ಜನವರಿ 13, 2025
ಜನವರಿ 13, 2025

ಪ್ರಿಯ ಲೊಸ್‌ ಎಂಜೆಲೇಸ್‌, ನಾನು ನಿನ್ನನ್ನು ಪ್ರೀತಿಸುತ್ತೇನೆ.

ಮೂಲ Snapchat HQ, ಇದನ್ನು ಪೆಸಿಫಿಕ್‌ ಪ್ಯಾಲಿಸೇಡ್ಸ್‌ನಲ್ಲಿ ತಂದೆಯವರ ಊಟದ ಕೊಠಡಿ ಎಂದೂ ಸಹ ಕರೆಯಲಾಗುತ್ತದೆ



ಪ್ರಿಯ ಲೊಸ್‌ ಎಂಜೆಲೇಸ್‌,

ನಾನು ನಿನ್ನನ್ನು ಪ್ರೀತಿಸುತ್ತೇನೆ. 

ನಾನು ಬೆಳೆದದ್ದು ಪೆಸಿಫಿಕ್‌ ಪ್ಯಾಲಿಸೇಡ್ಸ್‌ನಲ್ಲಿ. ನಾನು ನನ್ನ ರೇಝರ್‌ ಸ್ಕೂಟರ್‌ನಲ್ಲಿ ಅಲ್ಲಿನ ಪ್ರತಿಯೊಂದು ರಸ್ತೆಯನ್ನೂ ಸಹ ಸುತ್ತಾಡಿದ್ದೇನೆ. ನನಗೆ ಅಲ್ಲಿನ ಉದ್ದನೆಯ, ಹಳೇ ಮರಗಳು ಬಹಳ ಚೆನ್ನಾಗಿ ತಿಳಿದಿತ್ತು, ಹಾಗೂ ನನಗೆ ಅವುಗಳಲ್ಲಿ ಕೆಲವು ನೆಚ್ಚಿನವು ಇದ್ದವು. ನನ್ನ ತಾಯಿ ಅಲ್ಮಾ ರಿಯಲ್‌ನಲ್ಲಿ ವಾಸಿಸುತ್ತಿದ್ದರು, ಹಾಗೂ ನನ್ನ ತಂದೆಯವರು ಟೊಯೋಪಾದಲ್ಲಿ. ಅಮ್ಮನ ಮನೆ ಆಶ್ಚರ್ಯಕರವಾಗಿ ಇನ್ನೂ ಅಲ್ಲಿಯೇ ಇದೆ, ಬೂದಿಯಿಂದ ಮುಚ್ಚಿಹೋಗಿದೆ. ತಂದೆಯವರದ್ದು ಹೋಯಿತು, ಅದು ಸುಟ್ಟು ಬೀಳುವುದನ್ನು ಲೈವ್‌ TV ಯಲ್ಲಿ ತೋರಿಸಲಾಗಿತ್ತು. ಹಾಗೂ ನಾವು ಅದೃಷ್ಟವಂತರಾಗಿದ್ದೆವು. ಎಲ್ಲರೂ ಸುರಕ್ಷಿತರಾಗಿದ್ದಾರೆ. 

150 ಕ್ಕೂ ಹೆಚ್ಚು Snap ತಂಡದ ಸದಸ್ಯರು ಸ್ಥಳಾಂತರಗೊಂಡಿದ್ದಾರೆ, ಹಾಗೂ ಈ ಲೆಕ್ಕದಲ್ಲಿ ಅವರ ಕುಟುಂಬದವರು ಮತ್ತು ಸ್ನೇಹಿತರನ್ನು ಸೇರಿಸಲಾಗಿಲ್ಲ. ಎಂಜೆಲೇಸ್‌ನ ಲೆಕ್ಕವಿಲ್ಲದಷ್ಟು ಜನರು ಪ್ರತಿಯೊಂದನ್ನು ಕಳೆದುಕೊಂಡಿದ್ದಾರೆ. ಕೆಲವರು ತಮ್ಮ ಜೀವವನ್ನೂ ಕಳೆದುಕೊಂಡಿದ್ದಾರೆ.

