ಜುಲೈ 28, 2023
ಜುಲೈ 28, 2023

ಅಂತಾರಾಷ್ಟ್ರೀಯ ಸ್ನೇಹದ ದಿನದ ಶುಭಾಶಯಗಳು!

ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು, ನಿಮಗೆ ಅತ್ಯಂತ ಮುಖ್ಯವಾಗಿರುವ ಜನರೊಂದಿಗೆ ಸಂಪರ್ಕ ಹೊಂದಿರಲು ಅತಿವೇಗದ ವಿಧಾನವಾಗಿ Snapchat ಅನ್ನು ನಿರ್ಮಿಸಲಾಗಿದೆ. ಪ್ರತಿ ದಿನ ಜೊತೆಯಾಗಿ Snap ಮತ್ತು ಚಾಟ್ ಮಾಡುವ ಮೂಲಕ ಬಲಗೊಂಡ ಕೋಟಿಗಟ್ಟಲೆ ಸ್ನೇಹಸಂಬಂಧಗಳು ಇವೆ! 


Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು ಮತ್ತು ತಮ್ಮ ವಿಶಿಷ್ಟ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಪ್ರತಿ ದಿನ ಸರಾಸರಿ 5 ಬಿಲಿಯನ್‌ಗೂ ಹೆಚ್ಚು Snap ಗಳನ್ನು ಸೃಷ್ಟಿಸುತ್ತಾರೆ. ತಮ್ಮ ಸ್ನೇಹಿತರಿಗೆ ಕರೆ ಮಾಡುವ ಮೂಲಕ ಮತ್ತು ತಮ್ಮ ಮೆಚ್ಚಿನ ನೆನಪುಗಳನ್ನು ಜೊತೆಯಾಗಿ ಮರುಸ್ಮರಣೆ ಮಾಡುವ ಮೂಲಕ ಕೂಡ ನಮ್ಮ ಸಮುದಾಯವು ಸಂಬಂಧ ಕಾಪಾಡಿಕೊಳ್ಳಲು ಇಷ್ಟಪಡುತ್ತದೆ. ಒಟ್ಟಾರೆಯಾಗಿ, Snapchatter ಗಳು ಪ್ರತಿ ದಿನ ಸರಾಸರಿ 900 ಮಿಲಿಯನ್ ನಿಮಿಷಗಳಿಗೂ ಹೆಚ್ಚು ಸಮಯ ಮಾತನಾಡುತ್ತಾರೆ ಮತ್ತು ಪ್ರತಿದಿನ ಸರಾಸರಿ 280 ಮಿಲಿಯನ್‌ಗೂ ಹೆಚ್ಚು ಬಾರಿ ತಮ್ಮ ಸ್ನೇಹಿತರೊಂದಿಗೆ ಮೆಚ್ಚಿನ ನೆನಪುಗಳನ್ನು ಹಂಚಿಕೊಳ್ಳುತ್ತಾರೆ!

ಹಾಗಾಗಿ, ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಲು, ಸ್ನೇಹಿತರಿಗಾಗಿ ವೈಯಕ್ತಿಕಗೊಳಿಸಿದ ಕಳೆದ ದಿನಗಳ ನೆನಪುಗಳನ್ನು ಒದಗಿಸಲು ನಾವು ರೋಮಾಂಚಿತರಾಗಿದ್ದೇವೆ. 

ಅರ್ಹತೆ ಪಡೆಯುವ Snapchatter ಗಳು ಕ್ಯಾಮೆರಾದಲ್ಲಿ ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ಅವರು ಹಾಗೂ ಅವರ ಆತ್ಮೀಯ ಸ್ನೇಹಿತರಿಗಾಗಿಯೇ ತಯಾರಿಸಲಾಗಿರುವ ವಿಶೇಷ ಕಥೆಯನ್ನು ನೋಡಬಹುದು ಮತ್ತು ಅವರು ತಮ್ಮ ಸ್ನೇಹಿತರು ಮತ್ತು ಮೆಚ್ಚಿನ ಕ್ರಿಯೇಟರ್‌ಗಳಿಂದ ಕಥೆಗಳನ್ನು ನೋಡುವಲ್ಲಿಯೇ, ಇಂಟರ್‌ನೆಟ್‌ನ ಆತ್ಮೀಯ ಸ್ನೇಹಿತ ಮತ್ತು Snapchat Snap ಸ್ಟಾರ್, Tinx ನಿಂದ ಸಲಹೆಯನ್ನು ಆಲಿಸಬಹುದು.

Happy Snapping!


ಸುದ್ದಿಗೆ ಮರಳಿ