It’s Showtime! Introducing a Whole New Way to Discover Live Events with Ticketmaster

Starting today, we’re introducing a new way for Snapchatters to discover live events with their friends, in partnership with Ticketmaster.
ಇಂದಿನಿಂದ ಆರಂಭಿಸಿ, Snapchatter ಗಳು ತಮ್ಮ ಸ್ನೇಹಿತರೊಂದಿಗೆ ಲೈವ್ ಈವೆಂಟ್‌ಗಳನ್ನು ಕಂಡುಕೊಳ್ಳಲು, Ticketmaster ಪಾಲುದಾರಿಕೆಯಲ್ಲಿ ನಾವು ಹೊಸ ವಿಧಾನವನ್ನು ಪರಿಚಯಿಸುತ್ತಿದ್ದೇವೆ.
ಹೊಸ Snap ಮ್ಯಾಪ್ ಲೇಯರ್ ಬಳಸಿಕೊಂಡು, ಸಮೀಪದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಆಧರಿಸಿ, Snapchatter ಗಳು Ticketmaster ನ ಸಂಪೂರ್ಣ ಕ್ಯಾಟಲಾಗ್ ಅನ್ನು ಬ್ರೌಸ್ ಮಾಡಬಹುದು. ಅಲ್ಲಿ ಅವರು ಕಾಮಿಡಿಯಿಂದ ಕ್ರೀಡಾಕೂಟದವರೆಗೆ, ಇಂದಿನ ದೊಡ್ಡ ಸ್ಟಾರ್‌ಗಳ ಸಂಗೀತಕಚೇರಿಗಳನ್ನು ಅಥವಾ ಇತ್ತೀಚಿನ ಮತ್ತು ಮುಂಬರುವ ಇಂಡೀ ಶೋಗಳವರೆಗೆ ಎಲ್ಲವನ್ನೂ ನೋಡಬಹುದು. ಒಮ್ಮೆ ಅವರ ಆಸಕ್ತಿ ಕೆರಳಿಸುವ ಶೋ ಅನ್ನು ಅವರು ಕಂಡುಕೊಂಡ ಬಳಿಕ, ಅವರು ಟ್ಯಾಪ್ ಮಾಡಬಹುದು ಮತ್ತು Snapchat ಕ್ಯಾಮೆರಾಗೆ ಅಳವಡಿಸಲ್ಪಟ್ಟಿರುವ ಸ್ಟಿಕ್ಕರ್‌ಗಳ ಮೂಲಕ ತಮ್ಮ ಸ್ನೇಹಿತರನ್ನು ಆಹ್ವಾನಿಸಬಹುದು ಅಥವಾ ತಡೆಹರಿತ ಚೆಕ್ಔಟ್ ಪ್ರಕ್ರಿಯೆ ಮೂಲಕ ಅಲ್ಲಿಯೇ ಟಿಕೆಟ್‌ಗಳನ್ನೂ ಖರೀದಿಸಬಹುದು.
Ticketmaster ನ ಟಿಕೆಟ್‌ಮ್ಯಾಚರ್ ಮಿನಿ ಮೂಲಕ, Snapchatter ಗಳು ತಮ್ಮ ಮೆಚ್ಚಿನ ಕಲಾವಿದರು ಮತ್ತು ಶೈಲಿಯನ್ನು ಹಂಚಿಕೊಳ್ಳಬಹುದು ಮತ್ತು ತಮ್ಮ ವೈಯಕ್ತಿಕ ಆದ್ಯತೆಗಳನ್ನು ಆಧರಿಸಿ ತಮ್ಮ ಸಮೀಪದಲ್ಲಿನ ಈವೆಂಟ್‌ಗಳೊಂದಿಗೆ ಹೋಲಿಕೆ ಮಾಡಬಹುದು. ಅಲ್ಲಿಂದ ಅವರು ಬ್ರೌಸ್ ಮಾಡಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಬಹುದು ಮತ್ತು ಅವರು ಏನು ಉಳಿಸಿದ್ದಾರೆ ಎನ್ನುವುದರ ಜಾಡನ್ನು ಮಿನಿ ಇರಿಸಿಕೊಳ್ಳುತ್ತದೆ.
ಜಗತ್ತಿನಾದ್ಯಂದ 20 ಕ್ಕೂ ಹೆಚ್ಚು ದೇಶಗಳಲ್ಲಿ Snapchatter ಗಳಿಗೆ ಈ ರೀತಿಯ ಮೊತ್ತಮೊದಲ ಅನುಭವವನ್ನು ಒದಗಿಸಲು, ವಿಶ್ವದ ಅತಿದೊಡ್ಡ ಟಿಕೆಟ್ ಮಾರ್ಕೆಟ್‌ಪ್ಲೇಸ್ ಆಗಿರುವ Ticketmaster ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ.
 
Back To News