ಮಾರ್ಚ್ 23, 2023
ಮಾರ್ಚ್ 23, 2023

ಪರಿಚಯಿಸುತ್ತಿದ್ದೇವೆ AR ಎಂಟರ್‌ಪ್ರೈಸ್ ಸೇವೆಗಳು

Snap ನ ಹೊಸ B2B ಆಫರಿಂಗ್, ವರ್ಧಿತ ವಾಸ್ತವ ತಂತ್ರಜ್ಞಾನದ ಗುಚ್ಛವನ್ನು ನೇರವಾಗಿ ವ್ಯವಹಾರಗಳ ಕೈಗೆ ಒದಗಿಸಲಿದೆ

ವಿಶ್ವದರ್ಜೆಯ ತಂತ್ರಜ್ಞಾನ ಮತ್ತು ನಮ್ಮ AR ನೊಂದಿಗೆ ಪ್ರತಿದಿನ, ಸರಾಸರಿ 250 ಮಿಲಿಯನ್‌ಗೂ ಅಧಿಕ ಜನರು ತೊಡಗಿಕೊಳ್ಳುವುದರೊಂದಿಗೆ Snap ವರ್ಧಿತ ವಾಸ್ತವದಲ್ಲಿ ನಾಯಕನಾಗಿದೆ.

ನೈಜ ಜಗತ್ತಿಗೆ ಹೊದಿಕೆಯಂತಿರುವ ಡಿಜಿಟಲ್ ಕಂಟೆಂಟ್ ಆಗಿರುವ – AR – ಬಹುತೇಕ ಪ್ರತಿ ಉದ್ಯಮದಾದ್ಯಂತ ವ್ಯವಹಾರಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿರುವ ಆಳವಾದ ತಂತ್ರಜ್ಞಾನದ ಮಾದರಿ ಪರಿವರ್ತನೆಯನ್ನು ಪ್ರತಿನಿಧಿಸುತ್ತದೆ ಹಾಗೂ ಗೆಲುವನ್ನು ತಂದುಕೊಡುವಂತಹ AR ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಕಂಪನಿಗಳು ಮತ್ತು ಬ್ರ್ಯಾಂಡ್‌ಗಳು ಮುಂಬರುವ ವರ್ಷಗಳಲ್ಲಿ ಅರ್ಥಪೂರ್ಣ ಸ್ಪರ್ಧಾತ್ಮಕ ಅನುಕೂಲವನ್ನು ಆನಂದಿಸುತ್ತವೆ ಎಂದು ನಾವು ನಂಬಿದ್ದೇವೆ.

Snapchat ನ AR ತಂತ್ರಜ್ಞಾನದ ಮೂಲಕ, ಮನರಂಜನೆ ಮತ್ತು ಸ್ವಯಂ-ಅಭಿವ್ಯಕ್ತಿಯಿಂದ, ಗ್ರಾಹಕರು ಮತ್ತು ವ್ಯವಹಾರಗಳೆರಡಕ್ಕೂ ನೈಜ ಪರಿಕರವಾಗುವುದರ ತನಕ AR ನ ವಿಕಸನವನ್ನು ನಾವು ನೋಡಿದ್ದೇವೆ. ಮತ್ತು, ಸಹಜವಾಗಿ, ಬ್ರ್ಯಾಂಡ್‌ಗಳು ತಮ್ಮ ಸ್ವಂತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ಸೇರಿದಂತೆ, Snapchat ನಾಚೆಗೆ ಮತ್ತು ವೇದಿಕೆಗಳಾದ್ಯಂತ ತಮ್ಮ ಗ್ರಾಹಕರೊಂದಿಗೆ ತೊಡಗಿಕೊಳ್ಳಲು ಸಾಧ್ಯವಾಗಬೇಕಾಗುತ್ತದೆ.

ಇಂದು, ವ್ಯವಹಾರಗಳು ತಮ್ಮ ಸ್ವಂತ ಆ್ಯಪ್‌ಗಳು, ವೆಬ್‌ಸೈಟ್‌ಗಳು ಮತ್ತು ಭೌತಿಕ ಸ್ಥಳಗಳಲ್ಲಿ Snap ನ AR ತಂತ್ರಜ್ಞಾನದ ಗುಚ್ಛವನ್ನು ಏಕೀಕರಿಸಿಕೊಳ್ಳುವುದಕ್ಕಾಗಿ ಹೊಸ ವಿಧಾನವಾದ AR ಎಂಟರ್‌ಪ್ರೈಸ್ ಸೇವೆಗಳು (ARES) ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ – ಈ ಮೂಲಕ ಅವರು ಗ್ರಾಹಕರೊಂದಿಗೆ ತೊಡಗಿಕೊಳ್ಳುವ ವಿಧಾನವನ್ನು ಪರಿವರ್ತಿಸಲಿದ್ದೇವೆ ಮತ್ತು ಇನ್ನಷ್ಟು ಉತ್ತಮ ವ್ಯವಹಾರ ಫಲಿತಾಂಶಗಳನ್ನು ಒದಗಿಸಿಕೊಡಲಿದ್ದೇವೆ. 

