ಫೆಬ್ರವರಿ 07, 2024
ಫೆಬ್ರವರಿ 07, 2024

Snapchat ನಲ್ಲಿ NFL ಜೊತೆಗೆ ಸೂಪರ್ ಬೌಲ್ LVIII ವೀಕ್ಷಿಸಲು ಸಜ್ಜಾಗಿ

ಹೊಚ್ಚ ಹೊಸ ಕ್ಯಾಮೆರಾ ಕಿಟ್ ಏಕೀಕರಣ, AR ಲೆನ್ಸ್‌ಗಳು, ಸ್ಪಾಟ್‌ಲೈಟ್ ಸವಾಲು ಮತ್ತು ಇನ್ನಷ್ಟರ ಜೊತೆಗೆ!

ಈ ಭಾನುವಾರ ಸೂಪರ್ ಬೌಲ್ LVIII ಇದೆ ಮತ್ತು Snapchatter ಗಳು ತಮ್ಮ ಗೇಮ್‌ ಫೇಸ್‌ಗಳನ್ನು ಹೊಂದಲು ಸಹಾಯ ಮಾಡುವುದಕ್ಕಾಗಿ, Snapchat ನಲ್ಲಿ ಕೆಲವು ವಿನೋದಮಯ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲು NFL ಜೊತೆಗೆ ನಾವು ಪಾಲುದಾರಿಕೆ ಮಾಡುತ್ತಿದ್ದೇವೆ.

ಹಲವಾರು Snapchatter ಗಳು ಕ್ರೀಡೆಯ ಕುರಿತು ತೀವ್ರಾಸಕ್ತಿ ಹೊಂದಿದ್ದಾರೆ ಮತ್ತು ಸೂಪರ್‌ ಬೌಲ್‌ನಂತಹ ಪ್ರಮುಖ ಈವೆಂಟ್‌ಗಳ ಸಂದರ್ಭ — ತಮ್ಮ ಗೇಮ್‌ ಡೇ ಉಡುಗೆಗಳನ್ನು ಸ್ನ್ಯಾಪ್ ಮಾಡುವುದರಿಂದ ಹಿಡಿದು ಜಾಹೀರಾತುಗಳ ಕುರಿತು ಚಾಟ್ ಮಾಡುವುದು ಮತ್ತು ದೊಡ್ಡ ಗೇಮ್‌ಗಳ ಸಂಭ್ರಮಾಚರಣೆ ಮಾಡುವ ತನಕ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಸಂಪರ್ಕ ಹೊಂದಲು Snapchat ಬಳಸುತ್ತಾರೆ ಎನ್ನುವುದು ನಮಗೆ ತಿಳಿದಿದೆ. ಕಳೆದ ವರ್ಷ, ಸೂಪರ್‌ ಬೌಲ್ LVII ಗಾಗಿ Snapchat ನಲ್ಲಿ ಸುಮಾರು 10 ಮಿಲಿಯನ್ ಜನರು Snapchat ನಲ್ಲಿ NFL ವೀಕ್ಷಿಸಿದರು ಮತ್ತು ಉತ್ತರ ಅಮೆರಿಕದಲ್ಲಿನ Snapchatter ಗಳು 2 ಶತಕೋಟಿಗೂ ಅಧಿಕ ಬಾರಿ ಲೆನ್ಸ್‌ಗಳೊಂದಿಗೆ ತೊಡಗಿಕೊಂಡರು.

