Daft Punk: 10 ವರ್ಷಗಳ ಕಾಲ ಹೆಲ್ಮೆಟ್‌ನಲ್ಲಿ ಮರೆಯಾಗಿದ್ದ ಹಾಡು?

ಶುಕ್ರವಾರ ಮೇ 12 ರಂದು ರ‍್ಯಾಂಡಮ್ ಆ್ಯಕ್ಸೆಸ್ ಮೆಮೊರೀಸ್‌ನ 10ನೇ ವಾರ್ಷಿಕೋತ್ಸವ ಆವೃತ್ತಿಯ ವಿಶೇಷ ಬಿಡುಗಡೆಯನ್ನು ಆಚರಿಸಲು ಪ್ಯಾರಿಸ್‌ನಲ್ಲಿರುವ Snapchat ನ AR ಸ್ಟುಡಿಯೋ Daft Punk ನ ಕ್ರಿಯೇಟಿವ್ ತಂಡದೊಂದಿಗೆ ಕೈಜೋಡಿಸುತ್ತಿದೆ
ಮೇ 12, ಶುಕ್ರವಾರದಂದು ರ‍್ಯಾಂಡಮ್ ಆ್ಯಕ್ಸೆಸ್ ಮೆಮೊರೀಸ್ 10ನೇ ವಾರ್ಷಿಕೋತ್ಸವ ಆವೃತ್ತಿಯ ವಿಶೇಷ ಬಿಡುಗಡೆಯನ್ನು ಆಚರಿಸಲು ಪ್ಯಾರಿಸ್‌ನಲ್ಲಿರುವ Snapchat ನ AR ಸ್ಟುಡಿಯೋ Daft Punk ನ ಕ್ರಿಯೇಟಿವ್ ತಂಡದೊಂದಿಗೆ ಕೈಜೋಡಿಸುತ್ತಿದೆ. AR ಸ್ಟುಡಿಯೋ ಜಗತ್ತಿನಾದ್ಯಂತದ ಅಭಿಮಾನಿಗಳಿಗೆ ಹಿಂದೆಂದೂ ಕಾಣದಂತಹ ವರ್ಧಿತ ವಾಸ್ತವಿಕತೆಯ ಅನುಭವಗಳ ಸರಣಿಯಾದ “Daft Punk: Memories Unlocked” ಅನ್ನು ತೆರೆಗೆ ತರಲಿದೆ.  
“Daft Punk: Memories Unlocked” 
ಈ ದೀರ್ಘಕಾಲದ ನಿರೀಕ್ಷೆಯ ವಾರ್ಷಿಕೋತ್ಸವ ಆವೃತ್ತಿಯನ್ನು ಆಚರಿಸಲು, AR ಸ್ಟುಡಿಯೋ ಮೂರು AR ಅನುಭವಗಳನ್ನು ಸೃಷ್ಟಿಸಿದ್ದು, Snapchat ನಲ್ಲಿ ಅನನ್ಯವಾಗಿ ಲಭ್ಯವಿರುವ ತಲ್ಲೀನಗೊಳಿಸುವ ಸಂಗೀತ ಅನುಭವಗಳನ್ನು ಅಭಿಮಾನಿಗಳು ಮತ್ತು Snapchatter ಗಳಿಗೆ ಒದಗಿಸುತ್ತದೆ.
AR ಅನುಭವ #1 - 10 ವರ್ಷಗಳ ಕಾಲ ಒಂದು ಹಾಡನ್ನು "ಸಾಮಾನ್ಯ ನೋಟದಲ್ಲಿ ಮರೆಮಾಡಲಾಗಿತ್ತೇ"?
