8ನೇ ಮಾರ್ಚ್, 8 ಮಹಿಳೆಯರು

ಮಾರ್ಚ್ 8, 2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ, ಪ್ಯಾರಿಸ್‌ನಲ್ಲಿರುವ Snap ನ AR ಸ್ಟುಡಿಯೋ, 8 ಪ್ರಮುಖ ಫ್ರೆಂಚ್ ನಗರಗಳಲ್ಲಿ (ಪ್ಯಾರಿಸ್, ಲಿಯಾನ್, ಮರ್ಸೆಲ್ಲಿ, ಬಾರ್ಡಾಕ್ಸ್, ಲಿಲ್ಲೀ, ಸ್ಟ್ರಾಸ್‌ಬರ್ಗ್, ಮೆಟ್ಜ್ ಮತ್ತು ನಾಂಟಿಸ್) 8 ಮಾದರಿ ಮಹಿಳೆಯರನ್ನು ವಿಶಿಷ್ಟ ವರ್ಧಿತ ವಾಸ್ತವ ಅನುಭವದ ಮೂಲಕ ಗೌರವಿಸುತ್ತಿದೆ: 8ನೇ ಮಾರ್ಚ್ 8 ಮಹಿಳೆಯರು.

ಮಾರ್ಚ್ 8, 2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ, ಪ್ಯಾರಿಸ್‌ನಲ್ಲಿರುವ Snap ನ AR ಸ್ಟುಡಿಯೋ, 8 ಪ್ರಮುಖ ಫ್ರೆಂಚ್ ನಗರಗಳಲ್ಲಿ (ಪ್ಯಾರಿಸ್, ಲಿಯಾನ್, ಮರ್ಸೆಲ್ಲಿ, ಬಾರ್ಡಾಕ್ಸ್, ಲಿಲ್ಲೀ, ಸ್ಟ್ರಾಸ್‌ಬರ್ಗ್, ಮೆಟ್ಜ್ ಮತ್ತು ನಾಂಟಿಸ್) 8 ಮಾದರಿ ಮಹಿಳೆಯರನ್ನು ವಿಶಿಷ್ಟ ವರ್ಧಿತ ವಾಸ್ತವ ಅನುಭವದ ಮೂಲಕ ಗೌರವಿಸುತ್ತಿದೆ: 8ನೇ ಮಾರ್ಚ್ 8 ಮಹಿಳೆಯರು.

ಪುರುಷರಂತೆ ಹಲವು ಮಹಿಳೆಯರೂ ಫ್ರೆಂಚ್ ಇತಿಹಾಸದ ಪಥದಲ್ಲಿ ಹೆಜ್ಜೆಗುರುತು ಮೂಡಿಸಿದ್ದರೂ ಸಹ, ಫ್ರಾನ್ಸ್‌ನ ನಗರ ಪ್ರದೇಶಗಳಲ್ಲಿನ (ರಸ್ತೆಚೌಕಗಳು, ಉದ್ಯಾನಗಳು ಮತ್ತು ಬೀದಿಗಳು) ಬಹುತೇಕ ಶಿಲ್ಪಗಳು ಕೇವಲ ಪುರುಷರನ್ನಷ್ಟೇ ಗೌರವಿಸಿವೆ. ಹಾಗಾಗಿ Snap ನ AR ಸ್ಟುಡಿಯೋ ರಾಜಕೀಯ, ಕಲೆ, ತತ್ವಶಾಸ್ತ್ರ ಮತ್ತು ಮಿಲಿಟರಿ ಕ್ಷೇತ್ರಗಳ ಫ್ರೆಂಚ್ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿರುವ ಮಹಿಳೆಯರ AR ಪ್ರತಿಮೆಗಳನ್ನು ಕಲ್ಪಿಸಿಕೊಂಡಿದೆ. ಈ AR ಪ್ರತಿಮೆಗಳನ್ನು ಅವರ ಪುರುಷ ಸಹವರ್ತಿಗಳ ಭೌತಿಕ ಪ್ರತಿಮೆಗಳ ಪಕ್ಕದಲ್ಲೇ ಸ್ಥಾಪಿಸಲಾಗಿದ್ದು, ಈ ಮಹಾನ್ ಮಹಿಳೆಯರ ಸಾಧನೆಗಳನ್ನು ಗೌರವಿಸಲಾಗಿದೆ ಮತ್ತು ಫ್ರಾನ್ಸ್‌ನ ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ಹಾಗೂ ಸ್ಥಿತಿಗೆ ಸಂಬಂಧಿಸಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ.

