ಜೂನ್ 03, 2024
ಜೂನ್ 03, 2024

ಕಡಿಮೆ ಲೈಕ್‌ಗಳು. ಹೆಚ್ಚು ಪ್ರೀತಿ.

ನಾವು ಹೆಚ್ಚು ಪ್ರೀತಿಯನ್ನು ಅನುಭವಿಸಿದಂತೆ, ಹೆಚ್ಚು ಪ್ರೀತಿಯನ್ನು ನೀಡುತ್ತೇವೆ. Snapchat ಜೊತೆಗೆ ಪ್ರೀತಿಯನ್ನು ಹರಡಿ.

ಸಾಮಾಜಿಕ ಮಾಧ್ಯಮದ ಉದಯವಾಗುತ್ತಿರುವ ಸಂದರ್ಭ ಜನರು ಪರಿಪೂರ್ಣವಾದ ಕಂಟೆಂಟ್ ಪೋಸ್ಟ್ ಮಾಡುವ ಒತ್ತಡವನ್ನು ಅನುಭವಿಸಲು ಆರಂಭಿಸಿದ್ದ ಸಮಯದಲ್ಲಿ Snapchat ಅನ್ನು ನಿರ್ಮಿಸಲಾಗಿತ್ತು. ಸಾಮಾಜಿಕ ಮಾಧ್ಯಮವು ಲೈಕ್‌ಗಳು, ಕಾಮೆಂಟ್‌ಗಳು ಮತ್ತು ಫಾಲೋವರ್‌ಗಳನ್ನು ಬಳಕೆದಾರರು ಬೆನ್ನತ್ತುವ ಜನಪ್ರಿಯತೆಯ ಸ್ಪರ್ಧೆಯಾಗಿ ಬದಲಾಗುತ್ತಿತ್ತು.

ಅದಕ್ಕಿಂತ ಭಿನ್ನವಾಗಿರಲು Snapchat ಅನ್ನು ವಿನ್ಯಾಸಗೊಳಿಸಲಾಗಿತ್ತು. ಲೈಕ್‌ಗಳಿಗಾಗಿ ಜನರು ಸ್ಪರ್ಧಿಸಬೇಕು ಅಥವಾ ಪರಿಪೂರ್ಣವಾಗಿ ರಚಿಸಿದ ಮತ್ತು ಜಾಗರೂಕತೆಯಿಂದ ಆಯ್ದ ಕಂಟೆಂಟ್‌ ಮೂಲಕ ಮಿತಿರಹಿತವಾಗಿ ಸ್ಕ್ರಾಲ್ ಮಾಡುತ್ತಿರಬೇಕು ಎನ್ನುವ ಉದ್ದೇಶ ಎಂದೂ ಅದರದ್ದಾಗಿರಲಿಲ್ಲ. ಇದು ಯಾವಾಗಲೂ ನೈಜ ಸಂಬಂಧಗಳಿಗಾಗಿ — ವಿನೋದ, ಆನಂದ ಮತ್ತು ಪ್ರೀತಿಯನ್ನು ಹರಡುವುದಕ್ಕಾಗಿನ ಸ್ಥಳವಾಗಿತ್ತು. 

ಫೆಬ್ರವರಿಯಲ್ಲಿ, ನಮ್ಮ ಬ್ರ್ಯಾಂಡ್ ಅಭಿಯಾನ, “ಕಡಿಮೆ ಸಾಮಾಜಿಕ ಮಾಧ್ಯಮ. ಹೆಚ್ಚು Snapchat.” ಅನ್ನು ನಾವು ಆರಂಭಿಸಿದ್ದು, ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಗಳಿಗಿಂತ Snapchat ಹೇಗೆ ಭಿನ್ನವಾಗಿದೆ ಎನ್ನುವುದನ್ನು ಜಗತ್ತಿಗೆ ತೋರಿಸಿದೆವು. ಇಂದು, ನಮ್ಮ ಅಭಿಯಾನದ ಮುಂದಿನ ಹಂತವಾದ "ಕಡಿಮೆ ಲೈಕ್‌ಗಳು. ಹೆಚ್ಚು ಪ್ರೀತಿ." ಜೊತೆಗೆ ಪ್ರೀತಿಯನ್ನು ಹರಡಲು ಜನರು Snapchat ಅನ್ನು ಹೇಗೆ ಬಳಸುತ್ತಿದ್ದಾರೆ ಎನ್ನುವುದನ್ನು ಹೈಲೈಟ್ ಮಾಡುತ್ತಿದ್ದೇವೆ. ಅದನ್ನು ಪರಿಶೀಲಿಸಿ:

ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಮೆಸೇಜಿಂಗ್ ಮಾಡುವುದು Snapchat ನ ಬಳಕೆಯ ನಂಬರ್ ಒನ್ ಉದ್ದೇಶವಾಗಿದೆ ಮತ್ತು ಯಾವಾಗಲೂ ಆಗಿತ್ತು. "ಕಡಿಮೆ ಲೈಕ್‌ಗಳು. ಹೆಚ್ಚು ಪ್ರೀತಿ." Snap ಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದರ ಅನುಭವವನ್ನು ಪ್ರಚೋದಿಸುತ್ತದೆ ಮತ್ತು ಒಂದು ಪಠ್ಯ ಸಂದೇಶ ಸ್ವೀಕರಿಸುವುದು ಅಥವಾ ಸಾಮಾಜಿಕ ಪೋಸ್ಟ್ ನೋಡುವುದಕ್ಕಿಂತ ಅದು ಹೇಗೆ ಹೆಚ್ಚು ಸಮೃದ್ಧವಾಗಿದೆ ಎನ್ನುವುದನ್ನು ತೋರಿಸುತ್ತದೆ. Snapchat ನಲ್ಲಿ ನಮ್ಮ ಅತ್ಯಂತ ಸೃಜನಶೀಲ ವಿಚಾರಗಳು, ಲೌಕಿಕ ವಿವರಗಳು ಮತ್ತು ಪರಿಪೂರ್ಣವಲ್ಲದ ಕ್ಷಣಗಳನ್ನು ನಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಲು ನಾವು ಮುಕ್ತರಾಗಿದ್ದೇವೆ. ಸಂಪರ್ಕಿತರಾಗಿರುವ ಭಾವನೆ ಹೊಂದಲು ಮತ್ತು ನಿಮ್ಮ ಬದುಕಿನಲ್ಲಿ ಹೆಚ್ಚು ಪ್ರೀತಿಯನ್ನು ಹೊಂದಲು ಇದು ಅತ್ಯುತ್ತಮ ವಿಧಾನವಾಗಿದೆ.

ಆದ ಕಾರಣ 25 ಕ್ಕೂ ಹೆಚ್ಚು ದೇಶಗಳಲ್ಲಿ 13 ರಿಂದ 34 ವರ್ಷ ವಯಸ್ಸಿನ 75% ಜನರು ಸೇರಿದಂತೆ, 800 ಮಿಲಿಯನ್‌ಗೂ ಅಧಿಕ ಜನರು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ನೇರವಾಗಿ ಸಂವಹನ ನಡೆಸಲು Snapchat ಗೆ ಬರುತ್ತಾರೆ. ಇನ್ನಷ್ಟು ಪ್ರೀತಿಯನ್ನು ಅನುಭವಿಸಲು ಮತ್ತು ಇನ್ನಷ್ಟು ಪ್ರೀತಿಯನ್ನು ಹರಡಲು.

ನಾವು ಹೆಚ್ಚು ಪ್ರೀತಿಯನ್ನು ಅನುಭವಿಸಿದಂತೆ, ಹೆಚ್ಚು ಪ್ರೀತಿಯನ್ನು ನೀಡುತ್ತೇವೆ. Snapchat ಜೊತೆಗೆ ಪ್ರೀತಿಯನ್ನು ಹರಡಿ.

ಮರಳಿ ಸುದ್ಧಿಗೆ