ವಾರ್ಷಿಕೋತ್ಸವ ಆವೃತ್ತಿ ಬಿಡುಗಡೆಗೆ 48 ಗಂಟೆಗಳ ಮುನ್ನ, ಮೇ 10ನೇ ತಾರೀಕು ಬುಧವಾರದಂದು ಬೆಳಗ್ಗೆ 9:00 CET ಗೆ, ಮೂಲತಃ ಆಲ್ಬಮ್‌ನ 2013 ರ ಜಪಾನೀಸ್ ಆವೃತ್ತಿಯಲ್ಲಿ ಸೇರಿಸಲಾಗಿದ್ದ ಹಾಡು "ಹಾರೈಝನ್" ಅನ್ನು Snapchat ನ ವರ್ಧಿತ ವಾಸ್ತವ ಲೆನ್ಸ್‌ಗಳ ಮೂಲಕ ವಿಶ್ವದ ಉಳಿದ ಭಾಗಕ್ಕೆ ಅನಾವರಣಗೊಳಿಸಲಾಗುತ್ತದೆ. ಹೊಸ ಕ್ರಿಸ್ಟಲ್ ಹೆಲ್ಮೆಟ್ AR ಲೆನ್ಸ್ ಅನ್ನು ಅನಾವರಣಗೊಳಿಸಲು ಮೂಲ Random Access Memories ಆಲ್ಬಮ್ ಕವರ್ ಆರ್ಟ್‌ವರ್ಕ್ ಅನ್ನು ಸ್ಕ್ಯಾನ್ ಮಾಡಲು ಅಭಿಮಾನಿಗಳು Snapchat ಕ್ಯಾಮೆರಾವನ್ನು ಬಳಸಬಹುದು ಮತ್ತು ಬೆಳ್ಳಿ ಮತ್ತು ಚಿನ್ನದ ಹೆಲ್ಮೆಟ್‌ನೊಳಗೆ ಮರೆಯಾಗಿರುವ "ಹಾರೈಝನ್" ಅನ್ನು ಆಲಿಸಬಹುದು! ಕ್ಯಾಮೆರಾವನ್ನು ಫ್ಲಿಪ್ ಮಾಡುವುದರಿಂದ ಹಾಡನ್ನು ಆಲಿಸುತ್ತಿರುವಾಗ ಕ್ರಿಸ್ಟಲ್ ಹೆಲ್ಮೆಟ್ ಧರಿಸಲು Snapchatter ಗಳಿಗೆ ಅವಕಾಶ ಕಲ್ಪಿಸುತ್ತದೆ.
ಅದು ಹೇಗೆ ಕೆಲಸ ಮಾಡುತ್ತದೆ? 
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ, ಮೇ 10, 2023 ರಂದು Snapchatter ಗಳು ಮತ್ತು ಅಭಿಮಾನಿಗಳಿಗೆ ಅನುಭವಕ್ಕೆ ಚಾಲನೆ ನೀಡಲು ಸಾಧ್ಯವಾಗುತ್ತದೆ:
  • Snapchat ಕ್ಯಾಮೆರಾ ತೆರೆಯಿರಿ
  • ಮೂಲ Random Access Memories ಆಲ್ಬಮ್ ಆರ್ಟ್‌ವರ್ಕ್‌ನತ್ತ (ವಿನೈಲ್, CD ಅಥವಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು) ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಹಿಡಿಯಿರಿ ಮತ್ತು ಬೆಳ್ಳಿ ಮತ್ತು ಚಿನ್ನದ ಹೆಲ್ಮೆಟ್ ಅನ್ನು ಸ್ಕ್ಯಾನ್ ಮಾಡಿ
  • ಹೊಸ ಕ್ರಿಸ್ಟಲ್ ಹೆಲ್ಮೆಟ್ ಪೂರ್ಣ ಗಾತ್ರದಲ್ಲಿ ಮತ್ತು AR ನಲ್ಲಿ ಆಲ್ಬಮ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ ಮತ್ತು ಹಾಡು "ಹಾರೈಝನ್" ಪ್ಲೇ ಆಗಲು ಆರಂಭವಾಗುತ್ತದೆ. 
  • ಹೆಲ್ಮೆಟ್ ಧರಿಸಲು Snapchat ಕ್ಯಾಮೆರಾವನ್ನು ನಿಮ್ಮ ಮುಖದತ್ತ ತಿರುಗಿಸಿ
  • ಒಂದು Snap ತೆಗೆದುಕೊಳ್ಳಿ ಹಾಗೂ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಿಮ್ಮ ಕಥೆ ಅಥವಾ ಸ್ಪಾಟ್‌ಲೈಟ್ ಅನ್ನು ಪೋಸ್ಟ್ ಮಾಡಿ.