“ಸೂಪರ್‌ ಬೌಲ್ ಕೇವಲ ಒಂದು ಆಟವಷ್ಟೇ ಅಲ್ಲ — ಸಂಬಂಧಗಳನ್ನು ಇನ್ನಷ್ಟು ಆತ್ಮೀಯವಾಗಿಸಲು, ಈ ಪ್ರಮುಖ ಕ್ರೀಡೆಗಳು ಮತ್ತು ಸಂಸ್ಕೃತಿಯ ಉನ್ನತ ಕ್ಷಣದಲ್ಲಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪರ್ಕಗೊಳಿಸಲು ನಮ್ಮ ಮೂಲಭೂತ ಬದ್ಧತೆಯನ್ನು ಮತ್ತೊಮ್ಮೆ ಒತ್ತಿ ಹೇಳಲು ಇದು ನಮಗೆ ಒಂದು ಅವಕಾಶವಾಗಿದೆ. ಈ ವರ್ಷ Snapchat, ಅಭಿಮಾನಿಗಳು ಇಷ್ಟಪಡುವ ತಂಡಗಳು ಮತ್ತು ಆಟಗಾರರನ್ನು ಇನ್ನಷ್ಟು ಹತ್ತಿರ ತರುತ್ತಿದೆ ಮತ್ತು ತಮ್ಮ ಫುಟ್‌ಬಾಲ್ ಅಭಿಮಾನವನ್ನು ವ್ಯಕ್ತಪಡಿಸಲು ಮತ್ತು ಮಹೋನ್ನತ ಆಟವನ್ನು ಸಂಭ್ರಮಿಸಲು Snapchatter ಗಳಿಗಾಗಿ ಹೊಸ ಮತ್ತು ವಿನೂತನ ವಿಧಾನಗಳನ್ನು ಕಂಡುಕೊಳ್ಳಲು NFL ಜೊತೆಗೆ ತನ್ನ ಪಾಲುದಾರಿಕೆಯನ್ನು ಮುಂದುವರಿಸಲು ರೋಮಾಂಚಿತವಾಗಿದೆ.” – ಅನ್ಮೋಲ್ ಮಲ್ಹೋತ್ರಾ, Snapchat ಕ್ರೀಡಾ ಪಾಲುದಾರಿಕೆಗಳ ಮುಖ್ಯಸ್ಥರು

ಕ್ಯಾಮೆರಾ ಕಿಟ್ ಏಕೀಕರಣಗಳು

ಈ ವರ್ಷ, ಲಾಸ್‌ ವೆಗಾಸ್‌ನ ಅಲಿಜಯಂಟ್ ಸ್ಟೇಡಿಯಂನಲ್ಲಿ Snapchat ನ ಕ್ಯಾಮೆರಾ ಕಿಟ್ ತಂತ್ರಜ್ಞಾನವನ್ನು NFL ಏಕೀಕರಿಸಲಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಸೂಪರ್ ಬೌಲ್ ಆತಿಥ್ಯದ ಕ್ರೀಡಾಂಗಣದಲ್ಲಿ Snapchat ನ ಕ್ಯಾಮೆರಾ ಕಿಟ್ ತಂತ್ರಜ್ಞಾನ ಅಳವಡಿಸಿದ ಹೆಗ್ಗುರುತು ಸೃಷ್ಟಿಯಾಗಲಿದೆ. ಆಟದುದ್ದಕ್ಕೂ, ಕಸ್ಟಮ್ ವೆಗಾಸ್ ಸೂಪರ್ ಬೌಲ್ ಥೀಮ್‌ನ ಹೆಲ್ಮೆಟ್‌ಗಳು ಮತ್ತು 49ers ಮತ್ತು Chiefs ಇಬ್ಬರಿಗಾಗಿಯೂ ಹೆಲ್ಮೆಟ್‌ಗಳು ಸೇರಿದಂತೆ, ಕ್ರೀಡಾಂಗಣದಲ್ಲಿನ ಅನುಭವವನ್ನು ವರ್ಧಿಸಲು ಭಾಗವಹಿಸುವ ಅಭಿಮಾನಿಗಳಿಳಿಗೆ ಮನರಂಜನೆಯ ಮತ್ತು ತೊಡಗಿಕೊಳ್ಳುವ ಲೆನ್ಸ್‌ಗಳನ್ನು ಇರಿಸಲಿದೆ. 

ಇದರ ಜೊತೆಗೆ, 49ers ಮತ್ತು Chiefs ಕುರಿತು ಟ್ರಿವಿಯಾ ಪ್ರಶ್ನೆಗಳನ್ನು ಪ್ರದರ್ಶಿಸುವ ಹೊಚ್ಚ ಹೊಸ ಗೇಮಿಫೈಡ್ ಸೂಪರ್ ಬೌಲ್ ಲೆನ್ಸ್ ಸೇರಿದಂತೆ, ಕ್ಯಾಮೆರಾ ಕಿಟ್ ಮೂಲಕ ಅಧಿಕೃತ NFL ಆ್ಯಪ್‌ನಲ್ಲಿ ಲಭ್ಯವಿರುವ ಕಸ್ಟಮ್ ಸೂಪರ್ ಬೌಲ್ ಅನುಭವಗಳನ್ನು NFL ಹೊಂದಲಿದೆ. 

