
Snapchat ನಲ್ಲಿ EUROs 2024 ಅನುಭವಿಸಿ
ಇದೀಗ EUROs 2024 ನಡೆಯುತ್ತಿದೆ ಮತ್ತು Snapchatter ಗಳು ನಮ್ಮ AR ಅನುಭವಗಳಿಂದ ಸಂಚಾಲಿತವಾದ ಮೈದಾನದಲ್ಲಿನ ಮತ್ತು ಹೊರಗಿನ ಮನರಂಜನೆಯನ್ನು ಆನಂದಿಸುತ್ತಿದ್ದಾರೆ.
ಪ್ರಸ್ತುತ EUROs 2024 ನಡೆಯುತ್ತಿದೆ ಮತ್ತು ಈ ವಾರಾಂತ್ಯದಲ್ಲಿ ಸ್ಪರ್ಧೆಯು ನಾಕ್ಔಟ್ ಹಂತಕ್ಕೆ ತಲುಪಲಿದ್ದು, Snapchatter ಗಳು AR ಅನುಭವಗಳಿಂದ ಸಂಚಾಲಿತವಾದ ಮೈದಾನದಲ್ಲಿನ ಮತ್ತು ಹೊರಗಿನ ಎಲ್ಲ ಮನರಂಜನೆಯನ್ನು ಆನಂದಿಸುತ್ತಿದ್ದಾರೆ. ತಂಡಗಳು ತಾವಾಗಿಯೇ ಒದಗಿಸಿರುವ ಅನನ್ಯ Snap ಸ್ಟಾರ್ ಕಂಟೆಂಟ್‌ನಿಂದ ಹಿಡಿದು ಫುಟ್‌ಬಾಲ್ ಪ್ರೇಮಿಗಳಿಗೆ ವಿನೋದದ ಅಭಿಯಾನದವರೆಗೆ, ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಂದ್ಯಾವಳಿಯಿಂದ ಎಲ್ಲ ಆ್ಯಕ್ಷನ್ ಅನ್ನು ಸಂಭ್ರಮಿಸಲು ನಾವು ನಮ್ಮ Snap ಸಮುದಾಯಕ್ಕೆ ಸಹಾಯ ಮಾಡುತ್ತಿದ್ದೇವೆ.
ಹಳದಿಯೊಂದಿಗೆ ವಿನೋದ ಆರಂಭವಾಗುತ್ತದೆ
ದೊಡ್ಡ ಕ್ರೀಡಾಕೂಟದ ಸಂದರ್ಭ ನಿಮ್ಮ ಮೆಚ್ಚಿನ ಜನರೊಂದಿಗೆ ವಿನೋದಿಸಲು Snapchat ಹೇಗೆ ಪರಿಪೂರ್ಣ ಸ್ಥಳವಾಗಿದೆ ಎನ್ನುವುದನ್ನು ಹೈಲೈಟ್ ಮಾಡಲು ನಮ್ಮ ಹಳದಿಯೊಂದಿಗೆ ವಿನೋದ ಆರಂಭವಾಗುತ್ತದೆ ಅಭಿಯಾನದೊಂದಿಗೆ ಸ್ಪರ್ಧೆಗೆ ಚಾಲನೆ ನೀಡಿದೆವು.
ಮೈದಾನದಲ್ಲಿ ಆಟಗಾರರ ಯೋಜಿತವಲ್ಲದ ಮತ್ತು ಪರಿಪೂರ್ಣವಲ್ಲದ ಕ್ಷಣಗಳನ್ನು ಹೇಗೆ ಹಳದಿ ಕಾರ್ಡ್ ಎತ್ತಿ ತೋರಿಸುವ ಹಾಗೆ ಈ ಸಾಮಾನ್ಯವಾಗಿ ಬಿಚ್ಚುಮನಸ್ಸಿನ, ಭಾವನಾತ್ಮಕ ಮತ್ತು ನೈಜ ಕ್ಷಣಗಳು Snapchat ನಲ್ಲಿ ಸ್ನೇಹಿತರು ಮತ್ತು ಕುಟುಂಬದವರು ಹಂಚಿಕೊಳ್ಳುವ ಪ್ರತಿದಿನದ ಕ್ಷಣಗಳಾಗಿವೆ.
