ಜುಲೈ 19, 2023
ಜುಲೈ 19, 2023

Bitmoji ಹೊಸ ಅವತಾರ್ ಸ್ಟೈಲ್ ಅನ್ನು ಪರಿಚಯಿಸುತ್ತಿದೆ

ಇಂದು, Bitmoji ಯ ಮಾಂತ್ರಿಕತೆಯನ್ನು ಇನ್ನಷ್ಟು ತಲ್ಲಿನಗೊಳಿಸುವ ರೀತಿಯಲ್ಲಿ 3D ಗೆ ತರುವ ನಮ್ಮ ಹೊಸ ಅವತಾರ್ ಸ್ಟೈಲ್ ಅನ್ನು ಪರಿಚಯಿಸಲು ರೋಮಾಂಚಿತರಾಗಿದ್ದೇವೆ.

ನಮ್ಮ ಡಿಜಿಟಲ್ ಗುರುತುಗಳು ನಮ್ಮೊಂದಿಗೆ ವಿಕಸನಗೊಳ್ಳಬೇಕು. ನೀವು ಹೊಸ ಹೇರ್‌ಕಟ್ ಮಾಡಿಸಿಕೊಂಡಾಗ ಅಥವಾ ನಿಮ್ಮ ಸ್ಟೈಲ್ ಬದಲಾಯಿಸಿದಾಗ, ನಿಮ್ಮ ಅವತಾರ್ ಕೂಡ ಬದಲಾಗಲು ಸಾಧ್ಯವಾಗಬೇಕು. 15 ವರ್ಷಗಳ ಕಾಲ, Bitmoji ನಮ್ಮ ಸಮುದಾಯಕ್ಕೆ ತಮ್ಮನ್ನು ಆನ್‌ಲೈನ್‌ನಲ್ಲಿ ನೈಜವಾಗಿ ಪ್ರತಿನಿಧಿಸಿಕೊಳ್ಳುವ ವಿಧಾನವನ್ನು ಒದಗಿಸಿದೆ ಮತ್ತು ವಿಶ್ವಾದ್ಯಂತ 1.7 ಬಿಲಿಯನ್ ಅವತಾರ್‌ಗಳನ್ನು ರಚಿಸಲಾಗಿದೆ.

ಇಂದು, Bitmoji ಯ ಮಾಂತ್ರಿಕತೆಯನ್ನು ಇನ್ನಷ್ಟು ತಲ್ಲಿನಗೊಳಿಸುವ ರೀತಿಯಲ್ಲಿ 3D ಗೆ ತರುವ ನಮ್ಮ ಹೊಸ ಅವತಾರ್ ಸ್ಟೈಲ್ ಅನ್ನು ಪರಿಚಯಿಸಲು ರೋಮಾಂಚಿತರಾಗಿದ್ದೇವೆ. ಮುಂಬರುವ ವಾರಗಳಲ್ಲಿ ಇದು ಜಾಗತಿಕವಾಗಿ ಬಿಡುಗಡೆಯಾಗಲಿದೆ!

