Introducing Here for You

Here For You, which will roll out in the coming months, will show safety resources from local experts when Snapchatters search for certain topics, including those related to anxiety, depression, stress, grief, suicidal thoughts, and bullying.
ನಮ್ಮ ನಿಜವಾದ ಸ್ನೇಹಿತರೊಂದಿಗೆ ಫೋಟೋಗಳು ಮತ್ತು ವೀಡಿಯೋಗಳೊಂದಿಗೆ ಮಾತನಾಡುವುದು ಪಠ್ಯ ಸಂದೇಶಕ್ಕಿಂತ ಹೆಚ್ಚು ವೈಯಕ್ತಿಕ ಮತ್ತು ಹೆಚ್ಚು ಮೋಜಿನ ಸಂಗತಿಯಾಗಿದೆ ಎಂಬ ನಂಬಿಕೆಯ ಮೇರೆಗೆ Snapchat ಅನ್ನು ಸ್ಥಾಪಿಸಲಾಗಿದೆ. ಅಂದಿನಿಂದ ನಾವು ನಮ್ಮ ಪ್ಲಾಟ್‌ಫಾರ್ಮ್ ಅನ್ನು ವಿಕಾಸಗೊಳಿಸುತ್ತಲೇ ಇದ್ದರೂ, ಆಪ್ತ ಗೆಳೆಯರು ತಮ್ಮನ್ನು ಮುಕ್ತವಾಗಿ ವ್ಯಕ್ತಪಡಿಸಲು ಮತ್ತು ಒಟ್ಟಿಗೆ ಸೃಜನಶೀಲರಾಗಿರಲು ಸಹಾಯ ಮಾಡುವ ನಮ್ಮ ಪ್ರಮುಖ ಉದ್ದೇಶದಿಂದ ನಾವು ಎಂದಿಗೂ ದೂರವಿರಲಿಲ್ಲ - ಮತ್ತು ಅವರು ಅದನ್ನು ಸುರಕ್ಷಿತವಾಗಿ ಮಾಡಬಹುದೆಂದು ಖಚಿತಪಡಿಸಿಕೊಳ್ಳುತ್ತೇವೆ.
ಗೌಪ್ಯತೆ, ಸುರಕ್ಷತೆ ಮತ್ತು ನಮ್ಮ ಸಮುದಾಯದ ಯೋಗಕ್ಷೇಮವನ್ನು ಖಾತರಿಪಡಿಸುವುದು ನಮ್ಮ ಮೌಲ್ಯಗಳು ಮತ್ತು ಉತ್ಪನ್ನ ತತ್ವದಲ್ಲಿ ಆಳವಾಗಿ ಬೇರೂರಿದೆ. Snapchat ಅನ್ನು ಅದರ ಕೇಂದ್ರದಲ್ಲಿನ ಗೌಪ್ಯತೆಯೊಂದಿಗೆ ನಿರ್ಮಿಸಲಾಗಿದೆ - ತಾತ್ಕಾಲಿಕತೆಯಿಂದ ಪ್ರಾರಂಭಿಸಿ - ಮತ್ತು ಇತರರ ತೀರ್ಮಾನದ ಒತ್ತಡವಿಲ್ಲದೆ ಜನರು ತಾವು ತಾವಾಗೇ ಇರಲು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ನಾವು ಹೊಸ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಗೌಪ್ಯತೆ ಮತ್ತು ಸುರಕ್ಷತೆ-ವಿನ್ಯಾಸ ವಿಧಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುತ್ತೇವೆ, Snapchatter ಗಳ ಡೇಟಾವನ್ನು ನಾವು ಎಚ್ಚರಿಕೆಯಿಂದ ಮತ್ತು ಸೂಕ್ಷ್ಮತೆಯಿಂದ ಪರಿಗಣಿಸುತ್ತೇವೆ ಮತ್ತು ನಮ್ಮ ಪ್ಲಾಟ್‌ಫಾರ್ಮ್ ಅನ್ನು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯಿಂದ ರಕ್ಷಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ.
