ಮೇ 24, 2024
ಮೇ 24, 2024

ಈ ವರ್ಷದ EU ಚುನಾವಣೆಗಳಿಗಾಗಿ Snap ಸಿದ್ಧತೆ ಮಾಡಿಕೊಳ್ಳುತ್ತಿದೆ


ಜೂನ್ 6-9 ರ ನಡುವೆ, ಯುರೋಪ್‌ನ ಸಂಸತ್‌ಗೆ ತಮ್ಮ ಸದಸ್ಯರನ್ನು ಚುನಾಯಿಸುವುದಕ್ಕಾಗಿ 27 ದೇಶಗಳಾದ್ಯಂತ 370 ಮಿಲಿಯನ್‌ಗೂ ಅಧಿಕ ಯುರೋಪಿಯನ್ನರು ಮತಗಟ್ಟೆಗಳಿಗೆ ತೆರಳಲಿದ್ದಾರೆ. 

ಜುಲೈ 4 ರಂದು UK ಯಲ್ಲಿ ನಡೆಯಬೇಕಿರುವ ಚುನಾವಣೆ ಸೇರಿದಂತೆ, 2024 ರಲ್ಲಿ ಜಗತ್ತಿನಾದ್ಯಂತ ನಡೆಯಲಿರುವ 50 ಕ್ಕೂ ಹೆಚ್ಚು ಚುನಾವಣೆಗಳಿಗಾಗಿ ಸಿದ್ಧತೆ ಮಾಡಲು ಏನು ಮಾಡುತ್ತಿದ್ದೇವೆ ಎನ್ನುವುದರ ಕುರಿತು ಈ ವರ್ಷದ ಆರಂಭದಲ್ಲಿ Snap ವಿವರಿಸಿತು. ಇದು ಮುಂಬರುವ ಚುನಾವಣೆಗಳಿಗಾಗಿ ಎಲ್ಲ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ನಿಗಾ ಇರಿಸಲು ಸುಳ್ಳುಮಾಹಿತಿ, ರಾಜಕೀಯ ಜಾಹೀರಾತು ನೀಡುವಿಕೆ ಮತ್ತು ಸೈಬರ್ ಸುರಕ್ಷತಾ ತಜ್ಞರನ್ನು ಒಳಗೊಂಡ ನಮ್ಮ ದೀರ್ಘಕಾಲೀನ ಚುನಾವಣಾ ಸಮಗ್ರತೆಯ ತಂಡವನ್ನು ಮರುಸಮನ್ವಯಗೊಳಿಸುವುದನ್ನು ಒಳಗೊಂಡಿದೆ.

ಈ ಪ್ರಮುಖ ಜಾಗತಿಕ ಕಾರ್ಯಕ್ಕೆ ಹೆಚ್ಚುವರಿಯಾಗಿ, ಮುಂಬರುವ ಯುರೋಪಿಯನ್ ಚುನಾವಣೆಗಳಿಗಾಗಿ ನಿರ್ದಿಷ್ಟವಾಗಿ ಸಿದ್ಧತೆ ನಡೆಸಲು ನಾವು ಏನು ಮಾಡುತ್ತಿದ್ದೇವೆ ಎಂದು ತಿಳಿಸಲು ನಾವು ಬಯಸಿದ್ದೇವೆ.

EU ಚುನಾವಣೆಗಳಲ್ಲಿ ಜನರ ತೊಡಗಿಕೊಳ್ಳುವಿಕೆಗಳನ್ನು ಪ್ರೋತ್ಸಾಹಿಸುವುದು

ಮತದಾನ ಮಾಡಲು ಅರ್ಹ ವಯಸ್ಸನ್ನು 16 ಕ್ಕೆ ಇಳಿಸುವ ಆಸ್ಟ್ರಿಯಾ, ಮಾಲ್ಟಾ ಮತ್ತು ಗ್ರೀಸ್‌ ನಿರ್ಧಾರಕ್ಕೆ ಕೈಜೋಡಿಸಲು ಬೆಲ್ಜಿಯಂ ಮತ್ತು ಜರ್ಮನಿ ನಿರ್ಧರಿಸಿರುವುದರಿಂದ - ಈ ಯುರೋಪಿಯನ್ ಚುನಾವಣೆಗಳಲ್ಲಿ ಭಾಗವಹಿಸಲು ಅರ್ಹರಾಗಿರುವ ಇನ್ನೂ ಹೆಚ್ಚಿನ ಸಂಖ್ಯೆಯ ಮೊದಲ ಬಾರಿಯ ಮತದಾರರು ಇರಲಿದ್ದಾರೆ. 

