ಪರಸ್ಪರ ಸಂಪರ್ಕಿತರಾಗಿರುವುದಕ್ಕಾಗಿ -- ವಿಶೇಷವಾಗಿ ಸಾಂಕ್ರಾಮಿಕ ಕಾಯಿಲೆಯ ಸಂದರ್ಭ -- ಡಿಜಿಟಲ್ ಟೂಲ್‌ಗಳ ಪ್ರಾಮುಖ್ಯತೆ ಹಾಗೂ ಈ ಟೂಲ್‌ಗಳು ಸೃಷ್ಟಿಸಬಹುದಾದ ಸಂಭಾವ್ಯ ಅಪಾಯಗಳು ಎರಡನ್ನೂ ನಾವೆಲ್ಲ ತಿಳಿದುಕೊಂಡಿದ್ದೇವೆ.
ಡಿಜಿಟಲ್ ವೇದಿಕೆಗಳ ಅಪಾಯದ ಒಂದು ಮೂಲವೆಂದರೆ -- ಕೆಲವೊಮ್ಮೆ ವೇದಿಕೆಯ ಸ್ಪಷ್ಟ ಒತ್ತಾಯದ ಮೇರೆಗೆ -- ನಮ್ಮ ನಿಜ ಬದುಕಿನಲ್ಲಿ ನಮಗೆ ಪರಿಚಿತರಲ್ಲದ ಮತ್ತು ಸುಳ್ಳು ಮಾಹಿತಿ ಹರಡುವಿಕೆ, ಕಿರುಕುಳ, ಅಥವಾ ಅನಪೇಕ್ಷಿತ ಸನ್ನಿವೇಶಗಳು ಮುಂತಾದ ಋಣಾತ್ಮಕ ಅನುಭವಗಳಿಗೆ ನಮ್ಮನ್ನು ಒಡ್ಡಬಹುದಾದ ಸಂಪರ್ಕಗಳನ್ನು ಸೃಷ್ಟಿಸುವುದು.
Snapchat ನಲ್ಲಿ ನಾವು ಆ ಅಪಾಯಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ನಮ್ಮ ಆ್ಯಪ್ ರಚಿಸಿದೆವು. ನೈಜ ಸ್ನೇಹಿತರ ನಡುವೆ ಸಂಪರ್ಕ ಮತ್ತು ಸಂಭಾಷಣೆಯನ್ನು ಉತ್ತೇಜಿಸುವ, ಇದೇ ವೇಳೆ ಅಪರಿಚಿತರಿಗೆ Snapchatter ಗಳನ್ನು ಕಂಡುಕೊಳ್ಳಲು ಮತ್ತು ಸ್ನೇಹಿತರನ್ನಾಗಿಸಿಕೊಳ್ಳಲು ಹೆಚ್ಚು ಕಠಿಣವಾಗಿಸುವ ರೀತಿಯಲ್ಲಿ ನಮ್ಮ ವೇದಿಕೆಯ ಸಂರಚನೆಯನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, Snapchat ನಲ್ಲಿ:
18 ವರ್ಷಕ್ಕಿಂತ ಕಡಿಮೆ ವಯಸ್ಸಿನ Snapchatter ಗಳಿಗೆ ಬ್ರೌಸ್ ಮಾಡಬಹುದಾದ ಸಾರ್ವಜನಿಕ ಪ್ರೊಫೈಲ್‌ಗಳು ಇಲ್ಲ;
ಪೂರ್ವನಿಯೋಜಿತವಾಗಿ, ನೀವಿಬ್ಬರೂ ಪರಸ್ಪರರನ್ನು ಸ್ನೇಹಿತರಾಗಿ ಸೇರಿಸಿಕೊಳ್ಳದ ಹೊರತು ನೀವು ಇನ್ನೊಬ್ಬರೊಂದಿಗೆ ಚಾಟ್ ಮಾಡಲು ಅಥವಾ ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಿಲ್ಲ;