Euros ಸಂದರ್ಭ ಈ 'ಹಳದಿ ಕಾರ್ಡ್ ಕ್ಷಣಗಳನ್ನು' ಆಳವಡಿಸಲು, ಪಿಚ್‌ನಲ್ಲಿನ ಆ್ಯಕ್ಷನ್‌ಗೆ Snapchatter ಗಳ ಎಲ್ಲ ಭಾವನೆಗಳು ಮತ್ತು ಪ್ರತಿಕ್ರಿಯೆಗಳನ್ನು ಮೀಮ್‌ಗಳಾಗಿ ಪರಿವರ್ತಿಸಿ Snapchat ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದಕ್ಕಾಗಿ - ಜರ್ಮನಿಯಲ್ಲಿ ಮಾಸ್ Snap ಗಳ ಮೂಲಕ ಹಂಚಿಕೊಳ್ಳಲಾದ - 20 ಕ್ಕೂ ಹೆಚ್ಚು ಅನನ್ಯ AR ಲೆನ್ಸ್‌ಗಳನ್ನು ನಾವು ಬಿಡುಗಡೆ ಮಾಡಿದ್ದೇವೆ!
ಹಳದಿ ಕಾರ್ಡ್ ಭಾವನೆ ಮತ್ತು ಹಳದಿ ಕಾರ್ಡ್ ಫುಟ್‌ಬಾಲ್ ಹೆಡ್ - ರೀತಿಯ ಕ್ಷಣಗಳನ್ನು @JannikFreestyle ಅವರಂತಹ ಜರ್ಮನಿಯ ಅಗ್ರ Snap ಸ್ಟಾರ್‌ಗಳು ಕೂಡ ಆನಂದಿಸಿದ್ದಾರೆ.
ಕಂಟೆಂಟ್
Snapchatter ಗಳು Deutsche Telekom, Axel Springer, TF1, beIN SPORTS ಮತ್ತು COPA 90, Football Co, 433 ಮುಂತಾದವು ಸೇರಿದಂತೆ ಫುಟ್‌ಬಾಲ್ ಫಸ್ಟ್ ಡಿಜಿಟಲ್ ಮಿಡಿಯಾ ಬ್ರ್ಯಾಂಡ್‌ಗಳ ಜೊತೆಗಿನ ಪಾಲುದಾರಿಕೆಗಳ ಮೂಲಕ ಜರ್ಮನಿ, ಫ್ರಾನ್ಸ್ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಅಧಿಕೃತ EUROs ಹೈಲೈಟ್‌ಗಳನ್ನು ವೀಕ್ಷಿಸಬಹುದು.
ಈ ಕಂಟೆಂಟ್ ಪಾಲುದಾರಿಕೆಗಳು ಪಂದ್ಯಾವಳಿಯಿಂದ ಪ್ರತಿ ದೃಷ್ಟಿಕೋನವನ್ನು ಒಳಗೊಂಡಿದ್ದು, ಪ್ರತಿ ಪಂದ್ಯದಿಂದ ಪ್ರತಿ ಗೋಲ್, ತೆರೆಮರೆಯ ಫೂಟೇಜ್, ಚರ್ಚೆಗಳು ಮತ್ತು ಇನ್ನೂ ಹಲವನ್ನು ತಮ್ಮ ಮೆಚ್ಚಿನ ಆ್ಯಪ್ Snapchat ನಲ್ಲಿ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಅವಕಾಶ ಕಲ್ಪಿಸುತ್ತವೆ.
ತರಬೇತಿ ಶಿಬಿರಗಳಿಂದ ಕ್ರೀಡಾಂಗಣಗಳವರೆಗೆ, ಪಂದ್ಯಾವಳಿಯುದ್ದಕ್ಕೂ ತೆರೆಮರೆಯ ದೃಶ್ಯವನ್ನು ಪೋಸ್ಟ್ ಮಾಡುವ ಬೆಲ್ಜಿಯಂ @royalbelgianfa, ನೆದರ್‌ಲ್ಯಾಂಡ್ಸ್ @onsoranje ಮತ್ತು ಫ್ರಾನ್ಸ್‌ನಂತಹ @equipedefrance ಅತಿ ದೊಡ್ಡ ತಂಡಗಳನ್ನು ಅಭಿಮಾನಿಗಳು ಫಾಲೋ ಮಾಡಬಹುದು. Snapchatter ಗಳು ಆನಂದಿಸುವುದಕ್ಕಾಗಿ ಫ್ರಾನ್ಸ್ ಮತ್ತು ನೆದರ್‌ಲ್ಯಾಂಡ್‌ಗಳು ತಮ್ಮ ಸ್ವಂತ AR ಲೆನ್ಸ್‌ಗಳನ್ನು ಕೂಡ ಹೊಂದಿವೆ!
