Snap Partner Summit: New Snap Originals

Made-for-mobile shows began with Snap Originals. Today, we’re excited to reveal our new slate of shows made exclusively for Snapchat! For the first time, Snapchatters can become part of the show.
ಮೇಡ್-ಫಾರ್-ಮೊಬೈಲ್ ಶೋಗಳು Snap ಒರಿಜಿನಲ್ಸ್‌ನೊಂದಿಗೆ ಆರಂಭವಾಗುತ್ತವೆ. Snapchat ಗಾಗಿ ಅನನ್ಯವಾಗಿ ಸಿದ್ಧಪಡಿಸಲಾಗಿರುವ ಹೊಸ ಶೋಗಳ ಸ್ಲೇಟ್ ಅನ್ನು ಪ್ರಕಟಿಸಲು ನಾವು ರೋಮಾಂಚಿತರಾಗಿದ್ದೇವೆ!
U.S. ಜನರೇಷನ್ Z‌ನ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ Snap ಒರಿಜಿನಲ್ಸ್ ಅನ್ನು ನೋಡುತ್ತಿದ್ದಾರೆ*. ಕೇವಲ ಕಥೆಗಳನ್ನು ಹೇಳಲಾಗಿರುವ ವಿಧಾನವಷ್ಟೇ ಅಲ್ಲ, ನಮ್ಮ ಸಮುದಾಯದ ವಿಶಾಲ ವ್ಯಾಪ್ತಿಯ ಅತ್ಯಾಸಕ್ತಿಗಳು, ಅನುಭವಗಳು ಮತ್ತು ಧ್ವನಿಗಳನ್ನು ಪ್ರತಿಫಲಿಸುವ ಕಥೆಗಳ ವಿಧಗಳು ಕೂಡ Snap ಒರಿಜಿನಲ್ಸ್ ಅನ್ನು ವಿಶಿಷ್ಟವಾಗಿಸುವ ಅಂಶಗಳಾಗಿವೆ.
ಮತ್ತು ಮೊದಲ ಬಾರಿಗೆ, Snapchatters ಶೋನ ಭಾಗವಾಗಬಹುದು!
ಕೇವಲ Snapchat ನಲ್ಲಿ ಮಾತ್ರ ಸಾಧ್ಯವಿರುವ ಮನಸೂರೆಗೊಳ್ಳುವ ಶೋಗಳನ್ನು ಡೆಲಿವರ್ ಮಾಡಲು ವಿಶಿಷ್ಟ ವರ್ಧಿತ ರಿಯಾಲಿಟಿ ತಂತ್ರಜ್ಞಾನಗಳನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ನಿಮ್ಮ ಪ್ರತಿ ಹೆಜ್ಜೆಯನ್ನು ಸರಿಯಾಗಿ ಹಾಕಲು Snap ನ ವೈಯಕ್ತಿಕ ಮೋಷನ್ ಟ್ರ್ಯಾಕಿಂಗ್ ಲೆನ್ಸ್‌ಗಳನ್ನು ಬಳಸುವ, "ಮೂವ್ ಇಟ್"ನಲ್ಲಿ ವಿಶ್ವದ ಕೆಲವು ಅತ್ಯುತ್ತಮ ಡ್ಯಾನ್ಸರ್‌ಗಳಿಂದ ಇತ್ತೀಚಿನ ನೃತ್ಯ ಭಂಗಿಗಳನ್ನು ಈಗ ನೀವು ಕಲಿಯಬಹುದು.
ನಿಮಗೆ ಒದಗಿಸಲಾಗುತ್ತಿರುವ ಅದ್ಭುತ ಹೊಸ ಶೋಗಳನ್ನು ಪರಿಶೀಲಿಸಿ:
ಅನ್‌ಸ್ಕ್ರಿಪ್ಟೆಡ್
  • ಕೋಚ್ ಕೀವ್ - (ಲಾಫ್ ಔಟ್ ಲೌಡ್) - ತಮ್ಮ ಸ್ವಂತ ಅನುಭವಗಳಿಂದ ಪ್ರೇರಿತರಾದ, ಕೆವಿನ್ ಹಾರ್ಟ್ ನಿಮ್ಮ ತರಬೇತುದಾರ, ಅತ್ಯುತ್ತಮ ಸ್ನೇಹಿತ ಮತ್ತು ಮಾರ್ಗದರ್ಶಕ ಎಲ್ಲವೂ ಆಗಿದ್ದು, ತಮ್ಮ ಅತ್ಯುತ್ತಮ ಬದುಕನ್ನು ಜೀವಿಸಲು ಬಯಸುವ ಯಾರೊಂದಿಗಾದರೂ ಸಕಾರಾತ್ಮಕತೆ ಮತ್ತು ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ.