ನಮ್ಮ ಅನೇಕ ವೈಶಿಷ್ಟ್ಯಗಳನ್ನು ಪೂರ್ವನಿಯೋಜಿತವಾಗಿ ಖಾಸಗಿಗೆ ನಿಗದಿಪಡಿಸಲಾಗಿದ್ದು, ಇದು Snapchatter ಗಳು ತಮ್ಮ ಸ್ನೇಹಿತರೊಂದಿಗೆ, ತಮ್ಮ ಸ್ಥಳದಂಥ ಮಾಹಿತಿಯನ್ನು ಅರಿವಿಗೆ ಬಾರದೆ ಹಂಚಿಕೊಳ್ಳುವುದನ್ನು ತಡೆಯಲು ನೆರವಾಗುತ್ತದೆ; ಮತ್ತು
ಇತರ ಸಂಯೋಜನೆಗಳಲ್ಲಿ ಕೆಲವೊಮ್ಮೆ ತೀವ್ರವಾದಿ ಕಂಟೆಂಟ್ ಅಥವಾ ಪುಷ್ಠೀಕರಣಕ್ಕೆ ದಿಕ್ಸೂಚಿಯಾಗುವ ರೀತಿಯಲ್ಲಿ 'ವೈರಲ್ ಆಗುವ' ಅವಕಾಶವನ್ನು ನಾವು ಗುಂಪು ಚಾಟ್‌ಗಳಿಗೆ ನೀಡುವುದಿಲ್ಲ. ಗುಂಪು ಚಾಟ್‌ಗಳನ್ನು ನೈಜ ಸ್ನೇಹಿತರ ಗುಂಪುಗಳಲ್ಲಿ ಸಂಭಾಷಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಅವುಗಳ ಗಾತ್ರವನ್ನು ನಾವು 64 ಸ್ನೇಹಿತರಿಗೆ ಮಿತಿಗೊಳಿಸುತ್ತೇವೆ. ಚಾಟ್ ಟ್ಯಾಬ್‌ನ ಹೊರಗೆ ಆ್ಯಪ್‌ನಲ್ಲಿ ಬೇರೆಲ್ಲಿಯೂ ಗುಂಪುಗಳನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಶಿಫಾರಸು ಮಾಡುವುದಿಲ್ಲ ಅಥವಾ ಕಾಣಿಸುವುದಿಲ್ಲ.
ಇನ್ನಷ್ಟು ಸುರಕ್ಷಿತ ಇಂಟರ್‌ನೆಟ್ ದಿನವಾದ ಇಂದು, ಹೊಸ ವೈಶಿಷ್ಟ್ಯ "ಫ್ರೆಂಡ್ ಚೆಕ್ ಅಪ್" ಘೋಷಿಸುವ ಮೂಲಕ ನಾವು ಇನ್ನೊಂದು ಹೆಜ್ಜೆ ಮುಂದಿಡುತ್ತಿದ್ದೇವೆ, ಈ ವೈಶಿಷ್ಟ್ಯವು Snapchatter ಗಳು ತಮ್ಮ ಸ್ನೇಹಿತರ ಪಟ್ಟಿಗಳನ್ನು ಪರಿಶೀಲಿಸಲು ಮತ್ತು ಅವರು ಈಗಲೂ ಸಂಪರ್ಕಿತರಾಗಿ ಇರಲು ಬಯಸುವ ಸ್ನೇಹಿತರನ್ನು ಆ ಪಟ್ಟಿ ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡುತ್ತದೆ. ಈ ಸರಳ ಟೂಲ್‌ಟಿಪ್ ಅನ್ನು Snapchatter ಗಳಿಗೆ ಅವರ ಪ್ರೊಫೈಲ್‌ನಲ್ಲಿ ಅಧಿಸೂಚನೆಯಾಗಿ ಒದಗಿಸಲಾಗುತ್ತದೆ. Android ಸಾಧನಗಳಿಗೆ ಮುಂಬರುವ ವಾರಗಳಲ್ಲಿ, ಮತ್ತು iOS ಸಾಧನಗಳಿಗೆ ಮುಂಬರುವ ತಿಂಗಳುಗಳಲ್ಲಿ ಜಾಗತಿಕವಾಗಿ ಫ್ರೆಂಡ್ ಚೆಕ್ ಅಪ್ ವೈಶಿಷ್ಟ್ಯ ಲಭ್ಯವಾಗಲಿದೆ.
