ಮಾರ್ಚ್ 08, 2023
ಮಾರ್ಚ್ 08, 2023

ಯುವಜನರನ್ನು ಮತದಾನ ಮಾಡುವಂತೆ ಪ್ರೋತ್ಸಾಹಿಸಲು, ಡಚ್ ಸಚಿವಾಲಯ ಮತ್ತು Snap ಜಂಟಿಯಾಗಿ, AR ಚುನಾವಣಾ ಲೆನ್ಸ್ ಅನ್ನು ಬಿಡುಗಡೆ ಮಾಡಿವೆ

ಮಾರ್ಚ್ 15, 2023 ರ ಪ್ರಾಂತೀಯ ಪರಿಷತ್ ಮತ್ತು ಜಲ ಮಂಡಳಿ ಚುನಾವಣೆಗಳಲ್ಲಿ ಮತದಾನ ಮಾಡುವಂತೆ ಯುವಜನರನ್ನು ಪ್ರೇರೇಪಿಸಲು, ಇಂದು, ಡಚ್ ಆಂತರಿಕ ಮತ್ತು ರಾಜಧಾನಿ ಸಂಬಂಧಗಳ ಸಚಿವಾಲಯ ಹಾಗೂ Snap ಜಂಟಿಯಾಗಿ ಒಂದು ಉಪಕ್ರಮವನ್ನು ಆರಂಭಿಸಿದವು.

15ನೇ ಮಾರ್ಚ್, 2023 ರಂದು ನಡೆಯಲಿರುವ ಡಚ್ ಪ್ರಾಂತೀಯ ಪರಿಷತ್ ಮತ್ತು ಜಲ ಪ್ರಾಧಿಕಾರದ ಚುನಾವಣೆಯಲ್ಲಿ ಮತದಾನ ಮಾಡುವಂತೆ ಯುವಜನರನ್ನು ಪ್ರೇರೇಪಿಸಲು, ಡಚ್ ಆಂತರಿಕ ಮತ್ತು ರಾಜಧಾನಿ ಸಂಬಂಧಗಳ ಸಚಿವಾಲಯದ ಸಹಭಾಗಿತ್ವದಲ್ಲಿ Snapchat ಒಂದು ಆನ್‌ಲೈನ್ ಅಭಿಯಾನವನ್ನು ಆರಂಭಿಸಿದೆ. ಅಭಿಯಾನವು ಒಂದು ವಿಶಿಷ್ಟ ವರ್ಧಿತ ವಾಸ್ತವ ಲೆನ್ಸ್, ಫಿಲ್ಟರ್‌ಗಳು, ಮತ್ತು ಸ್ಟಿಕ್ಕರ್‌ಗಳನ್ನು ಒಳಗೊಂಡಿದ್ದು, ಅವು ಮಾರ್ಚ್ 8 ರಿಂದ 15 ರವರೆಗೆ Snapchat ನಲ್ಲಿ ಲಭ್ಯ ಇರಲಿವೆ.

ನೀವು ಲೆನ್ಸ್ ಆಯ್ಕೆ ಮಾಡಿದಾಗ, ನೀವು ಇರುವ ಪ್ರದೇಶದಲ್ಲಿ ಎರಡು ವರ್ಚುವಲ್ ಮತ ಪೆಟ್ಟಿಗೆಗಳನ್ನು ಇರಿಸಲಾಗುತ್ತದೆ. ನಂತರ, 12 ಹೇಳಿಕೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಪ್ರಾಂತೀಯ ಪರಿಷತ್ ಮತ್ತು ಜಲಮಂಡಲಿ ಚುನಾವಣೆಗಳ ಕುರಿತ ನಿಮ್ಮ ಅರಿವನ್ನು ಪರೀಕ್ಷಿಸುವುದಕ್ಕಾಗಿ ನೀವು "ಸರಿ" ಅಥವಾ "ತಪ್ಪು" ಎಂದು ಮತ ಚಲಾಯಿಸಬಹುದು. ವಿನೋದಮಯ ರೀತಿಯಲ್ಲಿ, ಪ್ರಾಂತೀಯ ಪರಿಷತ್‌ಗಳು ಮತ್ತು ಜಲ ಪ್ರಾಧಿಕಾರಗಳು ನಿಜವಾಗಿ ಏನು ಮಾಡುತ್ತವೆ ಎಂದು ಪ್ರತಿಯೊಬ್ಬರೂ ಕಂಡುಕೊಳ್ಳಬಹುದು. ಮಾರ್ಚ್ 8ರಿಂದ ಆರಂಭಿಸಿ, ಫಿಲ್ಟರ್ ಹಾಗೂ ಚುನಾವಣಾ ಲೆನ್ಸ್ ಮತ್ತು ಸ್ಟಿಕ್ಕರ್‌ಗಳ ಮೂಲಕ ಚುನಾವಣೆಗೆ ಪ್ರತಿದಿನ ದಿನಗಣನೆಯನ್ನು ಆ್ಯಪ್ ಪ್ರದರ್ಶಿಸಲಿದೆ. ಮಾರ್ಚ್ 15ರ ಚುನಾವಣಾ ದಿನದಂದು, ಎರಡು ಫಿಲ್ಟರ್‌ಗಳು ಲಭ್ಯವಿರುತ್ತವೆ: ಒಂದು ಮತದಾನ ಮಾಡಲು ಹೋಗುವ ಜನರಿಗಾಗಿ ಮತ್ತು ಇನ್ನೊಂದು ಈಗಾಗಲೇ ಮತದಾನ ಮಾಡಿರುವ ಜನರಿಗಾಗಿ.