ARES ಗೆ ನಮ್ಮ ಮೊದಲ ಆಫರಿಂಗ್, ಶಾಪಿಂಗ್ ಸೂಟ್ ಆಗಿದ್ದು ಇದು AR ಟ್ರೈ-ಆನ್, 3D ವೀವರ್, Fit Finder ಮತ್ತು ಇನ್ನಷ್ಟನ್ನು – ನೇರವಾಗಿ ವ್ಯಾಪಾರಿಗಳ ಸ್ವಂತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಒದಗಿಸುತ್ತದೆ. ಶಾಪಿಂಗ್ ಸೂಟ್ ಇಂದು ಲಭ್ಯವಿದೆ, ಮತ್ತು ಪ್ರಸ್ತುತ ಫ್ಯಾಶನ್, ಉಡುಪುಗಳು, ಪರಿಕರಗಳು ಮತ್ತು ಮನೆಯ ಪೀಠೋಪಕರಣಗಳಿಗಾಗಿ AR ಶಾಪಿಂಗ್ ಅನ್ನು ಒಳಗೊಂಡಿದೆ. ಸೂಟ್ ಇವುಗಳನ್ನು ಒಳಗೊಂಡಿದೆ: 

  • ಮೀಸಲಾದ ಸೇವೆಗಳು ಮತ್ತು ಬೆಂಬಲ: AR ಸ್ವತ್ತು ಸೃಷ್ಟಿ ಮತ್ತು ಸದೃಢವಾದ ತಾಂತ್ರಿಕ ಅನುಷ್ಠಾನ ಬೆಂಬಲಕ್ಕಾಗಿ ವ್ಯವಹಾರಗಳು ಮೀಸಲಾದ ಸೇವೆಗಳನ್ನು ಬಳಸಿಕೊಳ್ಳಬಹುದು. ಅಂತಿಮ ಬಳಕೆದಾರ ಕಾರ್ಯಕ್ಷಮತೆಗಾಗಿ ಆಪ್ಟಿಮೈಸ್ ಮಾಡಿರುವ ಉನ್ನತ ವಿಶ್ವಾಸಾರ್ಹತೆಯ ಸ್ವತ್ತುಗಳನ್ನು ತಲುಪಿಸಲು ಸ್ವಾಮ್ಯದ ಫೋಟೋಗ್ರಾಮೆಟ್ರಿ ಹಾರ್ಡ್‌ವೇರ್‌ ಮತ್ತು ಮೆಷಿನ್ ಲರ್ನಿಂಗ್ ಕ್ರಿಯೇಷನ್ ಪೈಪ್‌ಲೈನ್‌ಗಳನ್ನು ಬಳಸಿಕೊಂಡು ತಮ್ಮ ಉಡುಪು, ಪಾದರಕ್ಷೆ ಮತ್ತು ಕನ್ನಡಕ ಮತ್ತಿತರ ಉತ್ಪನ್ನಗಳ ಡಿಜಿಟಲ್ ಆವೃತ್ತಿಗಳನ್ನು ರಚಿಸಲು ನಮ್ಮ ಶಾಪಿಂಗ್‌ ಸೂಟ್‌ನ AR ಸ್ವತ್ತು ಸೃಷ್ಟಿ ಸೇವೆಗಳು ವ್ಯವಹಾರಗಳಿಗೆ ಸಹಾಯ ಮಾಡುತ್ತವೆ. 

  • ಸ್ವತ್ತುಗಳು ಮತ್ತು ಏಕೀಕರಣಗಳನ್ನು ನಿರ್ವಹಿಸಲು ಎಂಟರ್‌ಪ್ರೈಸ್ ಟೂಲ್‌ಗಳು: ವ್ಯವಹಾರಗಳು ತಮ್ಮ AR ಸ್ವತ್ತುಗಳು ಮತ್ತು ಏಕೀಕರಣಗಳನ್ನು ನಿರ್ವಹಿಸಬಹುದು ಮತ್ತು ಆಪ್ಟಿಮೈಸ್ ಮಾಡಬಹುದು, ಕಾರ್ಯಕ್ಷಮತೆಯ ವಿಶ್ಲೇಷಣೆಗಳನ್ನು ಅಳೆಯಬಹುದು ಮತ್ತು ಮೀಸಲಾದ ಶಾಪಿಂಗ್ ಸೂಟ್ ಬೆಂಬಲವನ್ನು ಪಡೆಯಬಹುದು.