ತಮ್ಮ ಸ್ನೇಹಿತರ ಪಟ್ಟಿಗೆ ಸೇರಿಸಿರುವ ಆದರೆ ನಮ್ಮ ಆ್ಯಪ್‌ನಲ್ಲಿ ಇನ್ನು ಮುಂದೆ ಅವರೊಂದಿಗೆ ಸಂಪರ್ಕಿತರಾಗಿ ಇರಲು ಬಯಸದ ಸ್ನೇಹಿತರ ಬಗ್ಗೆ ಫ್ರೆಂಡ್ ಚೆಕ್ ಅಪ್ Snapchatter ಗಳಿಗೆ ಕಾಲಕಾಲಕ್ಕೆ ಜ್ಞಾಪಿಸುತ್ತದೆ. ತ್ವರಿತ, ಖಾಸಗಿ, ಅನುಕೂಲಕರ ಪ್ರಕ್ರಿಯೆಯೊಂದಿಗೆ, ತಮ್ಮ ಪಟ್ಟಿಗಳನ್ನು ಅಚ್ಚುಕಟ್ಟಾಗಿಸಿಕೊಳ್ಳಲು ಮತ್ತು ಆ ಪಟ್ಟಿಯಲ್ಲಿ ಬೇಕಿಲ್ಲದ ಅಥವಾ ಪ್ರಮಾದವಶಾತ್ ಸೇರಿಸಲ್ಪಟ್ಟವರನ್ನು ಆರಾಮದಾಯಕವಾಗಿ ತೆಗೆದುಹಾಕಲು ಫ್ರೆಂಡ್ ಚೆಕ್ ಅಪ್ Snapchatter ಗಳಿಗೆ ಅನುಕೂಲ ಕಲ್ಪಿಸುತ್ತದೆ.
ಈ ಹೊಸ ವೈಶಿಷ್ಟ್ಯವು, ನಮ್ಮ ಮೊಬೈಲ್-ಮೊದಲು ಪೀಳಿಗೆಯೊಂದಿಗೆ ದನಿಗೂಡಿಸಲು ನೆರವಾಗುವ ರೀತಿಗಳಲ್ಲಿ, Snapchat ನಲ್ಲಿ ಆನ್‌ಲೈನ್ ಸುರಕ್ಷತೆ ಮತ್ತು ಗೌಪ್ಯತೆ ಶಿಕ್ಷಣವನ್ನು ಇನ್ನಷ್ಟು ಏಕೀಕೃತಗೊಳಿಸುವ ಗುರಿಯೊಂದಿಗೆ ನಾವು ಕಳೆದ ತಿಂಗಳು ಆರಂಭಿಸಿದ ಹೆಚ್ಚು ಸಮಗ್ರ ಅಭಿಯಾನದ ಭಾಗವಾಗಿದೆ. ಆ್ಯಪ್‌ನಲ್ಲಿನ ಟೂಲ್‌ಗಳಿಗೆ ಹೆಚ್ಚುವರಿಯಾಗಿ, ಈ ಉಪಕ್ರಮವು ಇಂದು ನಾವು ಮಾಡುತ್ತಿರುವ ಹಲವು ಘೋಷಣೆಗಳು ಸೇರಿದಂತೆ, ಹೊಸ ಪಾಲುದಾರಿಕೆಗಳು ಮತ್ತು ಸಂಪನ್ಮೂಲಗಳನ್ನು ಕೂಡ ಒಳಗೊಂಡಿದೆ.