ಪ್ರಾಂತೀಯ ಪರಿಷತ್ ಮತ್ತು ಜಲ ಪ್ರಾಧಿಕಾರದ ಚುನಾವಣೆಗಳಲ್ಲಿ ಇತರ ಚುನಾವಣೆಗಳಿಗಿಂತ ಕಡಿಮೆ ಮತದಾನವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಎಲ್ಲ ಅರ್ಹ ಮತದಾರರಲ್ಲಿ ಬಹುತೇಕ ಮೂರನೇ ಎರಡರಷ್ಟು ಮಂದಿ ಒಂದು ಸಂದರ್ಭದಲ್ಲಿ ಮತದಾನದಿಂದ ದೂರ ಉಳಿಯುತ್ತಾರೆ. ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಸರ್ಕಾರ ಒಂದು ಸಾರ್ವಜನಿಕ ಅಭಿಯಾನವನ್ನು ನಡೆಸುತ್ತಿದ್ದು ಇದು ಚುನಾವಣಾ ಲೆನ್ಸ್ ಉಪಕ್ರಮದೊಂದಿಗೆ ಸುಲಲಿತವಾಗಿ ಹೊಂದಿಕೆಯಾಗುತ್ತದೆ.

ಪ್ರಸ್ತುತ ಚರ್ಚಿತ ವಿಷಯಗಳಾದ ಗೃಹನಿರ್ಮಾಣ, ಹವಾಮಾನ ಬದಲಾವಣೆ ಮತ್ತು ನೀರಿನ ನಿರ್ವಹಣೆಗಳಂತಹವುಗಳೊಂದಿಗೆ ತಮ್ಮ ಸುತ್ತಲಿನ ವಾತಾವರಣದ ಮೇಲೆ ಪ್ರಾಂತೀಯ ಪರಿಷತ್‌ಗಳು ಮತ್ತು ಜಲ ಪ್ರಾಧಿಕಾರಗಳು ಎಂತಹ ಪ್ರಭಾವ ಬೀರುತ್ತವೆ ಎನ್ನುವ ಕುರಿತು ಅನೇಕ ಯುವ ಜನರಿಗೆ ಹೆಚ್ಚೇನೂ ತಿಳಿದಿಲ್ಲ. 

"ಚುನಾವಣೆಗಳ ಕುರಿತು ಯುವಜನರು ಹೆಚ್ಚು ತಿಳಿದುಕೊಂಡಷ್ಟೂ, ಅವರು ಮತದಾನ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. Snapchat ಲೆನ್ಸ್ ಇದಕ್ಕೆ ಕೊಡುಗೆ ನೀಡುತ್ತದೆ. ಫಿಲ್ಟರ್‌ಗಳು ಮತ್ತು ಸ್ಟಿಕ್ಕರ್‌ಗಳೊಂದಿಗೆ, ಮತದಾನ ಮಾಡಲು ಯುವ ಜನರು ಪರಸ್ಪರರನ್ನು ಕೂಡ ಪ್ರೇರೇಪಿಸಬಹುದು. ಇದರೊಂದಿಗೆ ಮತ್ತು ಇತರ ಅಭಿಯಾನಗಳೊಂದಿಗೆ, ಯುವಜನರ ಮತ ಮುಖ್ಯವಾದುದು ಎಂದು ಅರಿವು ಮೂಡಿಸಲು ನಾವು ಬಯಸಿದ್ದೇವೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಶಿಸುತ್ತೇವೆ," ಎಂದು ಡಚ್ ಆಂತರಿಕ ಮತ್ತು ರಾಜಧಾನಿ ಸಂಬಂಧಗಳ ಸಚಿವಾಲಯದ ಚುನಾವಣಾ ಕಾರ್ಯಕ್ರಮದ ಮ್ಯಾನೇಜರ್ ಹಾನ್ಸ್ ಕ್ಲಾಕ್ ಹೇಳಿದ್ದಾರೆ.

ಮರಳಿ ಸುದ್ಧಿಗೆ