ಲೊಸ್‌ ಎಂಜೆಲೇಸ್‌, ನನ್ನ ಹೃದಯವು ನಿನಗಾಗಿ ಮರುಗುತ್ತಿದೆ, ಆದರೂ ನಾನು ನಿನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತೇನೆ. ಇದೊಂದು ಸೃಜನಶೀಲತೆ, ನಾವೀನ್ಯತೆ ಮತ್ತು ಕಥಾನಿರೂಪಣಾ ಕೌಶಲ್ಯಗಳ ಬೀಡು. ಬೂದಿಯಿಂದ ಆವೃತ್ತ ದೇವತೆಯರ ಈ ನಗರವು ಈಗಾಗಲೇ ಪುನಃ ಆರಂಭಗೊಳ್ಳುತ್ತಿದೆ.

ಪ್ರತಿಯೊಬ್ಬ ಲೂಟಿಕೋರನ ಬದಲಾಗಿ ಸಾವಿರಾರು ಜನರು ಇದಕ್ಕಾಗಿ ತಮ್ಮ ಸಮಯ, ತಮ್ಮ ಸಂಪತ್ತು ಮತ್ತು ತಮ್ಮ ಪ್ರಾರ್ಥನೆಗಳನ್ನು ನೀಡುತ್ತಿದ್ದಾರೆ. ಪ್ರತಿಯೊಬ್ಬ ಹೇಡಿಯ ಬದಲಾಗಿ, ಅಲ್ಲಿ ಧೈರ್ಯವು ಹರಿದಾಡುತ್ತಿದೆ. ಆಪಾದನೆಯಲ್ಲಿ ತೋರಲಾದ ಪ್ರತಿಯೊಂದು ಬೆರಳಿಗೆ ಬದಲಾಗಿ ಉಪಶಮನ ನೀಡಲು ಮತ್ತು ಭರವಸೆಯನ್ನು ತರಲು, ಸಾವಿರಾರು ಕೈಗಳು ಶ್ರಮಪಡುತ್ತಿವೆ.

ನಮ್ಮದು ಬೃಹತ್‌ ಅಗ್ನಿಯನ್ನು ಎದುರಿಸಿದ್ದ ಮೊದಲ ಸಮುದಾಯ ಅಲ್ಲ. ನಾವು ಕೊನೆಯವರು ಕೂಡ ಆಗುವುದಿಲ್ಲ. ಆದರೆ ನಾವು ನಮ್ಮ ಶಕ್ತಿ, ನಮ್ಮ ಚಾತುರ್ಯ ಮತ್ತು ಮತ್ತೊಮ್ಮೆ ಹೊಸದಾಗಿ ಸೃಷ್ಟಿಸುವುದಕ್ಕಾಗಿ ನಮ್ಮ ಪ್ರೀತಿಯನ್ನು ಬಳಸುವೆವು. ಮಹಾನ್‌ ಕಲಾವಿದರ ನಮ್ಮ ನಗರವು ಮನೆಯೆಂದು ನಾವು ಕರೆಯುವ ಈ ಸುಂದರ ತಾಡಪತ್ರಿಗೆ ಹೊಸದೊಂದು ಬಣ್ಣಗಳ ಪದರವನ್ನು ಸೇರಿಸುವುದು.

ಲೊಸ್‌ ಎಂಜೆಲೇಸ್‌, ನಾನು ನಿನ್ನನ್ನು ಪ್ರೀತಿಸುತ್ತೇನೆ. ಹಾಗೂ, ನಮ್ಮ ಕಛೇರಿಯ ವಾಹನ ನಿಲುಗಡೆಯಲ್ಲಿ ನೆರೆದಿರುವ ದೇಶದಾದ್ಯಂತದಿಂದ ಬಂದಿರುವ ಪ್ರಥಮ ಪ್ರಿತಿಸ್ಫಂದಕರನ್ನು ನಾನು ವೀಕ್ಷಿಸುತ್ತಲಿರುವಾಗ, ನನಗೆ ಅವರ ಅವಿಶ್ರಾಂತ ಬೆಂಬಲ ಕಾಣುತ್ತಿದೆ ಹಾಗೂ ಅವರಷ್ಟೇ ಅಲ್ಲದೆಯೇ ಇನ್ನೂ ದಶಲಕ್ಷಗಟ್ಟಲೆ ಜನರು ಕೂಡ ನಿಮ್ಮನ್ನು ಪ್ರೀತಿಸುತ್ತಾರೆ ಎಂದು ತಿಳಿದಿದೆ. 