ನಾಗರಿಕ ತೊಡಗಿಕೊಳ್ಳುವಿಕೆಯು ಸ್ವಯಂ ಅಭಿವ್ಯಕ್ತಿಯ ಅತ್ಯಂತ ಶಕ್ತಿಶಾಲಿ ಸ್ವರೂಪಗಳಲ್ಲಿ ಒಂದಾಗಿದೆ ಎಂದು ನಾವು ನಂಬಿದ್ದೇವೆ ಮತ್ತು ಚುನಾವಣೆಗಳ ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಫ್ರಾನ್ಸ್, ನೆದರ್‌ಲ್ಯಾಂಡ್ಸ್ ಮತ್ತು ಸ್ವೀಡನ್‌ನ ಚುನಾವಣಾ ಅಧಿಕಾರಿಗಳೊಂದಿಗೆ ಈ ಹಿಂದೆ ಕೆಲಸ ಮಾಡಿದ್ದೇವೆ. 

ಈ ವರ್ಷದ EU ಚುನಾವಣೆಗಳಿಗಿಂತ ಮುಂಚೆ, ಮನೆಯಿಂದ ಹೊರಬಂದು ಮತದಾನ ಮಾಡಲು ಜನರನ್ನು ಪ್ರೋತ್ಸಾಹಿಸುವ ವಿಶೇಷ AR ಚುನಾವಣಾ ಲೆನ್ಸ್‌ಗೆ ಸಂಬಂಧಿಸಿ ಯುರೋಪಿಯನ್ ಸಂಸತ್ ಜೊತೆಗೆ ನಾವು ಕೈಜೋಡಿಸಿದ್ದೇವೆ. ಚುನಾವಣೆ ನಡೆಯುವ ಸಂದರ್ಭ, ಮತದಾನ ಮಾಡುವಂತೆ ಜ್ಞಾಪಿಸುವ ಒಂದು ಸಂದೇಶ ಮತ್ತು ಸಂಸತ್‌ನ ಚುನಾವಣಾ ವೆಬ್‌ಸೈಟ್‌ಗೆ ಲಿಂಕ್‌ ಜೊತೆಗೆ ಎಲ್ಲ EU Snapchatter ಗಳಿಗೆ ಈ ಲೆನ್ಸ್ ಅನ್ನು ನಾವು ಹಂಚಿಕೊಳ್ಳುತ್ತೇವೆ.

   

ಯುರೋಪಿಯನ್ ಸಂಸತ್ ಮತ್ತು ಯುರೋಪಿಯನ್ ಆಯೋಗದ ಚುನಾವಣಾ ಸಂಬಂಧಿತವಾದ 'ನಿಮ್ಮ ಮತ ಬಳಸಿ’ ಮಾಹಿತಿ ಅಭಿಯಾನ ಹಾಗೂ ಒಂದು ಮೀಸಲಾದ ಲೆನ್ಸ್, ಮತ್ತು ಸುಳ್ಳು ಮಾಹಿತಿ ಮತ್ತು ವಂಚನೆಯ ಕಂಟೆಂಟ್‌ನ ಅಪಾಯಗಳ ಕುರಿತಾದ ಜಾಗೃತಿ ಅಭಿಯಾನವನ್ನು ಪ್ರಚಾರ ಮಾಡಲು ಅವರೊಂದಿಗೆ Snapchat ಪಾಲುದಾರಿಕೆಯನ್ನು ಕೂಡ ಮಾಡಿಕೊಳ್ಳುತ್ತಿದೆ. 

