ಜಾಗತಿಕವಾಗಿ ಬೆಳೆಯುತ್ತಿರುವ ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದಲ್ಲಿ 200 ಮಿಲಿಯನ್ಗೂ ಅಧಿಕ ಮಾಸಿಕ ಸಕ್ರಿಯ Snapchatter ಗಳ ಮೈಲುಗಲ್ಲನ್ನು ಪ್ರಕಟಿಸಲು ಒಂದು ನಾವು ರೋಮಾಂಚಿತರಾಗಿದ್ದೇವೆ. ತಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಲು Snapchat ಬಳಸುವುದನ್ನು ನಮ್ಮ ಭಾರತೀಯ ಸಮುದಾಯವು ಮುಂದುವರಿಸಿದೆ.
ಮುಂದುವರಿದು, ಕಥೆಗಳು ಮತ್ತು ಸ್ಪಾಟ್ಲೈಟ್ನಾದ್ಯಂತ 120 ಮಿಲಿಯನ್ಗೂ ಅಧಿಕ Snapchatter ಗಳು ಕಂಟೆಂಟ್ಗಳನ್ನು ವೀಕ್ಷಿಸುತ್ತಿದ್ದು, ಇದರೊಂದಿಗೆ ಸ್ಪಾಟ್ಲೈಟ್ನಲ್ಲಿ ಭಾರತೀಯರು ಕಳೆಯುತ್ತಿರುವ ಸಮಯವು ಮೂರು ಪಟ್ಟಾಗುತ್ತಿದೆ.
ಸ್ಥಳೀಯಗೊಳಿಸಿದ ವೇದಿಕೆ ಅನುಭವ, ಸ್ಥಳೀಯ ಕಂಟೆಂಟ್ ಉಪಕ್ರಮಗಳು ಮತ್ತು ಪಾಲುದಾರಿಕೆಗಳು ಹಾಗೂ ಸ್ಪಾಟ್ಲೈಟ್ ಮತ್ತು ಕಥೆಗಳ ಮೂಲಕ ಪ್ರಾದೇಶಿಕ ಕ್ರಿಯೇಟರ್ಗಳ ಮೇಲೆ ಮೀಸಲಾಗಿರಿಸಿದ ಗಮನದ ಮೂಲಕ Snap ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದ್ದು, ಇವೆಲ್ಲವೂ ಈ ಗಮನಾರ್ಹ ಮೈಲುಗಲ್ಲನ್ನು ತಲುಪಲು Snap ಗೆ ಸಹಾಯ ಮಾಡುತ್ತಿವೆ.
ವರ್ಧಿತ ವಾಸ್ತವದ (AR) ಬಳಕೆ ಮತ್ತು ಸೃಷ್ಟಿ ಭಾರತೀಯ Snapchatter ಗಳೊಂದಿಗೆ ಪ್ರತಿಧ್ವನಿಸುತ್ತಿದ್ದು, ಸಾಂಸ್ಕೃತಿಕ ಕ್ಷಣಗಳನ್ನು ಆನಂದಿಸಲು ಅವರು Snapchat AR ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಭಾರತದಲ್ಲಿ, Snapchatter ಗಳು ಪ್ರತಿ ತಿಂಗಳು 50 ಬಿಲಿಯನ್ಗೂ ಅಧಿಕ ಬಾರಿ ವರ್ಧಿತ ವಾಸ್ತವ (AR) ಲೆನ್ಸ್ಗಳೊಂದಿಗೆ ವಿನೋದಿಸುತ್ತಿದ್ದಾರೆ ಮತ್ತು ಭಾರತದಲ್ಲಿ ಹಬ್ಬದ ಸಂದರ್ಭಗಳಲ್ಲಿ ತಮ್ಮನ್ನು ದೃಶ್ಯಾತ್ಮಕವಾಗಿ ಅಭಿವ್ಯಕ್ತಪಡಿಸಲು 85% ಗೂ ಹೆಚ್ಚು Snapchatter ಗಳು ಲೆನ್ಸ್ಗಳನ್ನು ಬಳಸುತ್ತಿದ್ದಾರೆ.
Snapchat ನಲ್ಲಿ ನಮ್ಮ ಭಾರತೀಯ ಸಮುದಾಯವನ್ನು ಅವರ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಇನ್ನಷ್ಟು ಹೆಚ್ಚು ಸಂಪರ್ಕಗೊಳಿಸುವುದನ್ನು ಮತ್ತು ಪ್ರತಿದಿನ ಹೊಸ ಅನುಭವಗಳೊಂದಿಗೆ Snapchatter ಗಳನ್ನು ಖುಷಿಪಡಿಸುವುದನ್ನು ನಾವು ಇಷ್ಟಪಡುತ್ತೇವೆ. ಹಾಗಾಗಿ, ನಮ್ಮೊಂದಿಗೆ Snap ಮಾಡುತ್ತಿರುವುದಕ್ಕಾಗಿ ಧನ್ಯವಾದಗಳು, ಭಾರತ!
ಬಳಕೆದಾರರ ಮಾಪನಗಳನ್ನು ನಾವು ಹೇಗೆ ಲೆಕ್ಕಾಚಾರ ಮಾಡುತ್ತೇವೆ ಎನ್ನುವುದರ ವಿವರಗಳಿಗಾಗಿ ನಮ್ಮ SEC ಫೈಲಿಂಗ್ಸ್ ನೋಡಿ