Snapping, ನಮ್ಮ ಸಮುದಾಯವು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಬಳಸುವ ವಿಧಾನವಾಗಿದ್ದು, ಸರಾಸರಿ ಪ್ರತಿ ಸೆಕೆಂಡ್ಗೆ 55,000 ಕ್ಕೂ ಹೆಚ್ಚು Snap ಗಳನ್ನು ಸೃಷ್ಟಿಸುತ್ತಿದೆ. ಈಗ, Snapchat+ ಸಬ್ಸ್ಕ್ರೈಬರ್ಗಳು My AI ಜೊತೆಗೆ ಚಾಟ್ ಮಾಡುತ್ತಿರುವಾಗ, ತಾವೇನು ಮಾಡುತ್ತಿದ್ದೇವೆ ಎನ್ನುವುದರ Snap ಗಳನ್ನು ಅವರು ಅದಕ್ಕೆ ಕಳುಹಿಸಬಹುದು ಮತ್ತು ಸಂಭಾಷಣೆಯನ್ನು ಮುಂದುವರಿಸುವಂತಹ ವಿಶಿಷ್ಟ ಜನರೇಟಿವ್ Snap ಅನ್ನು ಮರಳಿ ಪಡೆಯಬಹುದು!
ಬಿಡುಗಡೆಯಾದಾಗಿನಿಂದ, ಜಗತ್ತಿನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಸಿನಿಮಾ, ಕ್ರೀಡೆ, ವೀಡಿಯೊ ಗೇಮ್ಗಳು ಅಥವಾ ಸಮಾರಂಭಕ್ಕೆ ಏನನ್ನು ಧರಿಸಿ ಹೋಗಬೇಕು ಎನ್ನುವಂತಹ ವಿಷಯಗಳ ಕುರಿತಾಗಿ ಕೇಳಲು Snapchatter ಗಳು My AI ಅನ್ನು ಸೃಜನಶೀಲತೆಗೆ ಒಂದು ಪರಿಕರವಾಗಿ ಬಳಸುತ್ತಿದ್ದಾರೆ.
My AI ಗೆ ನಿಮ್ಮ ಪಿಜ್ಜಾ, OOTD ಅಥವಾ ನಿಮ್ಮ ಅತ್ಯಂತ ನೆಚ್ಚಿನ ಸ್ನೇಹಿತನ ಚಿತ್ರವನ್ನೂ ಸಹ Snap ಮಾಡಿ ಮತ್ತು ನೀವು ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ My AI ನಿಮಗೆ ಒಂದು Snap ಜೊತೆಗೆ ಪ್ರತ್ಯುತ್ತರಿಸಬಹುದು. ಹಾಗಾಗಿ, ನಿಮ್ಮ ಇತ್ತೀಚಿನ ದಿನಸಿ ಖರೀದಿಯನ್ನು My AI ಗೆ Snap ಮಾಡಿದರೆ, ಅದು ನಿಮಗೆ ಒಂದು ಪಾಕವಿಧಾನವನ್ನು ಶಿಫಾರಸು ಮಾಡಬಹುದು!
My AI ಜೊತೆಗೆ ಹಂಚಿಕೊಳ್ಳಲಾಗುವ ಎಲ್ಲ ಸಂದೇಶಗಳ ಹಾಗೆ, Snap ಗಳನ್ನು ಶೇಖರಣೆ ಮಾಡಲಾಗುತ್ತದೆ ಮತ್ತು ಉತ್ಪನ್ನ ಅನುಭವವನ್ನು ಸುಧಾರಿಸುವುದಕ್ಕಾಗಿ ಬಳಸಬಹುದು. ಪಕ್ಷಪಾತದ, ತಪ್ಪಾದ, ಹಾನಿಕಾರಕ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ತಪ್ಪಿಸಲು ಅದನ್ನು ವಿನ್ಯಾಸಗೊಳಿಸಲಾಗಿದ್ದರೂ ಸಹ, ತಪ್ಪುಗಳು ಆಗಬಹುದು, ಆದ್ದರಿಂದ ಸಲಹೆಗಾಗಿ ದಯವಿಟ್ಟು ಅದರ ಮೇಲೆ ಅವಲಂಬಿತರಾಗಬೇಡಿ ಮತ್ತು ನಿಮ್ಮಲ್ಲಿ ಯಾವುದೇ ಪ್ರತಿಕ್ರಿಯೆ ಇದ್ದರೆ ನಮಗೆ ತಿಳಿಸಿ.
My AI ಜೊತೆಗಿನ ನಿಮ್ಮ ಅನುಭವದ ಕುರಿತು ಆಲಿಸಲು ನಾವು ನಿರೀಕ್ಷೆಯಲ್ಲಿದ್ದೇವೆ. ಹ್ಯಾಪಿ ಸ್ನ್ಯಾಪಿಂಗ್, Snapchat+ ಸಬ್ಸ್ಕ್ರೈಬರ್ಗಳೇ!