Snap Partner Summit | New Snap Originals

Today we’re excited to announce our new slate of Snap Originals programming! These Shows span docuseries and scripted, comedies, and teen dramas — but they all have one thing in common. It’s not just the Shows that are original, it’s the way the stories are told.
ನಮ್ಮ ಹೊಸ Snap ಒರಿಜಿನಲ್ಸ್ ಪ್ರೊಗ್ರಾಮಿಂಗ್‌ನ ಸ್ಲೇಟ್ ಅನ್ನು ಘೋಷಿಸಲು ನಾವು ಇವತ್ತು ಉತ್ಸುಕರಾಗಿದ್ದೇವೆ!
ಈ ಶೋಗಳು ಡಾಕ್ಯುಸೀರೀಸ್ ಮತ್ತು ಸ್ಕ್ರಿಪ್ಟ್ ಮಾಡಿದ, ಕಾಮಿಡಿಗಳು, ಮತ್ತು ಹದಿಹರೆಯದವರ ನಾಟಕಗಳನ್ನು ಒಳಗೊಂಡಿವೆ — ಆದರೆ ಅವೆಲ್ಲವುಗಳಲ್ಲಿ ಒಂದು ಸಂಗತಿ ಸಾಮಾನ್ಯವಾಗಿದೆ. ಕೇವಲ ಶೋಗಳಷ್ಟೇ ಒರಿಜಿನಲ್ ಆಗಿರುವುದಲ್ಲ, ಕಥೆಗಳನ್ನು ಹೇಳುವ ವಿಧಾನವೂ ಒರಿಜಿನಲ್ ಆಗಿದೆ.
ಅವು ವೈಯಕ್ತಿಕ, ಆತ್ಮೀಯವಾಗಿವೆ ಮತ್ತು ಇಂದು ನೀವು ನಿಮ್ಮ ಫೋನ್ ಅನ್ನು ಬಳಸುವ ವಿಧಾನಕ್ಕಾಗಿ ಅವುಗಳನ್ನು ಸಿದ್ಧಪಡಿಸಲಾಗಿದೆ.
  • ನ್ಯೂ ಫಾರ್ಮ್‌ನ ಟು ಸೈಡ್ಸ್‌ ನಲ್ಲಿ, ಯುವ ದಂಪತಿ ತಮ್ಮ ಬ್ರೇಕಪ್‌ ಕುರಿತು ಮಾತನಾಡುತ್ತಾರೆ — ಎರಡೂ ಪಾತ್ರಗಳ ದೃಷ್ಟಿಕೋನದಿಂದ ಏಕಕಾಲಕ್ಕೆ ಹೇಳಲಾಗಿದೆ.
  • ನ್ಯೂಫಾರ್ಮ್‌ನ ಕಾಂಟ್ ಟಾಕ್ ನವ್ ಹದಿದರೆಯದವರ ಧಾರಾವಾಗಿ ಆಗಿದ್ದು ಕೆಲವು ಹೈಸ್ಕೂಲ್ ಹೊಸ ಅತ್ಯುತ್ತಮ ಸ್ನೇಹಿತರ ನಡುವೆ ಫೋನ್‌ನಲ್ಲಿ ನಡೆಯುವ ಸಂಗತಿಗಳನ್ನು ಒಳಗೊಂಡಿದೆ
  • ಇಂಡಿಗೋದ ಸ್ನೀಕರ್‌ಹೆಡ್ಸ್ನಲ್ಲಿ ಹೊಸದಾಗಿ ಕಾಲೇಜಿಗೆ ಸೇರಿರುವ ಮೂವರು ಲಾಸ್‌ ಏಂಜಲೀಸ್‌ನ ಹುಚ್ಚುತನ, ತುಂಟತನ ಮತ್ತು ಉತ್ಸಾಹಿ ಸ್ನೀಕರ್ ಸಂಸ್ಕೃತಿಯನ್ನು ಅನ್ವೇಷಿಸುತ್ತ ಮಾಡುವ ಆಕಸ್ಮಿಕ ತಪ್ಪುಕೆಲಸಗಳನ್ನು ತೋರಿಸುತ್ತೇವೆ.