ಪ್ರಸ್ತುತ EUROs ನಲ್ಲಿ ಸ್ಪರ್ಧಿಸುತ್ತಿರುವ ಬೆಲ್ಜಿಯಲ್ ಫುಟ್‌ಬಾಲರ್ ಜೆರೆಮಿ ಡೊಕು @jeremydoku ಮತ್ತು ಬೆನ್ ಬ್ಲ್ಯಾಕ್ @benblackyt ಅವರಂತಹ ಫುಟ್‌ಬಾಲ್ ಇನ್‌ಫ್ಲುಯೆನ್ಸರ್‌ಗಳು ಸೇರಿದಂತೆ ನಮ್ಮ Snap ಸ್ಟಾರ್ ಸಮುದಾಯ ಕೂಡ EUROs ರೋಚಕತೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಜರ್ಮನಿಯಿಂದ ತಮ್ಮ ಸಾಹಸಗಳನ್ನು ಪ್ರತಿದಿನ ಪೋಸ್ಟ್ ಮಾಡುತ್ತಿದ್ದಾರೆ.
AR ಸಂಚಾಲಿತ ಪಾಲುದಾರಿಕೆಗಳು ಮತ್ತು ಅನುಭವಗಳು
ಅಭಿಮಾನಿಗಳ ಮುಂದಿನ ಪೀಳಿಗೆಗಾಗಿ ಅನುಭವವನ್ನು ಮರುರೂಪಿಸುವುದನ್ನು Snapchat ಮುಂದುವರಿಸಿರುವಂತೆ, ಹಲವಾರು ಅದ್ಭುತ ವರ್ಧಿತ ವಾಸ್ತವ ಅನುಭವಗಳು ಸೇರಿದಂತೆ, EUROs ಅನ್ನು ಸಂಭ್ರಮಿಸಲು ಹಿಂದೆಂದಿಗಿಂತಲೂ ಹೆಚ್ಚು ವಿಧಾನಗಳಿವೆ.
ಎಲ್ಲ ಅಧಿಕೃತ EUROs Nike ಮತ್ತು Adidas ತಂಡದ ಕಿಟ್‌ಗಳನ್ನು ಪ್ರಯತ್ನಿಸಿ ನೋಡಲು, ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮತ್ತು ಖರೀದಿಸುವುದಕ್ಕಾಗಿ ಸ್ವೈಪ್ ಮಾಡಲೂ ಸಹ Snapchatter ಗಳಿಗೆ ಅವಕಾಶ ಕಲ್ಪಿಸುವ ಹಲವು 'ಕಿಟ್ ಸೆಲೆಕ್ಟರ್' AR ಲೆನ್ಸ್‌ಗಳನ್ನು ಬಿಡುಗಡೆ ಮಾಡಲು ನಾವು Nike ಮತ್ತು Adidas ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. Snapchat ನ ತಾಣದಲ್ಲಿನ AR ತಂತ್ರಜ್ಞಾನ, ಕ್ಯಾಮೆರಾಕಿಟ್ ಲೈವ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, Adidas ನ ಅಧಿಕೃತ ಫ್ಯಾನ್ ವಲಯವನ್ನು ಬರ್ಲಿನ್‌ನಲ್ಲಿ ಸಜೀವವಾಗಿಸಲು ನಾವು ಸಹಾಯ ಮಾಡುತ್ತಿದ್ದು, AR ಬಳಸಿಕೊಂಡು ಅಭಿಮಾನಿಗಳು ವೀಕ್ಷಿಸುವುದನ್ನು ಪರಿವರ್ತಿಸುತ್ತಿದ್ದೇವೆ!
