Rewarding Creativity on Spotlight: Shining a Light on the Best Snaps

Spotlight shines a light on the most entertaining Snaps created by the Snapchat community, no matter who created them. We built Spotlight to be a place where anyone’s content can take center stage - without needing a public account, or an influencer following. It’s a fair and fun place for Snapchatters to share their best Snaps and see perspectives from across the Snapchat community.
ಯಾರು ಸೃಷ್ಟಿಸಿದ್ದಾರೆ ಅನ್ನುವುದರ ಪರಿಗಣನೆಯಿಲ್ಲದೆ, Snapchat ಕಮ್ಯುನಿಟಿ ಸೃಷ್ಟಿಸಿದ ಅತ್ಯಂತ ಮನರಂಜನೆಯ Snap ಗಳ ಮೇಲೆ ಸ್ಪಾಟ್‌ಲೈಟ್ ಬೆಳಕು ಚೆಲ್ಲುತ್ತದೆ. ಯಾರದೇ ಕಂಟೆಂಟ್ ಆಗಿರಲಿ ಅದು ಜನರ ಗಮನ ಸೆಳೆಯುವಂಥ ಸ್ಥಳವಾಗಬೇಕು ಎನ್ನುವ ಉದ್ದೇಶದಿಂದ ನಾವು ಸ್ಪಾಟ್‌ಲೈಟ್ ನಿರ್ಮಿಸಿದೆವು - ಇದಕ್ಕೆ ಸಾರ್ವಜನಿಕ ಖಾತೆ ಅಗತ್ಯವಿಲ್ಲ, ಅಥವಾ ಪ್ರಭಾವಿಸುವವರ ಹಿಂಬಾಲಿಸುವಿಕೆ ಕೂಡ ಬೇಕಿಲ್ಲ. ತಮ್ಮ ಅತ್ಯುತ್ತಮ Snap ಗಳನ್ನು ಹಂಚಿಕೊಳ್ಳಲು ಮತ್ತು Snapchat ಕಮ್ಯುನಿಟಿಯಾದ್ಯಂತದ ದೃಷ್ಟಿಕೋನಗಳನ್ನು ನೋಡಲು Snapchatter ಗಳಿಗೆ ಇದು ನ್ಯಾಯೋಚಿತ ಮತ್ತು ಮೋಜಿನ ತಾಣವಾಗಿದೆ.
ನಮ್ಮ ಶಿಫಾರಸುಗಳು
ನಿಮಗೆ ಆಸಕ್ತಿ ಇರಬಹುದಾದ ಅತ್ಯಂತ ಆಕರ್ಷಕ Snap ಗಳನ್ನು ಪತ್ತೆ ಮಾಡಲು ನಮ್ಮ ಕಂಟೆಂಟ್ ಆಲ್ಗಾರಿದಂ ಕಾರ್ಯನಿರ್ವಹಿಸುತ್ತದೆ. ಸರಿಯಾದ Snap ಗಳನ್ನು ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಒದಗಿಸಲು ನಾವು ಗಮನ ಹರಿಸುತ್ತೇವೆ. ನಿಮ್ಮ ವೈಯಕ್ತಿಕ ಆದ್ಯತೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಾವು ಇದನ್ನು ಮಾಡುತ್ತೇವೆ.