  • ಡಕೋಟಾ ಪಿಕ್ಚರ್ಸ್‌ನ ಕಮಾಂಡರ್ಸ್‌ ನಲ್ಲಿ, ಇಬ್ಬರು ಹೈಸ್ಕೂಲ್‌ನಿಂದ ಹೊರಬಿದ್ದಿರುವ ಹುಡುಗರು ನಿಜ ಬದುಕನ್ನು ಬದಲಿಸುವ ಸಾಮರ್ಥ್ಯದ ರಹಸ್ಯ ಕೋಡ್‌ನೊಂದಿಗಿನ ರೆಟ್ರೊ ಕಂಪ್ಯೂಟರ್ ಅನ್ನು ಪತ್ತೆ ಮಾಡುತ್ತಾರೆ.
  • ಇನ್‌ಸರೆಕ್ಷನ್ ಮೀಡಿಯಾದ ಡೆಂಟನ್ಸ್ ಡೆತ್ ಡೇಟ್ ಕೇವಲ ಒಂದು ವಾರದಲ್ಲಿ ಸಾಯಲಿರುವ ಹೈಸ್ಕೂಲ್ ಜ್ಯೂನಿಯರ್‌ ವಿದ್ಯಾರ್ಥಿ: ಡೆಂಟನ್ ಲಿಟಲ್‌ನ ಕಥೆ ಒಳಗೊಂಡಿದೆ.
  • ಇಂಡಿಗೋದ ವೈಲ್ ಬ್ಲ್ಯಾಕ್ ಒಂದು ಡಾಕ್ಯುಸೀರೀಸ್ ಆಗಿದ್ದು ಲೇಖಕ, ಸಿನಿಮಾ ನಿರ್ದೇಶಕ, ರೆಕಾರ್ಡಿಂಗ್ ಕಲಾವಿದ, ಮತ್ತು ಶಿಕ್ಷಕ ಎಂಕೆ ಅಸಾಂಥೆ ಅವರ ನೇತೃತ್ವದಲ್ಲಿ ಆಶ್ಚರ್ಯ ಹುಟ್ಟಿಸುವ ನೇರ ಸಂಭಾಷಣೆಗಳ ಮೂಲಕ ಸಮಾನದಲ್ಲಿನ ವರ್ಣಬೇಧ ನೀತಿಯನ್ನು ಅನ್ವೇಷಿಸುತ್ತದೆ.
  • ಬಜ್‌ಫೀಡ್‌ನ ಮುಂಬರಲಿರುವ ದೈನಂದಿನ ಮಧ್ಯಾಹ್ನದ ಶೋ ಇತ್ತೀಚಿನ ಸೆಲೆಬ್ರಿಟಿ, ಮನರಂಜನೆ ಮತ್ತು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿರುವ ಅಬ್ಬಾ ಎನ್ನಿಸುವಂಥ ಕ್ಷಣಗಳ ಕುರಿತು ವೀಕ್ಷಕರಿಗೆ ತಿಳಿಸಲಿದೆ.
  • ಬೆಕೆಲೆವ್ಸ್‌ನ ಡೆಡ್ ಆಫ್ ನೈಟ್‌ ನಲ್ಲಿ, ಒಬ್ಬ ಹದಿಹರೆಯದ ಹುಡುಗಿ ಜಾಂಬಿಗಳಿಂದ ತುಂಬಿರುವ ಕ್ವಾರಂಟೈನ್‌ ನಗರದಿಂದ ತಪ್ಪಿಸಿಕೊಳ್ಳಬೇಕಾಗಿದ್ದು ಅವಳ ಬಳಿ ಇರುವ ಏಕೈಕ ಸಾಧನ ಫೋನ್ ಆಗಿರುತ್ತದೆ.
  • ಅಕ್ಟೋಬರ್‌ ಫಿಲ್ಮ್ಸ್‌ನ ಕಾಂಪ್ಟನ್ ಡ್ರೀಮ್ಸ್‌ ಒಂದು ಡಾಕ್ಯುಸೀರೀಸ್ ಆಗಿದ್ದು, ಕಾಂಪ್ಟನ್‌ನ ಉದಯೋನ್ಮುಖ ಮೂವರು ಕಲಾವಿದರ ಬದುಕಿನ ಏಳು ಬೀಳುಗಳನ್ನು ತೋರಿಸುತ್ತದೆ.