AR ಅನುಭವ #2 - ಜಗತ್ತಿನಾದ್ಯಂತದ 10 ನಗರಗಳಲ್ಲಿ ನಿಧಿಯ ಬೇಟೆ
ಗುರುವಾರ, ಮೇ 11 ರಂದು, ಜಗತ್ತಿನಾದ್ಯಂತದ 10 ಪ್ರತಿಷ್ಠಿತ ಸ್ಥಳಗಳಲ್ಲಿ ನಿಧಿ ಬೇಟೆ ಬಿಡುಗಡೆಯಾಗಲಿದೆ. ಎಲ್ಲಿಗೆ ಹೋಗಬೇಕು ಮತ್ತು Snap ನ AR ಸ್ಟುಡಿಯೋ ಜಗತ್ತಿನಾದ್ಯಂತ ಸೃಷ್ಟಿಸಿರುವ 10 ಅನನ್ಯ ಹೊಸ AR ಅನುಭವಗಳನ್ನು ಹೇಗೆ ಕಂಡುಹಿಡಿಯಬೇಕು ಎನ್ನುವ ಕುರಿತು ಅಭಿಮಾನಿಗಳಿಗೆ ಸುಳಿವು ನೀಡಲು Duo ದ ವಿವಿಧ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಜಿಪಿಎಸ್ ನಿರ್ದೇಶಾಂಕಗಳನ್ನು ಪೋಸ್ಟ್ ಮಾಡಲಾಗುತ್ತದೆ. 
ಈ ವಿಶಿಷ್ಟ ಅನುಭವವನ್ನು ಈ ಮುಂದಿನ 10 ನಗರಗಳು ಆಯೋಜಿಸಲಿವೆ: ಪ್ಯಾರಿಸ್ (ಫ್ರಾನ್ಸ್), ನ್ಯೂಯಾರ್ಕ್ (ಯುಎಸ್‌ಎ), ಲಾಸ್ ಏಂಜಲೀಸ್ (ಯುಎಸ್‌ಎ), ಲಂಡನ್ (ಯುಕೆ), ಬರ್ಲಿನ್ (ಜರ್ಮನಿ), ಮೆಕ್ಸಿಕೊ ನಗರ (ಮೆಕ್ಸಿಕೊ), ಟೋಕಿಯೋ (ಜಪಾನ್), ಸಿಡ್ನಿ (ಆಸ್ಟ್ರೇಲಿಯಾ), ಸಾವೊ ಪಾಲೋ (ಬ್ರೆಜಿಲ್) ಮತ್ತು ಬ್ಯೂನಸ್ ಐರಿಸ್ (ಅರ್ಜೆಂಟಿನಾ).
ಅದು ಹೇಗೆ ಕೆಲಸ ಮಾಡುತ್ತದೆ? 
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಮೇ 11, 2023 ರಂದು ಅನುಭವವನ್ನು ಚಾಲನೆಗೊಳಿಸಲು ಅಭಿಮಾನಿಗಳು ಮತ್ತು Snapchatter ಗಳಿಗೆ ಸಾಧ್ಯವಾಗುತ್ತದೆ:
  • ಬ್ಯಾಂಡ್‌ನ ಸಾಮಾಜಿಕ ಮಾಧ್ಯಮ ಚಾನೆಲ್‌ಗಳನ್ನು ಅನುಸರಿಸಿ
  • ಜಿಪಿಎಸ್ ನಿರ್ದೇಶಾಂಕಗಳು ಪ್ರಕಟಿಸಿದ ನಿಮಗೆ ಅತ್ಯಂತ ಸಮೀಪದಲ್ಲಿರುವ ಸ್ಥಳದಲ್ಲಿ ಮೇ 11 ರಂದು ಸ್ಥಳೀಯ ಸಮಯ ಬೆಳಗ್ಗೆ 10:00 ಗಂಟೆಗೆ ಭೇಟಿಯಾಗಿ
  • Snapchat ಜಿಯೋಲೊಕೇಷನ್ ಸಕ್ರಿಯಗೊಂಡಿದೆ ಎಂದು ಖಚಿತಪಡಿಸಿಕೊಂಡು, Snapchat ಕ್ಯಾಮೆರಾ ತೆರೆಯಿರಿ
  • ನಿಮ್ಮ ಲೆನ್ಸ್ ಕೆರೋಸೆಲ್‌ನಲ್ಲಿ ಗೋಚರಿಸುವ "Daft Punk" ಲೆನ್ಸ್ ಅನ್ನು ಆರಂಭಿಸಿ
  • ವಿಶೇಷವಾಗಿ ವಿನ್ಯಾಸಗೊಳಿಸಿದ ಅನುಭವದೊಂದಿಗೆ ತೊಡಗಿಕೊಳ್ಳಿ ಮತ್ತು Snapchat ಮೆಸೇಜಿಂಗ್ ಮೂಲಕ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು/ಅಥವಾ ನಿಮ್ಮ ಕಥೆ ಅಥವಾ ಸ್ಪಾಟ್‌ಲೈಟ್‌ಗೆ ಪೋಸ್ಟ್ ಮಾಡಿ