  • ತಲುಪಿಸುವಿಕೆಯನ್ನು ಅನುಭವಿಸಿ: ವ್ಯವಹಾರಗಳು ನಮ್ಮ AR ಟ್ರೈ-ಆನ್, Fit Finder, ಮತ್ತು ಪ್ರತಿಕ್ರಿಯಾಶೀಲ 3D ವೀವರ್ ತಂತ್ರಜ್ಞಾನವನ್ನು ತಮ್ಮ ಸ್ವಂತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಅಳವಡಿಸಬಹುದು, ಈ ಮೂಲಕ ಶಾಪರ್‌ಗಳಿಗೆ ನಿಖರ ಫಿಟ್ ಮತ್ತು ಗಾತ್ರದ ಶಿಫಾರಸುಗಳನ್ನು ಒದಗಿಸಬಹುದು, ವರ್ಧಿತ ವಾಸ್ತವದಲ್ಲಿ ಉತ್ಪನ್ನಗಳನ್ನು ಟ್ರೈ-ಆನ್ ಮಾಡಲು ಅಥವಾ ನೋಡಲು ಮತ್ತು 3D ಯಲ್ಲಿ ಉತ್ಪನ್ನಗಳೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸಬಹುದು.

ಈ ಆಫರಿಂಗ್ ಮೂಲಕ, ಖಚಿತತೆಯೊಂದಿಗೆ ಸರಿಯಾದ ಉತ್ಪನ್ನಗಳನ್ನು ಕಂಡುಕೊಳ್ಳಲು ಶಾಪರ್‌ಗಳಿಗೆ ನೆರವಾಗುವ ಸುಧಾರಿತ ಟೂಲ್‌ಗಳ ಗುಚ್ಛದೊಂದಿಗೆ, ವಿಶ್ವಾದ್ಯಂತದ ಶಾಪರ್‌ಗಳು ಇನ್ನಷ್ಟು ತಲ್ಲೀನಗೊಳಿಸುವ ಮತ್ತು ವೈಯಕ್ತಿಕಗೊಳಿಸಿದ ಆನ್‌ಲೈನ್ ಶಾಪಿಂಗ್ ಅನುಭವವನ್ನು ಆನಂದಿಸುತ್ತಾರೆ.

300 ಕ್ಕೂ ಅಧಿಕ ಗ್ರಾಹಕರು ಈಗಾಗಲೇ ಶಾಪಿಂಗ್ ಸೂಟ್ ವೈಶಿಷ್ಟ್ಯಗಳ ಕೆಲವು ಸಂಯೋಜನೆಗಳನ್ನು ಬಳಸುತ್ತಿದ್ದಾರೆ ಮತ್ತು ಆರಂಭಿಕ ಗ್ರಾಹಕರಿಂದ ನಾವು ಈಗಾಗಲೇ ಭರವಸೆಯ ಫಲಿತಾಂಶಗಳನ್ನು ನೋಡುತ್ತಿದ್ದೇವೆ:

  • ಗ್ರಾಹಕರ ಮೊಬೈಲ್ ಸಾಧನಗಳಲ್ಲಿ ಸ್ಟೋರ್‌ನಲ್ಲಿನ ಶಾಪಿಂಗ್ ಅನುಭವವನ್ನು ಪ್ರತಿಬಿಂಬಿಸಲು Goodr, AR ಟ್ರೈ-ಆನ್ ಮತ್ತು ಪ್ರತಿಕ್ರಿಯಾಶೀಲ 3D ವೀವರ್ ತಂತ್ರಜ್ಞಾನವನ್ನು ಬಳಸಿಕೊಂಡಿತು, ಮತ್ತು ಕಾರ್ಟ್‌ಗೆ ಸೇರಿಸುವುದರಲ್ಲಿ 81% ಹೆಚ್ಚಳ ಮತ್ತು ಮೊಬೈಲ್ ಸಾಧನದ ಬಳಕೆದಾರರಿಂದ ಖರೀದಿಯಲ್ಲಿ 67% ಹೆಚ್ಚಳವನ್ನು ಕಂಡಿತು, ಈ ಮೂಲಕ ಪ್ರತಿ ಸಂದರ್ಶಕನಿಗೆ 59% ಆದಾಯ ಹೆಚ್ಚಳವನ್ನು ಪಡೆದುಕೊಂಡಿತು (Snap Inc. ಆಂತರಿಕ ಡೇಟಾ ಮಾರ್ಚ್ 15 - ಆಗಸ್ಟ್ 15 2022).