  • ಫೇಕ್ ಅಪ್ - (ಮಿಷನ್ ಕಂಟ್ರೋಲ್ ಮೀಡಿಯಾ) - ನೀವು ನಂಬಬೇಕಾದರೆ ನೋಡಬೇಕಾದ ಕಲಾಕೃತಿಗಳಾಗಿ ತಮ್ಮ ಸ್ವಂತ ಮುಖಗಳನ್ನು ಪರಿವರ್ತಿಸಲು ಅತ್ಯುತ್ತಮ ಆಪ್ಟಿಕಲ್ ಇಲ್ಯೂಷನ್ ಮೇಕಪ್ ಕಲಾವಿದರು ಸೆಣಸುತ್ತಾರೆ. ನೀವು ಪ್ರಯತ್ನಿಸುತ್ತಿರುವಂತೆ ಕಲಾವಿದರ ಕಾರ್ಯವನ್ನು ಹಿಂದೆಂದೂ ಕಾಣದ ರೀತಿ ಅನುಭವಿಸಿ ಮತ್ತು ಶೋನ ಭ್ರಾಮಕತೆಯನ್ನು ಸಜೀವವವಾಗಿಸುವ ಕಸ್ಟಮ್ ಲೆನ್ಸ್‌ಗಳೊಂದಿಗೆ ಆಟವಾಡಿ.
  • ಮೂವ್ ಇಟ್ - (ಸ್ಟೆಲ್ಲಾರ್ ಸ್ಟುಡಿಯೋಸ್ ಮತ್ತು ಲಿಟಲ್ ಎಂಜಿನ್ ಪ್ರೊಡಕ್ಷನ್ಸ್) - ನೃತ್ಯ ಜಗತ್ತಿನ ಅತಿ ದೊಡ್ಡ ಪ್ರಭಾವಿಗಳು, ಚಾರ್ಟ್ ಟಾಪಿಂಗ್ ಹಿಟ್‌ಗಳು, ಮತ್ತು Snapchat ನ AR ಕ್ಯಾಮೆರಾ ವೇದಿಕೆಯನ್ನು ಜೊತೆಗೂಡಿಸುವ ಈ ರೀತಿಯ ಮೊದಲ ವಿಶಿಷ್ಟ ಮನಸೂರೆಗೊಳ್ಳುವ ಡ್ಯಾನ್ಸ್ ಶೋ ಆಗಿದ್ದು ಹೇಗೆ ಕುಣಿಯಬೇಕು ಎನ್ನುವ ಕುರಿತು ಯಾರಿಗಾದರೂ ಪ್ರೇರಣೆ ನೀಡಬಲ್ಲದು ಮತ್ತು ಕಲಿಸಬಲ್ಲದು!
ಡಾಕ್ಯುಸೀರೀಸ್
  • ರೋಡ್ ಟ್ರಿಪ್ಪಿನ್- (ಬರ್ನಿಮ್/ಮರ್ರೆ ಪ್ರೊಡಕ್ಷನ್ಸ್) - ಆ್ಯಂಟನಿ ಆ್ಯಂಡರ್‌ಸನ್ ಈ ಡಾಕ್ಯುಸೀರೀಸ್‌ನ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಅತ್ಯುತ್ತಮ ಸ್ನೇಹಿತರು ಹಾಗೂ ಕ್ರಿಯೇಟರ್‌ಗಳಾದ ರಿಕಿ ಥಾಂಪ್ಸನ್ ಮತ್ತು ಡೆಂಜೆಲ್ ಡಿಯಾನ್ ತಮ್ಮ ಆರಾಮವಲಯದಿಂದ ಹೊರಬರಲು ಗ್ರಾಮೀಣ USA ಆದ್ಯಂತ ರಸ್ತೆ ಪ್ರವಾಸ ಕೈಗೊಳ್ಳುತ್ತಾರೆ ಮತ್ತು ಒಂದಿಷ್ಟು ಹೊಸ ಹುಚ್ಚು ಸಾಹಸಗಳನ್ನು ಹಂಚಿಕೊಳ್ಳುತ್ತಾರೆ.