AR ಅನುಭವ #3 - ಬಿಲ್‌ಬೋರ್ಡ್‌ಗಳನ್ನು ವರ್ಧಿತಗೊಳಿಸಲಾಗಿದೆ: ಹೊಸ ವರ್ಧಿತ ವಾಸ್ತವ ಹೆಲ್ಮೆಟ್‌ ಅನಾವರಣಗೊಳಿಸಲಾಗಿದೆ
ಮೇ 11-28, 2023 ರವರೆಗೆ ಜಗತ್ತಿನಾದ್ಯಂತದ 6 ದೇಶಗಳಲ್ಲಿ, ವಿಸ್ತೃತವಾದ ಹೊರಾಂಗಣ ಬಿಲ್‌ಬೋರ್ಡ್ ಅಭಿಯಾನದ ಮೂಲಕ duo ದ ಹೊಸ 10ನೇ ವಾರ್ಷಿಕೋತ್ಸವ ಕ್ರಿಸ್ಟಲ್ ಹೆಲ್ಮೆಟ್ ಅನ್ನು ಕಂಡುಹಿಡಿಯಲು ಸಾರ್ವಜನಿಕರಿಗೆ ಸಾಧ್ಯವಾಗುತ್ತದೆ. ಬಿಲ್‌ಬೋರ್ಡ್‌ನಲ್ಲಿ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ, ಎಂಬೆಡ್ ಮಾಡಿರುವ "ಹಾರೈಝನ್" ಹಾಡಿನೊಂದಿಗೆ ಹೊಸ AR ಲೆನ್ಸ್‌ಗಳನ್ನು ಪ್ರವೇಶಿಸಲು ಅಭಿಮಾನಿಗಳು ಮತ್ತು Snapchatter ಗಳಿಗೆ ಸಾಧ್ಯವಾಗುತ್ತದೆ.
ಪ್ಯಾರಿಸ್, ನ್ಯೂಯಾರ್ಕ್, ಲಾಸ್ ಏಂಜಲೀಸ್, ಮೆಕ್ಸಿಕೊ ನಗರ, ಸಿಡ್ನಿ, ಲಂಡನ್, ಲಿವರ್‌ಪೂಲ್ ಮತ್ತು ಬರ್ಲಿನ್‌ನಲ್ಲಿ 6 ದೇಶಗಳಿಗೆ ಹೊಸ ಹೆಲ್ಮೆಟ್‌ಗಳನ್ನು ಅನುಭವಿಸುವ ಅವಕಾಶ ಸಿಗಲಿದೆ.
ಅದು ಹೇಗೆ ಕೆಲಸ ಮಾಡುತ್ತದೆ?
  • ಜಾಹೀರಾತು ನೀಡಿದ ಸ್ಥಳಗಳಿಗೆ ಹೋಗಿ 
  • ನಿಮ್ಮ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ತೆರೆಯಿರಿ
  • ಚಿಹ್ನೆಯ ಮೇಲೆ QR ಕೋಡ್ ಸ್ಕ್ಯಾನ್ ಮಾಡಿ
  • ನಿಮ್ಮನ್ನು ನಿಮ್ಮ Snapchat ಕ್ಯಾಮೆರಾಗೆ ಮರುನಿರ್ದೇಶಿಸಲಾಗುತ್ತದೆ
  • ಹೊಸ ಕ್ರಿಸ್ಟಲ್ ಹೆಲ್ಮೆಟ್ ಬೃಹತ್ ಗಾತ್ರದಲ್ಲಿ ಮತ್ತು ವರ್ಧಿತ ವಾಸ್ತವದ ಮೇಲ್ಭಾಗದಲ್ಲಿ ಗೋಚರಿಸುತ್ತದೆ ಹಾಗೂ ಹಾಡು "ಹಾರೈಝನ್" ಪ್ಲೇ ಆಗಲು ಆರಂಭವಾಗುತ್ತದೆ. 
  • ಹೆಲ್ಮೆಟ್ ಪ್ರಯತ್ನಿಸಲು ನಿಮ್ಮ Snapchat ಕ್ಯಾಮೆರಾವನ್ನು ನಿಮ್ಮ ಮುಖದತ್ತ ತಿರುಗಿಸಿ
  • Snapchat ಮೆಸೇಜಿಂಗ್ ಮೂಲಕ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು/ಅಥವಾ ನಿಮ್ಮ ಕಥೆ ಅಥವಾ ಸ್ಪಾಟ್‌ಲೈಟ್‌ಗೆ ಪೋಸ್ಟ್ ಮಾಡಿ
ಮರಳಿ ಸುದ್ಧಿಗೆ