8ನೇ ಮಾರ್ಚ್, 8 ಮಹಿಳೆಯರು

AR ಅನುಭವ 8ನೇ ಮಾರ್ಚ್, 8 ಮಹಿಳೆಯರು ಮಾರ್ಚ್ 8, 2023 ರಿಂದ ಲಭ್ಯವಿರಲಿದೆ ಮತ್ತು ಫ್ರೆಂಚ್ ಇತಿಹಾಸದಲ್ಲಿನ ಈ ಪ್ರಮುಖ ಮಹಿಳೆಯರ ಕುರಿತು ಪ್ರದರ್ಶಿಸಲಿದೆ:

  • ಸಿಮೋನ್ ವೇಲ್: ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಗರ್ಭಪಾತವನ್ನು ಕಾನೂನುಬದ್ಧವಾಗಿಸಿದ 1975ರ ಕಾನೂನಿಗೆ ಕಾರಣವಾದಾಕೆ ಮತ್ತು ಯುರೋಪಿಯನ್ ಸಂಸತ್‌ನ ಮೊದಲ ಮಹಿಳಾ ಅಧ್ಯಕ್ಷೆ. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಪ್ಯಾರಿಸ್‌ನಲ್ಲಿನ ಚಾಂಪ್ಸ್‌-ಎಲ್ಸೀಸ್ ವೃತ್ತದಲ್ಲಿನ ಜನರಲ್ ಚಾರ್ಲ್ಸ್ ಡಿ ಗೌಲೆಯವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಸಿಮೋನ್ ಡಿ ಬ್ಯುವಾಯಿರ್: ಅಸ್ತಿತ್ವವಾದಿ ಚಳವಳಿಯ ಪ್ರಖ್ಯಾತ ಲೇಖಕಿ ಮತ್ತು ತತ್ವಜ್ಞಾನಿ. ಅನುಸರಣೆ ವಿರೋಧಿಯಾಗಿ, ತಮ್ಮ 1949 ರ ಪುಸ್ತಕ ದಿ ಸೆಕೆಂಡ್ ಸೆಕ್ಸ್‌ನಂತಹ ಬರಹಗಳ ಮೂಲಕ ಮಹಿಳೆಯರ ವಿಮೋಚನೆಯನ್ನು ಆಕೆ ಪ್ರತಿಪಾದಿಸಿದರು ಮತ್ತು 20ನೇ ಶತಮಾನದಲ್ಲಿ ಫ್ರಾನ್ಸ್‌ನ ಸ್ತ್ರೀವಾದದ ಆದ್ಯಪ್ರವರ್ತಕರಲ್ಲಿ ಒಬ್ಬರಾದರು. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಲಿಯೋನ್‌ನ ಪ್ಲೇಸ್ ಬೆಲ್ಲೆಕೌರ್‌ನಲ್ಲಿ ಆಂಟೊನಿಯೊ ಡಿ ಸೇಂಟ್ ಕ್ಸುಪೆರೆ ಅವರ ಭೌತಿಕ ಪ್ರತಿಮೆ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಎಲಿಸಬೆತ್ ವಿಗೀ ಲೆ ಬ್ರುನ್: 1783 ರಲ್ಲಿ ಚಿತ್ರಕತೆ ಮತ್ತು ಮೂರ್ತಶಿಲ್ಪದ ರಾಯಲ್ ಅಕಾಡೆಮಿಗೆ ಸೇರಿದ ಮತ್ತು ಮಾರಿಯೊ ಆ್ಯಂಟೊನೆಟ್ಟೆಗೆ ಅಧಿಕೃತ ಚಿತ್ರಕಾರರಾಗಿದ್ದ ಅವರು, ಆ ಸಂದರ್ಭದಲ್ಲಿ ಮಹಿಳಾ ಕಲಾವಿದರು ಎದುರಿಸಬೇಕಿದ್ದ ಹಲವು ಅಡೆತಡೆಗಳ ಹೊರತಾಗಿಯೂ ಕಲಾಪ್ರಪಂಚದಲ್ಲಿ ನಿರ್ಣಾಯಕ ಮತ್ತು ಜನಪ್ರಿಯತೆಯ ಯಶಸ್ಸು ಸಾಧಿಸಿದರು. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಮರ್ಸೆಲೀಯಲ್ಲಿ ಪಾರ್ಕ್ ಬೊರೆಲಿಯ ಪಿಯರೆ ಫುಗೆಟ್ ಅವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಪ್ರಾಂಕೊಯಿಸ್ ಡಿ ಗ್ರಾಫಿಗ್ನಿ: 18ನೇ ಶತಮಾನದ ಫ್ರೆಂಚ್ ಸಾಹಿತ್ಯಲೋಕದಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದ ಮಹಿಳಾ ಲೇಖಕಿ, ಅವರ ತತ್ವಜ್ಞಾನದ ಪ್ರಬಂಧಗಳಾದ 1747 ರಲ್ಲಿ ಪ್ರಕಟವಾದ ಪೆರುವಿಯನ್ ಮಹಿಳೆಗೆ ಪತ್ರಗಳು ಕೃತಿಗೆ ಪ್ರಖ್ಯಾತರಾಗಿದ್ದಾರೆ. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಬಾರ್ಡೆಯಾಕ್ಸ್‌ನಲ್ಲಿ ಪ್ಲೇಸ್ ಡೆಸ್ ಕ್ವಿಂಕಾನ್ಸೆಸ್‌ನ ಮಾಂಟೆಸ್ಕ್ವಿಯು ಅವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಮ್ಯಾನನ್ ಟಾರ್ಡನ್: ಫ್ರೆಂಚ್ ಕ್ರಾಂತಿ ಮತ್ತು ಸ್ವತಂತ್ರ ಫ್ರಾನ್ಸ್‌ ಚಳವಳಿಯ ಪ್ರಮುಖರಾಗಿದ್ದ ಅವರು ಮೇ 8, 1945 ರಲ್ಲಿ ನಾಜಿ ಜರ್ಮನಿಯ ಶರಣಾಗತಿಯ ಸಂದರ್ಭ ಹಾಜರಿದ್ದರು. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ನಾಂಟೆಸ್‌ನಲ್ಲಿ ಅಮಿರಾಲ್ ಹಲ್ಗನ್ ಚೌಕದ ಫಿಲಿಪ್ಪೆ ಲೆಕ್ಲರ್ಕ್ ಡಿ ಹಾಟೆಕ್ಲಾಕ್ ಅವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಜೊಸೆಫಿನ್ ಬೇಕರ್: ಅಮೆರಿಕದಲ್ಲಿ ಜನಿಸಿದ ಗಾಯಕಿ, ನಟಿ, ಸ್ತ್ರೀವಾದಿ, ನರ್ತಕಿ ಮತ್ತು ಫ್ರೆಂಚ್ ಕ್ರಾಂತಿಯ ಹೋರಾಟಗಾರ್ತಿಯಾಗಿದ್ದ ಜೊಸೆಫಿನ್ ಬೇಕರ್ ಅವರು ಫ್ರಾನ್ಸ್ ಸ್ವಾತಂತ್ರ್ಯ ಹೋರಾಟದ ಪಡೆಗಳಿಗೆ ಗೂಢಚಾರಿಣಿಯಾಗಿ ಕೆಲಸ ಮಾಡಿದ್ದರು, ರೋರಿಂಗ್ ಟ್ವೆಂಟೀಸ್ ತಂಡದ ಪ್ರಮುಖರಾಗಿದ್ದರು ಮತ್ತು ಜನಾಂಗೀಯ ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಮೆಟ್ಝ್‌ನಲ್ಲಿ ಗೇರ್ ಸೆಂಟ್ರಾಲೆಯ ಜೀನ್ ಮೌಲಿನ್ ಅವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಒಲಿಂಪೆ ಡಿ ಗೌಜೆಸ್: 1791 ರಲ್ಲಿ ಪ್ರಕಟವಾದ ಮಹಿಳೆಯರು ಮತ್ತು ನಾಗರಿಕರ ಹಕ್ಕುಗಳ ಘೋಷಣೆ ಕೃತಿಯ ಪ್ರಧಾನ ಲೇಖಕಿಯಾದ ಅವರನ್ನು ಫ್ರೆಂಚ್ ಸ್ತ್ರೀವಾದದ ಆದ್ಯಪ್ರವರ್ತಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಸ್ಟ್ರಾಸ್‌ಬರ್ಗ್‌ನಲ್ಲಿ ಪ್ಲೇಸ್ ಕ್ಲೆಬರ್‌ನ ಜೀನ್ ಬಾಪ್ಟಿಸ್ಟೆ ಕ್ಲೆಬರ್ ಅವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.