EU ಆದ್ಯಂತ ಸುಳ್ಳು ಮಾಹಿತಿಯ ವಿರುದ್ಧ ಹೋರಾಡುವುದು

ಸುಳ್ಳು ಮಾಹಿತಿಯ ಪ್ರಸಾರವನ್ನು ತಡೆಯಲು ನಾವು ಬದ್ಧರಾಗಿದ್ದೇವೆ. ಡೀಪ್‌ಫೇಕ್‌ಗಳು ಮತ್ತು ವಂಚನೆಯ ಮೂಲಕ ತಿರುಚಿದ ಕಂಟೆಂಟ್ ಸೇರಿದಂತೆ - ಸುಳ್ಳು ಮಾಹಿತಿ ಮತ್ತು ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ಕಂಟೆಂಟ್‌ನ ಪ್ರಸರಣವನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಯಾವಾಗಲೂ ನಿಷೇಧಿಸಿವೆ. 

ತಂತ್ರಜ್ಞಾನಗಳು ವಿಕಸನವಾದಂತೆ, ಮಾನವರು ಸೃಷ್ಟಿಸಿರುವ ಅಥವಾ ಕೃತಕ ಬುದ್ಧಿಮತ್ತೆಯಿಂದ ಜನರೇಟ್ ಮಾಡಿರುವ — ಎಲ್ಲ ಕಂಟೆಂಟ್ ಫಾರ್ಮ್ಯಾಟ್‌ಗಳನ್ನು ಒಳಗೊಳ್ಳಲು ನಮ್ಮ ನೀತಿಗಳನ್ನು ನಾವು ಪರಿಷ್ಕರಿಸಿದ್ದೇವೆ. 

EU ಚುನಾವಣೆಗಳ ಸಿದ್ಧತೆಗಾಗಿ ನಾವು:

  • ಇತರ ತಂತ್ರಜ್ಞಾನ ಸಂಸ್ಥೆಗಳ ಜೊತೆಗೆ AI ಚುನಾವಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಮತದಾರರನ್ನು ವಂಚಿಸುವ ಉದ್ದೇಶ ಹೊಂದಿರುವ AI ಜನರೇಟ್ ಮಾಡಿರುವ ಕಂಟೆಂಟ್‌ನ ಪ್ರಸಾರವನ್ನು ಪತ್ತೆ ಮಾಡಲು ಮತ್ತು ಮಿತಿಗೊಳಿಸಲು ಟೂಲ್‌ಗಳಿಗೆ ಸಂಬಂಧಿಸಿ ಸಹಭಾಗಿತ್ವದೊಂದಿಗೆ ಕೆಲಸ ಮಾಡಲು ನಾವು ಪ್ರತಿಜ್ಞೆ ಮಾಡಿದ್ದೇವೆ. 

  • Snap ಜನರೇಟ್ ಮಾಡಿದ AI ಕಂಟೆಂಟ್‌ನೊಂದಿಗೆ ಸಂವಹನ ನಡೆಸುವಾಗ ನಮ್ಮ ಸಮುದಾಯವು ಅರ್ಥಮಾಡಿಕೊಳ್ಳಲು ಸನ್ನಿವೇಶದ ಸಂಕೇತಗಳನ್ನು ಪರಿಚಯಿಸಿದ್ದೇವೆ.

  • ಮುಂದುವರಿದು ರಾಜಕೀಯ ವಿಷಯಗಳಿಗೆ ಸಂಬಂಧಿಸಿ ತೊಡಗಿಕೊಳ್ಳದಂತೆ My AI ಗೆ ಸೂಚನೆ ನೀಡಿದ್ದೇವೆ.

  • EU ಆದ್ಯಂತ ರಾಜಕೀಯ ಜಾಹೀರಾತುಗಳ ಹೇಳಿಕೆಗಳ ಸತ್ಯಾಂಶ ಪರೀಕ್ಷಿಸಲು ನೆರವಾಗುವುದಕ್ಕಾಗಿ, ಪ್ರಮುಖ ಸತ್ಯಾಂಶ ಪರೀಕ್ಷಿಸುವ ಸಂಸ್ಥೆಯಾಗಿರುವ ಮತ್ತು EU ಡಿಸ್‌ಇನ್‌ಫಾರ್ಮೇಷನ್ ಕೋಡ್ ಆಫ್ ಪ್ರ್ಯಾಕ್ಟೀಸ್‌ನ ಸದಸ್ಯ ಆಗಿರುವ Logically ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ.

