ಏನಾದರೂ ನಡೆದಾಗ, Snapchatter ಗಳು ಮೊದಲು ತಮ್ಮ ಕೈಯಲ್ಲಿರುವ ಸ್ಕ್ರೀನ್ ನೋಡುತ್ತಾರೆ. ಈ ವರ್ಷ 125 ಮಿಲಿಯನ್‌ಗಿಂತ ಹೆಚ್ಚು ಜನರು Snapchat ನಲ್ಲಿ ನ್ಯೂಸ್ ಸ್ಟೋರಿಗಳನ್ನು ನೋಡಿದರು*, ಮತ್ತು U.S. ಜನರೇಷನ್ ಝಡ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಡಿಸ್ಕವರ್‌ನಲ್ಲಿ ನ್ಯೂಸ್ ಕಂಟೆಂಟ್ ನೋಡುತ್ತಾರೆ**.
ನಮ್ಮ ಸಮುದಾಯದ ಪ್ರತಿಯಾಗಿ ನಮಗೆ ಜವಾಬ್ದಾರಿ ಇದೆ ಎಂದು ನಾವು ಯಾವಾಗಲೂ ನಂಬಿದ್ದೇವೆ, ಮತ್ತು ಈ ಕಾರಣಕ್ಕಾಗಿಯೇ ವಿಶ್ವಾಸಾರ್ಹ ಮಾಹಿತಿಯನ್ನು ಮೊಬೈಲ್‌ಗಾಗಿ ಹೊಚ್ಚ ಹೊಸ ವಿಧಾನದಲ್ಲಿ ಸಿದ್ಧಪಡಿಸಲು ಆಯ್ದ ಕೆಲವು ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವ ಒಂದು ಮುಚ್ಚಿದ ವೇದಿಕೆಯಾಗಿ Snapchat ಉಳಿದಿದೆ.
ಈಗ ನಡೆಯುತ್ತಿದೆ ಅನ್ನು ನಾವು ಪರಿಚಯಿಸುತ್ತಿದ್ದೇವೆ: ಯಾವುದೇ ಸಮಯದಲ್ಲಿ, ನಿಮಿಷಗಳವರೆಗೆ, ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಇದು Snapchatter ಗಳಿಗೆ ಅತಿ ವೇಗದ ವಿಧಾನವಾಗಿದೆ.
ರಾಜಕೀಯ, ಮನರಂಜನೆ, ಕ್ರೀಡೆ ಮತ್ತು ಇನ್ನೂ ಹಲವು ವಿಷಯಗಳ ಅತಿ ದೊಡ್ಡ ಸ್ಟೋರಿಗಳ ಅಪ್‌ಡೇಟ್‌ಗಳನ್ನು ಏಕೈಕ Snap ಗಳಲ್ಲಿ ಆನ್ ಮಾಡುವುದಕ್ಕಾಗಿ ನಾವು ದಿ ವಾಷಿಂಗ್ಟನ್ ಪೋಸ್ಟ್, ಬ್ಲೂಮ್‌ಬರ್ಗ್, ರಾಯಿಟರ್ಸ್, ಎನ್‌ಬಿಸಿ ನ್ಯೂಸ್, ಇಎಸ್‌ಪಿಎನ್, ನವ್‌ದಿಸ್, ಇ! ನ್ಯೂಸ್, ಡೇಲಿ ಮೇಲ್, ಬಜ್‌ಫೀಡ್ ನ್ಯೂಸ್ ಮತ್ತು ಇನ್ನೂ ಹಲವು ಅತ್ಯಂತ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ - Snapchatter ಗಳು ಮೊಬೈಲ್‌ನಲ್ಲಿ ಬ್ರೇಕಿಂಗ್ ನ್ಯೂಸ್ ನೋಡಲು ವೇಗ ಮತ್ತು ತಕ್ಷಣದ ವಿಧಾನಕ್ಕಾಗಿ ಹೊಸ ಫಾರ್ಮ್ಯಾಟ್ ವಿನ್ಯಾಸಗೊಳಿಸಿದ್ದೇವೆ.
ನಿಮ್ಮ Bitmoji ಯನ್ನು ಪ್ರದರ್ಶಿಸುವ ನಿಮ್ಮ ದೈನಂದಿನ ಭವಿಷ್ಯ ಮತ್ತು ವೈಯಕ್ತಿಕಗೊಳಿಸಿದ ಹವಾಮಾನ ಅಪ್‌ಡೇಟ್‌ಗಳನ್ನು ನೋಡಲು ಕೂಡ ನಿಮಗೆ ಸಾಧ್ಯವಾಗುತ್ತದೆ!
ಈಗ ನಡೆಯುತ್ತಿದೆಯಲ್ಲಿ ತೋರಿಸಲು ನಮ್ಮ ಸಮುದಾಯ ಸೆರೆಹಿಡಿದಿರುವ ಸಾರ್ವಜನಿಕವಾಗಿ ಹಂಚಿಕೊಂಡ Snap ಗಳ ಆಯ್ಕೆಯನ್ನು ಕೂಡ ನಮ್ಮ ಸಂಪಾದಕೀಯ ತಂಡ ವ್ಯವಸ್ಥಿತಗೊಳಿಸುತ್ತದೆ.
ಇಂದಿನಿಂದ ಆರಂಭಿಸಿ, ಈಗ ನಡೆಯುತ್ತಿದೆ ಇದು US ನಲ್ಲಿರುವ ಎಲ್ಲರಿಗೂ ಲಭ್ಯವಿದೆ, ಮತ್ತು ಮುಂದಿನ ವರ್ಷ ವಿಶ್ವಾದಾದ್ಯಂತದ ಇನ್ನಷ್ಟು ಮಾರುಕಟ್ಟೆಗಳಲ್ಲಿ ಅದನ್ನು ವಿಸ್ತರಣೆ ಮಾಡುವ ನಿರೀಕ್ಷೆಯಲ್ಲಿದ್ದೇವೆ.
* Snap Inc. ಆಂತರಿಕ ಡೇಟಾ ಜನವರಿ-ಏಪ್ರಿಲ್ 2020
** Snap Inc. ಆಂತರಿಕ ಡೇಟಾ Q1 2020. ಜನರೇಷನ್ ಝಡ್ ಅನ್ನು 13-24 ವಯಸ್ಸಿನ ಬಳಕೆದಾರರು ಎಂದು ವ್ಯಾಖ್ಯಾನಿಸಲಾಗುತ್ತದೆ. US ಜನರೇಷನ್ ಝಡ್ ಜನಸಂಖ್ಯೆಗೆ US ಸೆನ್ಸಸ್ ಅಂಕಿಅಂಶಗಳನ್ನು ಬಳಸಲಾಗಿದೆ.