, ನೀವು ಸಿಟಿ ಪೇಂಟರ್ ಎನ್ನುವ ಮೊದಲು ಸ್ಥಳೀಯ ಲೆನ್ಸ್ ಅನ್ನು ಕಾರ್ನಬಿ ಸ್ಟ್ರೀಟ್, ಲಂಡನ್ ಇಲ್ಲಿ ನೋಡಬಹುದು. ಭೌತಿಕ ಜಗತ್ತಿನ ಮೇಲೆಯೇ ನಿರ್ಮಿಸಲಾಗಿರುವ ನಿರಂತರವಾದ, ಹಂಚಿಕೊಂಡ AR ಜಗತ್ತಿನಲ್ಲಿ Snapchatter ಗಳು ಸೇರಬಹುದು, ಮತ್ತು ಅವುಗಳ ಸುತ್ತಲ ಜಗತ್ತನ್ನು ಪೇಂಟ್ ಮಾಡಲು ಸಹಯೋಗ ನೀಡಬಹುದು. ನೀವು ಯಾವಾಗ ಸಮೀಪಿಸುತ್ತೀರಿ ಎನ್ನುವುದನ್ನು ನೋಡಲು Snap ಮ್ಯಾಪ್ ಮೇಲೆ ಐಕಾನ್‌ಗಾಗಿ ಹುಡುಕಿ. ಜೊತೆಯಾಗಿ, ನೀವು ಅದನ್ನು ಇನ್ನಷ್ಟು ವರ್ಣಮಯ ಜಗತ್ತಾಗಿಸಲು ಸಂತಸಪಡುತ್ತೀರಿ ಎನ್ನುವುದು ನಮಗೆ ತಿಳಿದಿದೆ!