ಇವೆಲ್ಲವೂ ನಮ್ಮ ಪ್ಲಾಟ್‍ಫಾರ್ಮ್ ಅನ್ನು ಬಳಸುವ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಸಹಾಯ ಮಾಡುವ ನಮ್ಮ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಇಂದು, ಸುರಕ್ಷಿತ ಇಂಟರ್ನೆಟ್ ದಿನದ ಗೌರವಾರ್ಥವಾಗಿ, ಈ ಜವಾಬ್ದಾರಿಯನ್ನು ಎತ್ತಿಹಿಡಿಯಲು ನಾವು ಹಲವಾರು ಸಂಪನ್ಮೂಲಗಳನ್ನು ಘೋಷಿಸುತ್ತಿದ್ದೇವೆ. ನಾವು ಹಿಯರ್ ಫಾರ್ ಯು ಎಂದು ಕರೆಯಲಾಗುವ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸುತ್ತಿದ್ದೇವೆ, ಇದು ಮಾನಸಿಕ ಆರೋಗ್ಯ ಅಥವಾ ಭಾವನಾತ್ಮಕ ಬಿಕ್ಕಟ್ಟನ್ನು ಅನುಭವಿಸುತ್ತಿರುವ Snapchatter ಗಳಿಗೆ, ಅಥವಾ ಈ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ವ್ಯವಹರಿಸುವ ಸ್ನೇಹಿತರಿಗೆ ಅವರು ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಪೂರ್ವಭಾವಿ ಇನ್-ಅಪ್ಲಿಕೇಶನ್ ಬೆಂಬಲವನ್ನು ಒದಗಿಸುತ್ತದೆ.
ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗುವ ಹಿಯರ್ ಫಾರ್ ಯು, ಆತಂಕ, ಖಿನ್ನತೆ, ಒತ್ತಡ, ದುಃಖ, ಆತ್ಮಹತ್ಯಾ ಆಲೋಚನೆಗಳು ಮತ್ತು ಬೆದರಿಸುವಿಕೆ ಸೇರಿದಂತೆ ಕೆಲವು ವಿಷಯಗಳನ್ನು Snapchatter ಗಳು ಹುಡುಕಿದಾಗ, ಸ್ಥಳೀಯ ತಜ್ಞರಿಂದ ಸುರಕ್ಷತಾ ಸಂಪನ್ಮೂಲಗಳನ್ನು ತೋರಿಸುತ್ತದೆ.
ಇಂದು, Snapchatter ‌ಗಳು ಸುರಕ್ಷತೆ ಮತ್ತು ಗೌಪ್ಯತೆಯನ್ನು ಉತ್ತೇಜಿಸುವ ಕ್ರಿಯೇಟಿವ್ ಟೂಲ್‍ಗಳು ಮತ್ತು Lenses ಗಳೊಂದಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ, ಇದರಲ್ಲಿ ಹೊಸ ಫಿಲ್ಟರ್‌ಗಳು ಮತ್ತು ನಮ್ಮ ಮೊಟ್ಟಮೊದಲ Snappable ಕ್ವಿಜ್ ಸೇರಿವೆ.
ಈ ಹೊಸ ಫಿಲ್ಟರ್‌ಗಳು ಮತ್ತು ನಮ್ಮ ಕ್ವಿಜ್ ಅನ್ನು ಪರಿಶೀಲಿಸಲು — ಮತ್ತು ಸುರಕ್ಷಿತ ಇಂಟರ್ನೆಟ್ ರಚಿಸಲು ನಮ್ಮ ಭಾಗವನ್ನು ಮಾಡಲು ನಮ್ಮೊಂದಿಗೆ ಸೇರಿಕೊಳ್ಳಲು ನಾವು ಎಲ್ಲಾ Snapchatter ‌ಗಳನ್ನು ಪ್ರೋತ್ಸಾಹಿಸುತ್ತೇವೆ!
Back To News