  • ಹ್ಯುಬರ್ಟೈನ್ ಆಕ್ಲೆರ್ಟ್: ಪತ್ರಕರ್ತೆ, ಸ್ತ್ರೀವಾದಿ, ಚಳವಳಿಗಾರ್ತಿ ಮತ್ತು 1876 ರಲ್ಲಿ ಲೆ ಡ್ರಾಯ್ಟ್ ಡೆಸ್ ಫೆಮ್ಮಿಸ್ (ಅಂದರೆ: ಮಹಿಳಾ ಹಕ್ಕುಗಳ ಸಮಾಜ) ಸಂಘಟನೆಯನ್ನು ಸ್ಥಾಪಿಸಿದ ಅವರು, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣದ ಹಕ್ಕು ಮತ್ತು ವಿವಾಹ ಹಾಗೂ ವಿಚ್ಛೇದನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಅವರ ವರ್ಧಿತ ವಾಸ್ತವ ಪ್ರತಿಮೆಯನ್ನು ಲಿಲ್ಲಿ ಒಪೆರಾದಿಂದ ತುಸು ದೂರದಲ್ಲೇ ಇರುವ ಪ್ಲೇಸ್ ಡು ಥಿಯೇಟರ್‌ನ ಲಿಯಾನ್ ಟ್ರುಲಿನ್ ಅವರ ಭೌತಿಕ ಪ್ರತಿಮೆಯ ಪಕ್ಕದಲ್ಲಿ ಇರಿಸಲಾಗುತ್ತದೆ.


ಈ ವರ್ಧಿತ ವಾಸ್ತವ ಅನುಭವವನ್ನು ವಿನ್ಯಾಸಗೊಳಿಸಲು, ಮಹಿಳಾ 3D ಕಲಾವಿದರು ಮತ್ತು ಒಬ್ಬ ಮಹಿಳಾ AR ಎಂಜಿನಿಯರ್ ಒಳಗೊಂಡಂತೆ ಪ್ಯಾರಿಸ್‌ನ AR ಸ್ಟುಡಿಯೋದೊಳಗೆ ಈ ಪ್ರಾಜೆಕ್ಟ್‌ಗೆ ಮೀಸಲಾದ ಒಂದು ತಂಡವು ಪ್ರತಿಮೆಗಳ ಕಲ್ಪನೆಯನ್ನು ಮಾಡಿ ಅವುಗಳನ್ನು ರೂಪಿಸಿತು ಹಾಗೂ ಈ ವರ್ಧಿತ ವಾಸ್ತವ ಅನುಭವಗಳನ್ನು ವಾಸ್ತವವಾಗಿಸಲು ಹಾಗೂ ಸಾಧ್ಯವಿರುವಷ್ಟು ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾದ ರೀತಿಯಲ್ಲಿ ಈ ಮಹಿಳೆಯರ ಪ್ರತಿನಿಧಿತ್ವವನ್ನು ಒದಗಿಸಲು ಪಾರಸ್ಪರಿಕ ಸಂವಹನವನ್ನು ಅಭಿವೃದ್ಧಿಪಡಿಸಿತು.

