ನಮ್ಮ ಸಮುದಾಯವು ವಿಶ್ವದ ಕೆಲವು ಸೃಜನಶೀಲ ಮಾಧ್ಯಮ ಕಂಪನಿಗಳಿಂದ ಉತ್ತಮ ಗುಣಮಟ್ಟದ ವಿಷಯವನ್ನು ಆನಂದಿಸಲು ಹೊಸ ಮಾರ್ಗವಾಗಿ ನಾವು Snapchatನಲ್ಲಿ ಪಬ್ಲಿಷರ್ ಸ್ಟೋರಿಗಳನ್ನು ಪ್ರಾರಂಭಿಸಿ ಸುಮಾರು ಮೂರು ವರ್ಷಗಳಾಗಿವೆ.
ಇಂದು, ಶಾಲಾ ಸುದ್ದಿಪತ್ರಿಕೆಗಳನ್ನು ಒಳಗೊಳ್ಳಲು ನಾವು ಪಬ್ಲಿಷರ್ ಕಥೆಗಳನ್ನು ವಿಸ್ತರಿಸುತ್ತಿದ್ದೇವೆ. ಶಾಲಾ ಸುದ್ದಿಪತ್ರಿಕೆಗಳು ಅವರ ಕ್ಯಾಂಪಸ್ ಕಮ್ಯುನಿಟಿಗೆ ಮಾಹಿತಿ ನೀಡುವ ಮತ್ತು ಮನರಂಜನೆ ಒದಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಮತ್ತು ಬಹುತೇಕ ಪತ್ರಕರ್ತರು ಸಾಮಾನ್ಯವಾಗಿ ತಮ್ಮ ಮೊದಲ ಪತ್ರಿಕೋದ್ಯಮದ ಅನುಭವ ಪಡೆಯುವುದು ಇಲ್ಲಿಯೇ.
ನಾವು ಅನೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ, ಇವುಗಳ ಸಂಪಾದಕರು ಸಾಪ್ತಾಹಿಕ ಪಬ್ಲಿಷರ್ ಕಥೆಗಳನ್ನು ಸಿದ್ಧಪಡಿಸುತ್ತಾರೆ ಮತ್ತು ಅವುಗಳನ್ನು Snapchat ನಲ್ಲಿ ವಿತರಣೆ ಮಾಡುತ್ತಾರೆ. ಪ್ರತಿ ಶಾಲೆ ಆದಾಯ ಗಳಿಸುವುದಕ್ಕೆ ನೆರವಾಗಲು ಮತ್ತು ಅವರ ಸುದ್ದಿಪತ್ರಿಕೆಯನ್ನು ಆದಾಯ ಹಂಚಿಕೆ ಒಪ್ಪಂದದ ಮೂಲಕ ಬೆಳೆಸಲು ಈ ಕಥೆಗಳು Snap ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ.
ಮುಂದಿನ ಪೀಳಿಗೆಯ ಪತ್ರಕರ್ತರನ್ನು ಸಬಲೀಕರಣಗೊಳಿಸಲು ದೇಶಾದ್ಯಂತದ ಪ್ರತಿಭಾನ್ವಿತ ವಿದ್ಯಾರ್ಥಿಗಳೊಂದಿಗೆ ಪಾಲುದಾರರಾಗಲು ನಮಗೆ ಹೆಮ್ಮೆ ಅನಿಸುತ್ತದೆ ಮತ್ತು ಅವರು ಏನನ್ನು ಸೃಷ್ಟಿಸುತ್ತಾರೆ ಎನ್ನುವುದನ್ನು ನೋಡಲು ಕಾತರರಾಗಿದ್ದೇವೆ!