  • ಫಸ್ಟ್ ಪರ್ಸನ್ - (ಹ್ಯಾಶ್‌ಟ್ಯಾಗ್ ಅವರ್ ಸ್ಟೋರೀಸ್) - ಅಸಾಮಾನ್ಯ ಯುವ ಸಂಶೋಧಕರ ನೋಟಗಳಿಂದ Snapchat ಸ್ಪೆಕ್ಟಕಲ್ಸ್ ಮೂಲಕ ಹೇಳಲಾಗಿರುವ ಕಥೆಗಳು, ನಮ್ಮ ಗ್ರಹವನ್ನು ಕಾಪಾಡಲು ಅವರು ಪ್ರಯತ್ನಿಸುತ್ತಿರುವಂತೆ, ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುತ್ತಿವೆ.
  • ಕ್ವೀನ್ ಆಫ್ ಸ್ಟೈಲ್ಜ್ - (ಗ್ಲಾಸ್ ಎಂಟರ್‌ಟೇನ್‌ಮೆಂಟ್ ಗ್ರೂಪ್) - ಹಾಲಿವುಡ್‌ನ ಪ್ರಖ್ಯಾತರ ಗಮನ ಸೆಳೆಯುವ ಮತ್ತು ಅತ್ಯಂತ ಅಪೇಕ್ಷಿತ ಮತ್ತು ಬೇಡಿಕೆಯ ಗ್ರಾಹಕರಿಗೆ ಸೇವೆ ಪೂರೈಸುವ, Tokyo Stylez ರೀತಿ ಬೇರೆ ಯಾವ ಕೇಶವಿನ್ಯಾಸಕರೂ ಪರವಶಗೊಳಿಸುವುದಿಲ್ಲ.
  • ಲೈಫ್ ಬೈ ದ ಹಾರ್ನ್ಸ್ - (21st ಸ್ಟ್ರೀಟ್ ಕ್ರಿಯೇಟಿವ್) - ವಿಶ್ವದ ಅತ್ಯುತ್ತಮ ಗೂಳಿ ಸವಾರನಾಗಲು ಸಾವು ಬದುಕಿನ ಹಾದಿ ಸವೆಸಿದ ಮತ್ತು 35 ವರ್ಷಗಳಲ್ಲಿ ಪದಕ ವಿಜೇತನಾದ ಮೊದಲ ಆಫ್ರಿಕನ್-ಅಮೆರಿಕನ್ 22 ವರ್ಷ ವಯಸ್ಸಿನ ಎಜೆಕೀಲ್ ಮಿಚೆಲ್ ಬದುಕನ್ನು ವೀಕ್ಷಿಸಿ.
ಸ್ಕ್ರಿಪ್ಟೆಡ್
  • ಫ್ರಾಗ್‌ಟೌನ್ - (ಆಲ್ಕನ್ ಟೆಲಿವಿಷನ್ ಗ್ರೂಪ್) - ಕ್ಯಾಥರೀನ್ ಹಾರ್ಡ್‌ವಿಕ್ (ಟ್ವೈಲೈಟ್, ಥರ್ಟೀನ್) ನಿರ್ದೇಶಿಸಿರುವ ಈ ಸರಣಿಯಲ್ಲಿ, ತನ್ನ ಕಾರಿನಲ್ಲಿ ವಾಸಿಸುತ್ತಿರುವ ಒಬ್ಬ ಉತ್ಸಾಹಿ ಸ್ಕೇಟರ್, ಪೂರ್ವ ಲಾಸ್‌ ಏಂಜಲೀಸ್‌ನ ಫ್ರಾಗ್‌ಟೌನ್ ಸ್ಕೇಟ್‌ಪಾರ್ಕ್‌ನ ಸಂಪೂರ್ಣ ಹುಡುಗಿಯರ ತಂಡವನ್ನು ಭೇಟಿಯಾದಾಗ ಎರಡನೇ ಕುಟುಂಬ ಕಂಡುಕೊಳ್ಳುತ್ತಾಳೆ.
  • ಆ್ಯಕ್ಷನ್ ರಾಯೇಲ್ - (ಪೋರ್ಟಲ್ A) - ಈ ಹೊಸ ಕಾಲದ ಥ್ರಿಲ್ಲರ್‌ನಲ್ಲಿ, ಒಬ್ಬ ಹರೆಯದವ ತನ್ನ ತಂದೆಯ ಸಾಲವನ್ನು ತೀರಿಸುವ ಸಲುವಾಗಿ ಭೂಗತ ಇಸ್ಪೋರ್ಟ್ಸ್ ಜೂಜಿನ ಕೂಟ ಆರಂಭಿಸುತ್ತಾನೆ, ಆದರೆ ಆತ ಮತ್ತು ಆತನ ಸ್ನೇಹಿತರು ಶೀಘ್ರ ಅಪಾಯಕಾರಿ ಭೂಗತ ಜಗತ್ತಿನ ಹಿಡಿತಕ್ಕೆ ಸಿಲುಕುತ್ತಾರೆ.