" ಫ್ರಾನ್ಸ್‌ನ 8 ನಗರಗಳಲ್ಲಿ ಸ್ಥಾಪಿಸಿದ ಈ ವಿನೂತನ ಅನುಭವದ ಮೂಲಕ, ತಮ್ಮ ಕಾರ್ಯಗಳು, ಬರಹಗಳು ಮತ್ತು ತಮ್ಮ ಸ್ಥಾನಗಳ ಮೂಲಕ ಫ್ರೆಂಚ್ ಇತಿಹಾಸ ಮತ್ತು ಸಮಾಜದಲ್ಲಿ ಪರಿವರ್ತನೆ ತಂದ 8 ಮಹಿಳೆಯರಿಗೆ ಶ್ರದ್ಧಾಂಜಲಿ ಅರ್ಪಿಸಲು ನಾವು ಬಯಸುತ್ತೇವೆ. ಇದು ಸಾಧ್ಯವಾಗಿರುವುದು Snap ನ ವರ್ಧಿತ ವಾಸ್ತವ ತಂತ್ರಜ್ಞಾನಗಳಿಂದ, ಇದನ್ನು ಬಳಸಿಕೊಂಡು ಆ 8 ಮಹಿಳೆಯರ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸುವ ಮೂಲಕ ಹಾಗೂ ಅವುಗಳನ್ನು ಪುರುಷರ ಪ್ರತಿಮೆಗಳ ಪಕ್ಕದಲ್ಲಿ ಇರಿಸುವ ಮೂಲಕ ಆ ಮಹಿಳೆಯರ ಸಾಧನೆಯನ್ನು ಗೌರವಿಸಲು ನಮಗೆ ಸಾಧ್ಯವಾಗಿದೆ. ಈ ಐತಿಹಾಸಿಕ ಪ್ರತಿಮೆಗಳ ನಡುವೆ ಮೌನ ಸಂಭಾಷಣೆಯನ್ನು ರಚಿಸುವ ಮೂಲಕ, ಮಹಿಳಾ ಹಕ್ಕುಗಳಿಗಾಗಿ ಹೋರಾಟದ ಕುರಿತು ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದು ನಮ್ಮ ಬಯಕೆಯಾಗಿದೆ."  — ಡೊನಾಟೀನ್ ಬೊಜೊನ್, AR ಸ್ಟುಡಿಯೋ ನಿರ್ದೇಶಕಿ.

ಲೆನ್ಸ್ ಸಕ್ರಿಯಗೊಳಿಸುವುದು ಹೇಗೆ : 

Snapchatter ಗಳಿಗೆ ಮತ್ತು ಸೈಟ್ ಸಂದರ್ಶಕರಿಗೆ 8 ಮಾರ್ಚ್ 2023 ರಿಂದ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಲೆನ್ಸ್ ಚಾಲಿತಗೊಳಿಸಲು ಸಾಧ್ಯವಾಗುತ್ತದೆ:

  • ನಿಮ್ಮ ಅಪೇಕ್ಷಿತ ಸ್ಥಳಕ್ಕೆ ಹೋಗಿ ಮತ್ತು ಭೌತಿಕ ಪ್ರತಿಮೆಯ ಎದುರು ನಿಂತುಕೊಳ್ಳಿ.

  • Snapchat ಅಪ್ಲಿಕೇಶನ್ ತೆರೆಯಿರಿ.

  • ಕ್ಯಾರುಸೆಲ್‌ನಲ್ಲಿ ಲಭ್ಯವಿರುವ 8ನೇ ಮಾರ್ಚ್, 8 ಮಹಿಳೆಯರು ಲೆನ್ಸ್ ಲಾಂಚ್ ಮಾಡಿ.

  • ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪ್ರತಿಮೆಯತ್ತ ಹಿಡಿಯಿರಿ.

  • ವರ್ಧಿತ ವಾಸ್ತವ ಪ್ರತಿಮೆಯು ಭೌತಿಕ ಪ್ರತಿಮೆಯ ಪಕ್ಕದಲ್ಲಿ ನೈಜ ಗಾತ್ರದಲ್ಲಿ ಕಾಣಿಸುತ್ತದೆ.

  • Snap ಮೂಲಕ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ನಿಮ್ಮ ಕಥೆಯಲ್ಲಿ ಅಥವಾ ಸ್ಪಾಟ್‌ಲೈಟ್‌ನಲ್ಲಿ ಪೋಸ್ಟ್ ಮಾಡಿ.


ಕೆಳಗಿನ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ Snapchatter ಗಳು ಪ್ರತಿಮೆಗಳ ಚಿಕ್ಕ ಪ್ರತಿಕೃತಿಯನ್ನೂ ಕೂಡ ನೋಡಬಹುದು:

ಸುದ್ದಿಗೆ ಮರಳಿ