ಲೊಸ್‌ ಎಂಜೆಲೇಸ್‌, ನಾವು ಇಲ್ಲಿ ದೀರ್ಘಾವಧಿಗಾಗಿ ಬಂದಿದ್ದೇವೆ. ಪುನರ್ನಿರಮಾಣ ಮತ್ತು ಅದರ ನಂತರದ ಎಲ್ಲಾ ಕಾರ್ಯಗಳಿಗೂ ಸಿದರಾಗಿದ್ದೇವೆ. ಹಾಗೂ, ನಾವು ಇಲ್ಲಿ ಸಹಾಯ ನೀಡಲೆಂದೇ ಬಂದಿದ್ದೇವೆ. Snap, ಬೊಬ್ಬಿ ಮತ್ತು ನಾನು ಈಗಾಗಲೇ $5 ದಶಲಕ್ಷದಷ್ಟು ತ್ವರಿತ ಸಹಾಯದ ರೂಪದಲ್ಲಿ ವಿತರಿಸಿದ್ದೇವೆ ಹಾಗೂ ನಾವು ಇನ್ನೂ ಹಚ್ಚು ಮಾಡುತ್ತೇವೆ. ನಾವು ಸ್ಥಳಾಂತರಿಸಲ್ಪಟ್ಟ ಜನರು ಮತ್ತು ಪ್ರಥಮ ಪ್ರತಿಸ್ಫಂದಕರಿಗೆ ಆಹಾರ ನೀಡುತ್ತಿದ್ದೇವೆ ಹಾಗೂ ಸ್ಥಳ ಒದಗಿಸುತ್ತಿದ್ದೇವೆ. ನಾವು ಬೃಹತ್ತ್‌ ಅಗ್ನಿ ಅವಘಡದಿಂದ ಪುನಃಸಂಪಾದನೆಯ ಕುರಿತು ತಿಳಿದುಕೊಳ್ಳುತ್ತಿದ್ದೇವೆ ಹಾಗೂ ನಾವು ಮತ್ತೇನು ಮಾಡಬಹುದು ಎಂಬುದರ ಕುರಿತು ಮತ್ತು ಈ ಸವಾಲನ್ನು ಎದುರಿಸುವುದು ಹೇಗೆಂದು ಪ್ರತಿ ದಿನ ಕಲಿಯುತ್ತಿದ್ದೇವೆ. ನಾವು ನಿಮ್ಮೊಂದಿಗೆ ಸಹಯೋಗ ಸಾಧಿಸಿ ನಿರ್ಮಾಣ ಮಾಡಲು ಬಯಸುತ್ತೇವೆ. 

ಹಾಗೂ ಅದರ ಪರಿಣಾಮ ಎದುರಿಸುತ್ತಿರುವ ಎಲ್ಲರಿಗೂ ವಿಚಿತ್ರವೆಂದು ತೋರುವುದೇನೆಂದರೆ ಇನ್ನೂ ಕೆಲವೇ ನಿಮಷಗಳ ದೂರದಲ್ಲಿ ಜಗತ್ತು ತನ್ನಷ್ಟಕ್ಕೆ ತಾನು ತಿರುಗುತ್ತಿದೆ.  ಮಾಡಲು ಬಹಳಷ್ಟು ಕೆಲಸಗಳಿವೆ, ಕಲಿಸಲು ಮಕ್ಕಳು ಇರುವವು, ಆರೈಕೆ ಮಾಡಲು ಕುಟುಂಬಗಳು ಇರುವವು ಹಾಗೂ ಶುಭಾಶಯಗಳನ್ನು ತಿಳಿಸಲು ಹೊಸದೊಂದು ದಿನವು ಮುಂದಿದೆ.

ಲೊಸ್‌ ಎಂಜಲೇಸ್‌, ನಿನಗಾಗಿ ನನ್ನ ಹೃದಯವು ಮಿಡಿಯುತ್ತಿದೆ, ಹಾಗೂ ಮುಂದೆ ಸಾಗಿದಂತೆ, ನಿನಗಾಗಿ ನಮ್ಮ ಸಮಯ, ನಮ್ಮ ಸಂಪನ್ಮೂಲಗಳು ಮತ್ತು ನಮ್ಮ ಸಹಾಯಗಳು ಕೂಡ ಮುಂದುವರಿಯುವವು. ನಿನಗಾಗಿ ನಾನು ಶಪಥ ಮಾಡುತಿದ್ದೇನೆ.

ಈವನ್

ಸುದ್ದಿಗೆ ಮರಳಿ