  • ಬುನಿಮ್/ಮರ್ರೆ ಅವರ ಸ್ಟ್ರಾಂಡೆಡ್ ವಿದ್ ಸ್ಯಾಮ್ ಆ್ಯಂಡ್ ಕಾಲ್ಬಿ ಯಲ್ಲಿ, ಒಬ್ಬರು ಅತೀಂದ್ರಿಯ ಅನ್ವೇಷಕರು ಪೆನ್ಸಿಲ್ವೇನಿಯಾದ ಶಾಪಗ್ರಸ್ತ ಪಟ್ಟಣಕ್ಕೆ ಹೋಗುತ್ತಾರೆ.
ಮೊಬೈಲ್ ಕಥೆ ಹೇಳುವಿಕೆಯ ಭವಿಷ್ಯವನ್ನು ರೂಪಿಸಲು ನಮ್ಮೊಂದಿಗೆ ಸೇರಿಕೊಂಡ ನಮ್ಮ ಪಾಲುದಾರರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಮತ್ತು ನಾವು ಒಟ್ಟಿಗೆ ನಿರ್ಮಿಸುತ್ತಿರುವ ಹೊಸ ಸ್ವರೂಪವು ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಮಾಡಲು ನಮಗೆ ಸಂತೋಷವಾಗಿದೆ!
ಕಳೆದ ಒಂದು ವರ್ಷದಲ್ಲೇ, ಶೋಗಳನ್ನು ವೀಕ್ಷಿಸುತ್ತ Snapchatters ಕಳೆದ ಸಮಯ ಮೂರು ಪಟ್ಟಾಗಿದೆ*. ಮೊದಲ ಸೀಸನ್‌ನಲ್ಲಿ 28 ಮಿಲಿಯನ್ ವಿಶಿಷ್ಟ ವೀಕ್ಷಕರನ್ನು ಮೀರಿದ ಎಂಡ್‌ಲೆಸ್‌ ಸಮ್ಮರ್ ಹಿಟ್ ಆಗಿತ್ತು**. ಮತ್ತು ದಿ ಡೆಡ್ ಗರ್ಲ್ಸ್ ಡೆಟೆಕ್ಟಿವ್ ಏಜೆನ್ಸಿ ಯೊಂದಿಗೆ, ಮೊದಲ ಎಪಿಸೋಡ್ ನೋಡಿದ 40% ವೀಕ್ಷಕರು ಸಂಪೂರ್ಣ ಮೊದಲ ಸೀಸನ್ ವೀಕ್ಷಣೆಯನ್ನು ಪೂರ್ಣಗೊಳಿಸಿದರು***. ಈ ಎರಡೂ Snap ಒರಿಜಿನಲ್ಸ್‌, ಹಾಗೂ ಡೀಪ್ ಕ್ರೀಕ್ ಅನ್ನು, ನವೀಕರಿಸಲಾಗಿದೆ ಮತ್ತು ಈ ಬೇಸಿಗೆಯಲ್ಲಿ ಮರಳಿ ಬರಲಿವೆ!
Snap ಒರಿಜಿನಲ್ಸ್ ಜೊತೆಗೆ, ಬಹುತೇಕ ಎಲ್ಲಿ ಬೇಕಾದರೂ ಅನುಭವಿಸಬಹುದಾದ ಅದ್ಭುತ ಶೋಗಳನ್ನು ನಾವು ರಚಿಸುತ್ತಿದ್ದೇವೆ. ಈ ಹೊಸ ಸೀರೀಸ್‌ಗಳು ಮತ್ತು ಇನ್ನಷ್ಟನ್ನು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆ ಮಾಡಲು ನಾವು ತುದಿಗಾಲಲ್ಲಿ ನಿಂತಿದ್ದೇವೆ! ಮುಂಬರುವ Snap Originals ಬಗ್ಗೆ ಇಲ್ಲಿ ಹೆಚ್ಚು ಕಲಿಯಿರಿ.
ಶೋಗಳನ್ನು ಆನಂದಿಸಿ!
Snap ತಂಡ
*Snap Inc. ಆಂತರಿಕ ಡೇಟಾ. Q4 2017 ಸರಾಸರಿ vs. Q4 2018 ಸರಾಸರಿ
**Snap Inc. ಆಂತರಿಕ ಡೇಟಾ. 10/1/18–3/22/19
***Snap Inc. ಆಂತರಿಕ ಡೇಟಾ Q4 2018
Back To News