ಮಾರ್ಚ್ 14, 2024
ಮಾರ್ಚ್ 14, 2024

 ಹೆಚ್ಚು ನಮ್ಯತೆ ಮತ್ತು ನಿಯಂತ್ರಣವನ್ನು ಒದಗಿಸುವ ಹೊಸ ಸಂಭಾಷಣೆ ಸೆಟ್ಟಿಂಗ್‌ಗಳು

ಆರಂಭದಿಂದಲೂ ಕೂಡ, ತಮ್ಮ ಅತ್ಯಂತ ಪರಿಪೂರ್ಣ ಕಂಟೆಂಟ್ ಅನ್ನು ಮಾತ್ರ ಪೋಸ್ಟ್ ಮಾಡಲು ಒತ್ತಡದ ಭಾವನೆಯನ್ನು ಜನರು ಅನುಭವಿಸುವ ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಗೆ ಪರ್ಯಾಯವಾಗಿ ಒದಗಿಸಲು Snapchat ಅನ್ನು ವಿನ್ಯಾಸಗೊಳಿಸಲಾಗಿದೆ.

ಆದಕಾರಣ Snapchatter ಗಳು ಆ್ಯಪ್ ತೆರೆದಾಗ ಅವರ ದೃಷ್ಟಿಕೋನವನ್ನು ಸೆರೆಹಿಡಿಯಲು ಸಜ್ಜಾಗಿರುವ ಕ್ಯಾಮೆರಾವು ಅವರಿಗೆ ಸ್ವಾಗತ ಕೋರುತ್ತದೆ ಮತ್ತು ಸಂಭಾಷಣೆಗಳು ಆ ಕ್ಷಣದಲ್ಲಿ ನಡೆಯುವ ನೈಜ ಬದುಕಿನಲ್ಲಿ ನಾವು ಸ್ನೇಹಿತರ ಜೊತೆ ಮಾತನಾಡುವುದನ್ನು ನಕಲು ಮಾಡುವ ರೀತಿ, ಸಂದೇಶಗಳು ಡಿಫಾಲ್ಟ್ ಆಗಿ ಅಳಿಸಲ್ಪಡುತ್ತವೆ. 

ನಮ್ಮ ನಂಬರ್ ಒನ್ ಬಳಕೆ (ಮತ್ತು ಯಾವಾಗಲೂ) ಮೆಸೇಜಿಂಗ್ ಆಗಿದೆ ಮತ್ತು ಇಂದು, 25 ಕ್ಕಿಂತ ಹೆಚ್ಚಿನ ದೇಶಗಳ 13 ರಿಂದ 24 ವರ್ಷ ವಯಸ್ಸಿನ ಒಳಗಿನ ಪ್ರತಿ ನಾಲ್ವರಲ್ಲಿ ಮೂವರು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಖಾಸಗಿಯಾಗಿ ಸಂಭಾಷಣೆ ನಡೆಸಲು ನಮ್ಮ ವೇದಿಕೆಯನ್ನು ಬಳಸುತ್ತಾರೆ.

ಇಂದಿನವರೆಗೆ, ನೈಜ-ಜೀವನದ ಸಂಭಾಷಣೆಗಳ ಆಯಾಮಗಳ ರೀತಿಯಲ್ಲಿ – Snap ಗಳು ಅಥವಾ ಚಾಟ್‌ಗಳನ್ನು ವೀಕ್ಷಿಸಿದ ತಕ್ಷಣ ಅವುಗಳನ್ನು ಅಳಿಸುವ – ಅಥವಾ ಅವುಗಳನ್ನು ನೋಡಿದ 24 ಗಂಟೆಗಳ ಬಳಿಕ ಅಳಿಸುವ ಆಯ್ಕೆಯನ್ನು Snapchatter ಗಳು ಹೊಂದಿದ್ದರು. Snapchatter ಗಳು ಉಳಿಸಿಕೊಳ್ಳಲು ಬಯಸುವ ಸಂದೇಶಗಳನ್ನು ವೈಯಕ್ತಿಕ ಆಧಾರದಲ್ಲಿ ಉಳಿಸಬೇಕಾಗಿತ್ತು. 

ಕ್ಷಣಿಕತೆಯು ಯಾವಾಗಲೂ ನಮ್ಮ ವಿನ್ಯಾಸ ಸಿದ್ಧಾಂತದ ಅಡಿಪಾಯವಾಗಿತ್ತು ಮತ್ತು ನಮ್ಮ ಸಮುದಾಯದಿಂದ ವರದಿಗಳನ್ನು ಪರಿಶೀಲಿಸುವಾಗ ಹಾಗೂ ಕಾನೂನು ಜಾರಿ ಸಂಸ್ಥೆಗಳಿಂದ ಮಾನ್ಯವಾದ ವಿನಂತಿಗಳನ್ನು ಬೆಂಬಲಿಸುವಾಗ ಡೇಟಾ ಉಳಿಸಿಕೊಳ್ಳಲು ಸಾಧ್ಯವಾಗುವ ನಮ್ಮ ಸಾಮರ್ಥ್ಯವನ್ನು ಈ ಡಿಫಾಲ್ಟ್ ಸೆಟ್ಟಿಂಗ್‌ಗಳು ತಡೆಯುವುದಿಲ್ಲ.