  • ಒಟ್ಟು ಬಡಾಸ್ ವ್ರೆಸ್ಲಿಂಗ್- (ಕಾಮಿಡಿ ಬ್ಯಾಂಗ್! ಬ್ಯಾಂಗ್! ಪ್ರೊಡಕ್ಷನ್ಸ್) - ಈ ಕಾಮಿಡಿಯಲ್ಲಿ, ಒಬ್ಬ ಮುಗ್ಧ ಆದರೆ ವರ್ಚಸ್ವಿ ಯುವ ಕುಸ್ತಿಪಟು ರಾತ್ರಿ ಬೆಳಗಾಗುವುದರ ಒಳಗೆ ಸಂಚಲನ ಸೃಷ್ಟಿಸುತ್ತಾನೆ, ಒಬ್ಬ ತೆರೆಮರೆಗೆ ಸರಿದಿರುವ ಪ್ರೊ ಕುಸ್ತಿಪಟು ಮಾರ್ಗದರ್ಶನ ನೀಡುತ್ತಾನೆ ಮತ್ತು ತಾನು ಮತ್ತೆ ಮುನ್ನೆಲೆಗೆ ಬರಲು ಈ ಯುವಕವನ್ನು ಬಳಸಿಕೊಳ್ಳುತ್ತಾನೆ.
ಇದರ ಜೊತೆಗೆ, ಈ ಮುಂದಿನ Snap ಒರಿಜಿನಲ್ಸ್‌ಗಳನ್ನೂ ನಾವು ನವೀಕರಿಸುತ್ತಿದ್ದೇವೆ:- ಹುಕ್ಡ್ ಜೊತೆಗೆ ಸಹಭಾಗಿತ್ವದೊಂದಿಗೆ ಬಜೆಲಿವ್ಸ್ ಅವರ "ಡೆಡ್ ಆಫ್ ನೈಟ್ೆಡ್ ಆಫ್ ನೈಟ್", ತಮ್ಮ ಸ್ವಂತ ಸೆಲೆಬ್ರಿಟಿ ಮೇಕ್‌ಓವರ್‌ಗಾಗಿ ವೀಕ್ಷಕರನ್ನು ಹೊಸ ಎಪಿಸೋಡ್‌ನಲ್ಲಿ ತೊಡಗುವಂತೆ ಮಾಡುವ ಹೊಚ್ಚ ಹೊಸ AR ಲೆನ್ಸ್ ಅನುಭವವನ್ನು ತೋರಿಸುವ NBC Universal ಅವರ " ಫೇಸ್ ಫಾರ್ವರ್ಡ್ " , ITV ಅಮೆರಿಕಾದ ಸೈರೆನ್ಸ್ ಮೀಡಿಯಾ ಅವರಿಂದ "ನಿಕಿತಾ ಅನ್‌ಫಿಲ್ಟರ್ಡ್ "ಮತ್ತು ಸಂಕೀರ್ಣವಾಗಿದ್ದು Snap ನ ಡಾಕ್ಯುಮೆಂಟರಿ ಫ್ರಾಂಚೈಸ್ ಮುಂದಿನ ಕಂತುಗಳನ್ನು ನಿರ್ಮಿಸಲಿದೆ Vs ದ ವರ್ಲ್ಡ್ ,ಕುಖ್ಯಾತ MMA ಫೈಟರ್ ಕಾನರ್ ಮೆಕ್‌ಗ್ರೆಗೊರ್‌ನ ಕಥೆಯನ್ನು ನಿಮಗೆ ಹೇಳುತ್ತದೆ.
ನೀವು ಟ್ಯೂನ್ ಇನ್ ಮಾಡುವುದಕ್ಕೆ ನಾವು ಕಾತುರರಾಗಿದ್ದೇವೆ!
* Snap Inc. ಆಂತರಿಕ ಡೇಟಾ ಡಿಸೆಂಬರ್ 2019-ಫೆಬ್ರವರಿ 2020. ಜನರೇಷನ್ Z ಅನ್ನು 13-24 ವಯಸ್ಸಿನ ಬಳಕೆದಾರರು ಎಂದು ವ್ಯಾಖ್ಯಾನಿಸಲಾಗುತ್ತದೆ. US ಜನರೇಷನ್ Z ಜನಸಂಖ್ಯೆಗೆ US ಸೆನ್ಸಸ್ ಅಂಕಿಅಂಶಗಳನ್ನು ಬಳಸಲಾಗಿದೆ.
Back To News