ಇನ್ನಷ್ಟು ಸುರಕ್ಷಿತ ಇಂಟರ್‌ನೆಟ್ ದಿನಕ್ಕಾಗಿ ಆ್ಯಪ್‌ನಲ್ಲಿ ಜಾಗೃತಿ ಮೂಡಿಸುವುದಕ್ಕೆ, ಪ್ರತಿ ಸಂಸ್ಥೆಯಿಂದ ಹೆಚ್ಚುವರಿ ಸುರಕ್ಷತಾ ಸಂಪನ್ಮೂಲಗಳನ್ನು ಒದಗಿಸುವ ಫಿಲ್ಟರ್‌ಗಳಿಗೆ ಸಂಬಂಧಿಸಿ ನಾವು US ನಲ್ಲಿ Connect Safely ಜೊತೆಗೆ ಮತ್ತು UK ನಲ್ಲಿ ChildNet ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಅಗತ್ಯವಿದ್ದಲ್ಲಿ ಬೆಂಬಲ ಪಡೆಯುವುದನ್ನು Snapchatter ಗಳಿಗೆ ಇನ್ನೂ ಸುಲಭವಾಗಿಸುವ, Crisis Text Line ಅವರೊಂದಿಗೆ ನಾವು ನಮ್ಮ ಪಾಲುದಾರಿಕೆಯನ್ನು ವಿಸ್ತರಿಸುತ್ತಿದ್ದೇವೆ, ಮತ್ತು UK ನಲ್ಲಿ Shout ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದು, ಇಲ್ಲಿ ನಾವು ಸ್ಥಳೀಯ Snapchatter ಗಳಿಗಾಗಿ ಕ್ರೈಸಿಸ್ ಟೆಕ್ಸ್ಟ್ ಲೈನ್ ಆರಂಭಿಸಲಿದ್ದೇವೆ -- ಇದು US ನಲ್ಲಿ ನಮ್ಮ ಕಮ್ಯುನಿಟಿಗೆ ನಾವು ಒದಗಿಸುತ್ತಿರುವ ಮಾದರಿಯದ್ದಾಗಿದೆ.
ಹೊಸ ಆ್ಯಪ್‌ನಲ್ಲಿನ ಸಂಪನ್ಮೂಲಗಳು ಸೇರಿದಂತೆ, LGBTQ ಯುವಜನತೆಗಾಗಿ ಮಾನಸಿಕ ಆರೋಗ್ಯ ಉಪಕ್ರಮಗಳ ಸರಣಿಗೆ ಸಂಬಂಧಿಸಿ ನಾವು The Trevor Project ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ, ಮತ್ತು ತಮ್ಮ ಹದಿಹರೆಯದ ಮಕ್ಕಳ ಯೋಗಕ್ಷೇಮಕ್ಕಾಗಿ ಮೂಲಭೂತ ಪರಿಕರಗಳು ಮತ್ತು ಕಾರ್ಯನೀತಿಗಳನ್ನು ಒದಗಿಸುವ ಪಾಲಕರ ಆನ್‌ಲೈನ್ ಕೋರ್ಸ್‌ಗೆ ಸಂಬಂಧಿಸಿ ನಾವು Mind Up| A Goldie Hawn Foundation ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಇವುಗಳಲ್ಲಿ ಹಲವಾರು ಸಂಸ್ಥೆಗಳೊಂದಿಗೆ ನಾವು ಸಹಭಾಗಿತ್ವ ಮಾಡಿರುವ, ಇತ್ತೀಚೆಗೆ ನಾವು ಬಿಡುಗಡೆ ಮಾಡಿದ ಅಪ್‌ಡೇಟ್ ಮಾಡಿದ ಪಾಲಕರ ಮಾರ್ಗದರ್ಶಿಗೆ ಈ ಕೋರ್ಸ್ ಪೂರಕವಾಗಿರಲಿದೆ.
ಈ ಟೂಲ್‌ಗಳು Snapchatter ಗಳಿಗೆ ಉಪಯುಕ್ತವಾಗಲಿವೆ ಎಂದು ನಾವು ಆಶಿಸುತ್ತೇವೆ. ಮತ್ತು ಅವರ ಬೆಂಬಲ ವ್ಯವಸ್ಥೆಗಳಾದ -- ಪಾಲಕರು, ಪ್ರೀತಿಪಾತ್ರರು ಮತ್ತು ತಿಳುವಳಿಕೆ ನೀಡುವವರು -- ನಮ್ಮ ಹೊಸ ಸಂಪನ್ಮೂಲಗಳನ್ನು ಪರಿಶೀಲಿಸುವಂತೆ ಮತ್ತು ತಮ್ಮ ಸ್ನೇಹಿತರ ಪಟ್ಟಿಗಳನ್ನು ನೋಡುವುದರ ಮಹತ್ವದ ಕುರಿತು ತಮ್ಮ ಮಕ್ಕಳ ಜೊತೆ ಮಾತನಾಡುವಂತೆ ನಾವು ಪ್ರೋತ್ಸಾಹಿಸುತ್ತೇವೆ.