ಹೊಸ ಅವತಾರ್ ಸ್ಟೈಲ್ ಕೂದಲಿನ ಟೆಕ್ಷರ್, ಮುಖದ ಶೇಡಿಂಗ್ ಮತ್ತು ದೇಹದ ಅನುಪಾತಗಳಂತಹ ಗುಣಲಕ್ಷಣಗಳನ್ನು ಸುಧಾರಿಸುತ್ತದೆ. ನಿಮ್ಮ Bitmoji ಈಗ ಬೋಲ್ಡ್ ನಗು, ಅಚ್ಚರಿಗೊಂಡಾಗ ಹೆಚ್ಚು ಆಶ್ಚರ್ಯಚಕಿತ ಮುಖ ಹೊಂದಬಹುದು ಹಾಗೂ ಅತ್ಯಂತ ನವಿರಾದ ಹಾಗೂ ಸೂಕ್ಷ್ಮ-ವ್ಯತ್ಯಾಸದ ಭಾವನೆಗಳನ್ನು ಅಭಿವ್ಯಕ್ತಪಡಿಸಬಹುದು. ಜೊತೆಗೆ, ಸಮೀಪದ ನೋಟ ಪಡೆಯಲು ಜೂಮ್ ಮತ್ತು ರೊಟೇಟಿಂಗ್ ವೈಶಿಷ್ಟ್ಯಗಳನ್ನು ಬಳಸಿಕೊಂಡು 3D ನಲ್ಲಿ ನಿಮ್ಮ ಅವತಾರ್ ಮಾರ್ಪಡಿಸಲು ನಿಮಗೆ ಅವಕಾಶ ಕಲ್ಪಿಸುವ ವರ್ಧಿತ ಎಡಿಟಿಂಗ್‌ ರೀತಿಯಲ್ಲಿ ನಿಮ್ಮ Bitmoji ಜೊತೆಗೆ ನೀವು ತೊಡಗಿಕೊಳ್ಳುವ ವಿಧಾನವನ್ನು ನಾವು ಸುಧಾರಿಸುತ್ತಿದ್ದೇವೆ.

ನೈಜ ಉಡುಪುಗಳನ್ನು Bitmoji ಪ್ರಪಂಚಕ್ಕೆ ಪರಿವರ್ತಿಸುವಲ್ಲಿ – ಕೊನೆಯ ಹೊಲಿಗೆಯವರೆಗೆ ಕಾಳಜಿ ಮತ್ತು ಕರಕುಶಲತೆಯ ಅದ್ಭುತ ಶ್ರಮ ಕೂಡ ಇದೆ. ಹೊಸ ಅವತಾರ್‌ನೊಂದಿಗೆ, ಡಿಜಿಟಲ್ ಉಡುಪು ಇನ್ನಷ್ಟು ನೈಜವಾಗಿ ಕಾಣುತ್ತದೆ, Snapchat ನಲ್ಲಿ ನೀವು ನೈಜ ಜಗತ್ತಿನಲ್ಲಿ ಇರುವಂತೆಯೇ ನಿಮ್ಮ ವೈಯಕ್ತಿಕ ಶೈಲಿಯನ್ನು ಇನ್ನಷ್ಟು ಉತ್ತಮವಾಗಿ ಬಿಂಬಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ.

ಆನ್‌ಲೈನ್‌ನಲ್ಲಿ ಕಾರ್ಟೂನ್ ಪ್ರೇರಿತ ಮತ್ತು ಕ್ರಿಯೇಟಿವ್ ಕಥೆ ಹೇಳುವ ಸ್ವರೂಪದಲ್ಲಿ ಸಂವಹನ ನಡೆಸಲು ಯಾರಿಗಾದರೂ ಸಾಧ್ಯವಾಗಿಸುತ್ತದೆ ಮತ್ತು ನಮ್ಮ ಬೆಳೆಯುತ್ತಿರುವ ಜಾಗತಿಕ ಸಮುದಾಯವನ್ನು ಇನ್ನಷ್ಟು ಉತ್ತಮವಾಗಿ ಪ್ರತಿನಿಧಿಸಲು ಅತ್ಯಂತ ಕಸ್ಟಮೈಸ್ ಮಾಡಬಹುದಾದ ಅವತಾರ್ ಅನ್ನು ಆಫರ್ ಮಾಡಲು 3D ನಮಗೆ ಅವಕಾಶ ಕಲ್ಪಿಸುತ್ತದೆ. ನಿಮ್ಮ ವರ್ಧಿತ Bitmoji ಜೊತೆಗೆ ನೀವು ನಿಮ್ಮನ್ನು ಹೇಗೆ ಅಭಿವ್ಯಕ್ತಿಗೊಳಿಸುತ್ತೀರಿ ಎನ್ನುವುದನ್ನು ನೋಡಲು ನಾವು ಕಾತುರರಾಗಿದ್ದೇವೆ!

ಮರಳಿ ಸುದ್ಧಿಗೆ