ಜನರು ಒಂದು ನಿರ್ದಿಷ್ಟ Snap ನಲ್ಲಿ ಆಸಕ್ತರಾಗಿದ್ದಾರೆ ಎಂದು ತೋರಿಸುವ ಅಂಶಗಳನ್ನು ನಮ್ಮ ಶ್ರೇಣಿಗೊಳಿಸುವ ಆಲ್ಗಾರಿದಂ ಗಮನಿಸುತ್ತದೆ, ಉದಾಹರಣೆಗೆ: ಅದನ್ನು ನೋಡಲು ವ್ಯಯಿಸಿದ ಸಮಯ, ಅದನ್ನು ಮೆಚ್ಚಲಾಗಿದೆಯೇ, ಮತ್ತು ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲಾಗಿದೆಯೇ. ಪ್ರೇಕ್ಷಕರು ತ್ವರಿತವಾಗಿ Snap ವೀಕ್ಷಣೆಯಿಂದ ನಿರ್ಗಮಿಸಿದರೇ ಎನ್ನುವುದೂ ಸೇರಿದಂತೆ, ಇದು ಋಣಾತ್ಮಕ ಅಂಶಗಳನ್ನೂ ಪರಿಗಣಿಸುತ್ತದೆ. ಸ್ಪಾಟ್‌ಲೈಟ್‌ನಲ್ಲಿ ಕಾಣಿಸುವ Snap ಗಳು ಗೌಪ್ಯ, ವೈಯಕ್ತಿಕ ಖಾತೆಗಳನ್ನು ಹೊಂದಿರುವ Snapchatter ಗಳು ಪೋಸ್ಟ್ ಮಾಡಿದ್ದಾಗಿರಬಹುದು, ಅಥವಾ ಸಾರ್ವಜನಿಕ ಪ್ರೊಫೈಲ್‌ಗಳು ಮತ್ತು ಲಕ್ಷಗಟ್ಟಲೆ Subscriber ಗಳನ್ನು ಹೊಂದಿರುವ Snap ಸ್ಟಾರ್‌ಗಳು ಪೋಸ್ಟ್ ಮಾಡಿದ್ದಾಗಿರಬಹುದು.
ಹೊಸ ವಿಧದ ಮನರಂಜನೆಯನ್ನು ಪತ್ತೆ ಮಾಡುವುದು
Snapchatter ಗಳು ಆಸಕ್ತಿ ಹೊಂದಿರಬಹುದಾದ ಹೊಸ ಬಗೆಯ ಕಂಟೆಂಟ್‌ಗಳನ್ನು ಗುರುತಿಸುವುದಕ್ಕೆ ನೆರವಾಗಲು, ಮತ್ತು ಪ್ರತಿಧ್ವನಿ ಕೋಣೆಗಳನ್ನು ನಿವಾರಿಸಲು, ನಾವು ಸ್ಪಾಟ್‌ಲೈಟ್ ಅನುಭವದೊಳಗೆ ನೇರವಾಗಿ ವೈವಿಧ್ಯತೆಯನ್ನು ನಿರ್ಮಿಸಿದ್ದೇವೆ. ವೈವಿಧ್ಯಮಯ ಫಲಿತಾಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಆಲ್ಗಾರಿದಂಗಳನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನುವುದನ್ನು ಖಚಿತಪಡಿಸಲು ನಾವು ಕಠಿಣ ಪರಿಶ್ರಮಪಡುತ್ತೇವೆ.
ವೈವಿಧ್ಯಮಯ ತರಬೇತಿ ಡೇಟಾ ಸೆಟ್‌ಗಳನ್ನು ಬಳಸಿಕೊಂಡು ನಮ್ಮ ಆಲ್ಗಾರಿದಂ ಮಾದರಿಗಳನ್ನು ನಿರ್ಮಿಸುವುದು, ಮತ್ತು ಪಕ್ಷಪಾತಗಳು ಮತ್ತು ತಾರತಮ್ಯದ ವಿರುದ್ಧ ನಮ್ಮ ಮಾದರಿಗಳನ್ನು ಜಾಗರೂಕವಾಗಿ ಪರಿಶೀಲಿಸುವುದು ಸೇರಿದಂತೆ, ಅದನ್ನು ನಾವು ಕೆಲವು ವಿಧಾನಗಳಲ್ಲಿ ಮಾಡುತ್ತೇವೆ. ಸ್ಪಾಟ್‌ಲೈಟ್‌ನಲ್ಲಿ ನೀವು ಹೊಸ ಮತ್ತು ವೈವಿಧ್ಯಮಯ ಮನರಂಜನೆ ನೋಡುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು "ಅನ್ವೇಷಣಾ" ಕಾರ್ಯವಿಧಾನವನ್ನೂ ಕೂಡ ಬಳಸುತ್ತೇವೆ. ಈ ವಿಧಾನವು ವಿಶಾಲ ಗುಂಪಿನ ಕ್ರಿಯೇಟರ್‌ಗಳಿಗೆ ವೀಕ್ಷಣೆಗಳನ್ನು ಹೆಚ್ಚು ನ್ಯಾಯೋಚಿತವಾಗಿ ವಿತರಿಸುತ್ತದೆ. ಮತ್ತು, ವೈವಿಧ್ಯತೆ ಮತ್ತು ವಿಭಿನ್ನ ದೃಷ್ಟಿಕೋನಗಳ ಒಳಗೊಳ್ಳುವಿಕೆ ಅವುಗಳ ಮೂಲ ಕಾರ್ಯದ ಭಾಗವಾಗಿರಬೇಕು ಎನ್ನುವುದನ್ನು ಇದು ನಮ್ಮ ಆಲ್ಗಾರಿದಂ ಮಾದರಿಗಳಿಗೆ ಕಲಿಸುತ್ತದೆ.