AR ಲೆನ್ಸ್‌ಗಳು

ನಮ್ಮ Snapchat ಕ್ರೀಡಾಭಿಮಾನಿಗಳು ಕ್ರೀಡಾಂಗಣದಲ್ಲೇ ಇರಲಿ ಅಥವಾ ಮನೆಯಲ್ಲೇ ಇರಲಿ ಅವರನ್ನು ಹತ್ತಿರ ತರಲು, ನಾವು NFL ಸೂಪರ್ ಬೌಲ್ ಲೆನ್ಸ್ ಅನ್ನು ಬಿಡುಗಡೆ ಮಾಡಿದ್ದೇವೆ. ಒಂದು API ಏಕೀಕರಣವನ್ನು ಬಳಸಿಕೊಂಡಿರುವ ಈ ಅನುಭವವು ವಿವಿಧ ಗೇಮ್ ಫಲಿತಾಂಶಗಳನ್ನು ಊಹಿಸಲು ಮತ್ತು Snapchat ನಲ್ಲಿನ ಇತರರು ಹೇಗೆ ತಮ್ಮ ಆಯ್ಕೆಗಳನ್ನು ಮಾಡುತ್ತಿದ್ದಾರೆ ಎನ್ನುವ ಕುರಿತು ನೈಜ ಸಮಯದ ಡೇಟಾವನ್ನು ನೋಡಲು Snapchatter ಗಳಿಗೆ ಅವಕಾಶ ಕಲ್ಪಿಸುತ್ತದೆ. ಆಟದ ಕೊನೆಯಲ್ಲಿ, ತಮ್ಮ ಆಯ್ಕೆ ಸರಿಯಾಗಿತ್ತೇ ಎಂದು ನೋಡಲು ಲೆನ್ಸ್‌ಗೆ ಮರಳಲು Snapchatter ಗಳಿಗೆ ಸಾಧ್ಯವಾಗುತ್ತದೆ. ಈ ಲೆನ್ಸ್ ಹುಡುಕಾಟದಲ್ಲಿ, NFL ನ ಅಧಿಕೃತ Snapchat ಪ್ರೊಫೈಲ್‌ನಲ್ಲಿ ಮತ್ತು ಲೆನ್ಸ್ ಕರೋಸೆಲ್‌ನಲ್ಲಿ ಲಭ್ಯವಿರುತ್ತದೆ.

ತಮ್ಮ ತಂಡದ ಹೆಮ್ಮೆಯನ್ನು ಪ್ರದರ್ಶಿಸಲು Snapchatter ಗಳಿಗೆ ಸಹಾಯ ಮಾಡಲು, Snapchat ನ ಲೈವ್ ಗಾರ್ಮೆಂಟ್ ಟ್ರಾನ್ಸ್‌ಫರ್ ತಂತ್ರಜ್ಞಾನ ಬಳಸಿಕೊಂಡು Chiefs ಮತ್ತು 49ers ಎರಡಕ್ಕೂ ಅಧಿಕೃತ NFL ಜೆರ್ಸಿಗಳನ್ನು ಅಡಚಣೆರಹಿತವಾಗಿ ಪ್ರಯತ್ನಿಸಿ ನೋಡಲು Snapchatter ಗಳು NFL ಲೈವ್ ಜೆರ್ಸಿ ಲೆನ್ಸ್ ಬಳಸಬಹುದು. ಜೆರ್ಸಿ ಖರೀದಿಸಲು Snapchatter ಗಳು ಲೆನ್ಸ್‌ನಿಂದ ನೇರವಾಗಿ NFLShop.com ಗೆ ಕೂಡ ಭೇಟಿ ನೀಡಬಹುದು. ಈ ಲೆನ್ಸ್ ಹುಡುಕಾಟದಲ್ಲಿ, NFL ನ ಅಧಿಕೃತ Snapchat ಪ್ರೊಫೈಲ್‌ನಲ್ಲಿ ಮತ್ತು ಲೆನ್ಸ್ ಕರೋಸೆಲ್‌ನಲ್ಲಿ ಕೂಡ ಲಭ್ಯವಿರುತ್ತದೆ.

