ಸೆಪ್ಟೆಂಬರ್ 19, 2023
ಸೆಪ್ಟೆಂಬರ್ 19, 2023

ಜಾಗತಿಕ AR ಡೆವಲಪರ್‌ಗಳಿಗಾಗಿ Snap ಲೆನ್ಸ್‌ ಫೆಸ್ಟ್ ಆಯೋಜಿಸಲಿದೆ

ನವೆಂಬರ್ 9, 2023 ರಂದು ಲೈವ್‌ಸ್ಟ್ರೀಮ್ ಮಾಡಲಾಗುವ ಈವೆಂಟ್ ವರ್ಧಿತ ವಾಸ್ತವ ತಂತ್ರಜ್ಞಾನದ Snap ನ ವಾರ್ಷಿಕ ಸಂಭ್ರಮಾಚರಣೆಗಾಗಿ ಕ್ರಿಯೇಟರ್‌ಗಳು, ಡೆವಲಪರ್‌ಗಳು ಮತ್ತು ಪಾಲುದಾರರನ್ನು ಜೊತೆಗೂಡಿಸಲಿದೆ

Snap ನ ಆರನೆಯ ವಾರ್ಷಿಕ ಲೆನ್ಸ್ ಫೆಸ್ಟ್ ಅನ್ನು 9ನೇ ನವೆಂಬರ್ 2023 ರಂದು ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ ಎಂದು ನಾವು ಇಂದು ಪ್ರಕಟಿಸುತ್ತಿದ್ದೇವೆ. ಪ್ರಕಟಣೆಗಳು, ವರ್ಚುವಲ್ ಸೆಷನ್‌ಗಳು, ನೆಟ್‌ವರ್ಕಿಂಗ್ ಇನ್ನೂ ಮುಂತಾದವುಗಳ ದಿನಕ್ಕಾಗಿ ನಮ್ಮೊಂದಿಗೆ ಕೈಜೋಡಿಸುವಂತೆ ನಾವು ಡೆವಲಪರ್‌ಗಳು, ಪಾಲುದಾರರು ಮತ್ತು ಕ್ರಿಯೇಟರ್‌ಗಳನ್ನು ಆಹ್ವಾನಿಸುತ್ತಿದ್ದೇವೆ. ar.snap.com/lens-fest ನಲ್ಲಿ ಈಗ ನೋಂದಣಿ ಪ್ರಾರಂಭವಾಗಿದೆ. 

ಗಡಿಗಳನ್ನು ಮೀರಲು, ವರ್ಧಿತ ವಾಸ್ತವದೊಂದಿಗೆ ಸಾಧ್ಯವಿರುವುದನ್ನು ಮರುವ್ಯಾಖ್ಯಾನಿಸಲು ಮತ್ತು ಮಾರ್ಗದುದ್ದಕ್ಕೂ ವ್ಯವಹಾರಗಳನ್ನು ನಿರ್ಮಿಸಲು ನಮ್ಮೊಂದಿಗೆ ಸಹಭಾಗಿತ್ವ ಮಾಡುತ್ತಿರುವ ದೂರದರ್ಶಿತ್ವ ಉಳ್ಳವರು, ಸಂಶೋಧಕರು ಮತ್ತು ಕನಸುಗಾರರ ವೈವಿಧ್ಯಮಯ Snap AR ಸಮುದಾಯವನ್ನು ಜೊತೆಗೂಡಿಸುವ ಅವಕಾಶ ಹೊಂದಿರುವುದಕ್ಕಾಗಿ ನಾವು ರೋಮಾಂಚಿತರಾಗಿದ್ದೇವೆ. 

ಇದರ ಜೊತೆಗೆ, ಈವೆಂಟ್‌ನ ಸಂದರ್ಭ ಅವರ ರಚನೆಗಳಿಗಾಗಿ ಗುರುತಿಸಲ್ಪಡುವುದಕ್ಕಾಗಿ ಲೆನ್ಸ್ ಫೆಸ್ಟ್‌ ಬಹುಮಾನಗಳಿಗಾಗಿ ನಾಮನಿರ್ದೇಶನಗಳನ್ನು ಸಲ್ಲಿಸುವಂತೆ ನಾವು ಡೆವಲಪರ್‌ಗಳನ್ನು ಉತ್ತೇಜಿಸುತ್ತೇವೆ. ನಮ್ಮ ಸಮುದಾಯವನ್ನು ಆಚರಿಸಲು ಮತ್ತು Snap AR ವೇದಿಕೆಯಲ್ಲಿ ಮುಂದಿನ ದಿನಗಳಲ್ಲಿ ಏನು ಬರಲಿದೆ ಎನ್ನುವುದನ್ನು ಬಹಿರಂಗಪಡಿಸಲು ನಾವು ಅತ್ಯಂತ ಕಾತುರರಾಗಿದ್ದೇವೆ. 

ಮರಳಿ ಸುದ್ಧಿಗೆ