ಉದಾಹರಣೆಗೆ, ನೀವು ನಾಯಿಗಳನ್ನು ನಿಜವಾಗಿಯೂ ಇಷ್ಟಪಡುತ್ತೀರಿ ಎನ್ನುವುದನ್ನು ಒಂದು ವೇಳೆ ನೀವು ಸ್ಪಾಟ್‌ಲೈಟ್‌ನಲ್ಲಿ ನಮಗೆ ತೋರಿಸಿದರೆ, ನೀವು ಆನಂದಿಸಲು ನಾವು ನಿಮಗೆ ಮನರಂಜನೆಯ ನಾಯಿಮರಿ Snap ಗಳನ್ನು ನೀಡಲು ಬಯಸುತ್ತೇವೆ! ಆದರೆ, ನಿಮಗಾಗಿ ಇತರ ಬಗೆಯ ಕಂಟೆಂಟ್, ಇತರ ಕ್ರಿಯೇಟರ್‌ಗಳು, ಮತ್ತು ಇತರ ಸಮೀಪದ ಆಸಕ್ತಿಗಳ ಕ್ಷೇತ್ರಗಳನ್ನೂ ನಾವು ಗುರುತಿಸುತ್ತಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೂಡ ನಾವು ಬಯಸುತ್ತೇವೆ, ಉದಾಹರಣೆಗೆ ನಿಸರ್ಗದ ಕುರಿತು ಗಮನ ಕೇಂದ್ರೀಕರಿಸುವ ಕ್ರಿಯೇಟರ್‌ಗಳು, ಪ್ರಯಾಣದ ಕುರಿತ ವೀಡಿಯೊಗಳು, ಅಥವಾ ಕೇವಲ ಇತರ ಪ್ರಾಣಿಗಳು.
ಕ್ರಿಯೇಟಿವಿಟಿಗೆ ಬಹುಮಾನ ನೀಡುವುದು
ನ್ಯಾಯೋಚಿತ ಮತ್ತು ಮೋಜಿನ ವಿಧಾನದಲ್ಲಿ ಕ್ರಿಯೇಟಿವಿಟಿಗೆ ಬಹುಮಾನ ನೀಡಲು ಸ್ಪಾಟ್‌ಲೈಟ್ ಅನ್ನು ವಿನ್ಯಾಸಗೊಳಿಸಲಾಗಿದೆ, ಮತ್ತು ಪ್ರತಿ ದಿನ ನಾವು Snapchatter ಗಳಿಗೆ $1 ಮಿಲಿಯನ್ USD ವಿತರಿಸುತ್ತಿದ್ದೇವೆ. Snapchatter ಗಳು 16 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು, ಮತ್ತು ಅನ್ವಯವಾಗುವಲ್ಲಿ, ಹಣ ಗಳಿಸಲು ಪಾಲಕರ ಸಮ್ಮತಿಯನ್ನು ಪಡೆದುಕೊಳ್ಳಬೇಕು. ಕಾರ್ಯಕ್ರಮವು 2020 ರ ಕೊನೆಯಲ್ಲಿ, ಮತ್ತು ಬಹುಶಃ ಆನಂತರವೂ ನಡೆಯುತ್ತದೆ.