ಸ್ಪಾಟ್‌ಲೈಟ್

ಆಟದ ಅತಿದೊಡ್ಡ ಕ್ಷಣಗಳನ್ನು ಸಂಭ್ರಮಿಸುವುದನ್ನು ಇನ್ನಷ್ಟು ವಿನೋದಮಯವಾಗಿಸಲು, NFL ಜೊತೆ ಪಾಲುದಾರಿಕೆಯಲ್ಲಿ ನಾವು ಫುಟ್‌ಬಾಲ್ ಥೀಮ್‌ನ ಸ್ಪಾಟ್‌ಲೈಟ್ ಸವಾಲನ್ನು ಪ್ರಾರಂಭಿಸಿದ್ದೇವೆ. #TouchdownCelebration ಸವಾಲು, ಸವಾಲಿನ ಮುಖ ಪುಟದಲ್ಲಿ ಪ್ರದರ್ಶಿತರಾಗುವ ಅವಕಾಶಕ್ಕಾಗಿ ಮತ್ತು $20,000 ಬಹುಮಾನ ಮೊತ್ತದಲ್ಲಿ ತಮ್ಮ ಪಾಲನ್ನು ಗೆಲ್ಲುವುದಕ್ಕಾಗಿ ತಮ್ಮ ಅತ್ಯುತ್ತಮ NFL ಸೂಪರ್ ಬೌಲ್ #TouchdownCelebration ಅನ್ನು ಸಲ್ಲಿಸಲು Snapchatter ಗಳನ್ನು ಪ್ರೋತ್ಸಾಹಿಸುತ್ತದೆ. 

ಮಹೋನ್ನತ ಆಟದವರೆಗೆ ಮತ್ತು ಆಟದ ದಿನದಂದು ವಾರದುದ್ದಕ್ಕೂ ತಮ್ಮ ವೆರಿಫೈ ಆಗಿರುವ @NFL Snap Star ಖಾತೆಯಿಂದ ಸ್ಪಾಟ್‌ಲೈಟ್‌ಗೆ ಕಂಟೆಂಟ್ ಅನ್ನು ಕೂಡ NFL ಪೋಸ್ಟ್ ಮಾಡಲಿದೆ.

ಕ್ಯಾಮಿಯೋಗಳು

ಹುಡುಕಾಟದ ಮೂಲಕ ಮತ್ತು ಸ್ಟಿಕ್ಕರ್ ಡ್ರಾಯರ್‌ನಲ್ಲಿ ಆಟದ ದಿನದಂದು ಸೂಪರ್ ಬೌಲ್ ಕ್ಯಾಮಿಯೋ ಸ್ಟಿಕ್ಕರ್‌ಗಳು ಕೂಡ ಲಭ್ಯ ಇರಲಿವೆ.

ಖಂಡಿತವಾಗಿ, ಸೂಪರ್‌ ಬೌಲ್‌ಗಾಗಿ Snapchat ಹೇಗೆ ಒಂದು ನಿಲುಗಡೆಯ ವೇದಿಕೆಯಾಗಿದೆ ಎನ್ನುವ ಕುರಿತು ಇದು ಕೇವಲ ಪಕ್ಷಿನೋಟವಾಗಿದೆ. Snapchat ನಲ್ಲಿ ಕ್ರೀಡಾಕೂಟದ ಜಾಹೀರಾತು ನೀಡುವಿಕೆಯ ಆಯಾಮದ ಕುರಿತು ತಿಳಿದುಕೊಳ್ಳಲು, Snapchat ನಲ್ಲಿ ಸೂಪರ್‌ ಬೌಲ್ ಜಾಹೀರಾತುಗಳ ಶಕ್ತಿಯ ಕುರಿತು ನಮ್ಮ ವ್ಯವಹಾರಗಳಿಗಾಗಿ ಬ್ಲಾಗ್ ಪೋಸ್ಟ್ ಪರಿಶೀಲಿಸಿ.

ಗೇಮ್ ದಿನದ ಶುಭಾಶಯಗಳು!

ಸುದ್ದಿಗೆ ಮರಳಿ