ನಮ್ಮ ಜರ್ಮನ್ ಪಾಲುದಾರ Deutsche Telekom ಕಂಟೆಂಟ್ ಆಚೆಗೂ ವಿಸ್ತರಿಸಲು Snapchat ನಲ್ಲಿ AR ಅವಕಾಶವನ್ನು ಅಳವಡಿಸಿಕೊಂಡಿದ್ದು, Snapchatter ಗಳ ಫುಟ್‌ಬಾಲ್ ಹುಮ್ಮಸ್ಸಿನಲ್ಲಿ ತೊಡಗಿಕೊಳ್ಳಲು EURO 2024 AR ಲೆನ್ಸ್‌ಗಳ ಸರಣಿಯನ್ನು ಪ್ರಾರಂಭಿಸುತ್ತಿದ್ದಾರೆ. ಪಂದ್ಯಾವಳಿ ಮತ್ತು ಜರ್ಮನಿ ರಾಷ್ಟ್ರೀಯ ತಂಡದ ಅಧಿಕೃತ ಪಾಲುದಾರರ ಅನುಭವಗಳು, ಪಾದದ ಟ್ರ್ಯಾಕ್ ಮಾಡುವ ತಂತ್ರಜ್ಞಾನವನ್ನು ಬಳಸಿಕೊಂಡು ಚೆಂಡನ್ನು ಪಾಸ್ ಮಾಡಲು Snapchatter ಗಳಿಗೆ ಸವಾಲು ಹಾಕುವ ಲೆನ್ಸ್ ಅನ್ನು ಒಳಗೊಂಡಿದೆ.
ಜರ್ಮನಿಯಲ್ಲಿ, ಪ್ರಾಯೋಜಕರಾದ Lufthansa ಒಂದು ಲೆನ್ಸ್ ರಚಿಸಿದ್ದು Snapchatter ಗಳು ತಮ್ಮ ಮೆಚ್ಚಿನ ತಂಡಗಳಿಂದ ಶಾಲುಗಳನ್ನು ಪ್ರಯತ್ನಿಸಬಹುದು - ಮತ್ತು ಪಂದ್ಯಾವಳಿ ವೀಕ್ಷಣೆಗಾಗಿ ಜರ್ಮನಿಗೆ ಪ್ರಯಾಣಿಸುವ ಅಭಿಮಾನಿಗಳಿಗಾಗಿ SunExpress ಒಂದು ಗೇಮಿಫೈ ಮಾಡಿರುವ ಫುಟ್‌ಬಾಲ್ ಲೆನ್ಸ್ ಅನ್ನು ಸಿದ್ಧಪಡಿಸಿದೆ.
ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲು, Snapchat ಕೂಡ ‘ತಂಡದ ಸಂಭ್ರಮಾಚರಣೆ’ ಲೆನ್ಸ್ ಅನ್ನು ಬಿಡುಗಡೆ ಮಾಡಿದ್ದು ಇದು ದೇಶದ ಹೆಸರು, ಶಾಲು ಮತ್ತು ಬಣ್ಣದ ಕಾಗದದ ಚೂರುಗಳೊಂದಿಗೆ ಒಂದು ತಂಡದ ಗೆಲುವನ್ನು ಸಂಭ್ರಮಿಸಲು Snapchatter ಗಳಿಗೆ ಅವಕಾಶ ಕಲ್ಪಿಸುತ್ತದೆ - ಮತ್ತು ತಂಡ ಊಹಿಸುವ ಲೆನ್ಸ್ ತಮ್ಮ ವಿಜೇತರನ್ನು ಆರಿಸಲು ಅಭಿಮಾನಿಗಳಿಗೆ ಅವಕಾಶ ಕಲ್ಪಿಸುತ್ತದೆ!
ತಂಡಗಳು ಗೆಲುವು ಮತ್ತು ಸೋಲುಗಳ ನಡುವೆ ಮುಂದೆ ಸಾಗಿದಂತೆ, ಎಲ್ಲ ಪ್ರಮುಖ ಕ್ರೀಡಾ ಕ್ಷಣಗಳಾದ್ಯಂತ ಎಲ್ಲ ಭಾವಗಳನ್ನು ಅನುಭವಿಸಲು ನಮ್ಮ Snapchat ಸಮುದಾಯಕ್ಕೆ ಹಿಂದೆಂದಿಗಿಂತ ಹೆಚ್ಚು ವಿಧಾನಗಳಿವೆ.