  • 7.5 ಮಿಲಿಯನ್‌ಗೂ ಅಧಿಕ ಶಾಪರ್‌ಗಳಿಗೆ ಶಿಫಾರಸುಗಳನ್ನು ತಲುಪಿಸಲು Princess Polly, Fit Finder ಮತ್ತು AR ಟ್ರೈ-ಆನ್ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿತು, ಈ ತಂತ್ರಜ್ಞಾನವನ್ನು ಬಳಸದೆ ಇರುವ ಶಾಪರ್‌ಗಳಿಗಿಂತ ಇವರಲ್ಲಿ ರಿಟರ್ನ್ ದರವು 24% ಇಳಿಕೆಯಾಗಿತ್ತು (Snap Inc. ಆಂತರಿಕ ಡೇಟಾ July 1 2020 - ಅಕ್ಟೋಬರ್ 31 2022).

  • ಪ್ರತಿ 4 ಶಾಪರ್‌ಗಳಲ್ಲಿ 1 ಶಾಪರ್‌ಗೆ ವೈಯಕ್ತಿಕಗೊಳಿಸಿದ ಅನುಭವಗಳನ್ನು ಒದಗಿಸಲು ಸಹಾಯ ಮಾಡುವ, ಫಿಟ್ ಮತ್ತು ಗಾತ್ರದ ಶಿಫಾರಸುಗಳು ಹಾಗೂ AR ಟ್ರೈ-ಆನ್ ವೈಶಿಷ್ಟ್ಯಗಳನ್ನು ಬಳಸುವ ಶಾಪರ್‌ಗಳಿಗಾಗಿ Gobi Cashmere ನ ಪರಿವರ್ತನೆ ದರ 4 ಪಟ್ಟು ಹೆಚ್ಚಳವಾಗಿತ್ತು. (Snap Inc. ಆಂತರಿಕ ಡೇಟಾ ಸೆಪ್ಟೆಂಬರ್ 1 2022- ಅಕ್ಟೋಬರ್ 31, 2022)

ಈ ಸಾಹಸೋದ್ಯಮವನ್ನು ಜಿಲ್ ಪೊಪೆಲ್ಕಾ ಮುನ್ನಡೆಸುತ್ತಿದ್ದು, ಅವರು AR ಎಂಟರ್‌ಪ್ರೈಸ್ ಸೇವೆಗಳ ಮುಖ್ಯಸ್ಥರಾಗಿ Snap ಗೆ ಸೇರ್ಪಡೆಯಾಗಿದ್ದಾರೆ, ಹಾಗೂ ಕಾರ್ಯತಂತ್ರ, ಗ್ರಾಹಕರ ಅನುಭವ, ಮಾರಾಟಗಳು, ಉತ್ಪನ್ನ, ಉತ್ಪನ್ನದ ಮಾರ್ಕೆಟಿಂಗ್, ಗ್ರಾಹಕರ ಬೆಂಬಲ ಮತ್ತು ಪರಿಸರವ್ಯವಸ್ಥೆ ಅಭಿವೃದ್ಧಿಯಾದ್ಯಂತ ಜಾಗತಿಕ ತಂಡವನ್ನು ರಚಿಸುತ್ತಿದ್ದಾರೆ.

ಗ್ರಾಹಕರ ವ್ಯವಹಾರಗಳನ್ನು ಪರಿವರ್ತಿಸಲು ಇನ್ನಷ್ಟು ಗ್ರಾಹಕರನ್ನು AR ನ ಸಮೀಪಕ್ಕೆ ತರಲು ಮತ್ತು AR ಎಂಟರ್‌ಪ್ರೈಸ್ ಪರಿಹಾರಗಳೊಂದಿಗೆ ವಿಶ್ವಾದ್ಯಂತದ ಗ್ರಾಹಕರಿಗೆ ಶಾಪಿಂಗ್ ಅನುಭವವನ್ನು ಇನ್ನಷ್ಟು ಆತ್ಮೀಯವಾಗಿಸುವಂತೆ ಮಾಡಲು ನಾವು ನಿರೀಕ್ಷಿಸುತ್ತಿದ್ದೇವೆ!

ಮರಳಿ ಸುದ್ಧಿಗೆ