ನಾವು Snapchatter ಗಳ ಮಾತುಗಳನ್ನು ನಿರಂತರವಾಗಿ ಆಲಿಸುತ್ತಿದ್ದೇವೆ ಮತ್ತು ಅವರಿಂದ ಕಲಿಯುತ್ತಿದ್ದೇವೆ ಮತ್ತು ಅವರ ಅಗತ್ಯಗಳನ್ನು ಆಧರಿಸಿ ವಿಚಾರಶೀಲತೆಯಿಂದ ಆವಿಷ್ಕರಿಸುತ್ತಿದ್ದೇವೆ. ನಮ್ಮ ಸಮುದಾಯದ ಅಭಿಪ್ರಾಯಗಳಿಗೆ ಪ್ರತಿಸ್ಪಂದನೆಯಾಗಿ, ಅತ್ಯಂತ ಮುಖ್ಯವಾಗಿರುವ ಜನರ ಜೊತೆಗಿನ ಸಂಭಾಷಣೆಗಳ ಮೇಲೆ ಇನ್ನೂ ಹೆಚ್ಚು ನಮ್ಯತೆ ಮತ್ತು ನಿಯಂತ್ರಣವನ್ನು ಒದಗಿಸಲಿದೆ ಎಂದು ನಾವು ಆಶಿಸುವ ಹೊಸ ಸೆಟ್ಟಿಂಗ್ ಅನ್ನು ಚಾಟ್‌ನಲ್ಲಿ ಒದಗಿಸಲು ನಾವು ಹರ್ಷಿತರಾಗಿದ್ದೇವೆ. 

ಈಗ ಪರೀಕ್ಷಿಸಲಾಗುತ್ತಿರುವ ಈ ಹೊಸ ಆಯ್ಕೆಯು iMessage ಅಥವಾ SMS ನಲ್ಲಿ ಸಂದೇಶಗಳು ಉಳಿಸಲ್ಪಡುವ ರೀತಿಯಲ್ಲೇ ತಮ್ಮ ಸಂಭಾಷಣೆಗಳನ್ನು ಅನಿರ್ದಿಷ್ಟಾವಧಿಗೆ ಉಳಿಸಿಕೊಳ್ಳುವಂತೆ ಸೆಟ್ ಮಾಡಲು Snapchatter ಗಳಿಗೆ ಅವಕಾಶ ಕಲ್ಪಿಸುತ್ತದೆ. ಸಂಭಾಷಣೆಯಿಂದ-ಸಂಭಾಷಣೆಗೆ ಆಧಾರದಲ್ಲಿ ಈ ಸೆಟ್ಟಿಂಗ್ ಅನ್ನು ಆಯ್ದುಕೊಳ್ಳಲು Snapchatter ಗಳಿಗೆ ಸಾಧ್ಯವಾಗುತ್ತದೆ – ಅಂದರೆ ಅವರು ಉದಾಹರಣೆಗೆ, ತಮ್ಮ ಆತ್ಮೀಯ ಸ್ನೇಹಿತರೊಂದಿಗಿನ ಸಂಭಾಷಣೆಯನ್ನು ಅನಿರ್ದಿಷ್ಟಾವಧಿಗೆ ಉಳಿಸಿಕೊಳ್ಳಲು ಮತ್ತು ಇತರರ ಜೊತೆಗಿನ ಸಂಭಾಷಣೆಗಳನ್ನು ವೀಕ್ಷಿಸಿದ ಬಳಿಕ ಅಳಿಸುವುದನ್ನು ಮುಂದುವರಿಸಲು ಆಯ್ಕೆ ಮಾಡಬಹುದು. ಸಂಭಾಷಣೆಯಲ್ಲಿನ ಭಾಗಿಗಳು ಯಾವುದೇ ಸಮಯದಲ್ಲಿ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಬಹುದು ಮತ್ತು ಚಾಟ್‌ನಲ್ಲಿನ ಸೂಚನೆಗಳು ಇತ್ತೀಚಿನ ಆಯ್ಕೆಗಳು ಸ್ಪಷ್ಟವಾಗಿವೆ ಎನ್ನುವುದನ್ನು ಖಚಿತಪಡಿಸುತ್ತವೆ. 

ಸಂಭಾಷಣೆಗಳು ಡಿಫಾಲ್ಟ್ ಆಗಿ ಅಳಿಸಲ್ಪಡುವುದು ಮುಂದುವರಿಯಲಿದ್ದು, ತಮ್ಮ ಸ್ನೇಹಿತರೊಂದಿಗೆ ಹೇಗೆ ಸಂಪರ್ಕಗೊಳ್ಳುತ್ತಾರೆ ಎನ್ನುವುದನ್ನು ಕಷ್ಟಮೈಸ್ ಮಾಡಲು ಇನ್ನಷ್ಟು ವಿಧಾನಗಳನ್ನು ನಮ್ಮ ಸಮುದಾಯಕ್ಕೆ ಈ ಹೊಸ ಆಯ್ಕೆಯು ಒದಗಿಸುತ್ತದೆ ಎಂದು ನಾವು ಆಶಿಸುತ್ತೇವೆ. 

ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎನ್ನುವ ಕುರಿತು ಇನ್ನಷ್ಟು ಮಾಹಿತಿಗಾಗಿ, ನಮ್ಮ ಬೆಂಬಲ ಪುಟವನ್ನು ಪರಿಶೀಲಿಸಿ [LINK].


ಸುದ್ದಿಗೆ ಮರಳಿ