ಗಳಿಕೆಗಳನ್ನು ಸ್ವಾಮ್ಯದ ಸೂತ್ರದ ಮೂಲಕ ನಿರ್ಧರಿಸಲಾಗುತ್ತದೆ, ಈ ಸೂತ್ರವು ಒಂದು ನಿರ್ದಿಷ್ಟ ದಿನದಲ್ಲಿ (ಫೆಸಿಫಿಕ್ ಸಮಯ ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ) ಇತರ Snap ಗಳ ಕಾರ್ಯಕ್ಷಮತೆಯ ಹೋಲಿಕೆಯಲ್ಲಿ ಒಂದು Snap ಪಡೆಯುವ ಒಟ್ಟು ವಿಶಿಷ್ಟ ವೀಡಿಯೊ ವೀಕ್ಷಣೆಗಳ ಸಂಖ್ಯೆಯನ್ನು ಪ್ರಾಥಮಿಕವಾಗಿ ಆಧರಿಸಿ Snapchatter ಗಳಿಗೆ ಬಹುಮಾನ ನೀಡುತ್ತದೆ. ಅನೇಕ Snapchatter ಗಳು ಪ್ರತಿ ದಿನವೂ ಗಳಿಕೆ ಮಾಡುತ್ತಾರೆ, ಮತ್ತು ಆ ಗುಂಪಿನೊಳಗೆ ಅತ್ಯುತ್ತಮ Snap ಗಳನ್ನು ಸೃಷ್ಟಿಸುವವರು ತಮ್ಮ ಕ್ರಿಯೇಟಿವಿಟಿಗಾಗಿ ಬಹಳಷ್ಟನ್ನು ಗಳಿಕೆ ಮಾಡುತ್ತಾರೆ. Snap ಗಳೊಂದಿಗೆ ಕೇವಲ ಅಧಿಕೃತ ತೊಡಗಿಕೊಳ್ಳುವಿಕೆಯನ್ನು ಮಾತ್ರ ನಾವು ಪರಿಗಣಿಸುತ್ತೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಂಚನೆಗಳ ನಾವು ಸಕ್ರಿಯವಾಗಿ ನಿಗಾ ಇರಿಸುತ್ತೇವೆ. ನಮ್ಮ ಸೂತ್ರವನ್ನು ಕಾಲಕಾಲಕ್ಕೆ ಹೊಂದಾಣಿಕೆ ಮಾಡಬಹುದು.
ಸ್ಪಾಟ್‌ಲೈಟ್‌ನಲ್ಲಿ ಕಾಣಿಸಿಕೊಳ್ಳಲು, ಎಲ್ಲ Snap ಗಳು ಸುಳ್ಳು ಮಾಹಿತಿ (ಪಿತೂರಿ ಸಿದ್ಧಾಂತಗಳು ಸೇರಿದಂತೆ), ತಪ್ಪು ದಾರಿಗೆಳೆಯುವ ಕಂಟೆಂಟ್, ದ್ವೇಷ ಭಾಷಣ, ಪ್ರಚೋದನಾಕಾರಿ ಅಥವಾ ಅಶ್ಲೀಲ ಕಂಟೆಂಟ್, ನಿಂದನೆ, ಕಿರುಕುಳ, ಹಿಂಸೆ ಮತ್ತು ಇನ್ನೂ ಹಲವು ಸಂಗತಿಗಳ ಪ್ರಸಾರವನ್ನು ನಿಷೇಧಿಸುವ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು. ಮತ್ತು, ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳು ನಮ್ಮ ಸ್ಪಾಟ್‌ಲೈಟ್ ಮಾರ್ಗಸೂಚಿಗಳು, ಸೇವೆಯ ನಿಯಮಗಳು ಮತ್ತು ಸ್ಪಾಟ್‌ಲೈಟ್‌ ನಿಯಮಗಳನ್ನು ಪಾಲಿಸಬೇಕು.
ಮರಳಿ ಸುದ್ಧಿಗೆ