ನಮ್ಮ ರಾಜಕೀಯ ಮತ್ತು ಪ್ರತಿಪಾದನೆ ಜಾಹೀರಾತು ನೀಡುವಿಕೆ ನೀತಿಗೆ EU ನಿರ್ದಿಷ್ಟ ಬದಲಾವಣೆಗಳು

Snapchat ನಲ್ಲಿ ರಾಜಕೀಯ ಜಾಹೀರಾತುಗಳನ್ನು ಸಾಮಾನ್ಯವಾಗಿ ಜಾಹೀರಾತು ಪ್ರಸಾರವಾಗುವ ದೇಶದ ನಿವಾಸಿಗಳಲ್ಲದ ಜನರು ಅಥವಾ ಸಂಸ್ಥೆಗಳು ನೀಡಲಾಗದು.  ಅದಾಗ್ಯೂ, EU ನಲ್ಲಿ ನೆಲೆಸಿರುವ ಜಾಹೀರಾತುದಾರರು ಯುರೋಪ್‌ನಾದ್ಯಂತ Snap ನಲ್ಲಿ ಜಾಹೀರಾತು ಅಭಿಯಾನಗಳನ್ನು ನಡೆಸಲು ನಾವು ಇತ್ತೀಚೆಗೆ ಒಂದು ವಿನಾಯಿತಿಯನ್ನು ಜಾರಿಗೊಳಿಸಿದ್ದೇವೆ. ಇದು ಸದಸ್ಯರಲ್ಲದ ರಾಷ್ಟ್ರಗಳಿಂದ ಈಗಲೂ ಜಾಹೀರಾತು ನಿರ್ಬಂಧಿಸುವುದರ ಜೊತೆಗೆ, EU ಒಳಗಡೆ ಗಡಿಯಾಚೆಗಿನ ರಾಜಕೀಯ ಜಾಹೀರಾತುಗಳನ್ನು ಅನುಮತಿಸುವ ಇತ್ತೀಚೆಗೆ ಅಳವಡಿಸಿಕೊಂಡ EU ಕಾನೂನಿಗೆ ನಮ್ಮ ರಾಜಕೀಯ ಜಾಹೀರಾತುಗಳ ನೀತಿಯನ್ನು ಅನುಸರಣೆಯಾಗುವಂತೆ ಮಾಡುತ್ತದೆ. 

ಇವುಗಳ ಜೊತೆಗೆ, ನಮ್ಮ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಮೊದಲು ಎಲ್ಲ ರಾಜಕೀಯ ಜಾಹೀರಾತುಗಳನ್ನು ಪರಿಶೀಲಿಸುವ ಮಾನವರ ವಿಮರ್ಶೆ ಪ್ರಕ್ರಿಯೆ ಸೇರಿದಂತೆ, ಸದೃಢವಾದ ಸಮಗ್ರತೆಯ ಸುರಕ್ಷತಾ ಕ್ರಮಗಳು ಹಿಂದಿನಂತೆ ಮುಂದುವರಿಯಲಿವೆ.

ಈ ಕ್ರಮಗಳು ಮತದಾನದ ತಮ್ಮ ಹಕ್ಕು ಚಲಾಯಿಸಲು ನಮ್ಮ ಕಮ್ಯುನಿಟಿಯನ್ನು ಪ್ರೋತ್ಸಾಹಿಸುವುದಕ್ಕೆ ನೆರವಾಗಲಿವೆ ಮತ್ತು Snapchat ಅನ್ನು ಸುರಕ್ಷಿತ, ಜವಾಬ್ದಾರಿಯುತ, ನಿಖರ ಮತ್ತು ಉಪಯುಕ್ತ ಸುದ್ದಿ ಹಾಗೂ ಮಾಹಿತಿಯ ತಾಣವಾಗಿ ಇರಿಸುವುದಕ್ಕೆ ನೆರವಾಗಲಿವೆ ಎಂದು ನಾವು ನಂಬಿದ್ದೇವೆ. 

* ಲೆನ್ಸ್‌ನ ಅಂತಿಮ ಲೈವ್ ಆವೃತ್ತಿಯು ಈ ಪೂರ್ವವೀಕ್ಷಣೆಗಳಿಂದ ಸ್ವಲ್ಪ ವ್ಯತ್ಯಾಸವಾಗಬಹುದು.  

ಮರಳಿ ಸುದ್ಧಿಗೆ